ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ದೀಪಾವಳಿ ದಿನವೇ ಘೋರ ದುರಂತ; ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನ ತಲೆ ಛಿದ್ರ ಛಿದ್ರ

ಪಟಾಕಿ ಎಂದುಕೊಂಡು ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ ಬಾಲಕ ಸಾವು

Kalaburagi News: ಪಟಾಕಿ ಎಂದು ಭಾವಿಸಿ ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನ ತಲೆ ಛಿದ್ರ ಛಿದ್ರವಾಗಿದ್ದು, ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದೆ.

ಹೀಗೊಂದು ಅರ್ಥಪೂರ್ಣ ದೀಪಾವಳಿ: ಪಟಾಕಿ ಖರೀದಿ ಬದಲು ಪೌರಕಾರ್ಮಿಕರಿಗೆ ಬಟ್ಟೆ, ಹಣ್ಣು, ಸಿಹಿ ವಿತರಿಸಿದ ಸಂಡೂರು ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು

ಪಟಾಕಿ ಖರೀದಿ ಬದಲು ಪೌರಕಾರ್ಮಿಕರಿಗೆ ಬಟ್ಟೆ ವಿತರಿಸಿದ ವಿದ್ಯಾರ್ಥಿಗಳು

Deepavali 2026: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಜತೆಗೆ ಪಟಾಕಿ ಅಬ್ಬರವೂ ಸಾಮಾನ್ಯ. ಆದರೆ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ದೀಪಾವಳಿಯನ್ನು ಸಮಾಜಕ್ಕೆ ಉತ್ತಮ ಸಂದೇಶ ಸಾರಳು ಬಳಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಪಟಾಕಿಗೆ ಹಣ ವ್ಯಯಿಸುವ ಬದಲು ಪೌರ ಕಾರ್ಮಿಕರಿಗೆ ಹೊಸ ಬಟ್ಟೆ ವಿತರಿಸಿದ್ದಾರೆ.

ಬೆಂಗಳೂರು ಭೀಕರ ಹತ್ಯಾಕಾಂಡ; ಮೈಸೂರಿನಲ್ಲಿ 2 ಮೃತದೇಹ ಪತ್ತೆ: ನರಹಂತಕನ ಮತ್ತಷ್ಟು ಕ್ರೌರ್ಯ ಬೆಳಕಿಗೆ

ಬೆಂಗಳೂರು ಭೀಕರ ಹತ್ಯಾಕಾಂಡ; ಮೈಸೂರಿನಲ್ಲಿ 2 ಮೃತದೇಹ ಪತ್ತೆ

Bengaluru Mass Murder: ಬೆಂಗಳೂರಿನಲ್ಲಿ ನಡೆದ 7 ಮಂದಿಯ ಸರಣಿ ಹತ್ಯೆಯ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ರಾಜಾಜಿನಗರದ ಕ್ಯಾಬ್‌ ಡ್ರೈವರ್‌ ಇಂದುಶೇಖರ್‌ ಪತ್ನಿ ಮತ್ತು ಆಕೆಯ ಕುಟುಂಬದ 6 ಮಂದಿ ಸೇರಿ 7 ಜನರನ್ನು ಹತ್ಯೆಗೈದು ಮೃತದೇಹವನ್ನು ವಿವಿಧ ಕಡೆ ಎಸೆದಿದ್ದು, ಮೈಸೂರಿನಲ್ಲಿ ಇದೀಗ 2 ಮೃತದೇಹ ಪತ್ತೆಯಾಗಿದೆ.

ಮಾತೃತ್ವದ ಕನಸಿಗೆ ಹೊಸ ಆಶಾಕಿರಣ: ಬಂಜೆತನಕ್ಕೆ ಆಯುರ್ವೇದದ ಸಮಗ್ರ ಚಿಕಿತ್ಸಾ ವಿಧಾನ

ಬಂಜೆತನಕ್ಕೆ ಆಯುರ್ವೇದದ ಸಮಗ್ರ ಚಿಕಿತ್ಸಾ ವಿಧಾನ

ಅಂಡಾಣು ಬಿಡುಗಡೆಯ ಪ್ರಕ್ರಿಯೆ, ಗರ್ಭಾಶಯದ ಆರೋಗ್ಯ ಮತ್ತು ಅದರ ಒಳಪದರದ ದಪ್ಪವು ಗರ್ಭಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮಯೋಚಿತ ತಪಾಸಣೆ, ಸೂಕ್ತ ಚಿಕಿತ್ಸೆ, ಆಹಾರ ಕ್ರಮ, ನಿಯಮಿತ ವ್ಯಾಯಾಮ ಹಾಗೂ ವೈದ್ಯಕೀಯ ಮೇಲ್ವಿಚಾರಣೆಯು ಮಾತೃತ್ವದ ಕನಸಿನತ್ತ ಸಾಗಲು ಸಹಕಾರಿಯಾಗಬಲ್ಲವು ಎಂದು ಡಾ. ಜ್ಯೋತಿಕಾ ಹುಬ್ಳೀಕರ್ ತಿಳಿಸಿದ್ದಾರೆ.

ಬೆಂಗಳೂರು ಬಳಿಕ ಕಲಬುರಗಿಯಲ್ಲೂ ರುಬ್ಬುಕಲ್ಲಿನಿಂದ ಹತ್ಯೆ; ಪತಿಯ ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಕೊಂದ ಪತ್ನಿ, ಪ್ರಿಯಕರ

ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಪತಿಯ ಹತ್ಯೆ

Kalaburagi Crime: ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಸದ್ಯ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಮೃತನನ್ನು ಸಿದ್ದರಾಮ ಎಂದು ಗುರುತಿಸಲಾಗಿದೆ.

ದೇವಿರಮ್ಮ ಬೆಟ್ಟದ ತುದಿಯಲ್ಲಿ ದುರಂತ: ಸುರಕ್ಷತಾ ಕಂಬಿ ಮುರಿದು ಬಿದ್ದು 20ಕ್ಕೂ ಹೆಚ್ಚು ಭಕ್ತರಿಗೆ ಗಂಭೀರ ಗಾಯ!

ಮುರಿದು ಬಿದ್ದ ದೇವಿರಮ್ಮ ಬೆಟ್ಟದ ಸುರಕ್ಷತಾ ಕಂಬಿ; 20 ಜನರಿಗೆ ಗಾಯ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಸಿದ್ಧ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ಭಕ್ತರ ದರ್ಶನದ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಬೆಟ್ಟದ ತುದಿಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಸುರಕ್ಷತಾ ಕಂಬಿ (ರೈಲಿಂಗ್) ದಿಢೀರ್ ಮುರಿದುಬಿದ್ದ ಪರಿಣಾಮ, ಓರ್ವ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿಯಲ್ಲಿ ಸಿನಿಮಾ ಸ್ಟೈಲ್ ದರೋಡೆ ಯತ್ನ: 2.68 ಕೋಟಿ ರೂ. ಲೂಟಿಗೆ ಪ್ರಯತ್ನಿಸಿದ ರಮೇಶ್‌ ಜಾರಕಿಹೊಳಿ ಗನ್‌ಮ್ಯಾನ್!

2.68 ಕೋಟಿ ರೂ. ಲೂಟಿಗೆ ಯತ್ನಿಸಿದ ರಮೇಶ್‌ ಜಾರಕಿಹೊಳಿ ಗನ್‌ಮ್ಯಾನ್!

ರಾಜಕಾರಣಿಯೊಬ್ಬರ ಭದ್ರತಾ ಸಿಬ್ಬಂದಿಯೇ ಸಿನಿಮಾ ಶೈಲಿಯಲ್ಲಿ ದರೋಡೆಗೆ ಸಂಚು ರೂಪಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಯತ್ನಿಸಿದ ರೋಚಕ ಘಟನೆಯೊಂದು ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ ಬರೋಬ್ಬರಿ 2.39 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್ ಗನ್‌ಮ್ಯಾನ್ ಚಿದಾನಂದನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕ್ರಷರ್ ಮಾಲೀಕರಿಂದ ಹಣ ಸುಲಿಗೆ; ಹಾಸನ ಜಿಲ್ಲಾಧಿಕಾರಿ, ಸಚಿವ ಶಿವಲಿಂಗೇಗೌಡ ವಿರುದ್ಧ ಹೆಚ್.ಡಿ.ಕೆ ಗಂಭೀರ ಆರೋಪ

ಹಾಸನ ಜಿಲ್ಲಾಧಿಕಾರಿ, ಶಿವಲಿಂಗೇಗೌಡ ವಿರುದ್ಧ ಹೆಚ್.ಡಿ.ಕೆ ಗಂಭೀರ ಆರೋಪ!

