ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

YouTuber Jyoti Malhotra: ಪಾಕ್‌ನೊಂದಿಗೆ ನಂಟು, ದೇಶಕ್ಕೆ ದ್ರೋಹ..... ಡೈರಿಯಿಂದ ಬಯಲಾಯ್ತು ಜ್ಯೋತಿ ಮಲ್ಹೋತ್ರಾ ಗುಟ್ಟು!

ಜ್ಯೋತಿ ಮಲ್ಹೋತ್ರಾ (YouTuber Jyoti Malhotra) ತಮ್ಮ ಡೈರಿಯಲ್ಲಿ ಪಾಕಿಸ್ತಾನಕ್ಕೆ 10 ದಿನಗಳ ಪ್ರವಾಸ ನಡೆಸಿರುವ ಕುರಿತು ಮಾಹಿತಿ ನೀಡಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನಕ್ಕೆ 10 ದಿನಗಳ ಪ್ರವಾಸ ನಡೆಸಿ ನಾನು ಇಂದು ಭಾರತಕ್ಕೆ ಮರಳಿದ್ದೇನೆ. ಈ ಸಮಯದಲ್ಲಿ ನನಗೆ ಪಾಕಿಸ್ತಾನದ ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಮ್ಮ ಚಂದಾದಾರರು ಮತ್ತು ಸ್ನೇಹಿತರು ನಮ್ಮನ್ನು ಭೇಟಿ ಮಾಡಲು ಬಂದರು. ನಾವು ಲಾಹೋರ್‌ನಲ್ಲಿ ಕಳೆದ ಎರಡು ದಿನಗಳು ತುಂಬಾ ಚಿಕ್ಕದಾಗಿದ್ದವು ಎಂದು ಹೇಳಿದ್ದಾರೆ.

ಜ್ಯೋತಿ ಮಲ್ಹೋತ್ರಾ ಡೈರಿಯಿಂದ ಬಹಿರಂಗವಾಯಿತು ಹಲವು ಸತ್ಯ!

ನವದೆಹಲಿ: ಪಾಕಿಸ್ತಾನಕ್ಕೆ ಬೇಹುಗಾರಿಕೆ ( Spying for Pakistan) ನಡೆಸುತ್ತಿರುವ ಆರೋಪದಲ್ಲಿ ಇತ್ತೀಚೆಗಷ್ಟೇ ಬಂಧನವಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ( YouTuber Jyoti Malhotra ) ಪಾಕಿಸ್ತಾನದೊಂದಿಗೆ ಬಹಳ ಆಳವಾದ ಸಂಬಂಧವನ್ನು ಹೊಂದಿರುವುದು ತಿಳಿದುಬಂದಿದೆ. ಆಕೆಯ ಡೈರಿಯೊಂದು ಭದ್ರತಾ ಸಂಸ್ಥೆಗಳ ( security agencies ) ಕೈಗೆ ಸಿಕ್ಕಿದ್ದು, ಗಂಭೀರ ಕಳವಳವನ್ನು ಉಂಟು ಮಾಡಿದೆ. 2012ರ ಹಿಂದಿನ ಡೈರಿಯಲ್ಲಿ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದೊಂದಿಗೆ ಆಳವಾದ ಸಂಬಂಧ ಮತ್ತು ಸಹಾನುಭೂತಿ ಹೊಂದಿರುವುದನ್ನು ದೃಢಪಡಿಸಿದೆ. ಇದರಲ್ಲಿ ಆಕೆ ಪಾಕಿಸ್ತಾನದೊಳಗಿನ ಭೇಟಿ, ಸಂವಹನ, ಅನುಭವಗಳ ವಿವರಗಳನ್ನು ಬರೆದುಕೊಂಡಿದ್ದಾಳೆ.

'ಟ್ರಾವೆಲ್ ವಿಥ್ ಜೆಒ' ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ , ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸಿದ ಆರೋಪದ ಮೇರೆಗೆ ಕಳೆದ ಶನಿವಾರ ಬಂಧಿಸಲಾಗಿದೆ. 1,31,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜ್ಯೋತಿ ಮಲ್ಹೋತ್ರಾ ಇನ್‌ಸ್ಟಾಗ್ರಾಮ್ ಖಾತೆಯನ್ನು ಇದೀಗ ಅಮಾನತುಗೊಳಿಸಲಾಗಿದೆ. ಆದರೂ ಆಕೆಯ ಯೂಟ್ಯೂಬ್ ಚಾನೆಲ್ 3,77,000 ಚಂದಾದಾರರನ್ನು ಹೊಂದಿದ್ದು, ಇದು ಸಕ್ರಿಯವಾಗಿದೆ.

