ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL final: ಫೈನಲ್‌ನಲ್ಲಿ ಟಾಸ್‌ ಗೆದ್ದೋರೆ ಜಾಣ; ಪಿಚ್‌ ರಿಪೋರ್ಟ್‌ ಹೇಗಿದೆ?

RCB vs PBKS Final: ಆರ್‌ಸಿಬಿ ತಂಡ 4ನೇ ಬಾರಿ ಫೈನಲ್‌ನಲ್ಲಿ ಆಡಲಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್‌ಗೇರಿದ್ದರೂ ಸೋತಿದ್ದ ತಂಡ, 9 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ.

ಫೈನಲ್‌ನಲ್ಲಿ ಟಾಸ್‌ ಗೆದ್ದೋರೆ ಜಾಣ; ಪಿಚ್‌ ರಿಪೋರ್ಟ್‌ ಹೇಗಿದೆ?

Profile Abhilash BC Jun 3, 2025 9:21 AM

ಅಹಮದಾಬಾದ್‌: ಕ್ರಿಕೆಟ್‌ ಅಭಿಮಾನಿಗಳು ಕಾದು ಕುಳಿತಿರುವ ಐಪಿಎಲ್‌ ಫೈನಲ್‌(IPL final) ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇಂದು(ಮಂಗಳವಾರ) ನಡೆಯುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ನಡೆಯಲಿರುವ ಪಂದ್ಯದಲ್ಲಿ ಇದುವರೆಗೂ ಕಪ್‌ ಗೆಲ್ಲದ ತಂಡಗಳಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌(RCB vs PBKS Final) ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಟಾಸ್‌ ಪಾತ್ರ ನಿರ್ಣಾಯಕ.

ಟಾಸ್‌ ಗೆದ್ದರೆ ಪಂದ್ಯ ಗೆದ್ದಂತೆ

ಹೌದು, ಅಹಮದಾಬಾದ್‌ ಕ್ರೀಡಾಂಗಣ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಫೈನಲ್‌ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 200+ ರನ್‌ ದಾಖಲಾಗಿವೆ. ಅದರಲ್ಲೂ ಚೇಸಿಂಗ್‌ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ. ಕಳೆದ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ 200+ ಮೊತ್ತ ಪೇರಿಸಿದರೂ ಇದನ್ನು ಪಂಜಾಬ್‌ ಯಾವುದೇ ಒತ್ತಡವಿಲ್ಲದೆ ಒಂದು ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿ ಗೆದ್ದು ಬೀಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡ ಅರ್ಧ ಪಂದ್ಯ ಗೆದ್ದಂತೆ. ಪಂಜಾಬ್‌ ತಂಡ ಈ ವರ್ಷ ಅಹಮದಾಬಾದ್‌ನಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆದ್ದಿದೆ.

ಸಂಭಾವ್ಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ಮಯಾಂಕ್‌ ಅಗರ್ವಾಲ್‌, ರಜತ್‌ ಪಾಟೀದಾರ್‌ (ನಾಯಕ), ಲಿವಿಂಗ್‌ಸ್ಟೋನ್‌/ಡೇವಿಡ್‌, ಜಿತೇಶ್‌ ಶರ್ಮ, ರೋಮಾರಿಯೊ ಶೆಫರ್ಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಜೋಶ್‌ ಹೇಜಲ್‌ವುಡ್‌,

ಇಂಪ್ಯಾಕ್ಟ್‌ ಆಟಗಾರ: ಸುಯಶ್‌ ಶರ್ಮ.

ಪಂಜಾಬ್‌ ಕಿಂಗ್ಸ್‌: ಪ್ರಿಯಾನ್ಸ್‌ ಆರ್ಯ, ಜೋಶ್‌ ಇಂಗ್ಲಿಸ್‌, ಶ್ರೇಯಸ್‌ ಅಯ್ಯರ್‌ (ನಾಯಕ), ನೇಹಲ್‌ ವಧೇರಾ, ಮಾರ್ಕಸ್‌ ಸ್ಟೋಯ್ನಿಸ್‌, ಶಶಾಂಕ್‌ ಸಿಂಗ್‌, ಅಜ್ಮತುಲ್ಲಾ ಓಮರ್ಜಾಯಿ, ಜೇಮಿಸನ್‌, ವೈಶಾಖ್‌, ಅರ್ಶ್‌ದೀಪ್‌ ಸಿಂಗ್‌, ಯಜುವೇಂದ್ರ ಚಹಲ್‌.

ಇಂಪ್ಯಾಕ್ಟ್‌ ಆಟಗಾರ: ಪ್ರಭ್‌ಸಿಮ್ರನ್‌ ಸಿಂಗ್‌.