ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗನನ್ನು ಹೊಟೇಲ್‌ನಲ್ಲಿ ಬಿಟ್ಟು ಗಡಿ ಬಳಿ ಮಹಿಳೆ ನಾಪತ್ತೆ; ಬೇಹುಗಾರಿಕೆ ಲಿಂಕ್ ಬಗ್ಗೆ ತನಿಖೆ

ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಗಡಿರೇಖೆ ಸಮೀಪದ ಹಳ್ಳಿಯಲ್ಲಿ ನಾಗ್ಪುರದ 38 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ತನ್ನ 15 ವರ್ಷದ ಮಗನೊಂದಿಗೆ ಪ್ರವಾಸದಲ್ಲಿದ್ದ ಈ ಮಹಿಳೆ ಮೇ 14ರಂದು ಏಕಾಏಕಿ ಕಣ್ಮರೆಯಾಗಿದ್ದು, ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.

ಮಗನ ಜತೆ ಪ್ರವಾಸಕ್ಕೆ ಹೋಗಿದ್ದ ಮಹಿಳೆ ಗಡಿಯಲ್ಲಿ ನಿಗೂಢವಾಗಿ ನಾಪತ್ತೆ

ಸಾಂಧರ್ಬಿಕ ಚಿತ್ರ.

Profile Sushmitha Jain May 17, 2025 6:20 PM

ಶ್ರೀನಗರ: ಲಡಾಖ್‌ನ (Ladakh) ಕಾರ್ಗಿಲ್ (Kargil) ಜಿಲ್ಲೆಯ ಗಡಿರೇಖೆ ಸಮೀಪದ ಹಳ್ಳಿಯಲ್ಲಿ ನಾಗ್ಪುರದ (Nagpur) 38 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ (Women Missed). ತನ್ನ 15 ವರ್ಷದ ಮಗನೊಂದಿಗೆ ಪ್ರವಾಸದಲ್ಲಿದ್ದ ಈ ಮಹಿಳೆ ಮೇ 14ರಂದು ಏಕಾಏಕಿ ಕಣ್ಮರೆಯಾಗಿದ್ದಾಳೆ. ಈ ಘಟನೆಯು ಭಾರತ ಮತ್ತು ಪಾಕಿಸ್ತಾನದ (Pakistan) ನಡುವೆ ಮೇ 10ರಂದು ನಡೆದ ಕದನ ವಿರಾಮ ಒಪ್ಪಂದವಾದ ಕೇವಲ ನಾಲ್ಕು ದಿನಗಳ ಬಳಿಕ ನಡೆದಿದೆ.

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಈ ಮಹಿಳೆ ತನ್ನ ಮಗನೊಂದಿಗೆ ಮೇ 9ರಂದು ಕಾರ್ಗಿಲ್‌ನ ಒಂದು ಹೊಟೇಲ್‌ನಲ್ಲಿ ಚೆಕ್-ಇನ್ ಮಾಡಿದ್ದಳು. ಮೇ 14 ರ ಬೆಳಗ್ಗೆ ಆಕೆ ಒಂಟಿಯಾಗಿ ಹೊಟೇಲ್‌ನಿಂದ ಹೊರಗೆ ಹೋಗಿದ್ದು, ಮರಳಿ ಬಂದಿಲ್ಲ. ಹೊಟೇಲ್‌ ಸಿಬ್ಬಂದಿ ರಾತ್ರಿಯವರೆಗೆ ಕಾದರೂ ಆಕೆ ವಾಪಸಾಗದಿದ್ದಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಹಿಳೆ ಎಲ್‌ಒಸಿಗೆ ಸಮೀಪದ ಕೊನೆಯ ವಸತಿಯೆಂದು ಗುರುತಿಸಲಾದ ಹುಂಡರ್‌ಬನ್ ಎಂಬ ಹಳ್ಳಿಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವಾದ ಕೆಲವೇ ದಿನಗಳಲ್ಲಿ ತೆರಳಿದ್ದಳು.

ಈ ಸುದ್ದಿಯನ್ನು ಓದಿ: Crime News: ಬೆತ್ತಲೆ ವ್ಯಕ್ತಿಯಿಂದ ಮೊಬೈಲ್‌ ಅಂಗಡಿ ದರೋಡೆ, ಬೆಂಗಳೂರಿನಲ್ಲಿ ನಡೆದ ಘಟನೆ

ಕಾರ್ಗಿಲ್‌ನ ಹೆಚ್ಚುವರಿ ಎಸ್‌ಪಿ ನಿತಿನ್ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿ, "ನಾವು ವಿಶೇಷ ಶೋಧ ತಂಡವನ್ನು ರಚಿಸಿದ್ದೇವೆ ಮತ್ತು ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ಆಕೆಯ ಮಗ ಲಡಾಖ್‌ಗೆ ತಲುಪುವ ಮೊದಲು ಕಳೆದ ಕೆಲವು ದಿನಗಳಿಂದ ಗಡಿಪ್ರದೇಶದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ ಎಂದು ತಿಳಿಸಿದ್ದಾನೆ" ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಎಲ್‌ಒಸಿಯ ಸನಿಹತೆಯಿಂದಾಗಿ, ಅಧಿಕಾರಿಗಳು ಸೂಕ್ಷ್ಮ ಕೋನಗಳನ್ನು ತಳ್ಳಿಹಾಕಿಲ್ಲ. ಮಹಿಳೆ ಆಕಸ್ಮಿಕವಾಗಿ ಗಡಿಯಾಚೆಗೆ ತೆರಳಿರಬಹುದು ಅಥವಾ ಗಂಭೀರವಾದ ಯಾವುದೋ ಸಮಸ್ಯೆಯಲ್ಲಿ ಸಿಲುಕಿರುವ ಸಾಧ್ಯತೆಯೂ ಇದ್ದು ಅದನ್ನೂ ಪರಿಶೀಲಿಸಲಾಗುತ್ತಿದೆ.

ನಾಪತ್ತೆಯಾದ ಎರಡು ದಿನಗಳ ನಂತರವೂ ಮಹಿಳೆ ಪತ್ತೆಯಾಗಿಲ್ಲ. ಪೊಲೀಸರು ಆಕೆಯ ನಾಗ್ಪುರದ ಕುಟುಂಬವನ್ನು ಸಂಪರ್ಕಿಸಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸುವ ಪ್ರಯತ್ನದಲ್ಲಿದ್ದಾರೆ. ತನಿಖಾಧಿಕಾರಿಗಳು ಈ ವಿಷಯವನ್ನು ತುರ್ತಾಗಿ ಪರಿಗಣಿಸಿದ್ದಾರೆ. ವಿಶೇಷವಾಗಿ ಪಾಕಿಸ್ತಾನಕ್ಕೆ ಸಮೀಪದ ಸ್ಥಳ ಮತ್ತು ಇತ್ತೀಚಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸುರಕ್ಷತೆಯ ಕಾಳಜಿ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಬೇಹುಗಾರಿಕೆಯಂತಹ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.