ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕನಾಗುವುದು ಅನುಮಾನ!

ರೋಹಿತ್ ಶರ್ಮಾ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ಬಯಸುತ್ತಾರೆ. ಆದರೆ ಬಿಸಿಸಿಐ, ಅವರ ಭವಿಷ್ಯದ ಬಗ್ಗೆ ಬೇರೆಯದೇ ಮನಸ್ಥಿತಿಯಲ್ಲಿದೆ. 2027 ರ ವಿಶ್ವಕಪ್‌ನಲ್ಲಿ ಆಡುವ ರೋಹಿತ್ ಅವರ ಕನಸು ನನಸಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.

ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ನಾಯಕನಾಗುವುದು ಅನುಮಾನ!

ಏಕದಿನ ವಿಶ್ವಕಪ್‌ ಟೂರ್ನಿಯ ನಿಮಿತ್ತ ರೋಹಿತ್‌ ಶರ್ಮಾರ ಭವಿಷ್ಯ ಏನು?

Profile Ramesh Kote Jun 9, 2025 7:35 PM

ನವದೆಹಲಿ: ಭಾರತೀಯ ಕ್ರಿಕೆಟ್ ಒಂದು ಆಸಕ್ತಿದಾಯಕ ಹಂತದ ಮೂಲಕ ಸಾಗುತ್ತಿದೆ. ಹಳೆಯ ದಿಗ್ಗಜರು ಈಗ ತಂಡವನ್ನು ತೊರೆಯುತ್ತಿದ್ದಾರೆ ಮತ್ತು ಯುವ ಪೀಳಿಗೆ ಅವರ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಕಳೆದ 15 ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಆಧಾರಸ್ತಂಭಗಳಾಗಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳೆದ ವರ್ಷ ಟಿ20ಐನಿಂದ ನಿವೃತ್ತರಾಗಿದ್ದರು. ಇದೀಗ ಅವರು ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಈ ಇಬ್ಬರೂ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯಲಿದ್ದಾರೆ. ಇದರ ಹೊರತಾಗಿಯೂ ಇವರ ಒಡಿಐ ಕ್ರಿಕೆಟ್‌ ಭವಿಷ್ಯದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯವರೆಗೆ ಇನ್ನೂ ಹಲವು ಏಕದಿನ ಪಂದ್ಯಗಳು ಉಳಿದಿವೆ. ಇದರ ನಡುವೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಬಹುಶಃ ಒಟ್ಟಿಗೆ ಗೆಲ್ಲದ ಐಸಿಸಿ ಏಕದಿನ ವಿಶ್ವಕಪ್‌ನೊಂದಿಗೆ ತಮ್ಮ ಅದ್ಭುತ ವೃತ್ತಿಜೀವನವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಆದರೆ, ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ಎರಡು ವರ್ಷಗಳ ಕಾಲಾವಧಿ ಇದೆ. ಆಗ ರೋಹಿತ್‌ಗೆ 40 ವರ್ಷ ವಯಸ್ಸಾಗಿರುತ್ತದೆ ಮತ್ತು ಕೊಹ್ಲಿ ಕೂಡ ಆ ವಯಸ್ಸನ್ನು ಸಮೀಪಿಸುತ್ತಾರೆ. ಇಬ್ಬರೂ ಆಟವಾಡುವುದನ್ನು ಮುಂದುವರಿಸಲು ಬಯಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಟೀಮ್‌ ಮ್ಯಾನೇಜ್‌ಮೆಂಟ್‌ ವಿಶ್ವಕಪ್ ಬಗ್ಗೆ ವಿಭಿನ್ನವಾಗಿ ಯೋಚಿಸಬಹುದು. ಕೊಹ್ಲಿ ಹೆಚ್ಚು ಫಿಟ್ ಆಗಿರುವುದರಿಂದ ಮತ್ತು ಅವರ ಬ್ಯಾಟಿಂಗ್ ಶೈಲಿಯೂ ಸ್ಥಿರವಾಗಿರುವುದರಿಂದ ಪರಿಸ್ಥಿತಿ ಉತ್ತಮವಾಗಿ ಕಾಣುತ್ತಿದೆ. ರೋಹಿತ್ ವಿಷಯದಲ್ಲಿ ಸ್ವಲ್ಪ ಏರಿಳಿತವಾಗಿದೆ.

IND vs ENG ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್‌ ಆರಿಸಿದ ಮ್ಯಾಥ್ಯೂ ಹೇಡನ್‌!

ನಾಯಕತ್ವ ಕಳೆದುಕೊಳ್ಳಲಿರುವ ಹಿಟ್‌ಮ್ಯಾನ್‌

ರೋಹಿತ್ ಶರ್ಮಾ 2023ರ ವಿಶ್ವಕಪ್‌ನಲ್ಲಿ ಮುಕ್ತವಾಗಿ ಬ್ಯಾಟ್ ಮಾಡಿದದ್ದರು. ಅವರ ವಿಧಾನವೂ ಸಾಕಷ್ಟು ಯಶಸ್ವಿಯಾಯಿತು. ಆದರೆ ವಯಸ್ಸು ಹೆಚ್ಚಾದಂತೆ, ಈ ವಿಧಾನವು ಭವಿಷ್ಯದಲ್ಲಿ ಕೆಲಸ ಮಾಡುತ್ತದೆಯೇ ಎಂದು ನೋಡಬೇಕಾಗಿದೆ. ರೋಹಿತ್ ಐಸಿಸಿ ಟೂರ್ನಿಗೆ ನಾಯಕತ್ವ ವಹಿಸುವುದಿಲ್ಲ ಎಂಬ ವರದಿಗಳಿವೆ. ರೋಹಿತ್‌ಗೆ ಈ ಮಾರ್ಗವು ಇನ್ನಷ್ಟು ಕಷ್ಟಕರವಾಗುತ್ತದೆ. ಭಾರತೀಯ ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಇನ್ನೊಬ್ಬ ಆಟಗಾರನನ್ನು ಸಿದ್ಧಪಡಿಸುವುದು ಆಗಾಗ್ಗೆ ಸಂಭವಿಸುತ್ತದೆ. 2019ರ ವಿಶ್ವಕಪ್ ನಂತರ ಆಡುವುದು ಕಷ್ಟ ಎಂದು ಎಂಎಸ್ ಧೋನಿಗೆ ತಿಳಿದಿತ್ತು. ಆದ್ದರಿಂದ, ವಿರಾಟ್ ಕೊಹ್ಲಿಯನ್ನು 2017 ರಲ್ಲಿ ಏಕದಿನ ಪಂದ್ಯಗಳ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಅದೇ ರೀತಿ 2027ರ ವಿಶ್ವಕಪ್, ರೋಹಿತ್ ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಆದ್ದರಿಂದ, ಅವರು ನಾಯಕನಾಗುವ ಸಾಧ್ಯತೆಗಳು ಕಡಿಮೆ.

ಭಾರತೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗ ವಿಭಿನ್ನ ಸ್ವರೂಪಗಳಿಗೆ ವಿಭಿನ್ನ ನಾಯಕರನ್ನು ನೇಮಿಸಲಾಗುತ್ತಿದೆ. ರೋಹಿತ್ ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20ಐ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಭಮನ್ ಗಿಲ್ ಶೀಘ್ರದಲ್ಲೇ ಟೆಸ್ಟ್‌ ತಂಡದಲ್ಲಿ ತಮ್ಮ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆದರೆ ಈ ಬದಲಾವಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಶೀಘ್ರದಲ್ಲೇ ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು.

IND vs ENG: ʻನಾಚಿಕೆಗೇಡಿನ ಸಂಗತಿʼ-ರೋಹಿತ್‌, ಕೊಹ್ಲಿ ಟೆಸ್ಟ್‌ ನಿವೃತ್ತಿ ಬಗ್ಗೆ ಕ್ರಿಸ್‌ ವೋಕ್ಸ್‌ ಪ್ರತಿಕ್ರಿಯೆ!

ಚಾಂಪಿಯನ್ಸ್ ಟ್ರೋಫಿ ನಂತರ ನಿವೃತ್ತಿ ನಿರೀಕ್ಷಿಸಲಾಗಿತ್ತು

ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಶರ್ಮಾ ನಿವೃತ್ತರಾಗುತ್ತಾರೆ ಎಂದು ಬಿಸಿಸಿಐ ಭಾವಿಸಿತ್ತು. ಬಿಸಿಸಿಐ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದು, "ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ರೋಹಿತ್ ಏಕದಿನ ಸ್ವರೂಪದಿಂದ ದೂರ ಸರಿಯಲು ಬಯಸಿದ್ದಾರೆಂದು ನಮ್ಮಲ್ಲಿ ಹಲವರು ಭಾವಿಸಿದ್ದರು. ರೋಹಿತ್ ಮತ್ತು ಆಯ್ಕೆದಾರರ ನಡುವೆ ಅವರ ಏಕದಿನ ಭವಿಷ್ಯದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ," ಎಂದು ತಿಳಿಸಿದೆ.

ನ್ಯೂಜಿಲೆಂಡ್ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದ ನಂತರ ಮಾತನಾಡಿದ್ದ ರೋಹಿತ್ ಶರ್ಮಾ, "ಇನ್ನೊಂದು ವಿಷಯ. ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳಲು ಬಯಸುತ್ತೇನೆ. ತುಂಬಾ ಧನ್ಯವಾದಗಳು," ಎಂದು ಸ್ಪಷ್ಟನೆ ನೀಡಿದ್ದರು.