ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತ ನಮ್ಮ ಮನೆಗೆ ನುಗ್ಗಿ ಹೊಡೆದಿದೆ- ಪಾಕಿಸ್ತಾನ ವ್ಯಕ್ತಿಯ ಗೋಳಾಟವನ್ನೊಮ್ಮೆ ನೋಡಿ

Operation Sindoor: ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಕುರಿತು ಪಾಕಿಸ್ತಾನ ಸರ್ಕಾರ ಸೇನೆ ಮತ್ತು ಮಾಧ್ಯಮಗಳು ತಪ್ಪು ಮಾಹಿತಿ ಹರಡುತ್ತಿವೆ. ಹೀಗಿರುವಾಗ ಪಾಕಿಸ್ತಾನದ ಒಬ್ಬ ವ್ಯಕ್ತಿ ತಮ್ಮ ದೇಶದ ಸುಳ್ಳುಗಳನ್ನು ಬಯಲಿಗೆಳೆದು, ಭಾರತದ ನಿಖರ ದಾಳಿಗಳನ್ನು ಶ್ಲಾಘಿಸಿದ್ದಾರೆ.

ಆಪರೇಷನ್ ಸಿಂಧೂರ್ ದಾಳಿಯನ್ನು ಶ್ಲಾಘಿಸಿದ ಪಾಕ್ ವ್ಯಕ್ತಿ

ಪಾಕಿಸ್ತಾನದ ವ್ಯಕ್ತಿ

Profile Sushmitha Jain May 8, 2025 5:56 PM

ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ್ (Operation Sindoor) ಕುರಿತು ಪಾಕಿಸ್ತಾನ ಸರ್ಕಾರ (Pakistan government) ಸೇನೆ ಮತ್ತು ಮಾಧ್ಯಮಗಳು ತಪ್ಪು ಮಾಹಿತಿ ಹರಡುತ್ತಿವೆ. ಹೀಗಿರುವಾಗ ಪಾಕಿಸ್ತಾನದ ಒಬ್ಬ ವ್ಯಕ್ತಿ (Pakistani national) ತಮ್ಮ ದೇಶದ ಸುಳ್ಳುಗಳನ್ನು ಬಯಲಿಗೆಳೆದು, ಭಾರತದ ನಿಖರ ದಾಳಿಗಳನ್ನು ಶ್ಲಾಘಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಈ ಪಾಕಿಸ್ತಾನದ ವ್ಯಕ್ತಿ ಭಾರತವು 24 ಕ್ಷಿಪಣಿಗಳನ್ನು ಉಡಾಯಿಸಿದ್ದು, ಪಾಕಿಸ್ತಾನವು ಒಂದೇ ಒಂದು ಕ್ಷಿಪಣಿಯನ್ನು ತಡೆಯಲು ವಿಫಲವಾಯಿತು ಎಂದು ಹೇಳಿದ್ದಾರೆ.

"ಭಾರತ ತನ್ನ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಹೊಡೆದಿದೆ. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಒಂದು ಕ್ಷಿಪಣಿಯನ್ನೂ ತಡೆಯಲಿಲ್ಲ. ಭಾರತ ನಮ್ಮ ಮನೆಯೊಳಕ್ಕೆ ಒಳನುಗ್ಗಿ ದಾಳಿ ಮಾಡಿತು, ಇದು ಸತ್ಯ. ಇರಾನ್ 200-400 ಕ್ಷಿಪಣಿಗಳನ್ನು ಉಡಾಯಿಸಿದಾಗ ಇಸ್ರೇಲ್ ಅವುಗಳನ್ನು ತಡೆಯುತ್ತದೆ. ಆದರೆ ಭಾರತ 24 ಕ್ಷಿಪಣಿಗಳನ್ನು ಉಡಾಯಿಸಿತು, ನಾವು ಒಂದನ್ನೂ ತಡೆಯಲಾಗಲಿಲ್ಲ," ಎಂದು ಅವರು ಹೇಳಿದ್ದಾರೆ.



ಈ ಸುದ್ದಿಯನ್ನು ಓದಿ: Operation Sindoor: ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಭಾರತದ ಡ್ರೋನ್ ದಾಳಿ, ಪಿಎಸ್‌ಎಲ್‌ ಪಂದ್ಯ ರದ್ದು

ಪಾಕಿಸ್ತಾನದ ಮಾಧ್ಯಮಗಳು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹರಡಿದ್ದ ಮಾಹಿತಿಯನ್ನು ಸುಳ್ಳು ಎಂದು ಈ ವ್ಯಕ್ತಿ ಹೇಳಿದ್ದಾರೆ. "ಅವೆಲ್ಲವೂ ತಪ್ಪು ವರದಿಗಳು" ಎಂದು ಪಾಕಿಸ್ತಾನದ ವ್ಯಕ್ತಿಯೇ ಖಂಡಿಸಿದ್ದಾನೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಬುಧವಾರ 'ಆಪರೇಷನ್ ಸಿಂದೂರ್' ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಭಾರತ ನಾಶ ಮಾಡಿದೆ.