ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Border Security Force: 80 ಗಂಟೆ.. 3 ಮೀಟಿಂಗ್‌... ಗಡಿ ದಾಟಿದ್ದ ಬಿಎಸ್‌ಎಫ್‌ ಯೋಧನನ್ನು ಬಿಡಲೊಪ್ಪದ ಪಾಕಿಸ್ತಾನ

ಪಂಜಾಬ್‌ನ ಫಿರೋಜ್‌ಪುರ ಬಳಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ ನಂತರ ಗಡಿ ಭದ್ರತಾ ಪಡೆಯ ಯೋಧನನ್ನು ಪಾಕಿಸ್ತಾನದ ರೇಂಜರ್‌ಗಳು ಬಂಧಿಸಿ 80 ಗಂಟೆಗಳು ಕಳೆದಿವೆ. ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಮೂರು ಸುತ್ತಿನ ಧ್ವಜ ಸಭೆಗಳ ಹೊರತಾಗಿಯೂ, ಸೈನಿಕನನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.

ಗಡಿ ದಾಟಿದ್ದ ಬಿಎಸ್‌ಎಫ್‌ ಯೋಧನನ್ನು ಬಿಡಲೊಪ್ಪದ ಪಾಕಿಸ್ತಾನ

Profile Vishakha Bhat Apr 27, 2025 8:14 AM

ನವದೆಹಲಿ: ಪಂಜಾಬ್‌ನ ಫಿರೋಜ್‌ಪುರ ಬಳಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿದ ನಂತರ ಗಡಿ ಭದ್ರತಾ ಪಡೆಯ ಯೋಧನನ್ನು (Border Security Force) ಪಾಕಿಸ್ತಾನದ ರೇಂಜರ್‌ಗಳು ಬಂಧಿಸಿ 80 ಗಂಟೆಗಳು ಕಳೆದಿವೆ. ಬಿಎಸ್‌ಎಫ್ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಮೂರು ಸುತ್ತಿನ ಧ್ವಜ ಸಭೆಗಳ ಹೊರತಾಗಿಯೂ, ಸೈನಿಕನನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಬಂಧನದಲ್ಲಿರುವ ಬಿಎಸ್‌ಎಫ್‌ ಯೋಧನನ್ನು 182 ನೇ ಬೆಟಾಲಿಯನ್‌ನ ಸದಸ್ಯ ಪೂರ್ಣಮ್ ಕುಮಾರ್ ಶಾ ಎಂದು ಗುರುತಿಸಲಾಗಿದೆ. ಬುಧವಾರ, ಶಾ ಗಡಿ ಬೇಲಿಯ ಬಳಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನಿ ಪ್ರದೇಶಕ್ಕೆ ದಾಟಿದ್ದರು.

ಆ ಸಮಯದಲ್ಲಿ ಅವರು ಸಮವಸ್ತ್ರದಲ್ಲಿದ್ದು, ತಮ್ಮ ಸರ್ವಿಸ್ ರೈಫಲ್ ಅನ್ನು ಹಿಡಿದಿದ್ದರು. ಅಧಿಕಾರಿಗಳ ಪ್ರಕಾರ, ಶಾ ವಿಶ್ರಾಂತಿ ಪಡೆಯಲು ನೆರಳಿನ ಪ್ರದೇಶದ ಕಡೆಗೆ ಮುಂದೆ ಹೋದರು, ಆ ಸಮಯದಲ್ಲಿ ಅವರು ಗಡಿಯನ್ನು ದಾಟಿದ್ದಾರೆ, ನಂತರ ಪಾಕಿಸ್ತಾನ ರೇಂಜರ್‌ಗಳು ಅವರನ್ನು ಬಂಧಿಸಿದರು. ಬಿಎಸ್‌ಎಫ್ ತಕ್ಷಣವೇ ಆತನ ಬಿಡುಗಡೆಗೆ ಪ್ರಯತ್ನಗಳನ್ನು ಆರಂಭಿಸಿತು. ಆತನನ್ನು ವಾಪಸ್ ಕರೆಸಿಕೊಳ್ಳಲು ಪಾಕಿಸ್ತಾನ ರೇಂಜರ್‌ಗಳೊಂದಿಗೆ ಮೂರು ಧ್ವಜ ಸಭೆಗಳನ್ನು ನಡೆಸಿದೆ. ಪಾಕಿಸ್ತಾನ ಇಲ್ಲಿಯವರೆಗೆ ಯೋಧನನ್ನು ಹಸ್ತಾಂತರಿಸಲು ನಿರಾಕರಿಸಿದೆ. ತಾವು ಯಾವುದೇ ಯೋಧನನ್ನು ಬಂಧಿಸಿಲ್ಲ, ಅವರ ಇರುವಿಕೆಯೇ ನಮಗೆ ಗೊತ್ತಿಲ್ಲ ಎಂದು ನಾಟಕವಾಡುತ್ತಿದೆ. ಬಂಧನದ ನಂತರ, ಬಿಎಸ್‌ಎಫ್ ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಎಲ್ಲಾ ಘಟಕಗಳನ್ನು ತೀವ್ರ ಕಟ್ಟೆಚ್ಚರದಲ್ಲಿ ಇರಿಸಿದೆ.

ಯೋಧನನ್ನು ಮರಳಿ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಪಾಕಿಸ್ತಾನ ರೇಂಜರ್ಸ್‌ ಜೊತೆ ಬಿಎಸ್‌ಎಫ್ ಮತ್ತೊಂದು ಫೀಲ್ಡ್ ಕಮಾಂಡರ್ ಮಟ್ಟದ ಧ್ವಜ ಸಭೆಯನ್ನು ಕೋರಿದೆ. ಈ ಸಭೆ ಶೀಘ್ರದಲ್ಲೇ ನಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದಕ್ಕೂ ಮುನ್ನ, ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಚೌಧರಿ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಬೆಳವಣಿಗೆಗಳ ಬಗ್ಗೆ ಮತ್ತು ಜವಾನನ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿಯ ತನಿಖೆ ಹೊಣೆ NIA ಹೆಗಲಿಗೆ; ಉಗ್ರರಿಗೆ ನಡುಕ ಶುರು

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಶಾ ಅವರ ಕುಟುಂಬವು ಆಂತಕ್ಕೀಡಾಗಿದೆ. ಅವರ ತಂದೆ ತಮ್ಮ ಮಗನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅವರು ಬೇಗನೆ ಮನೆಗೆ ಕುಟುಂಬ ಸರ್ಕಾರಕ್ಕೆ ಒತ್ತಾಯಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.