ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final: ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದು ವಿಂಡೀಸ್‌ ದಾಖಲೆ ಮುರಿದ ದಕ್ಷಿಣ ಆಫ್ರಿಕಾ!

ಆಸ್ಟ್ರೇಲಿಯಾ ವಿರುದ್ಧ ಹದಿನೆಂಟನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ, 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಆ ಮೂಲಕ ವೆಸ್ಟ್‌ ಇಂಡೀಸ್‌ ತಂಡದ 21 ವರ್ಷಗಳ ಹಳೆಯ ದಾಖಲೆಯನ್ನು ಹರಿಣ ಪಡೆ ಮುರಿದಿದೆ.

ವೆಸ್ಟ್‌ ಇಂಡೀಸ್‌ನ 21 ವರ್ಷಗಳ ಹಳೆಯ ದಾಖಲೆ ಮುರಿದ ಆಫ್ರಿಕಾ!

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡ.

Profile Ramesh Kote Jun 14, 2025 8:58 PM

ಲಂಡನ್‌: ಆಸ್ಟ್ರೇಲಿಯಾ ವಿರುದ್ಧ ಹದಿನೆಂಟನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ (WTC Final) ಪಂದ್ಯದಲ್ಲಿ ಐದು ವಿಕೆಟ್‌ ಗೆಲುವು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ (South Africa) ತಂಡ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಗೆಲುವಿನ ಮೂಲಕ ತೆಂಬಾ ಬವೂಮ ನಾಯಕತ್ವದ ಹರಿಣ ಪಡೆ, ವೆಸ್ಟ್‌ ಇಂಡೀಸ್‌ (West Indies) ತಂಡದ 21 ವರ್ಷಗಳ ದಾಖಲೆಯನ್ನು ಮುರಿದಿದೆ. ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಏಡೆನ್‌ ಮಾರ್ಕ್ರಮ್‌ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2023-2025ರ ಸಾಲಿನ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ, ವೆಸ್ಟ್‌ ಇಂಡೀಸ್‌ ತಂಡದ 21 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ದೀರ್ಘಾವಧಿ ಅಂತರದ ಬಳಿಕ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ತಂಡ ಎಂಬ ನೂತನ ದಾಖಲೆಯನ್ನು ಹರಿಣ ಪಡೆ ಬರೆದಿದೆ. ಇದಕ್ಕೂ ಮುನ್ನ 1998ರಲ್ಲಿ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. 1998ರ ನವೆಂಬರ್‌ ಒಂದರಂದು ವೆಸ್ಟ್‌ ಇಂಡೀಸ್‌ ವಿರುದ್ಧ ಗೆದ್ದು ದಕ್ಷಿಣ ಆಫ್ರಿಕಾ ತಂಡ ಐಸಿಸಿ ನಾಕ್‌ಔಟ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

WTC Final 2025: ಚೋಕರ್ಸ್‌ ಹಣೆಪಟ್ಟಿ ಕಳಚಿದ ದಕ್ಷಿಣ ಆಫ್ರಿಕಾ; ಚೊಚ್ಚಲ ವಿಶ್ವಕಪ್‌ ಟ್ರೋಫಿ ಗೆದ್ದ ಹರಿಣ ಪಡೆ

ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ ಸತತ 27 ವರ್ಷಗಳ ಕಾಲ ಸಾಕಷ್ಟು ವೈಫಲ್ಯವನ್ನು ಅನುಭವಿಸಿತ್ತು. 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಹರಿಣ ಪಡೆ ಭಾರಿ ನಿರಾಶೆಯನ್ನು ಅನುಭವಿಸಿತ್ತು. ಈ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಸನಿಹ ಬಂದು ಸೋಲು ಅನುಭವಿಸಿತ್ತು. ಆ ಮೂಲಕ ತಾವು ಚೋಕರ್ಸ್‌ ಎಂಬುದನ್ನು ಸಾಬೀತುಪಡಿಸಿತ್ತು. ಈ ಪಂದ್ಯದ ಕೊನೆಯ 30 ಎಸೆತಗಳಲ್ಲಿ 30 ರನ್‌ಗಳ ಅಗತ್ಯವಿತ್ತು ಹಾಗೂ ಕೈಯಲ್ಲಿ 6 ವಿಕೆಟ್‌ಗಳು ಬಾಕಿ ಇದ್ದವು. ಆದರೆ, ಅಂತಿಮವಾಗಿ ಹರಿಣ ಪಡೆ ಸೋಲಿನ ಆಘಾತ ಅನುಭವಿಸಿತ್ತು.

ವೆಸ್ಟ್‌ ಇಂಡೀಸ್‌ನ ದಾಖಲೆ ಏನು?

ವೆಸ್ಟ್‌ ಇಂಡೀಸ್‌ ತಂಡ ಎರಡು ಐಸಿಸಿ ಟ್ರೋಫಿ ಗೆಲುವುಗಳ ನಡುವೆ 25 ವರ್ಷಗಳ ಅಂತರವಿತ್ತು. 1979ರಲ್ಲಿ ಒಡಿಐ ವಿಶ್ವಕಪ್‌ ಗೆಕುವಿನ ಬಳಿಕ ವಿಂಡೀಸ್‌ ಎರಡನೇ ಟ್ರೋಫಿಯನ್ನು ಗೆಲ್ಲಲ್ಲು 25 ವರ್ಷಗಳನ್ನು ತೆಗೆದುಕೊಂಡಿತ್ತು. 2004ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ವಿಂಡೀಸ್‌ ಚಾಂಪಿಯನ್‌ ಆಗಿತ್ತು.



ವೆಸ್ಟ್‌ ಇಂಡೀಸ್‌ 1983ರಲ್ಲಿಯೇ ಎರಡನೇ ಏಕದಿನ ವಿಶ್ವಕಪ್‌ ಗೆಲ್ಲಬೇಕಾಗಿತ್ತು. ಆದರೆ, ಕಪಿಲ್‌ ದೇವ್‌ ನಾಯಕತ್ವದ ಭಾರತ ತಂಡ ಅಂದು ಫೈನಲ್‌ನಲ್ಲಿ ವಿಂಡೀಸ್‌ ತಂಡವನ್ನು ಮಣಿಸಿ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 184 ರನ್‌ಗಳ ಗುರಿಯನ್ನು ತಲುಪುವಲ್ಲಿ ವಿಂಡೀಸ್‌ ವಿಫಲವಾಗಿತ್ತು. ನಂತರ ವಿಂಡೀಸ್‌ 2012 ಮತ್ತು 2016ರಲ್ಲಿ ಎರಡು ಟಿ20ಐ ವಿಶ್ವಕಪ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿತ್ತು.

WTC final: 50 ವರ್ಷದ ವಿಶ್ವಕಪ್‌ ಫೈನಲ್‌ ದಾಖಲೆ ಮುರಿದ ಸ್ಟಾರ್ಕ್‌-ಹ್ಯಾಜಲ್‌ವುಡ್‌

ಏಡೆನ್‌ ಮಾರ್ಕ್ರಮ್‌ ಶತಕ

ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಏಡೆನ್‌ ಮಾರ್ಕ್ರಮ್‌ (136 ರನ್‌) ಅವರ ಶತಕ ಹಾಗೂ ನಾಯಕ ತೆಂಬಾ ಬವೂಮ (66 ರನ್‌) ಅವರ ಅರ್ಧಶತಕದ ಬಲದಿಂದ ಗೆದ್ದು ಬೀಗಿತ್ತು. ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಇದರ ಪರಿಣಾಮ ಪ್ರಥಮ ಇನಿಂಗ್ಸ್‌ನಲ್ಲಿ 74 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ 212 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ಆಸೀಸ್‌, ದ್ವಿತೀಯ ಇನಿಂಗ್ಸ್‌ನಲ್ಲಿ 207ಕ್ಕೆ ಆಲ್‌ಔಟ್‌ ಆಗಿತ್ತು.