ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sudarshan Chakra: ಪಾಕ್‌ ಡ್ರೋನ್‌, ಕ್ಷಿಪಣಿಯನ್ನು ಹೊಡೆದುರುಳಿಸಿದ ಸುದರ್ಶನ ಚಕ್ರ; ಏನಿದರ ವೈಶಿಷ್ಟ್ಯ?

S-400 Air Defence Systems: ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಮುಂದುವರಿಸಿದೆ. ಈ ನಡುವೆ ಮೇ 7ರ ತಡರಾತ್ರಿ ಪಾಕಿಸ್ತಾನವು ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಹಲವು ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. ಸುದರ್ಶನ ಚಕ್ರ ಎಂದು ಕರೆಯಲ್ಪಡುವ ರಷ್ಯಾ ನಿರ್ಮಿತ ಎಸ್‌-400 (S-400) ಏರ್‌ ಡಿಫೆನ್ಸ್‌ ಸಿಸ್ಟಂ ಡ್ರೋನ್‌ ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಿದೆ.

ಪಾಕ್‌ ಡ್ರೋನ್‌, ಕ್ಷಿಪಣಿಯನ್ನು ಹೊಡೆದುರುಳಿಸಿದ ಸುದರ್ಶನ ಚಕ್ರ

ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಂ.

Profile Ramesh B May 8, 2025 5:04 PM

ಹೊಸದಿಲ್ಲಿ: ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ (Operation Sindoor) ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಭಾರತ-ಪಾಕ್‌ ಮಧ್ಯೆ ಉದ್ವಿಗ್ನ ವಾತಾವರಣ ಮೂಡಿದೆ. ಇದೀಗ ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯನ್ನು ಮುಂದುವರಿಸುವ ಸೂಚನೆ ನೀಡಿದೆ. ಈ ನಡುವೆ ಮೇ 7ರ ತಡರಾತ್ರಿ ಪಾಕಿಸ್ತಾನವು ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಹಲವು ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. 15 ಕಡೆಗಳಲ್ಲಿ ನಡೆದ ಪಾಕ್‌ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಸುದರ್ಶನ ಚಕ್ರ (Sudarshan Chakra) ಎಂದು ಕರೆಯಲ್ಪಡುವ ರಷ್ಯಾ ನಿರ್ಮಿತ ಎಸ್‌-400 (S-400) ಏರ್‌ ಡಿಫೆನ್ಸ್‌ ಸಿಸ್ಟಂ ಡ್ರೋನ್‌ ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಿದೆ.

ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್‌, ಅಮೃತಸರ, ಕಪುರ್ಥಾಲಾ, ಜಲಂಧರ್, ಲುಧಿಯಾನ, ಆದಂಪುರ್, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರ್ಲೈ ಮತ್ತು ಭುಜ್ ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಲು ಪಾಕಿಸ್ತಾನ ಪ್ರಯತ್ನಿಸಿದೆ. ಆದರೆ ಈ ಪ್ರಯತ್ನಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ.

ಭಾರತೀಯ ಸೇನೆಯ ಪ್ರಕಟಣೆ:



ಏನಿದು ಎಸ್ -400 ಏರ್‌ ಡಿಫೆನ್ಸ್‌ ಸಿಸ್ಟಂ?

ರಷ್ಯಾ ನಿರ್ಮಿತ ಎಸ್ -400 ಏರ್‌ ಡಿಫೆನ್ಸ್‌ ಸಿಸ್ಟಂನಲ್ಲಿ ವಿಶ್ವದ ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಲಾಗುತ್ತದೆ. 600 ಕಿ.ಮೀ. ದೂರದಲ್ಲಿರುವ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿ.ಮೀ. ವ್ಯಾಪ್ತಿಯಲ್ಲಿ ದಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿವೆ. ಭಾರತವು ಈವರೆಗೆ 3 ಸ್ಕ್ವಾಡ್ರನ್‌ಗಳನ್ನು (S-400) ನಿಯೋಜಿಸಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್‌ನ ರಕ್ಷಣೆಗಾಗಿ ಪಠಾಣ್ಕೋಟ್‌ನಲ್ಲಿ ಮತ್ತು ರಾಜಸ್ಥಾನ ಮತ್ತು ಗುಜರಾತ್‌ನ ಆಯಕಟ್ಟಿನ ಪ್ರದೇಶಗಳನ್ನು ಇದು ಒಳಗೊಂಡಿದೆ.

