Rishabh Pant: ಅವಳಿ ಶತಕ ಬಾರಿಸಿಯೂ ಕೊಹ್ಲಿ ಜತೆ ಅನಗತ್ಯ ದಾಖಲೆ ಪಟ್ಟಿಗೆ ಸೇರಿದ ಪಂತ್
ಪಂದ್ಯದಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾರಣಕ್ಕೆ ಪಂತ್‌ಗೆ ವಾಗ್ದಂಡನೆ ವಿಧಿಸಲಾಯಿತು. ಜತೆಗೆ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಮೂರನೇ ದಿನದಾಟದ ವೇಳೆ ಚೆಂಡನ್ನು ಬದಲಿಸಲು ಪಂತ್ ಬಯಸಿದ್ದರು. ಆದರೆ ಚೆಂಡನ್ನು ಪರಿಶೀಲಿಸಿದ ಅಂಪೈರ್ ಬದಲಿಸಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಪಂತ್ ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು.


ಲೀಡ್ಸ್: ಹೆಡಿಂಗ್ಲಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದ ರಿಷಭ್ ಪಂತ್(Rishabh Pant), ಪಂದ್ಯ ಸೋತ ಬಳಿಕ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಅವಳಿ ಶತಕಗಳನ್ನು ಬಾರಿಸಿಯೂ ಭಾರತ ಟೆಸ್ಟ್(IND vs ENG) ಪಂದ್ಯ ಸೋತ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಗೊಂಡರು. ಇದಕ್ಕೂ ಮುನ್ನ ವಿಜಯ್ ಹಜಾರೆ, ಸುನೀಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ ಪಂದ್ಯವೊಂದರಲ್ಲಿ ಅವಳಿ ಶತಕ ಬಾರಿಸಿದಾಗ ತಂಡ ಸೋಲು ಕಂಡಿತ್ತು.
ವಿಜಯ್ ಹಜಾರೆ (116 & 145), ಆಸ್ಟ್ರೇಲಿಯಾ ವಿರುದ್ಧ(1948)
ಸುನಿಲ್ ಗವಾಸ್ಕರ್ (111 & 137), ಪಾಕಿಸ್ತಾನ ವಿರುದ್ಧ(1978)
ವಿರಾಟ್ ಕೊಹ್ಲಿ (115 & 141), ಆಸ್ಟ್ರೇಲಿಯಾ ವಿರುದ್ಧ (2014)
ರಿಷಭ್ ಪಂತ್ (134 & 118), ಇಂಗ್ಲೆಂಡ್ ವಿರುದ್ಧ (2025)
ಪಂದ್ಯದಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾರಣಕ್ಕೆ ಪಂತ್‌ಗೆ ವಾಗ್ದಂಡನೆ ವಿಧಿಸಲಾಯಿತು. ಜತೆಗೆ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಮೂರನೇ ದಿನದಾಟದ ವೇಳೆ ಚೆಂಡನ್ನು ಬದಲಿಸಲು ಪಂತ್ ಬಯಸಿದ್ದರು. ಆದರೆ ಚೆಂಡನ್ನು ಪರಿಶೀಲಿಸಿದ ಅಂಪೈರ್ ಬದಲಿಸಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಪಂತ್ ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು.
ಟೆಸ್ಟ್‌ವೊಂದರಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯೂ ಪಂತ್ ಹೆಸರಿಗೆ ಸೇರಿದೆ. ಈ ಪಂದ್ಯದಲ್ಲಿ ಅವರು 252 (134, 118) ರನ್ ಕಲೆಹಾಕಿದರು. ಪಂತ್‌ಗೂ ಮುನ್ನ 1964ರಲ್ಲಿ ಇಂಗ್ಲೆಂಡ್ ವಿರುದ್ಧ ಬುಧಿ ಕುಂದರೆನ್ 230 ರನ್ ಗಳಿಸಿದ್ದು ಪಂದ್ಯವೊಂದರಲ್ಲಿ ಭಾರತೀಯ ವಿಕೆಟ್ ಕೀಪರ್‌ನಿಂದ ದಾಖಲಾದ ಗರಿಷ್ಠ ರನ್ ಎನಿಸಿತ್ತು.
ಇದನ್ನೂ ಓದಿ IND vs ENG: ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು ಹೀಗಿದೆ
ತವರಿನಾಚೆ ಪಂದ್ಯವೊಂದರಲ್ಲಿ 2 ಶತಕ ಬಾರಿಸಿದ ಭಾರತದ ಕೇವಲ 5ನೇ ಆಟಗಾರ ಎನಿಸಿದ್ದಾರೆ. ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (2 ಬಾರಿ), ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಉಳಿದ ನಾಲ್ವರು.