ಕಲ್ಲು ಗಣಿಗಾರಿಕೆ (ಕ್ರಷರ್) ಗಳಿಗೆ ಅನುಮತಿ ನೀಡುವುದು ಹಾಗೂ ವಸತಿ ಬಡಾವಣೆಗಳ ಅಲ್ಯುಲೇಷನ್ (ಅನ್ಯ ಸಂಕ್ರಮಣ) ವಿಚಾರದಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕೂಡ ಶಾಮೀಲಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ; ರಾಜ್ಯದ 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ ಎಂದ ಸಿಎಂ ಡಿ ಕೆ ಶಿವಕುಮಾರ್

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ; ಪೆಟ್ರೋಲ್ ಮಾದರಿ ಸಂಗ್ರಹಿಸಲು ಆದೇಶ

ವಾಹನ ಇಂಧನಗಳಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಳದಿಂದ ವಾಹನಗಳ ಎಂಜಿನ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ 67 ಕಡೆ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗಿದೆ. ಪೆಟ್ರೋಲ್ ನಲ್ಲಿ ಶೇ.31.5ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಕೇಳಿಬಂದಿರುವ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

Arvind Limbavali Interview: ಅಭಿವೃದ್ಧಿ ಯೋಜನೆಗೆ ಸರಕಾರದ ಬಳಿ ಹಣವಿಲ್ಲ

ಅಭಿವೃದ್ಧಿ ಯೋಜನೆಗೆ ಸರಕಾರದ ಬಳಿ ಹಣವಿಲ್ಲ

ಕಾಮಗಾರಿಗಳನ್ನು ಮುಗಿಸಿ ಎಂದು ಹೇಳಿ ಹೋಗುತ್ತಾರೆ ಹೊರತು, ಆ ಕಾಮಗಾರಿ ಪೂರ್ಣಗೊಳಿಸಲು ಬೇಕಿರುವಷ್ಟು ಅನುದಾನ ನೀಡುವುದಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಅನುಮೋದನೆಗೊಂಡಿ ರುವ ಯೋಜನೆಗೂ ಅನುದಾನ ನೀಡಲು ಸಾಧ್ಯ ವಾಗದಷ್ಟು ದಿವಾಳಿತನ ಈ ಸರಕಾರಕ್ಕಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ.

ಬೆಂಗಳೂರು ಟು ಲಕ್ನೋ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ: ತುರ್ತು ಲ್ಯಾಂಡಿಂಗ್

ಬೆಂಗಳೂರು ಟು ಲಕ್ನೋ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ

Hijack Threat for Indigo: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಗೇ ವಾಪಸ್ ತಂದು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.

Vishwavani Impact: ನಾಲ್ಕು ದಶಕಗಳ ಸಾಹಿತ್ಯ, ಹೋರಾಟದ ಪಯಣಕ್ಕೆ ತವರಿನ ಗೌರವ: ಗೊಲ್ಲಹಳ್ಳಿ ಶಿವಪ್ರಸಾದ್‌ಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾರಥ್ಯ |

ಗೊಲ್ಲಹಳ್ಳಿ ಶಿವಪ್ರಸಾದ್‌ಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾರಥ್ಯ |

ಕವಿಯಾಗಿ, ಹಾಡುಗಾರನಾಗಿ, ವಾಗ್ಮಿಯಾಗಿ ಹಾಗೂ ಜನಪರ ಹೋರಾಟಗಳ ಸಂಗಾತಿಯಾಗಿ ಗುರುತಿಸಿ ಕೊಂಡಿರುವ ಶಿವಪ್ರಸಾದ್ ಅವರು ನೆಲಮೂಲ ಸಂಸ್ಕೃತಿ, ಸಾಮಾಜಿಕ ನ್ಯಾಯ, ಪರಿಸರ, ಕನ್ನಡಪರ ಚಳವಳಿ ಮತ್ತು ಜನಸಾಮಾನ್ಯರ ಬದುಕಿನ ಪ್ರಶ್ನೆಗಳನ್ನು ತಮ್ಮ ಸಾಹಿತ್ಯದ ಮೂಲಕ ಪರಿಣಾಮ ಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.

ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಉದ್ದೇಶ: ಡಾ.ವೈ. ನವೀನ್ ಭಟ್

499ಕ್ಕೆ ದೀಪಾವಳಿ ವಿಶೇಷ ಕಿಟ್: ದೀಪ ಸಂಜೀವಿನಿ ಮಾಸಿಕ ಸಂತೆ ಆರಂಭ

ಸಂತೆಯ ವಿಶೇಷ ಆಕರ್ಷಣೆಯಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ 'ದೀಪ ಸಂಜೀವಿನಿ ಕಿಟ್' ಅನ್ನು ಪರಿಚಯಿಸಲಾಗಿದೆ. ಮರುಬಳಕೆ ಮಾಡಬಹುದಾದ ಸಂಜೀವಿನಿ ಲಾಂಛನ ಹೊಂದಿರುವ ಚೀಲದಲ್ಲಿ ಮಣ್ಣಿನ ಹಣತೆಗಳು, ದೀಪದ ಎಣ್ಣೆ, ಸಿಹಿ, ಖಾರ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಅನ್ನು 499ಕ್ಕೆ ಮಾರಾಟ ಮಾಡಲಾಗುತ್ತಿದೆ.

ಮುಂಡಗೋಡದಲ್ಲಿ ಹೀನ ಕೃತ್ಯ; ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65 ವರ್ಷದ ವೃದ್ಧ

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65 ವರ್ಷದ ವೃದ್ಧ

Mundagodu News: ಬಾಲಕಿಯನ್ನು ಪುಸಲಾಯಿಸಿ ಚಾಕು ತೋರಿಸಿ ಆರೋಪಿ ಲೈಗಿಂಕ ದೌರ್ಜನ್ಯ ಎಸಗಿದ್ದಾನೆ. ಮನೆಯವರಿಗೆ ಹೇಳಿದರೆ ಜೀವ ತೆಗೆಯುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Gudibande News: 30 ವರ್ಷ ದಾಟಿದರೂ ಮದುವೆಯಾಗದೆ ಉಳಿಯುತ್ತಿರುವ ಯುವಕರು, ಪ್ರಜಾಸೇವಾ ಆಂದೋಲನದಲ್ಲಿ ರೈತ ಮುಖಂಡರ ಅಳಲು

ರೈತಾಪಿ ಯುವಕರಿಗೆ ವಧು ಸಿಗುತ್ತಿಲ್ಲ; ಸರ್ಕಾರದ ಗಮನಕ್ಕೆ ತರಲು ಮನವಿ

ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ಅವಲಂಬಿಸಿರುವ ಯುವಕರಿಗೆ 30 ವರ್ಷ ದಾಟಿದರೂ ಮದುವೆ ಸಂಬಂಧಗಳು ಸಿಗುತ್ತಿಲ್ಲ. ಇದರಿಂದ ಯುವಕರು ಮಾತ್ರವಲ್ಲದೆ ಅವರ ತಂದೆ-ತಾಯಂದಿರೂ ಮಾನಸಿಕ ವಾಗಿ ಸಂಕಷ್ಟ ಅನುಭವಿಸುವಂತಾಗಿದೆ. ಕೃಷಿಕ ಕುಟುಂಬಗಳ ಯುವಕರ ಮದುವೆ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಬೇಕು

ಜನರ ಬಳಿಗೇ ಆಡಳಿತ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ಸಚಿವ ರುದ್ರಪ್ಪ ಲಮಾಣಿ

ಜನರ ಬಳಿಗೇ ಆಡಳಿತ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ರುದ್ರಪ್ಪ ಲಮಾಣಿ

Rudrappa Lamani: ಜಿಲ್ಲೆಯಲ್ಲಿ ಈಗಾಗಲೇ ಸುಮಾರು 1,500 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1,200 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ 300 ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಯಾವುದೇ ಅರ್ಜಿಯನ್ನು ಕಾರಣವಿಲ್ಲದೆ ಬಾಕಿ ಉಳಿಸಿಕೊಳ್ಳಬಾರದು ಎಂದು ಸಕ್ಕರೆ ಮತ್ತು ಜವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸೂಚಿಸಿದ್ದಾರೆ.

K M Munegowda: ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾಗಿ ಕೆ.ಎಂ.ಮುನೆಗೌಡ ನೇಮಕ

ರಾಜ್ಯ ಕಾರ್ಯಾಧ್ಯಕ್ಷರಾಗಿ ಕೆ.ಎಂ. ಮುನೆಗೌಡ ನೇಮಕ

ಹಿರಿಯ ವಕೀಲ ಕೆ.ಎಂ. ಮುನೆಗೌಡ(K M Munegowda) ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆ ಯ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಅವರು ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ, ಅಹಿಂದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಯ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

Bengaluru mass murder: ಬೆಂಗಳೂರು ಹತ್ಯಾಕಾಂಡ ಪ್ರಕರಣ; ತಮಿಳುನಾಡಿನ ಸೇಲಂ ಕಾಡಿನಲ್ಲಿ ಇಬ್ಬರ ಶವ ಪತ್ತೆ!

