ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಕಾಲು ತುಳಿದ ಯುವಕನ ಕೊಲೆ
ಮನೆ ಸಮೀಪದ ಹೋಟೆಲ್‌ಗೆ ರಾತ್ರಿ ದೋಸೆ ತಿನ್ನಲು ಶಶಿ ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಡ್ಯಾಗರ್‌ನಿಂದ ಶಶಿಗೆ ಇರಿಯಲಾಗಿದೆ.