ಸುದರ್ಶನ ಚಕ್ರ ಸುಮಾರು 60 ಶತ್ರು ಗುರಿಗಳನ್ನು ಏಕಕಾಲಕ್ಕೆ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಒಂದೇ ಬಾರಿಗೆ ಕ್ಷಿಪಣಿ, ಡ್ರೋನ್‌, ಹೆಲಿಕಾಪ್ಟರ್‌, ಸಾರಿಗೆ ವಿಮಾನ, ಯುದ್ಧ ವಿಮಾನ, ಕ್ಷಿಪಣಿಗಳನ್ನು ಇದು ಎದುರಿಸುತ್ತದೆ. ಭಾರತೀಯ ಪುರಾಣದ ಪ್ರಕಾರ ಸುದರ್ಶನ ಚಕ್ರ ಅತ್ಯಂತ ಶಕ್ತಿಯುತ ಆಯುಧವಾಗಿದ್ದು, ಇದಕ್ಕಾಗಿ ಈ ರಕ್ಷಣಾ ವ್ಯವಸ್ಥೆ ಇದೇ ಹೆಸರನ್ನು ಇಡಲಾಗಿದೆ.

ಈ ಸುದ್ದಿಯನ್ನೂ ಓದಿ: Operation Sindoor 2.0: ಪಾಕಿಸ್ತಾನಿಗಳನ್ನು ಭಾರತೀಯ ಸೇನೆಯಿಂದ ದಯವಿಟ್ಟು ರಕ್ಷಿಸಿ; ಪಾರ್ಲಿಮೆಂಟಿನಲ್ಲಿ ಗೋಳಾಡಿದ ಸಂಸದ!

ಭಾರತವು ರಷ್ಯಾದಿಂದ 5 ಸ್ಕ್ವಾಡ್ರನ್‌ಗಳನ್ನು ಖರೀದಿಸಿದೆ. 3 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಮತ್ತು ಇನ್ನೂ ಎರಡು 2026ರ ವೇಳೆಗೆ ಬರುವ ನಿರೀಕ್ಷೆಯಿದೆ. 5 ಎಸ್ -400 ಸ್ಕ್ವಾಡ್ರನ್‌ಗಳಿಗಾಗಿ 35,000 ಕೋಟಿ ರೂ.ಗಳ ಒಪ್ಪಂದಕ್ಕೆ 2018ರಲ್ಲಿ ಸಹಿ ಹಾಕಲಾಗಿತ್ತು. ಪ್ರತಿ ಎಸ್-400 ಸ್ಕ್ವಾಡ್ರನ್ 2 ಬ್ಯಾಟರಿಗಳನ್ನು ಹೊಂದಿದ್ದು, ಪ್ರತಿಯೊಂದೂ 6 ಲಾಂಚರ್ ಗಳು, ಸುಧಾರಿತ ರಾಡಾರ್ ಮತ್ತು ನಿಯಂತ್ರಣ ಕೇಂದ್ರವನ್ನು ಹೊಂದಿದೆ. ಪ್ರತಿ ಬ್ಯಾಟರಿ 128 ಕ್ಷಿಪಣಿಗಳನ್ನು ಬೆಂಬಲಿಸುತ್ತದೆ.

ಏತನ್ಮಧ್ಯೆ, ಗುರುವಾರ ಬೆಳಿಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್ಗಳು ಮತ್ತು ವ್ಯವಸ್ಥೆಗಳ ಮೇಲೆ ದಾಳಿ ನಡೆಸಿದೆ.