India-Pak Tensions Live Updates: ಇಂದು ರಾತ್ರಿ 8ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ
Operation Sindoor: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಇದೀಗ ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಗಡಿಯಲ್ಲಿ ಕಳೆದ ರಾತ್ರಿಯಿಂದ ಶಾಂತಿ ಸುವ್ಯವಸ್ಥೆ ನಿಧಾನವಾಗಿ ಮರಳುತ್ತಿದೆ. ಉಭಯ ರಾಷ್ಟ್ರಗಳು ಇದೀಗ ಮತ್ತೆ ಕದನ ವಿರಾಮದತ್ತ ಮುಖ ಮಾಡಿದೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.


ನವದೆಹಲಿ: ಆಪರೇಷನ್ ಸಿಂದೂರ್(Operation Sindoor) ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಭುಗಿಲೆದ್ದಿದ್ದ ಯುದ್ಧದ ವಾತಾವರಣ ಕೊಂಚ ಮಟ್ಟಿಗೆ ತಿಳಿಗೊಂಡಿದ್ದು, ನಿನ್ನೆ ತಡರಾತ್ರಿಯಿಂದ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಿಂತಿದ್ದು, ಶಾಂತಿ ಸುವ್ಯವಸ್ಥೆ ಮರಳಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಮೂರು ಸೇನೆಗಳ ಮುಖ್ಯಸ್ಥರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಭಾರತದ DGMO ನೇತೃತ್ವದಲ್ಲೂ ಸಭೆ ನಡೆಯುತ್ತಿದೆ ಇಂದು ಸಂಜೆ ಭಾರತ-ಪಾಕ್ DGMOಗಳ ನಡುವೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ.