ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wimbledon 2025: ಇಂದಿನಿಂದ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಶುರು

ಇನ್ನೊಂದು ಸಣ್ಣ ಬದಲಾವಣೆಯೆಂದರೆ, ಸಿಂಗಲ್ಸ್ ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಸಂಜೆ 4 ಗಂಟೆಗೆ ಆರಂಭವಾಗುವಂತೆ ನಿಗದಿ ಮಾಡಲಾಗಿದೆ. ಸಾಂಪ್ರದಾಯಿಕ ನಿರ್ಲಿಪ್ತ ಲೈನ್ ತೀರ್ಪುಗಾರರ ಅನುಪಸ್ಥಿತಿಯು ಕೆಲವರ ಅಸಹನೆಗೆ ಕಾರಣವಾಗಬಹುದಾದರೂ, ನೂತನ ಇಲೆಕ್ಟ್ರಾನಿಕ್ ವ್ಯವಸ್ಥೆಯು ಲೋಪರಹಿತ ತೀರ್ಪನ್ನು ಖಚಿತಪಡಿಸಲಿದೆ.

ಇಂದಿನಿಂದ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಶುರು

Profile Abhilash BC Jun 30, 2025 8:47 AM

ಲಂಡನ್‌: ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಟೂರ್ನಿ(Wimbledon 2025) ಇಂದಿನಿಂದ(ಸೋಮವಾರ) ಆರಂಭಗೊಳ್ಳಲಿದೆ. ಈ ವರ್ಷದ ವಿಂಬಲ್ಡನ್ ಪಂದ್ಯಾವಳಿಯು ಹಲವು ಮಹತ್ವದ ತಂತ್ರಜ್ಞಾನಗಳಿಗೆ ಸಾಕ್ಷಿಯಾಗಲಿದೆ. 147 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಪ್ರದಾಯಕ್ಕೆ ಮಹತ್ವ ನೀಡುವ ಪಂದ್ಯಾವಳಿ ಎಂಬುದಾಗಿ ಗುರುತಿಸಲ್ಪಡುತ್ತಿರುವ ವಿಂಬಲ್ಡನ್ ಪಂದ್ಯಾವಳಿಯು ಮಾನವ ಲೈನ್ ತೀರ್ಪುಗಾರರು ಇಲ್ಲದೆ ನಡೆಯಲಿದೆ. ಮಾನವ ಲೈನ್ ತೀರ್ಪುಗಾರರ ಸ್ಥಾನದಲ್ಲಿ, 450ಕ್ಕೂ ಅಧಿಕ ಟ್ರ್ಯಾಕಿಂಗ್ ಕ್ಯಾಮರಗಳನ್ನು ಒಳಗೊಂಡ ಸಂಪೂರ್ಣ ಸ್ವಯಂಚಾಲಿತ ಇಲೆಕ್ಟ್ರಾನಿಕ್ ಲೈನ್-ಕಾಲಿಂಗ್ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ದಾಖಲೆಯ ಬಹುಮಾನ ಮೊತ್ತ

ಈ ಬಾರಿ ಬಹುಮಾನ ಹಣದ ಮೊತ್ತವನ್ನು ದಾಖಲೆಯ ₹622 ಕೋಟಿಗೆ (53.5 ದಶಲಕ್ಷ ಪೌಂಡ್‌) ಹೆಚ್ಚಿಸಲಾಗಿದೆ. ಸಿಂಗಲ್ಸ್ ಚಾಂಪಿಯನ್ನರು ಸುಮಾರು ₹35 ಕೋಟಿ ಬಹುಮಾನ ಮೊತ್ತ ಸಂಪಾದಿಸಲಿದ್ದಾರೆ. ಒಟ್ಟು ಬಹುಮಾನ ಮೊತ್ತ ಕಳೆದ ವರ್ಷಕ್ಕಿಂತ ಸುಮಾರು ₹41 ಕೋಟಿಯಷ್ಟು ಹೆಚ್ಚು ಆಗಿದೆ. ಮೊದಲ ಸುತ್ತಿನಲ್ಲಿ ಸೋಲುವ ಆಟಗಾರ ಸುಮಾರು ₹76.80 ಲಕ್ಷ (66,000 ಪೌಂಡ್‌) ಮೊತ್ತ ಪಡೆಯಲಿದ್ದಾರೆ. ಇದು ಕಳೆದ ಬಾರಿಯ ಮೊತ್ತಕ್ಕಿಂತ ಶೇ 10ರಷ್ಟು ಏರಿಕೆಯಾಗಿದೆ. ಡಬಲ್ಸ್ ಪ್ರಶಸ್ತಿ ವಿಜೇತರು 6,80,000 ಪೌಂಡ್ (7.87 ಕೋಟಿ ರೂ.) ಮೊತ್ತವನ್ನು ಹಂಚಿಕೊಳ್ಳುತ್ತಾರೆ. ಹಾಗೂ ಮಿಶ್ರ ಡಬಲ್ಸ್ ಪ್ರಶಸ್ತಿ ವಿಜೇತರು 1,35,000 ಪೌಂಡ್ (ಸುಮಾರು 1.56 ಕೋಟಿ ರೂ.) ಬಹುಮಾನವನ್ನು ಹಂಚಿಕೊಳ್ಳುತ್ತಾರೆ.

ಸಮಯ ಬದಲಾವಣೆ

ಇನ್ನೊಂದು ಸಣ್ಣ ಬದಲಾವಣೆಯೆಂದರೆ, ಸಿಂಗಲ್ಸ್ ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಸಂಜೆ 4 ಗಂಟೆಗೆ ಆರಂಭವಾಗುವಂತೆ ನಿಗದಿ ಮಾಡಲಾಗಿದೆ. ಸಾಂಪ್ರದಾಯಿಕ ನಿರ್ಲಿಪ್ತ ಲೈನ್ ತೀರ್ಪುಗಾರರ ಅನುಪಸ್ಥಿತಿಯು ಕೆಲವರ ಅಸಹನೆಗೆ ಕಾರಣವಾಗಬಹುದಾದರೂ, ನೂತನ ಇಲೆಕ್ಟ್ರಾನಿಕ್ ವ್ಯವಸ್ಥೆಯು ಲೋಪರಹಿತ ತೀರ್ಪನ್ನು ಖಚಿತಪಡಿಸಲಿದೆ.

ಹ್ಯಾಟ್ರಿಕ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟ ಅಲ್ಕರಾಜ್‌

ಎರಡು ಬಾರಿಯ ಪುರುಷರ ಹಾಲಿ ಚಾಂಪಿಯನ್ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ ವಿಂಬಲ್ಡನ್ ಪಂದ್ಯಾವಳಿಯ ಮೊದಲ ದಿನವಾದ ಸೋಮವಾರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಇಟಲಿಯ ಫೇಬಿಯೊ ಫಾಗ್ನಿನಿಯನ್ನು ಎದುರಿಸಲಿದ್ದಾರೆ. ಅವರು ಈ ಬಾರಿ ತನ್ನ ಸತತ ಮೂರನೇ ವಿಂಬಲ್ಡನ್ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ.

ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ, ವಿಶ್ವದ ನಂಬರ್ ವನ್ ಅರೈನಾ ಸಬಲೆಂಕ ತನ್ನ ಮೊದಲ ಸುತ್ತಿನ ಪಂದ್ಯವನ್ನು ಕೆನಡದ ಕಾರ್ಸನ್ ಬ್ರ್ಯಾನ್ಸ್ಟೈನ್ ವಿರುದ್ಧ ಆಡಲಿದ್ದಾರೆ.ಸರ್ಬಿಯಾದ ಹಿರಿಯ ಆಟಗಾರ ನೋವಾಕ್‌ ಜೋಕೊವಿಕ್‌ 25ನೇ ಗ್ರಾಂಡ್‌ ಸ್ಲಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