ಜ್ಯೋತಿ ಮಲ್ಹೋತ್ರಾ ತಮ್ಮ ಡೈರಿಯಲ್ಲಿ ಪಾಕಿಸ್ತಾನಕ್ಕೆ 10 ದಿನಗಳ ಪ್ರವಾಸ ನಡೆಸಿರುವ ಕುರಿತು ಮಾಹಿತಿ ನೀಡಿದ್ದಾಳೆ. ಇದರಲ್ಲಿಆಕೆ ಪಾಕಿಸ್ತಾನಕ್ಕೆ 10 ದಿನಗಳ ಪ್ರವಾಸ ನಡೆಸಿ ನಾನು ಇಂದು ಭಾರತಕ್ಕೆ ಮರಳಿದ್ದೇನೆ. ಈ ಸಮಯದಲ್ಲಿ ನನಗೆ ಪಾಕಿಸ್ತಾನದ ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಮ್ಮ ಚಂದಾದಾರರು ಮತ್ತು ಸ್ನೇಹಿತರು ನಮ್ಮನ್ನು ಭೇಟಿ ಮಾಡಲು ಬಂದರು. ನಾವು ಲಾಹೋರ್‌ನಲ್ಲಿ ಕಳೆದ ಎರಡು ದಿನಗಳು ತುಂಬಾ ಚಿಕ್ಕದಾಗಿದ್ದವು ಎಂದು ಹೇಳಿದ್ದಾಳೆ.

ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಎರಡು ಬಾರಿ ಭೇಟಿ ನೀಡಿದ್ದಳು. ಇತ್ತೀಚಿನ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗಿಂತ ಕೇವಲ ಎರಡು ತಿಂಗಳ ಮೊದಲು ಕೂಡ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು. ನೆರೆಯ ದೇಶಕ್ಕೆ ಅವರ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಿರುವುದು ಭಾರತೀಯ ಭದ್ರತಾ ಸಂಸ್ಥೆಗಳ ಗಮನಕ್ಕೆ ಬಂದ ಕೂಡಲೇ ಕ್ರಮ ಜರುಗಿಸಲಾಗಿದೆ.

ಜ್ಯೋತಿ ಮಲ್ಹೋತ್ರಾಳ ಹೆಚ್ಚಿನ ಪ್ರವಾಸದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರ ಒಂದು ಕ್ಲಿಪ್‌ನಲ್ಲಿ ಆಕೆ ಲಾಹೋರ್ ರೆಸ್ಟೋರೆಂಟ್‌ನಲ್ಲಿ ಜನರ ಗುಂಪಿನಲ್ಲಿ ಊಟ ಮಾಡುತ್ತಿರುವುದನ್ನು ಕಾಣಬಹುದು. ಮತ್ತೊಂದು ವೈರಲ್ ಚಿತ್ರದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮತ್ತು ಪಂಜಾಬ್ ಪ್ರಾಂತ್ಯದ ಪ್ರಸ್ತುತ ಮುಖ್ಯಮಂತ್ರಿ ಮರಿಯಮ್ ನವಾಜ್ ಷರೀಫ್ ಅವರೊಂದಿಗೆ ಇರುವುದನ್ನು ತೋರಿಸಿದೆ.

ಇದಲ್ಲದೆ ಇಲ್ಲಿನ ಗುರುದ್ವಾರ ಮತ್ತು ದೇವಾಲಯಗಳಿಗೆ ಭೇಟಿ ನೀಡಲು ಭಾರತೀಯರಿಗೆ ಹೆಚ್ಚಿನ ಮಾರ್ಗಗಳನ್ನು ತೆರೆಯುವಂತೆ ಅವರು ಪಾಕಿಸ್ತಾನ ಸರ್ಕಾರವನ್ನು ವಿನಂತಿಸುವುದಾಗಿ ವಿಡಿಯೊವೊಂದರಲ್ಲಿ ಹೇಳಿದ್ದಾಳೆ.

ಹರಿಯಾಣದ ಹಿಸಾರ್ ನಿವಾಸಿ ಜ್ಯೋತಿ ಮಲ್ಹೋತ್ರಾಳನ್ನು ಮೇ 16 ರಂದು ಬಂಧಿಸಲಾಗಿದೆ. ಅನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಹಿಸಾರ್‌ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ಅವರ ಪ್ರಕಾರ, ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಐಎಸ್‌ಐ ಬಳಸುತ್ತಿದೆ ಎಂದಿದ್ದಾರೆ.

ತನಿಖಾಧಿಕಾರಿಗಳು ಮಲ್ಹೋತ್ರಾಳ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದು, ಅವುಗಳನ್ನು ಪಾಕಿಸ್ತಾನಿ ಏಜೆಂಟ್‌ಗಳ ನಿರ್ದೇಶನದಲ್ಲಿ ಮಾಡಲಾಗಿದೆ ಎಂದು ಶಂಕಿಸಿದ್ದಾರೆ.

