Shubhanshu Shukla: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ ಹ್ಯಾಪಿ- ಸೆಲ್ಫಿ ಫುಲ್ ವೈರಲ್
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐಎಸ್ಎಸ್ನ ಕಪೋಲಾ ಮಾಡ್ಯೂಲ್ನೊಳಗೆ ಹಂಗೇರಿಯ ಸಹ ಗಗನಯಾತ್ರಿ ಟಿಬರ್ ಕಾಪು ಜೊತೆ ಫೋಟೋಕ್ಕೆ ಪೋಸ್ ನೀಡಿದ್ದಾರೆ.

ಶುಭಾಂಶು ಶುಕ್ಲಾ

ನವದೆಹಲಿ: ಮಹತ್ವಾಕಾಂಕ್ಷಿ ಆಕ್ಸಿಯಮ್-4(Axoiom-4) ಬಾಹ್ಯಾಕಾಶ ಯೋಜನೆಗೆ ಅಧಿಕೃತ ಚಾಲನೆ ದೊರೆತು ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ನೇತೃತ್ವದ ಗಗನಯಾತ್ರಿಗಳ ತಂಡವು ನಭಕ್ಕೆ ತಲುಪಿದೆ. ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ (International Space Station) ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನಲ್ಲಿ ತೆರಳಿದ್ದು, ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳನ್ನ ಆಕ್ಸಿಯಮ್-4 ನೌಕೆ ಮೂಲಕ ಫಾಲ್ಕನ್ ರಾಕೆಟ್ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹೊತ್ತೊಯ್ದಿದೆ. 1984ರ ಬಳಿಕ ಬಾಹ್ಯಾಕಾಶವನ್ನು ತಲುಪಿದ ಎರಡನೇ ಭಾರತೀಯ ಎಂಬ ಇತಿಹಾಸವನ್ನು ಶುಭಾಂಶು ನಿರ್ಮಿಸಿದ್ದಾರೆ.
ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿರುವ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಐಎಸ್ಎಸ್ನ ಕಪೋಲಾ ಮಾಡ್ಯೂಲ್ನೊಳಗೆ ಹಂಗೇರಿಯ ಸಹ ಗಗನಯಾತ್ರಿ ಟಿಬರ್ ಕಾಪು (Tibor Kapu) ಜೊತೆ ಫೋಟೋಕ್ಕೆ ಪೋಸ್ ನೀಡಿದ್ದಾರೆ.
ಲಕ್ನೋ ಮೂಲದ 39 ವರ್ಷದ ಶುಕ್ಲಾ, ಕಳೆದ ಗುರುವಾರ ಐಎಸ್ಎಸ್ಗೆ ಕಾಲಿಟ್ಟ ಮೊದಲ ಭಾರತೀಯರಾಗಿ ಇತಿಹಾಸ ಸೃಷ್ಟಿಸಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಅವರ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯರಾಗಿರುವ ಶುಕ್ಲಾ, ನಭಕ್ಕೆ ತೆರಳಿದ 634ನೇ ಗಗನಯಾತ್ರಿಯಾಗಿದ್ದಾರೆ. ಆಕ್ಸಿಯಮ್ ಸ್ಪೇಸ್ನ ಯೋಜನೆ ಮುಂದಾಳತ್ವ ವಹಿಸಿದ ಶುಕ್ಲಾ ಜೂನ್ 25ರಂದು ಫ್ಲೋರಿಡಾದ ನಾಸಾದ ಕೆನಡಿ ಸ್ಪೇಸ್ ಸೆಂಟರ್ನಿಂದ ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ನಲ್ಲಿ ಆಕ್ಸಿಯಮ್ ಮಿಷನ್ 4ರ ಮಿಷನ್ ಪೈಲಟ್ ಆಗಿ ತೆರಳಿದ್ದು, 28 ಗಂಟೆಗಳ ಸುಗಮ ಪ್ರಯಾಣದ ಬಳಿಕ ಡ್ರಾಗನ್ ಬಾಹ್ಯಾಕಾಶ ನೌಕೆ ಐಎಸ್ಎಸ್ಗೆ ಯಶಸ್ವಿಯಾಗಿ ಡಾಕ್ ಆಗಿತ್ತು.
ಈ ಸುದ್ದಿಯನ್ನು ಓದಿShubhanshu Shukla: ಬಾಹ್ಯಾಕಾಶಕ್ಕೆ ಹೋಗುವಾಗ ಶುಭಾಂಶು ತೆಗೆದುಕೊಂಡು ಹೋಗಿದ್ದೇನು? ಮೋದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುಕ್ಲಾ
ಐಎಸ್ಎಸ್ ಪ್ರವೇಶಿಸಿದ ಬಳಿಕ, ಶುಕ್ಲಾ ತಮ್ಮ ಮೊದಲ ಸಂದೇಶವಾಗಿ "ಜೈ ಹಿಂದ್, ಜೈ ಭಾರತ್" ಎಂದು ಹೆಮ್ಮೆಯಿಂದ ಹೇಳಿದ್ದರು. ಅಲ್ಲದೇ ಶನಿವಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕರೆ ಮೂಲಕ ಶುಕ್ಲಾ ಅವರೊಂದಿಗೆ ಮಾತನಾಡಿ, ಭಾರತದ ಬಾಹ್ಯಾಕಾಶ ಆಕಾಂಕ್ಷೆಗಳಿಗೆ ಈ ಯೋಜನೆಯು ಹೊಸ ಮುನ್ನುಡಿ ಬರೆಯಲಿದೆ ಎಂದು ಶ್ಲಾಘಿಸಿದ್ದರು. "ನೀವು ಭಾರತದಿಂದ ದೂರದಲ್ಲಿದ್ದರೂ, ಎಲ್ಲ ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದೀರಿ" ಎಂದು ಮೋದಿ ದೇಶದ ಹೆಮ್ಮೆಯಾಗಿರುವ ಶುಕ್ಲಾ ಅವರನ್ನು ಕೊಂಡಾಡಿದ್ದರು.
ಆಕ್ಸಿಯಮ್ ಮಿಷನ್ 4ರ ಈ ನಾಲ್ಕು ಸದಸ್ಯರ ತಂಡವು ಐಎಸ್ಎಸ್ನಲ್ಲಿ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಲಿದೆ. ಶುಕ್ಲಾ ಅವರ ಈ ಸಾಧನೆಯು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಸೋಷಿಯಲ್ ಮೀಡಿಯಾಗಲ್ಲಿ ಈ ಸೆಲ್ಫಿ ಸಖತ್ ವೈರಲ್ ಆಗಿದ್ದು, ಭಾರತೀಯರಿಗೆ ಶುಕ್ಲಾ ಅವರ ಈ ಸಾಧನೆ ಹೆಮ್ಮೆಯ ಭಾವವನ್ನು ಉಂಟು ಮಾಡುತ್ತಿದೆ.
ಇನ್ನೂ, ಈ ಹಿಂದೆ 1984ರಲ್ಲಿ ರಾಕೇಶ್ ಶರ್ಮಾ “ರಷ್ಯಾ ಸೂಯೆಜ್ ನೌಕೆ” ಮೂಲಕ ಬಾಹ್ಯಾಕಾಶಕ್ಕೆ ಹೋಗಿದ್ದರು. ಆಗ ರಾಕೇಶ್ ಶರ್ಮಾ ಅವರ ಜೊತೆಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇದೇ ರೀತಿ ಮಾತುಕತೆ ನಡೆಸಿದ್ದರು.