ಬೆಂಗಳೂರು ಹತ್ಯಾಕಾಂಡ ಪ್ರಕರಣ; ಸೇಲಂನಲ್ಲಿ ಇಬ್ಬರ ಶವ ಪತ್ತೆ

ಸೇಲಂ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಅವುಗಳು ಆರೋಪಿ ಇಂದುಶೇಖರ್‌ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಶವಗಳೆಂದು ಶಂಕಿಸಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಪತ್ನಿ ಹಾಗೂ ಅತ್ತೆಯ ಮೃತದೇಹಗಳನ್ನು ಸೇಲಂ ಕಾಡಿನಲ್ಲಿ ಬಿಸಾಡಿರುವುದಾಗಿ ತಿಳಿಸಿದ್ದಾನೆ.

ಜೇಬಿಗೆ ಕತ್ತರಿ ಬಿದ್ದರೂ ಹಬ್ಬದ ಖರೀದಿಯಲ್ಲಿ ಜನರ ಉತ್ಸಾಹಕ್ಕೆ ಕಡಿವಾಣವಿಲ್ಲ

ಬೆಳಕಿನ ಹಬ್ಬಕ್ಕೆ ಬೆಲೆ ಏರಿಕೆಯ ಕರಿ ನೆರಳು

ಹಬ್ಬದ ಸಿದ್ಧತೆಯಲ್ಲಿ ತೊಡಗಿರುವ ಜನಸಾಮಾನ್ಯರಿಗೆ ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ಉತ್ಸಾಹದಲ್ಲಿ ಜನರು ಬೆಲೆ ಏರಿಕೆಯ ನಡುವೆಯೇ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಜಿಲ್ಲಾ ಕೇಂದ್ರದಲ್ಲಿ ಕಂಡುಬಂದಿತು.

3 ತಿಂಗಳಿಂದ ಕೋಮಾದಲ್ಲಿ ಪುಟ್ಟ ಮಗು; ಕ್ಲೌಡ್‌ನೈನ್‌ ಆಸ್ಪತ್ರೆ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಸೂಚನೆ

ಕ್ಲೌಡ್‌ನೈನ್‌ ಆಸ್ಪತ್ರೆ ವಿರುದ್ಧ ತನಿಖೆಗೆ ಸಚಿವ ಯು.ಟಿ.ಖಾದರ್‌ ಸೂಚನೆ

Cloud Nine Hospital Case: ನಾಗರಬಾವಿಯ ಕ್ಲೌಡ್‌ನೈನ್‌ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಶನಿವಾರ ಭೇಟಿ ನೀಡಿ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಗುವಿನ ಈ ಸ್ಥಿತಿಗೆ ಆಸ್ಪತ್ರೆಯ ಮುಖ್ಯಸ್ಥರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಸ್ತೇಶಿಯಾ ಕೊಟ್ಟ ವೈದ್ಯರ ವಿರುದ್ಧವೂ ಕ್ರಮ ಆಗಬೇಕು ಎಂದು ಸೂಚಿಸಿದ್ದಾರೆ.

Cloudnine Hospital Case: ಅನಸ್ತೇಶಿಯಾ ಕೊಟ್ಟು ನಿರ್ಲಕ್ಷ್ಯ; ಕೋಮಾಗೆ ಜಾರಿದ ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆಯೇ ಹೊರಬೇಕು ಎಂದು ಎಚ್‌ಡಿಕೆ ಆಗ್ರಹ

