Aishwarya Rai: ಯಾಕಿಷ್ಟು ವೈರಲಾಗ್ತಿದೆ ಆಮೀರ್ ಖಾನ್ ಮತ್ತು ಐಶ್ವರ್ಯ ರೈ ಹಳೆಯ ವಿಡಿಯೊ- ಅಂತಹದ್ದೇನಿದೆ ಇದ್ರಲ್ಲಿ?
ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಸಾಕಷ್ಟು ಹಿಟ್ ಸಿನಿಮಾ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅಭಿನಯ, ನೃತ್ಯ ಎಲ್ಲ ದರ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಇವರ ಸಾಕಷ್ಟು ವಿಡಿಯೋಗಳು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಜೊತೆಗೆ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಹಿಟ್ ಸಾಂಗ್ ಗೆ ಹೆಜ್ಜೆ ಹಾಕಿದ್ದ ಹಳೆಯ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.


ನವದೆಹಲಿ: ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ(Aishwarya Rai) ಅವರು ಸಾಕಷ್ಟು ಹಿಟ್ ಸಿನಿಮಾ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅಭಿನಯ, ನೃತ್ಯ ಎಲ್ಲದರ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಇವರ ಸಾಕಷ್ಟು ವಿಡಿಯೋಗಳು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಜೊತೆಗೆ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಹಿಟ್ ಸಾಂಗ್ ಗೆ ಹೆಜ್ಜೆ ಹಾಕಿದ್ದ ಹಳೆಯ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ಡಾನ್ಸಿಂಗ್ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ಮೊದಲಿನಿಂದಲೂ ನಟಿ ಐಶ್ವರ್ಯ ರೈ ಅವರು ನೃತ್ಯದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಡೋಲಾರೆ ಡೋಲಾರೆ, ನಿಂಬುಡ, ಕಜುರಾರೇ, ಬರುಸೋರೆ ಮೇಘ ಹೀಗೆ ಅನೇಕ ಹಿಟ್ ಹಾಡುಗಳಿಗೆ ಕುಣಿದು ಅಭಿಮಾನಿಗಳನ್ನು ರಂಜಿಸಿದ್ದಾರೆ. 90ರ ದಶಕ ದಲ್ಲೇ ಬಹುಬೇಡಿಕೆಯ ನಟಿಯಾಗಿದ್ದ ಇವರು ಬಾಲಿವುಡ್ ನಟ ಆಮಿರ್ ಖಾನ್ ಅವರೊಂದಿಗೆ ಶಾರುಖ್ ಖಾನ್ ಅಭಿನ ಯದ ಸಿನಿಮಾ ಹಾಡಿಗೆ ಕೂಡ ಹೆಜ್ಜೆ ಹಾಕಿದ್ದಾರೆ. ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾದ ತುಜೇ ದೇಖಾ ತೋ ಹಾಡಿಗೆ ಆಮಿರ್ ಖಾನ್ ಜೊತೆಗೆ ನೃತ್ಯ ಮಾಡಿದ್ದಾರೆ.
ಐಶ್ವರ್ಯಾ ರೈ ಮತ್ತು ಆಮಿರ್ ಖಾನ್ ಅವರ ನೃತ್ಯದ ವಿಡಿಯೊ ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ. ನಟಿ ಐಶ್ವರ್ಯಾ ರೈ ಅವರು ಪಿಂಕ್ ಕಲರ್ ಲೆಹೆಂಗಾ-ಚೋಲಿಯಲ್ಲಿ ಮಿಂಚುತ್ತಿದ್ದಾರೆ. ನಟ ಆಮಿರ್ ಅವರು ಡೆನಿಮ್ ಜೀನ್ಸ್ ಹಾಗೂ ಅದಕ್ಕೆ ಹೊಂದುವಂತಹ ಜಾಕೆಟ್ ಧರಿಸಿದ್ದಾರೆ. ಇಬ್ಬರ ನೃತ್ಯದ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಹಾಗಿದ್ದರೂ ಇಬ್ಬರೂ ಒಟ್ಟಿಗೆ ಪ್ರದರ್ಶನ ನೀಡಿದ ಆ ಕಾರ್ಯಕ್ರಮ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ವಿಡಿಯೋ ಕಂಡು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ. ಇವರಿಬ್ಬರ ನೃತ್ಯ ತುಂಬಾ ಚೆನ್ನಾಗಿದೆ ಇಬ್ಬರು ಜೊತೆಯಾಗಿ ಸಿನಿಮಾ ಮಾಡಬೇಕಿತ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಐಶ್ಚರ್ಯ ಫುಲ್ ಆ್ಯಕ್ಟಿವ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಆದರೆ ಆಮೀರ್ ಡ್ಯಾನ್ಸ್ ಆ್ಯಕ್ಟಿವ್ ನೆಸ್ ಕಡಿಮೆ ಇದೆ ಎಂದು ಬಳಕೆ ದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ. ನಟಿ ಐಶ್ವರ್ಯಾ ರೈ ಅವರು ಶಾರುಖ್ ಖಾನ್ ಜೊತೆ ದೇವದಾಸ್, ಮೊಹಬ್ಬತೇನ್ ಮತ್ತು ಸಲ್ಮಾನ್ ಖಾನ್ ಜೊತೆ ಹಮ್ ದಿಲ್ ದೇ ಚುಕೆ ಸನಮ್ ಮತ್ತು ಹಮ್ ತುಮ್ಹಾರೆ ಹೇ ಸನಮ್ನಲ್ಲಿ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ನಟ ಅಮೀರ್ ಖಾನ್ನೊಂದಿಗೆ ತೆರೆ ಹಂಚಿಕೊಂಡಿಲ್ಲ.
ನಟಿ ಐಶ್ವರ್ಯಾ ರೈ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ನಂತರ ತಮ್ಮ ಹೊಸ ಯೋಜನೆಯನ್ನು ಇನ್ನೂ ಘೋಷಿಸಿಲ್ಲ. ಅದೇ ರೀತಿ ನಟ ಆಮೀರ್ ಖಾನ್ ಅವರ ಮುಂದಿನ ಚಿತ್ರ ಸೀತಾರೆ ಜಮೀನ್ ಪರ್ ಶೂಟಿಂಗ್ ಕೆಲಸ ಕಾರ್ಯದಲ್ಲಿ ಬ್ಯುಸಿ ಯಾಗಿದ್ದಾರೆ. ಆರ್.ಎಸ್. ಪ್ರಸನ್ನ ನಿರ್ದೇಶನದ ಈ ಚಿತ್ರವು ಸ್ಪ್ಯಾನಿಷ್ ಚಲನಚಿತ್ರ ಕ್ಯಾಂಪಿಯೋನ್ಸ್ ನ ರಿಮೇಕ್ ಆಗಿದ್ದು, ಆಮೀರ್ ವಿಕಲಚೇತನ ಮಕ್ಕಳ ತಂಡಕ್ಕೆ ತರಬೇತಿ ನೀಡುವ ಬಾಸ್ಕೆಟ್ಬಾಲ್ ತರಬೇತುದಾರನಾಗಿ ಮತ್ತು ಜೆನೆಲಿಯಾ ದೇಶ್ಮುಖ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.