ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರವಾಸಿಗನ ಕೈಯಲ್ಲಿದ್ದ ಬಿರಿಯಾನಿಗೇ ಕನ್ನ ಹಾಕಿದ ಹಸು; ವಿಡಿಯೋ ನೋಡಿ

ಆಸ್ಟ್ರೇಲಿಯನ್ ಕಂಟೆಂಟ್ ಕ್ರಿಯೆಟರ್ ಒಬ್ಬ ಬೀಚ್‍ನಲ್ಲಿ ಬಿರಿಯಾನಿ ತಿನ್ನುವಾಗ ಅನಿರೀಕ್ಷಿತವಾಗಿ ಸ್ಥಳೀಯ ಹಸುವೊಂದು ಅವನ ಬಿರಿಯಾನಿಯನ್ನು ಕದ್ದು ತಿನ್ನಲು ಮುಂದಾಗಿತ್ತಂತೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.ನೆಟ್ಟಿಗರು ಕೂಡ ಇದನ್ನು ನೋಡಿ ಫುಲ್‌ ಫಿದಾ ಆಗಿದ್ದಾರೆ.

ಪ್ರವಾಸಿಗನ ಕೈಯಲ್ಲಿದ್ದ ಬಿರಿಯಾನಿ ನೋಡಿ ಹಸು ಮಾಡಿದ್ದೇನು?

Profile pavithra Jun 9, 2025 6:18 PM

ಪಣಜಿ: ಇತ್ತೀಚೆಗೆ ಆಸ್ಟ್ರೇಲಿಯನ್ ಕಂಟೆಂಟ್ ಕ್ರಿಯೆಟರ್ ಒಬ್ಬ ಬೀಚ್‍ನಲ್ಲಿ ಬಿರಿಯಾನಿ ತಿನ್ನುವಾಗ ಹಸುವೊಂದು ಅವನ ಬಿರಿಯಾನಿಯನ್ನು ಟೇಸ್ಟ್ ಮಾಡಲು ಮುಂದಾಗಿದೆಯಂತೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ತಮಾಷೆಯ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.ವೈರಲ್‌(Viral Video) ಆದ ವಿಡಿಯೊದಲ್ಲಿ ಆಸ್ಟ್ರೇಲಿಯಾದ ಕಂಟೆಂಟ್ ಕ್ರಿಯೇಟರ್‌ ಬಳಿಗೆ ಹಸಿದ ಸ್ಥಳೀಯ ಹಸುವೊಂದು ಅನಿರೀಕ್ಷಿತವಾಗಿ ಭೇಟಿ ನೀಡುವುದನ್ನು ಸೆರೆಹಿಡಿಯಲಾಗಿದೆ.

ಆಸ್ಟ್ರೇಲಿಯನ್ ಕಂಟೆಂಟ್ ಕ್ರಿಯೇಟರ್ ಗೋವಾ ಬೀಚ್‍ನಲ್ಲಿ ಕೈಯಲ್ಲಿ ಒಂದು ಬಟ್ಟಲು ಬಿರಿಯಾನಿ ಹಿಡಿದು ಸಮುದ್ರದ ದಡದಲ್ಲಿರುವಾಗ, ಅನಿರೀಕ್ಷಿತವಾಗಿ ಬಂದ ಹಸುವೊಂದು ಅವನ ಕೈಯಲ್ಲಿದ್ದ ತಟ್ಟೆಯಿಂದ ಆಹಾರವನ್ನು ಕದ್ದು ತಿನ್ನಲು ಪ್ರಯತ್ನಿಸಿದೆಯಂತೆ.ಇವನು ಇದನ್ನು ನೋಡಿದ್ದರಿಂದ ಬಿರಿಯಾನಿ ಹಸುವಿನ ಪಾಲಾಗುವುದು ತಪ್ಪಿತಂತೆ. ಅದು ಅಲ್ಲದೇ ಆ ಹಸುವಿನ ಹಿಂದೆ ಇನ್ನೂ ಸಾಕಷ್ಟು ಹಸುಗಳು ಇದ್ದಿದ್ದು ನೋಡಿ ಆತ ಶಾಕ್‌ ಆಗಿದ್ದಾನಂತೆ.

ವಿಡಿಯೊ ಇಲ್ಲಿದೆ ನೋಡಿ...

ಈ ಸುದ್ದಿಯನ್ನೂ ಓದಿ:Viral Video: ರೆಸ್ಟೋರೆಂಟ್‌ಗೆ ನುಗ್ಗಿ ದುಷ್ಕರ್ಮಿಗಳ ಅಟ್ಟಹಾಸ; ಊಟ ಬಿಟ್ಟು ಓಡಿದ ಜನ!

ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಅನೇಕರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.ಈ ವಿಡಿಯೊ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಹಾಗು ಸುಮಾರು 3 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.