ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬುದ್ಧ, ಬಸವಣ್ಣ, ಅಂಬೇಡ್ಕರ್ ಬಗ್ಗೆ ಅವಹೇಳನ; ವೇದಮೂರ್ತಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ದಲಿತ ಪರ ಸಂಘಟನೆಗಳ ಆಗ್ರಹ

ಅಂಬೇಡ್ಕರ್ ಬಗ್ಗೆ ಅವಹೇಳನ; ವೇದಮೂರ್ತಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಅಂಬೇಡ್ಕರ್, ಬುದ್ಧ, ಬಸವಣ್ಣನವರ ಬಗ್ಗೆ ವೇದಮೂರ್ತಿ ಎಂಬಾತ ಅವಹೇಳನಕಾರಿ ಮತ್ತು ಅಕ್ಷೇಪಾರ್ಹ ಪದ ಬಳಸಿ ಮಾತನಾಡಿದ್ದು, ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಠಿಣ ಕ್ರಮಕ್ಕೆ ಕೊರಟಗೆರೆ ದಲಿತ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗ ಫ್ರಾನ್ಸ್‌ಗೆ ಭೇಟಿ; ರಾಕೆಟ್, ಹಚಿನ್ಸನ್, ಬಯೋಮೆರಿಕ್ಸ್ ಜತೆ ಹೂಡಿಕೆ ಮಾತುಕತೆ

ಬಂಡವಾಳ ಸೆಳೆಯಲು ಸಚಿವ ಎಂ‌.ಬಿ. ಪಾಟೀಲ್ ಫ್ರಾನ್ಸ್‌ಗೆ ಭೇಟಿ‌

MB Patil: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ಉನ್ನತ ಮಟ್ಟದ ನಿಯೋಗವು ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಮೊದಲ ದಿನವಾದ ಸೋಮವಾರ ರಾಕೆಟ್, ಹಚಿನ್ಸನ್ ಮತ್ತು ಬಯೋಮೆರಿಕ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.

EOS-05: 36000 ಕಿಲೋಮೀಟರ್ ಎತ್ತರದ ಭೂಸ್ಥಿರ ಕಕ್ಷೆಯಲ್ಲಿ ಇಒಎಸ್-೦5 ಕಣ್ಣು: ಯಾರೂ ಏರದ ಎತ್ತರ ತಲುಪಿದ ಇಸ್ರೋ

ಯಾರೂ ಏರದ ಎತ್ತರ ತಲುಪಿದ ಇಸ್ರೋ!

ಇಸ್ರೋ ಜಿಎಸ್‌ಎಲ್‌ವಿ-17 ನೌಕೆಯ ಮೂಲಕ ಇಒಎಸ್-05 ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸುವುದರೊಂದಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರವು ದೊಡ್ಡ ಗೆಲುವು ಸಾಧಿಸಿದೆ. ʼNaughty Boy’ ಎಂದೇ ಕರೆಯಲ್ಪಡುವ ಈ ಜಿಎಸ್‌ಎಲ್‌ವಿ ನೌಕೆಯು ನಡೆಸಿದ ಉಡಾವಣೆಯು ಹಲವು ಹೊಸ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ.

NICE Road Project: ನೈಸ್ ಈಸ್ ಬಿಗ್ಗೆಸ್ಟ್ ಫ್ರಾಡ್, ನಿವೇಶನಗಳ ಹಂಚಿಕೆ ಹಿಂದೆ ದೊಡ್ಡ ಹುನ್ನಾರವಿದೆ: ಎಚ್‌.ಡಿ. ದೇವೇಗೌಡ ಆರೋಪ

ನೈಸ್ ನಿವೇಶನಗಳ ಹಂಚಿಕೆ ಹಿಂದೆ ದೊಡ್ಡ ಹುನ್ನಾರ: ಎಚ್‌.ಡಿ. ದೇವೇಗೌಡ

ರೈತರಿಗೆ 1,453 ಸೈಟುಗಳನ್ನು ಕೊಟ್ಟು ಉಳಿದ ಅಷ್ಟು ಭೂಮಿಯನ್ನು ಲಪಟಾಯಿಸುವ ದುರುದ್ದೇಶ ಈ ನಿರ್ಧಾರದ ಹಿಂದೆ ಇದೆ. ಒಂದು ಚದರ ಅಡಿಯ ಭೂಮಿಯ ಬೆಲೆ ₹10,000 ರಿಂದ ₹15,000 ಇದೆ. ಬಂಗಾರಕ್ಕೂ ಮೀರಿದ ಬೆಲೆ ಹೊಂದಿರುವ ಈ ಭೂಮಿಯನ್ನು ಲೂಟಿ ಹೊಡೆಯಲು ಹೊರಟವರು ಯಾರು? ಈ ಅಕ್ರಮದ ಹಿಂದೆ ಯಾರಿದ್ದಾರೆ? ಎಂಬುವುದು ಒಂದಲ್ಲ ಒಂದು ದಿನ ಇದು ಬಯಲಿಗೆ ಬರಲೇಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.

Revolution in ESI hospitals : ಹಾಸಿಗೆ ಸಾಮರ್ಥ್ಯ ಹೆಚ್ಚಳ, ಐಸಿಯು, ಮಾಡ್ಯುಲರ್ ಒಟಿ ಅಳವಡಿಕೆ: ರಾಜ್ಯದಲ್ಲಿ ಸರ್ಜರಿ ಕ್ರಾಂತಿ ಮಾಡುತ್ತಿರುವ ಇಎಸ್‌ಐ ಆಸ್ಪತ್ರೆಗಳು

ಮೇಲ್ದರ್ಜೆಗೇರಿದ ರಾಜ್ಯದ 7 ಇಎಸ್‌ʼಐ ಆಸ್ಪತ್ರೆಗಳು

ಬೆಂಗಳೂರಿನ ಇಂದಿರಾನಗರ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಬೆಳಗಾವಿ ಮತ್ತು ದಾಂಡೇಲಿ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳ, ತೀವ್ರ ನಿಗಾ ಘಟಕ (ಐಸಿಯು), ಮಾಡ್ಯುಲರ್ ಆಪರೇಷನ್ ಥಿಯೇಟರ್ (ಒಟಿ) ಉಪಕರಣ ಅಳವಡಿಕೆ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್, ಸಿಬ್ಬಂದಿ ನೇಮಕ ಸೇರಿ ಇತರ ವೈದ್ಯಕೀಯ ಸೌಕರ್ಯ ಕಲ್ಪಿಸಲಾಗುತ್ತಿದೆ.

Relocate 305 Bus Stops: 305 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಚಿಂತನೆ: ಸಂಚಾರ ದಟ್ಟಣೆ ನಿಯಂತ್ರಿಸಲು ಬಿಎಂಟಿ, ಜಿಬಿಎ, ಸಂಚಾರಿ ಪೊಲೀಸರಿಂದ ಮಹತ್ವದ ಕ್ರಮ

305 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಚಿಂತನೆ

ನಗರದ ಸಂಚಾರ ವ್ಯವಸ್ಥೆ ಯನ್ನು ಸುಗಮಗೊಳಿಸುವ ಉದ್ದೇಶದಿಂದ ಬಿಎಂಟಿಸಿ, ಜಿಬಿಎ ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲು ಮುಂದಾಗಿವೆ. ವಿಶೇಷವಾಗಿ ಸಿಗ್ನಲ್‌ಗಳ ಸಮೀಪ ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತಿದೆ.

ಸೆ.27ರಂದು ಹೈದರಾಬಾದ್‌ನಲ್ಲಿ ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಪಿಂಕ್ ಪವರ್ ರನ್ 3.0 ಆಯೋಜನೆ

