Pahalgam Terror Attack: ಸೇನೆಯಿಂದ ಉಗ್ರರ 10 ಮನೆಗಳು ಉಡೀಸ್ ; ಮುಂದುವರಿದ ಕಾರ್ಯಾಚರಣೆ
ಪಹಲ್ಗಾಮ್‌ನಲ್ಲಿ ಉಗ್ರರು 26 ಭಾರತೀಯರನ್ನು ಬಲಿ ಪಡೆದ ಬಳಿಕ ಭಾರತೀಯ ಸೇನೆ ಉಗ್ರರ ಮೇಲೆ ಪ್ರತೀಕಾರದ ದಾಳಿಯನ್ನು ನಡೆಸಿದೆ. ಈ ವರೆಗೆ ಸೇನೆ 10 ಉಗ್ರರ ಮನೆಗಳನ್ನು ಧ್ವಂಸಗೊಳಿಸಿದೆ. ಕಳೆದ ಆರು ದಿನಗಳಲ್ಲಿ ಭದ್ರತಾ ಪಡೆಗಳು 10 ಸ್ಥಳೀಯ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಿವೆ


ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam Terror Attack) ಉಗ್ರರು 26 ಭಾರತೀಯರನ್ನು ಬಲಿ ಪಡೆದ ಬಳಿಕ ಭಾರತೀಯ ಸೇನೆ ಉಗ್ರರ ಮೇಲೆ ಪ್ರತೀಕಾರದ ದಾಳಿಯನ್ನು ನಡೆಸಿದೆ. ಈ ವರೆಗೆ ಸೇನೆ 10 ಉಗ್ರರ ಮನೆಗಳನ್ನು ಧ್ವಂಸಗೊಳಿಸಿದೆ. ಕಳೆದ ಆರು ದಿನಗಳಲ್ಲಿ ಭದ್ರತಾ ಪಡೆಗಳು 10 ಸ್ಥಳೀಯ ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಿವೆ ಮತ್ತು ಕಾರ್ಯಾಚರಣೆ ಮುಂದುವರಿದಿದೆ. ಇಲ್ಲಿಯವರೆಗೆ ಮನೆಗಳನ್ನು ನೆಲಸಮ ಮಾಡಲಾದ ಭಯೋತ್ಪಾದಕರಲ್ಲಿ ಲಷ್ಕರ್-ಎ-ತೈಬಾದ ಆದಿಲ್ ಹುಸೇನ್ ಥೋಕರ್, ಜಾಕಿರ್ ಅಹ್ಮದ್ ಗನೈ, ಅಮೀರ್ ಅಹ್ಮದ್ ದಾರ್ ಮತ್ತು ಆಸಿಫ್ ಶೇಖ್, ಶಾಹಿದ್ ಅಹ್ಮದ್ ಕುಟ್ಟೆ, ಅಹ್ಸಾನ್ ಉಲ್ ಹಕ್ ಅಮೀರ್, ಜೈಶ್-ಎ-ಮೊಹಮ್ಮದ್‌ನ ಅಮೀರ್ ನಜೀರ್ ವಾನಿ, ಜಮೀಲ್ ಅಹ್ಮದ್ ಶೇರ್ ಗೋಜ್ರಿ, ದಿ ರೆಸಿಸ್ಟೆನ್ಸ್ ಫ್ರಂಟ್‌ನ ಅದ್ನಾನ್ ಸಫಿ ದಾರ್ ಮತ್ತು ಫಾರೂಕ್ ಅಹ್ಮದ್ ತೆಡ್ವಾ ಸೇರಿದ್ದಾರೆ.
ಭದ್ರತಾ ಅಧಿಕಾರಿಗಳ ಪ್ರಕಾರ, ಅಹ್ಸಾನ್ ಉಲ್ ಹಕ್ 2018 ರಲ್ಲಿ "ಪಾಕಿಸ್ತಾನದಲ್ಲಿ ತರಬೇತಿ ಪಡೆದು ನಂತರ ಕಾಶ್ಮೀರಕ್ಕೆ ಬಂದಿದ್ದ. ಲಷ್ಕರ್ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಯ್ ಅನೇಕ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ; ಮತ್ತು ಹಲವಾರು ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ. . ಫಾರೂಕ್ ಅಹ್ಮದ್ ತೆಡ್ವಾ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಂಗಳವಾರದ ದಾಳಿಯಲ್ಲಿ ಥೋಕರ್ ನೇರವಾಗಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ದಾಳಿ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ ದಾಳಿ ನಡೆಸಿದ ಭಯೋತ್ಪಾದಕರು ಮತ್ತು ಅದರ ಸಂಚು ರೂಪಿಸಿದವರಿಗೆ "ಅವರು ಊಹಿಸಲೂ ಸಾಧ್ಯವಾಗದ ಶಿಕ್ಷೆಯನ್ನು ಪಡೆಯುತ್ತಾರೆ" ಎಂದು ಪ್ರಧಾನಿ ಹೇಳಿದ್ದರು. ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಹಲವು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿಯಲಾಗಿದೆ ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಭಾರತ ಸ್ಥಗಿತಗೊಳಿಸಿದೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಹೊರಹಾಕಿ ಎಂದು ಆದೇಶ ಹೊರಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ- ವಿಶ್ವಸಂಸ್ಥೆ
ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಉಗ್ರರು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 45 ವರ್ಷದ ಸಾಮಾಜಿಕ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಶನಿವಾರ ತಡರಾತ್ರಿ ಕಂಡಿ ಖಾಸ್ನಲ್ಲಿರುವ ಗುಲಾಮ್ ರಸೂಲ್ ಮ್ಯಾಗ್ರೆ ಅವರ ನಿವಾಸದೊಳಗೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.