ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roston Chase: 2 ವರ್ಷದ ಬಳಿಕ ತಂಡಕ್ಕೆ ಮರಳಿದ ಆಟಗಾರನಿಗೆ ನಾಯಕತ್ವ ಪಟ್ಟ ಕಟ್ಟಿದ ವಿಂಡೀಸ್‌

33 ವರ್ಷದ ಈ ಆಲ್‌ರೌಂಡರ್‌ ರೋಸ್ಟನ್ ಚೇಸ್‌ 2016ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಅವರು 49 ಪಂದ್ಯವಾಡಿದ್ದು, ಐದು ಶತಕಗಳು ಮತ್ತು 11 ಅರ್ಧಶತಕಗಳೊಂದಿಗೆ 2,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬಲಗೈ ಆಫ್-ಬ್ರೇಕ್‌ ಬೌಲರ್‌ ಆಗಿರುವ ಅವರು 85 ವಿಕೆಟ್‌ಗಳನ್ನು ಕೂಡ ಕಬಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಕ್ರಿಕೆಟ್‌ಗೆ ರೋಸ್ಟನ್‌ ಚೇಸ್‌ ನೂತನ ನಾಯಕ

Profile Abhilash BC May 17, 2025 2:53 PM

ಬಾರ್ಬಡೋಸ್: ಹಿರಿಯ ಆಲ್‌ ರೌಂಡರ್‌ ರೋಸ್ಟನ್‌ ಚೇಸ್‌ ಅವರನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತಂಡದ ನೂತನ ಟೆಸ್ಟ್‌ ನಾಯಕರನ್ನಾಗಿ ನೇಮಕ ಮಾಡಿದೆ. ಈ ಹಿಂದೆ ನಾಯಕನಾಗಿದ್ದ ಕ್ರೇಗ್‌ ಬ್ರಾತ್‌ವೇಟ್ ಅವರು ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು.

ಜೂನ್ ಮತ್ತು ಜುಲೈ ನಡುವಿನ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರು ಪಂದ್ಯಗಳ ತವರು ಸರಣಿ ಟೆಸ್ಟ್ ನಾಯಕನಾಗಿ ರೋಸ್ಟನ್‌ ಚೇಸ್‌ ಅವರಿಗೆ ಮೊದಲ ಅಗ್ನಿಪರೀಕ್ಷೆಯಾಗಿದೆ. ಇತ್ತಂಡಗಳ ನಡುವಿನ ಸರಣಿಯ ಮೊದಲ ಟೆಸ್ಟ್ ಪಂದ್ಯ ಜೂನ್ 25 ರಿಂದ ಜೂನ್ 29 ರವರೆಗೆ ಬ್ರಿಡ್ಜ್‌ಟೌನ್‌ನಲ್ಲಿ ನಡೆಯಲಿದೆ. ಅಚ್ಚರಿಯ ಸಂಗತಿ ಎಂದರೆ ರೋಸ್ಟನ್‌ ಚೇಸ್‌ ವಿಂಡೀಸ್‌ ಪರ ಟೆಸ್ಟ್‌ ಆಡದೆ ಎರಡು ವರ್ಷಗಳೇ ಕಳೆದಿದೆ. ಅವರು ಕೊನೆಯ ಬಾರಿಗೆ ಆಡಿದ್ದು 2023ರಲ್ಲಿ. ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ 50 ನೇ ಟೆಸ್ಟ್‌ ಪಂದ್ಯದಲ್ಲೇ ನಾಯಕತ್ವ ವಹಿಸುತ್ತಿರುವುದು ಅವರ ಪಾಲಿಗೆ ಸ್ಮರಣೀಯವೆನಿಸಿದೆ.

33 ವರ್ಷದ ಈ ಆಲ್‌ರೌಂಡರ್‌ ರೋಸ್ಟನ್ ಚೇಸ್‌ 2016ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಅವರು 49 ಪಂದ್ಯವಾಡಿದ್ದು, ಐದು ಶತಕಗಳು ಮತ್ತು 11 ಅರ್ಧಶತಕಗಳೊಂದಿಗೆ 2,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬಲಗೈ ಆಫ್-ಬ್ರೇಕ್‌ ಬೌಲರ್‌ ಆಗಿರುವ ಅವರು 85 ವಿಕೆಟ್‌ಗಳನ್ನು ಕೂಡ ಕಬಳಿಸಿದ್ದಾರೆ.

ನೂತನ ನಾಯಕನ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ಮುಖ್ಯ ಕೋಚ್ ಡ್ಯಾರನ್ ಸ್ಯಾಮಿ, "ಈ ನೇಮಕವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಚೇಸ್ ತಮ್ಮ ಸಹ ಆಟಗಾರರಲ್ಲಿ ವಿಶ್ವಾಸ ಹೊಂದಿದ್ದಾರೆ. ನಾಯಕತ್ವದ ಹೊಣೆಗಾರಿಕೆಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಹೇಳಿದ್ದಾರೆ.

"ಈ ನಾಯಕತ್ವ ಆಯ್ಕೆ ಪ್ರಕ್ರಿಯೆ ಅತ್ಯಂತ ವೈಜ್ಞಾನಿಕ ಮತ್ತು ಎಲ್ಲರ ಸಮ್ಮುಖದಲ್ಲಿ ಸೂಕ್ತ ಮಾತುಕಥೆಯೊಂದಿಗೆ ತೆಗೆದುಕೊಂಡ ನಿರ್ಧಾರವಾಗಿದೆ. ಇದು ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲನ್ನು ಹುಟ್ಟು ಹಾಕಲಿದೆ" ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಕಿಶೋರ್ ಶ್ಯಾಲೊ ಹೇಳಿದ್ದಾರೆ.