ಮಗುವಿನ ಜವಾಬ್ದಾರಿ ಕ್ಲೌಡ್ ನೈನ್ ಆಸ್ಪತ್ರೆ ಹೊರಬೇಕು: ಎಚ್‌ಡಿಕೆ ಆಗ್ರಹ

ಮಂಡ್ಯ ಜಿಲ್ಲೆಯ ಕಟ್ಟೆ ದೊಡ್ಡಿ ಗ್ರಾಮದ ಸಂಪತ್ ಎಂಬುವವರ ಮಗು ಶಯಾನ್ ಅನಾರೋಗ್ಯದ ಕಾರಣಕ್ಕೆ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿಗೆ ಅಲ್ಲಿ ಅನಸ್ತೇಶಿಯಾ ಕೊಡಲಾಗಿದೆ. ಆದರ ಸೂಕ್ತ ಚಿಕಿತ್ಸೆ ನೀಡದೆ ಅವರು ನಿರ್ಲಕ್ಷ್ಯ ತೋರಿದ್ದು, ಮೂರೂವರೆ ತಿಂಗಳಿಂದ ಮಗು ಆಸ್ಪತ್ರೆಯಲ್ಲಿಯೇ ಇದೆ. ಆಸ್ಪತ್ರೆಯ ಆಡಳಿತ ಮಂಡಳಿ ಈ ನಿರ್ಲಕ್ಷ್ಯಕ್ಕೆ ಯಾವುದೇ ಜವಾಬ್ದಾರಿ ವಹಿಸಿಕೊಂಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಶಿವರಾಜ ಅರಳಿ ಅವರ ʼಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಕೃತಿಗೆ ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿ

ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿಗೆ ಶಿವರಾಜ ಅರಳಿ ಕೃತಿ ಆಯ್ಕೆ

Haveri News: ಹಾವೇರಿ ತಾಲೂಕಿನ ಮೇಲ್ಮರಿ ಗ್ರಾಮದ ಕವಿ, ಕಥೆಗಾರ ಶಿವರಾಜ ಅರಳಿ ಅವರ ‘ಕಣ್ಣ ಬಾನಲ್ಲಿ ಬೆಂಕಿಯ ಚಿತ್ರʼ ಕೃತಿಗೆ ಬೆಳಗಾವಿಯ ಬಿ.ಎ. ಸನದಿ ಪ್ರತಿಷ್ಠಾನ ನೀಡುವ 2025ನೇ ಸಾಲಿನ ಪ್ರತಿಷ್ಠಿತ ‘ಜನ್ನಾ-ಸನದಿ ಸಾಹಿತ್ಯ ಪ್ರಶಸ್ತಿʼ ಲಭಿಸಿದೆ.

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್‌; ಕಾಂಗ್ರೆಸ್‌ದು ಗೂಂಡಾ ಸಂಸ್ಕೃತಿ ಎಂದು ವಿಜಯೇಂದ್ರ ಕಿಡಿ

ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್‌!

BY Vijayendra: ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ನೂರಾರು ಚೂರಿಗಳು ಮತ್ತು ಚಾಕುಗಳನ್ನು ಕಳಿಸುವುದರ ಮುಖೇನ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಕಾರ್ಯಕರ್ತರ ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣಗೊಳಿಸುವ ಕೆಲಸ ಅವರು ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ʼಮೀಡಿಯಾ ಕಪ್ʼ ಆಟಗಾರರ ಹರಾಜು ಪ್ರಕ್ರಿಯೆ; ಟ್ರೋಪಿ ಅನಾವರಣಗೊಳಿಸಿದ ನಟ ವಸಿಷ್ಠ ಸಿಂಹ

ಬೆಂಗಳೂರಿನಲ್ಲಿ ʼಮೀಡಿಯಾ ಕಪ್ʼ ಆಟಗಾರರ ಹರಾಜು ಪ್ರಕ್ರಿಯೆ

Cricket Tournament: ಫೈವ್‌ಸ್ಟಾರ್ಸ್ ಸಂಸ್ಥೆಯು ಪತ್ರಕರ್ತರು ಹಾಗೂ ಮಾಧ್ಯಮದ ಗೆಳೆಯರಿಗಾಗಿ ಆಯೋಜಿಸಿರುವ ‘ಮೀಡಿಯಾ ಕಪ್ʼ ನ ಆಟಗಾರರ ಹರಾಜು ಪ್ರಕ್ರಿಯೆ ನಗರದ ಖಾಸಗಿ ಕ್ಲಬ್‌ನಲ್ಲಿ ಜರುಗಿತು. ಮೀಡಿಯಾ ಟ್ರೋಪಿಯನ್ನು ನಟ ವಸಿಷ್ಠ ಸಿಂಹ ಅನಾವರಣಗೊಳಿಸಿದರು. ಈ ವೇಳೆ ಎಂಟು ತಂಡಗಳ ಆಯ್ಕೆ ನಡೆಯಿತು.

Loading...