ಪಹಲ್ಗಾಮ್ ದಾಳಿಯ ಅನಂತರ ಉಂಟಾದ ಉದ್ವಿಗ್ನ ಸಮಯದಲ್ಲಿ ಬಿಡುಗಡೆಯಾಗಿರುವ ವಿಡಿಯೊವೊಂದರಲ್ಲಿ ಆಕೆ ಪಾಕಿಸ್ತಾನವನ್ನು ಬೆಂಬಲಿಸಿದ್ದು, ಇದನ್ನು ಸಮರ್ಥಿಸಿಕೊಂಡಿದ್ದಾಳೆ. ಈ ವಿಡಿಯೊಗಳು ಉದ್ದೇಶಪೂರ್ವಕ ಪ್ರಚಾರ ಅಭಿಯಾನದ ಭಾಗವಾಗಿದ್ದವು ಮತ್ತು ವಿದೇಶಿ ನಿರ್ವಾಹಕರ ಪ್ರಭಾವದಿಂದ ಭಾರತ ವಿರೋಧಿ ವಿಷಯವನ್ನು ರಚಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪಾಕಿಸ್ತಾನಕ್ಕೆ ಹಲವು ಬಾರಿ ಪ್ರವಾಸ ಮಾಡಿರುವ ಮಲ್ಹೋತ್ರಾ ಒಂದು ಬಾರಿ ಚೀನಾ ಪ್ರವಾಸವನ್ನೂ ಮಾಡಿದ್ದಳು. 2023ರಲ್ಲಿ ಹಲವಾರು ಪಾಕಿಸ್ತಾನಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬುದು ತಿಳಿದು ಬಂದಿತ್ತು. ಇದರಲ್ಲಿ ಎಹ್ಸಾನ್-ಉರ್-ರಹೀಮ್ ಅಥವಾ ಡ್ಯಾನಿಶ್ ಎಂದು ಕರೆಯಲ್ಪಡುವವರೊಂದಿಗೆ ಅನೇಕ ಬಾರಿ ಭೇಟಿಯಾಗಿರುವುದು ತನಿಖೆಯಿಂದ ಬಹಿರಂಗವಾಗಿತ್ತು.

ಇದನ್ನೂ ಓದಿ: Spying for Pakistan: ಪಾಕಿಸ್ತಾನ ಪರ ಬೇಹುಗಾರಿಕೆ; ಒಡಿಶಾ ಯುಟ್ಯೂಬರ್ ಜೊತೆಗೆ ಜ್ಯೋತಿ ಮಲ್ಹೋತ್ರಾ ನಂಟು!

ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಡ್ಯಾನಿಶ್ ಎಂಬಾತನನ್ನು ಮೇ 13 ರಂದು ಭಾರತವು ಬೇಹುಗಾರಿಕೆ ಆರೋಪದಲ್ಲಿ ದೇಶದಿಂದ ಹೊರಹಾಕಿತ್ತು.

ಎಫ್‌ಐಆರ್ ಪ್ರಕಾರ ಪೋಲೀಸರ ಕಣ್ತಪ್ಪಿಸಲು ಜಾಟ್ ರಾಂಧವಾ ಎಂಬ ಹೆಸರಿನಲ್ಲಿ ಪಾಕಿಸ್ತಾನಿ ಏಜೆಂಟ್ ಶಕೀರ್ ಅವರ ಸಂಖ್ಯೆಯನ್ನು ಮಲ್ಹೋತ್ರಾ ಉಳಿಸಿಕೊಂಡಿದ್ದಳು. ಪಾಕಿಸ್ತಾನದಲ್ಲಿ ಅಲಿ ಅಹ್ವಾನ್ ಮತ್ತು ರಾಣಾ ಶಹಬಾಜ್ ಎಂಬವರನ್ನು ಆಕೆ ಭೇಟಿಯಾಗಿದ್ದಳು. ತಾವು ಪಾಕಿಸ್ತಾನಕ್ಕೆ ಹೋದಾಗ ಅಹ್ವಾನ್ ಎಂಬವರು ತಮಗೆ ಭದ್ರತಾ ರಕ್ಷಣೆ ಒದಗಿಸಿದ್ದಾರೆ ಎಂದು ಮಲ್ಹೋತ್ರಾ ತನಿಖೆ ವೇಳೆ ತಿಳಿಸಿದ್ದಳು. ಅಲ್ಲದೇ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಮಯದಲ್ಲಿ ಹಲವಾರು ಗುಪ್ತಚರ ಅಧಿಕಾರಿಗಳು ಪರಿಚಿತರಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾಳೆ.