ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nuclear weapons: ಯಾವ ದೇಶಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ? ಭಾರತದ ಬಳಿ ಎಷ್ಟಿದೆ?

Nuclear weapons Having Countries: ಪಾಕಿಸ್ತಾನ ಹಲವು ಬಾರಿ ತನ್ನ ಬಳಿ ಪರಮಾಣು ಶಸ್ತ್ರಾಸ್ತ್ರ ಇರುವ ಬಗ್ಗೆಯೂ ಪ್ರಸ್ತಾಪಿಸಿ ಪರಸ್ಪರ ಭಾರತಕ್ಕೆ ಗೊಡ್ಡು ಬೆದರಿಕೆ ಒಡ್ಡುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ನಾವೇವೂ ಕಮ್ಮಿ ಇಲ್ಲ. ನಮ್ಮ ಬಳಿಯೂ ಇಡೀ ಪಾಕಿಸ್ತಾನವನ್ನೇ ನಿರ್ಣಾಮ ಮಾಡಬಲ್ಲ ಪರಮಾಣು ಶಸ್ತ್ರಾಸ್ತ್ರ ಭಾರತವೂ ತಿರುಗೇಟು ಕೊಟ್ಟಿದೆ. ಹಾಗಿದ್ದರೆ ಯಾವ್ಯಾವ ದೇಶಗಳ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ? ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರ ಇರುವ ದೇಶಗಳು ಯಾವುವು? ಇಲ್ಲಿದೆ ಡಿಟೇಲ್ಸ್‌

ಯಾವ ದೇಶಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ? ಭಾರತದ ಬಳಿ ಎಷ್ಟಿದೆ?

Profile Rakshita Karkera May 11, 2025 7:59 PM

ನವದೆಹಲಿ: ಪ್ರಸ್ತುತ ಇಡೀ ಪ್ರಪಂಚ ಕಣ್ಣು ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಕ್ಷುಬ್ದ ವಾತಾವರಣದ ಮೇಲಿದೆ. ಪಹಲ್ಗಾಮ್‌ ದಾಳಿ ನಂತರ ಭಾರತ ಮತ್ತು ಪಾಕ್‌ ನಡುವೆನಿರಂತರ ಸಂಘರ್ಷ ಮನೆ ಮಾಡಿದೆ. ದಾಳಿ ಪ್ರತಿದಾಳಿಗಳು ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವೆ ಹೀಗೆ ಮುಂದುವರಿದರೆ ಮುಂದೊಂದು ದಿನ ಪೂರ್ಣ ಪ್ರಮಾಣದ ಯುದ್ಧ ನಡೆಯುತ್ತದೋ ಎಂಬ ಆತಂಕ ಎಲ್ಲರಲ್ಲೂ ಇದೆ. ಅಷ್ಟೇ ಅಲ್ಲದೇ ಈಗಾಗಲೇ ಪಾಕಿಸ್ತಾನ ಹಲವು ಬಾರಿ ತನ್ನ ಬಳಿ ಪರಮಾಣು ಶಸ್ತ್ರಾಸ್ತ್ರ(Nuclear weapons Having Countries) ಇರುವ ಬಗ್ಗೆಯೂ ಪ್ರಸ್ತಾಪಿಸಿ ಭಾರತಕ್ಕೆ ಗೊಡ್ಡು ಬೆದರಿಕೆ ಒಡ್ಡುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ನಾವೇವೂ ಕಮ್ಮಿ ಇಲ್ಲ. ನಮ್ಮ ಬಳಿಯೂ ಇಡೀ ಪಾಕಿಸ್ತಾನವನ್ನೇ ನಿರ್ಣಾಮ ಮಾಡಬಲ್ಲ ಪರಮಾಣು ಶಸ್ತ್ರಾಸ್ತ್ರ ಇದೆ ಎಂದು ಭಾರತವೂ ತಿರುಗೇಟು ಕೊಟ್ಟಿದೆ. ಹಾಗಿದ್ದರೆ ಯಾವ್ಯಾವ ದೇಶಗಳ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ? ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರ ಇರುವ ದೇಶಗಳು ಯಾವುವು? ಭಾರತ ಮತ್ತು ಪಾಕಿಸ್ತಾನದಲ್ಲಿ ತಲಾ ಎಷ್ಟಿವೆ? ಇಲ್ಲಿದೆ ಡಿಟೇಲ್ಸ್‌

ಪ್ರಸ್ತುತ ಜಗತ್ತಿನಲ್ಲಿ 9 ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅವುಗಳೆಂದರೆ:

  • ರಷ್ಯಾ
  • ಅಮೆರಿಕ
  • ಚೀನಾ
  • ಫ್ರಾನ್ಸ್
  • ಯುನೈಟೆಡ್ ಕಿಂಗ್‌ಡಮ್
  • ಪಾಕಿಸ್ತಾನ
  • ಭಾರತ
  • ಇಸ್ರೇಲ್
  • ಉತ್ತರ ಕೊರಿಯಾ

ಈ ದೇಶಗಳು ಸರಿಸುಮಾರು 12,331 ಪರಮಾಣು ಸಿಡಿತಲೆಗಳನ್ನು ಹೊಂದಿದ್ದು, 9,600 ಕ್ಕೂ ಹೆಚ್ಚು ಸಕ್ರಿಯ ಮಿಲಿಟರಿ ದಾಸ್ತಾನುಗಳನ್ನು ಹೊಂದಿವೆ ಎಂದು ಪರಮಾಣು ವಿಜ್ಞಾನಿಗಳ ಈವರ್ಷ ನೀಡಿರುವ ವರದಿಯಿಂದ ತಿಳಿದುಬಂದಿದೆ. ಶೀತಲ ಸಮರದ ಸಮಯದಲ್ಲಿ ಪರಮಾಣು-ಸಶಸ್ತ್ರ ರಾಷ್ಟ್ರಗಳು ಸರಿಸುಮಾರು 70,000 ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದವು. ಪ್ರಸ್ತುತ ಇದರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿದ್ದರೂ, ಮುಂಬರುವ ದಶಕದಲ್ಲಿ ಪರಮಾಣು ಶಸ್ತ್ರಾಗಾರಗಳು ಬೆಳೆಯುವ ನಿರೀಕ್ಷೆಯಿದೆ.

ಯಾವ ದೇಶ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ?

ರಷ್ಯಾ 5,500 ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿ ಅಮೆರಿಕ ಇದ್ದರೆ, ಅದರ ನಂತರದ ಸ್ಥಾನದಲ್ಲಿ ಟರ್ಕಿ, ಇಟಲಿ, ಬೆಲ್ಜಿಯಂ, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ದೇಶಗಳಿವೆ. ಶೇ.90ರಷ್ಟು ಪರಮಾಣು ಶಸ್ತ್ರಾಸ್ತ್ರಗಳು ಅಮೆರಿಕ ಮತ್ತು ರಷ್ಯಾದ ಬಳಿ ಇವೆ. ಉತ್ತರ ಕೊರಿಯಾ ಮತ್ತು ಇಸ್ರೇಲ್‌ನ ಒಟ್ಟು ಪರಮಾಣು ಶಸ್ತ್ರಾಸ್ತ್ರಗಳನ್ನು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಆದಾಗ್ಯೂ, ಇಸ್ರೇಲ್ ಸುಮಾರು 200 ವರೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

ಭಾರತದ ಬಳಿ ಎಷ್ಟಿದೆ?

ಭಾರತವು ಸರಿಸುಮಾರು 164 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅವುಗಳನ್ನು ಕ್ಷಿಪಣಿಗಳು ಮತ್ತು ಹೆಚ್ಚಾಗಿ ವಿಮಾನಗಳಿಂದ ಉಡಾಯಿಸಬಹುದಾಗಿದೆ. ಜಲಾಂತರ್ಗಾಮಿ ನೌಕೆಗಳಿಂದಲೂ ಉಡಾಯಿಸಲು ಸಾಧ್ಯವಾಗಬಹುದು. ಭಾರತವು 1974 ಮತ್ತು 1998 ರಲ್ಲಿ ಒಟ್ಟು ಮೂರು ಪರಮಾಣು ಪರೀಕ್ಷೆಗಳನ್ನು ನಡೆಸಿತು. 2022 ರಲ್ಲಿ, ಭಾರತವು ತನ್ನ ಪರಮಾಣು ಪಡೆಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಅಂದಾಜು 2,300 ಕೋಟಿಗೂ ಹೆಚ್ಚು ಖರ್ಚು ಮಾಡಿದೆ.

ಪಾಕಿಸ್ತಾನದ ಬಳಿ ಎಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ?

ಪಾಕಿಸ್ತಾನವು ಸುಮಾರು 170 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅವುಗಳನ್ನು ಕ್ಷಿಪಣಿಗಳು ಮತ್ತು ವಿಮಾನಗಳಿಂದ ಉಡಾಯಿಸಬಹುದು. ಜಲಾಂತರ್ಗಾಮಿ ನೌಕೆಗಳಿಂದಲೂ ಉಡಾಯಿಸುವ ಸಾಮರ್ಥ್ಯವನ್ನು ಅದು ಅಭಿವೃದ್ಧಿಪಡಿಸುತ್ತಿದೆ. ಪಾಕಿಸ್ತಾನವು 1998 ರಲ್ಲಿ ಎರಡು ಪರಮಾಣು ಪರೀಕ್ಷೆಗಳನ್ನು ನಡೆಸಿತು. 2022 ರಲ್ಲಿ, ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಅಂದಾಜು 1000 ಕೋಟಿಗೂ ಖರ್ಚು ಮಾಡಿದೆ.

ಪರಮಾಣು ಶಸ್ತ್ರಾಸ್ತ್ರಗಳಿಂದ ಏನು ಪ್ರಯೋಜನ?

ಒಂದೇ ಪರಮಾಣು ಸಿಡಿತಲೆ ಲಕ್ಷಾಂತರ ಜನರನ್ನು ಕೊಲ್ಲಬಹುದು, ಇದು ಶಾಶ್ವತ ಮತ್ತು ವಿನಾಶಕಾರಿ ಮಾನವೀಯ, ಪರಿಸರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ ನ್ಯೂಯಾರ್ಕ್ ಮೇಲೆ ಕೇವಲ ಒಂದು ಪರಮಾಣು ಸಿಡಿತಲೆಯನ್ನು ಸ್ಫೋಟಿಸುವುದರಿಂದ ಅಂದಾಜು 583,160 ಸಾವುಗಳು ಸಂಭವಿಸುತ್ತವೆ. ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಒಟ್ಟು 12,300 ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ, ಅವುಗಳಲ್ಲಿ ಹೆಚ್ಚಿನವು ಹಿರೋಷಿಮಾದ ಮೇಲೆ ದಾಳಿ ಮಾಡಿದ ಪರಮಾಣು ಶಸ್ತ್ರಾಸ್ತ್ರಕ್ಕಿಂತ ಹಲವು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ.

ಈ ಸುದ್ದಿಯನ್ನೂ ಓದಿ: ಯುದ್ಧ ನಡೆದರೆ ಅಮೆರಿಕ ಪಾಕ್‌ನ ಪರಮಾಣು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುತ್ತಾ? ಏನಿದು Snatch And Grab ಪ್ಲ್ಯಾನ್‌?

ಮತ್ತೊಂದು ದೇಶದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರು ರಾಷ್ಟ್ರಗಳು

ಬೆಲ್ಜಿಯಂ, ಜರ್ಮನಿ, ಇಟಲಿ, ನೆದರ್ಲ್ಯಾಂಡ್‌ ಮತ್ತು ಟರ್ಕಿ ಈ ರಾಷ್ಟ್ರಗಳಿ ಅಮೆರಿಕದ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಈ ಶಸ್ತ್ರಾಸ್ತ್ರಗಳ ಕಾರ್ಯಾಚರಣೆಯ ನಿಯಂತ್ರಣವನ್ನು ತನಗೆ ನೀಡಬೇಕೆಂದು ಅಮೆರಿಕ ಒತ್ತಾಯಿಸುತ್ತದೆ. ಅದಾಗ್ಯೂ ಈ ದೇಶಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆಯು ಯುಎಸ್ ಪರಮಾಣು ಯುದ್ಧ ಯೋಜನೆಗೆ ಸಹಾಯ ಮಾಡುತ್ತದೆ.