ಕೊಹ್ಲಿಯನ್ನು ಹೊರಗಿಟ್ಟು 21ನೇ ಶತಕಮಾನದ ತಮ್ಮ ಸಾರ್ವಕಾಲಿಕ ಟೆಸ್ಟ್ XI ಆರಿಸಿದ ಕೇನ್ ವಿಲಿಯಮ್ಸನ್!
ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು 21ನೇ ಶತಮಾನದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XI ಅನ್ನು ಪ್ರಕಟಿಸಿದ್ದಾರೆ. ಆದರೆ, ತಮ್ಮ ದೀರ್ಘಾವಧಿ ಗೆಳೆಯ ವಿರಾಟ್ ಕೊಹ್ಲಿಯನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಆದರೆ, ಭಾರತದಿಂದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿಗೆ ಸ್ಥಾನವನ್ನು ನೀಡಿದ್ದಾರೆ.

21ನೇ ಶತಮಾನದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XI ಆರಿಸಿದ ಕೇನ್ ವಿಲಿಯಮ್ಸನ್.

ನವದೆಹಲಿ: ತಮ್ಮ 21ನೇ ಶತಮಾನದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XI ಕಟ್ಟಿದ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson), ತಮ್ಮ ಗೆಳೆಯ ವಿರಾಟ್ ಕೊಹ್ಲಿಯನ್ನು (Virat Kohli) ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಅಂಡರ್ 19 ದಿನಗಳಿಂದಲೂ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಸ್ನೇಹಿತರು. ಆದರೆ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. 2025ರ ಐಸಿಸಿ ಟೆಸ್ಟ್ ಚಾಂಪಿಯನ್ಸ್ ಟ್ರೋಫಿ (CT 2025) ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಕಿವೀಸ್ ತಂಡವನ್ನು ಮಣಿಸಿ ಭಾರತ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಈ ಪಂದ್ಯದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಬಗ್ಗೆ ಕಾಳಜಿ ತೋರಿಸಿದ್ದರು. "ನನ್ನ ಒಳ್ಳೆಯ ಸ್ನೇಹಿತನನ್ನು ಸೋತ ತಂಡದಲ್ಲಿ ನೋಡುವುದು ತುಂಬಾ ಬೇಸರದ ಸಂಗತಿಯಾಗಿದೆ. ನಾನು ಕೂಡ ಅವರು ಎದುರು ಎರಡು ಬಾರಿ ಸೋಲಿನ ತಂಡದಲ್ಲಿದ್ದೆ ಹಾಗೂ ಕಿವೀಸ್ ಗೆದ್ದಿತ್ತು. ಆದರೆ, ನಮ್ಮ ನಡುವೆ ಅತ್ಯುತ್ತಮ ಪ್ರೀತಿ ಇದೆ," ಎಂದು ಕೊಹ್ಲಿ ಹೇಳಿದ್ದರು.
21ನೇ ಶತಕಮಾನದ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್ XIನಲ್ಲಿ ನಾಲ್ಕನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿ ಬದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ವಿಲಿಯಮ್ಸನ್ ಆರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಭಾರತದಿಂದ ವೀರೇಂದ್ರ ಸೆಹ್ವಾಗ್ ಹಾಗೂ ಎಂಎಸ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ. ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿರುವ ವಿಲಿಯಮ್ಸನ್, ಅವರಿಗೆ ನಾಯಕತ್ವವನ್ನು ನೀಡಿದ್ದಾರೆ.
IND vs ENG: ಕೆಎಲ್ ರಾಹುಲ್ ಬೇಡ, ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿ ಎಂದ ಬ್ರಾಡ್ ಹಾಗ್!
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಂಡಕ್ಕೆ ಸ್ಪೋಟಕ ಆರಂಭ ತಂದುಕೊಟ್ಟಿದ್ದರು. ಅವರು 82.23ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅತ್ಯುತ್ತಮ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿಯನ್ನು ಕೂಡ ಕಿವೀಸ್ ಮಾಜಿ ನಾಯಕ ಆಯ್ಕೆ ಮಾಡಿದ್ದಾರೆ. ಇವರು 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಕ್ಕೂ ಮುನ್ನ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಸೆಹ್ವಾಗ್-ಹೇಡನ್ ಓಪನರ್ಸ್
ವೀರೇಂದ್ರ ಸೆಹ್ವಾಗ್ ಹಾಗೂ ಮ್ಯಾಥ್ಯೂ ಹೇಡನ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಲಾಗಿದೆ. ಇವರ ಬಳಿಕ ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಸ್ಟೀವನ್ ಸ್ಮಿತ್ ಹಾಗೂ ಎಬಿ ಡಿವಿಲಿಯರ್ಸ್ ಕ್ರಮವಾಗಿ 3, 4, 5 ಹಾಗೂ 6ನೇ ಕ್ರಮಾಂಕಗಳಲ್ಲಿ ಆಡಲಿದ್ದಾರೆ. ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ.
ಡೇಲ್ ಸ್ಟೇನ್, ಗ್ಲೆನ್ ಮೆಗ್ರಾಥ್ ಹಾಗೂ ಶೋಯೆಬ್ ಅಖ್ತರ್ ಅವರು ಕೇನ್ ವಿಲಿಯಮ್ಸನ್ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಏಕೈಕ ಸ್ಪಿನ್ನರ್ ಆಗಿ ಮುತ್ತಯ್ಯ ಮುರಳಿಧರನ್ ಅವರು ವಿಲಿಯಮ್ಸನ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಬಗ್ಗೆ ಇಂಗ್ಲೆಂಡ್‌ಗ ವಾರ್ನಿಂಗ್ ಕೊಟ್ಟ ಮಾರ್ನೆ ಮಾರ್ಕೆಲ್!
ಕೇನ್ ವಿಲಿಯಮ್ಸನ್ ಆಯ್ಕೆಯ 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ XI
1ವೀರೇಂದ್ರ ಸೆಹ್ವಾಗ್ (ಓಪನರ್)
2ಮ್ಯಾಥ್ಯೂ ಹೇಡನ್ (ಓಪನರ್)
3ರಿಕಿ ಪಾಂಟಿಂಗ್ (ನಾಯಕ, ಬ್ಯಾಟ್ಸ್‌ಮನ್)
4ಸಚಿನ್ ತೆಂಡೂಲ್ಕರ್ (ಬ್ಯಾಟ್ಸ್‌ಮನ್)
5ಸ್ಟೀವನ್ ಸ್ಮಿತ್ (ಬ್ಯಾಟ್ಸ್‌ಮನ್)
6ಎಬಿ ಡಿ ವಿಲಿಯರ್ಸ್ (ಬ್ಯಾಟ್ಸ್‌ಮನ್)
7ಎಂಎಸ್ ಧೋನಿ (ವಿಕೆಟ್ ಕೀಪರ್)
8ಡೇಲ್ ಸ್ಟೇನ್ (ವೇಗದ ಬೌಲರ್)
9 ಗ್ಲೆನ್ ಮೆಗ್ರಾಥ್ (ವೇಗದ ಬೌಲರ್)
10 ಶೋಯೆಬ್ ಅಖ್ತರ್ (ವೇಗದ ಬೌಲರ್)
11ಮುತ್ತಯ್ಯ ಮುರಳಿಧರನ್(ಸ್ಪಿನ್ನರ್)