Nora Fatehi: ನೋರಾ ಫತೇಹಿ ಸೆಕ್ಸಿ ಲುಕ್ಗೆ ಪಡ್ಡೆ ಹುಡುಗರ ಹಾರ್ಟ್ಬೀಟ್ ಜೋರಾಯ್ತು!
ಬಾಲಿವುಡ್ ನಟಿ ನೋರಾ ಫತೇಹಿ ಅವರು ಇತ್ತೀಚಿನ ದಿನದಲ್ಲಿ ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರದಿಂದ ಹೆಚ್ಚು ಸುದ್ದಿ ಯಲ್ಲಿದ್ದಾರೆ. ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನೋರಾ ಫತೇಹಿ ನಂತರ ತೆಲುಗು, ತಮಿಳು ಹಾಗೂ ಮಲಯಾಳಂ ಹಾಗೂ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕೂಡ ಅಭಿಯಿಸಿದ್ದಾರೆ. ಕೆಲವು ವೈಯಕ್ತಿಕ ಕಾಂಟ್ರವರ್ಸಿಯಲ್ಲಿ ಇದ್ದ ನಟಿ ಇದೀಗ ಮುಂಬೈ ಏರ್ ಪೋರ್ಟ್ ನಲ್ಲಿ ಸಡನ್ ಆಗಿ ಕಾಣಿಸಿಕೊಂಡ ಇವರ ಫೋಟೊ ಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..



ನೋರಾ ಫತೇಹಿ ಅವರು ಅಮೆರಿಕದ ಪಾಪ್ ಸ್ಟಾರ್ ಬೆನ್ಸನ್ ಬೂನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಈ ನಡುವೆ, ನಟಿ ನೋರಾ ಫತೇಹಿ ಅವರು ಜೂನ್ 4ರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನಟಿ ನೋರಾ ಫತೇಹಿ ಅವರು ಕ್ಯಾಶುವಲ್ ಡ್ರೆಸ್ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನೋರಾ ಫತೇಹಿ ಅವರು ಬಿಳಿ ಬಣ್ಣದ ಕ್ರಾಪ್ ಟಾಪ್, ಅದಕ್ಕೆ ಮ್ಯಾಚಿಂಗ್ ಆಗುವಂತಹ ಜಾಗಿಂಗ್ ಪ್ಯಾಂಟ್ ಧರಿಸಿದ್ದು ಬಹಳ ನ್ಯಾಚುರಲ್ ಆಗಿ ಕಂಡಿದ್ದಾರೆ.

2025 ರ ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ನೋರಾ ಫತೇಹಿ ಭಾಗಿಯಾಗಿದ್ದರು. ಅಲ್ಲಿ ಅಮೇರಿಕನ್ ಪಾಪ್ ಸ್ಟಾರ್ ಬೆನ್ಸನ್ ಬೂನ್ ಅವರೊಂದಿಗೆ ಅಫೆರ್ಸ್ ಹೊಂದಿದ್ದ ವದಂತಿಗಳು ಇತ್ತೀಚೆಗಷ್ಟೇ ಹಬ್ಬಿತ್ತು.

ಅಮೆರಿಕನ್ ಪಾಪ್ ಸ್ಟಾರ್ ಬೆನ್ಸನ್ ಬೂನ್ ಅವರೊಂದಿಗಿನ ಅಫೇರ್ಸ್ ಬಗ್ಗೆ ನೋರಾ ಫತೇಹಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸಿನಿಮಾ , ಮಾಡೆಲಿಂಗ್ ನಲ್ಲಿ ಬ್ಯುಸಿ ಇರುವ ಇವರು ಒಮ್ಮಿಂದೊಮ್ಮೆಲೆ ಅಮೇರಿಕಾದಿಂದ ಭಾರತಕ್ಕೆ ವಾಪಾಸ್ಸಾಗಿದ್ದಕ್ಕೆ ಯಾವುದಾದರೂ ಹೊಸ ಸಿನಿಮಾಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.

ನೋರಾ ಫತೇಹಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅನೇಕ ಅವಮಾನಗಳನ್ನು ಎದುರಿಸಿದ್ದಾರೆ. ಅವುಗಳನ್ನೇ ಸವಾಲಾಗಿ ತೆಗೆದುಕೊಂಡು ಸಿನಿಮೋದ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇವರು ಬಾಹುಬಲಿ ಸಿನಿಮಾದ ಮನೋಹರಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದಿದ್ದರು. ಟೆಂಪರ್, ಕಿಕ್ 2, ಲೋಫರ್ ಮತ್ತು ಊಪಿರಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿದ್ದ ನೋರಾ ಫತೇಹಿಗೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಫ್ಯಾನ್ ಫಾಲೋವರ್ಸ್ ಕೂಡ ಇದೆ.