ಸೆ.27ಕ್ಕೆ ಹೈದರಾಬಾದ್‌ನಲ್ಲಿ ಪಿಂಕ್ ಪವರ್ ರನ್ 3.0 ಆಯೋಜನೆ

Pink Power Run 3.0: ಸುಧಾ ರೆಡ್ಡಿ ಫೌಂಡೇಶನ್ ಹಾಗೂ ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಯಾದ ಎಂಇಐಎಲ್ ಫೌಂಡೇಶನ್ ಜಂಟಿಯಾಗಿ ಅಂತಾರಾಷ್ಟ್ರೀಯ ಹಾಫ್ ಮ್ಯಾರಥಾನ್ ಮತ್ತು ಸಮುದಾಯ ಫಿಟ್ನೆಸ್ ಉಪಕ್ರಮವನ್ನು ಮುಂದುವರಿಸಿದ್ದು, ಅದರ ಭಾಗವಾಗಿ ‘ಪಿಂಕ್ ಪವರ್ ರನ್ʼ ಮೂರನೇ ಆವೃತ್ತಿಯನ್ನು ಇದೇ ಸೆ.27 ರಂದು ಆಯೋಜಿಸಲಾಗಿದೆ.

Vishwavani Impact: ವಿಶ್ವವಾಣಿ ವರದಿಗೆ ಹೈಕೋರ್ಟ್ ಬಾಲ ನ್ಯಾಯ ಸಮಿತಿ ಸ್ಪಂದನೆ:  ಸಂಜೀವನಗರ ಶೌಚಾಲಯಕ್ಕೆ ಚಾಲನೆ

ಸಂಜೀವನಗರ ಶೌಚಾಲಯಕ್ಕೆ ಚಾಲನೆ

ಪಟ್ಟಣದ ಸಂಜೀವನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಜುಲೈ 26ರಂದು ವಿಶ್ವವಾಣಿ ದಿನ ಪತ್ರಿಕೆಯಲ್ಲಿ ಪ್ರಕಟ ವಾಗಿದ್ದ ವಿಶೇಷ ವರದಿಗೆ ಕರ್ನಾಟಕ ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿ ಸ್ಪಂದಿಸಿದೆ. ವರದಿಯ ಬೆನ್ನಲ್ಲೇ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ದೊರೆತಿದೆ.

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಂದ ಪೌಷ್ಟಿಕಾಂಶ ತಿಂಡಿಗಳ ಅಭಿವೃದ್ಧಿ ಮಾಡಿದ ರಾಜ್ಯ ಸರ್ಕಾರ; 6 ವಿಧದ ಎನರ್ಜಿ ಬಾರ್‌ ತಯಾರಿಕೆ

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಂದ ಎನರ್ಜಿ ಬಾರ್‌ ತಯಾರಿಕೆ

Priyank Kharge: ನಾವೀನ್ಯತೆಯು ಕಲ್ಯಾಣ ಕರ್ನಾಟಕದಲ್ಲಿ ಬೆಳೆಯುವ ಬೇಳೆಕಾಳು ಮೌಲ್ಯವರ್ಧನೆಗೆ ಹೇಗೆ ನೆರವಾಗಬಹುದು ಎಂಬುದಕ್ಕೆ ಈ ಉಪಕ್ರಮ ಉತ್ತಮ ನಿದರ್ಶನವಾಗಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

CHIMUL: ನಷ್ಟದಲ್ಲಿದ್ದರೂ ರೈತರ ಸೌಲಭ್ಯ ಕಡಿತವಿಲ್ಲ; ಸ್ವಂತ ಪ್ಯಾಕಿಂಗ್ ಘಟಕ ಸ್ಥಾಪನೆಗೆ ಕ್ರಮ: ಚಿಮುಲ್ ಒಕ್ಕೂಟ ಎಂದಿಗೂ ರೈತರ ಪರ: ಕೃಷ್ಣಾರೆಡ್ಡಿ

ಚಿಮುಲ್ ಒಕ್ಕೂಟ ಎಂದಿಗೂ ರೈತರ ಪರ: ಕೃಷ್ಣಾರೆಡ್ಡಿ

ಒಕ್ಕೂಟದ ಆಡಳಿತ ಮಂಡಳಿಯಲ್ಲಿರುವ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶ ಕರು ರೈತರ ಕುಟುಂಬದಿಂದ ಬಂದವರಾಗಿರುವುದರಿಂದ ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪಶು ಆಹಾರದ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡದಿಂದ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ

ಮಳೆನೀರು ಅಮೃತವಿದ್ದಂತೆ, ಅದನ್ನು ಚರಂಡಿ ಪಾಲು ಮಾಡದಿರಿ: ರಾಘವೇಶ್ವರ ಭಾರತೀ ಶ್ರೀ

ಮಳೆನೀರು ಅಮೃತವಿದ್ದಂತೆ, ಅದನ್ನು ಚರಂಡಿ ಪಾಲು ಮಾಡದಿರಿ: ರಾಘವೇಶ್ವರ ಶ್ರೀ

Shri Raghaveshwara Bharathi Swamiji: ಮಳೆಯ ನೀರು ಕಪ್ಪು ಮಣ್ಣಿಗೆ ಬಿದ್ದಾಗ ಸಿಹಿ ರಸ, ಬಿಳಿ ಮಣ್ಣಿಗೆ ಬಿದ್ದಾಗ ಒಗರು, ಪರ್ವತದ ತಪ್ಪಲಲ್ಲಿ ಬಿದ್ದ ನೀರು ಖಾರ ರಸ ಎಂಬುದಾಗಿ ಮಳೆಯ ನೀರು ಯಾವ ಬಣ್ಣದ ಮಣ್ಣಿಗೆ ಬಿದ್ದಾಗ ಯಾವ ರುಚಿ ಏರ್ಪಡುತ್ತದೆ ಎಂದು ವಿಸ್ತಾರವಾಗಿ ನಮ್ಮ ಪೂರ್ವಜರು ಸಂಶೋಧಿಸಿದ್ದು, ಬಂಗಾರ, ಬೆಳ್ಳಿ , ಮಣ್ಣು ಅಥವಾ ಗಾಜಿನ ಪಾತ್ರೆಗಳಲ್ಲಿ ಮಳೆಯ ನೀರನ್ನು ಸಂಗ್ರಹ ಮಾಡಬೇಕು. ಇವುಗಳಿಂದ ನೀರಿನ ಗುಣಗಳ ನಾಶವಾಗುವುದಿಲ್ಲ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

Police Constable Answer Key 2026: ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ; ಇಲ್ಲಿದೆ ಲಿಂಕ್‌

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ

KEA CAR DAR Recruitment 2026: ಬೆಂಗಳೂರು: ರಾಜ್ಯದಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಹುದ್ದೆಗಳ ನೇಮಕಾತಿ ಪರೀಕ್ಷೆ ಸೆ.6ರಂದು ನಡೆದಿತ್ತು. ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ಕೆಇಎ ವೆಬ್‌ಸೈಟ್‌ ಮೂಲಕ ಸೆ.9ರ ಬೆಳಿಗ್ಗೆ 10:30 ಗಂಟೆಯೊಳಗೆ ಸಲ್ಲಿಸಬಹುದಾಗಿರುತ್ತದೆ.

Praja Seva Andolan: ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ; ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಕರೆ: ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್

ನಂದಿಯಲ್ಲಿ ‘ಪ್ರಜಾ ಸೇವೆ’: ಜನರ ಸಮಸ್ಯೆಗೆ ಅಧಿಕಾರಿಗಳ ಸ್ಪಂದನೆ

ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮಾಹಿತಿ ಕೊರತೆಯಿಂದ ಯಾವುದೇ ಅರ್ಹರು ಸೌಲಭ್ಯದಿಂದ ವಂಚಿತರಾಗಬಾರದು. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.

Tumakuru Dasara Logo: ತುಮಕೂರು ದಸರಾ ಮಹೋತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ: ಸೆ. 15ರಂದು ಲಾಂಛನ ಬಿಡುಗಡೆ

ತುಮಕೂರು ದಸರಾ ಮಹೋತ್ಸವ: ಸೆ.15ರಂದು ಲಾಂಛನ ಬಿಡುಗಡೆ

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತುಮಕೂರು ದಸರಾ ಉತ್ಸವ ಆಚರಣೆಯ ಪೂರ್ವಭಾವಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಳೆದ ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯೂ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಅಂತಿಮಗೊಳಿಸಲಾಗಿದೆ

ಉಡುಪಿ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಭರ್ಜರಿ ಸ್ಟೆಪ್‌ ಹಾಕಿದ ದಳಪತಿ 'ವಿಜಯ್‌': ತಮಿಳುನಾಡು ಸಿಎಂಗೆ ಇಲ್ಲೇನು ಕೆಲ್ಸ ಎನ್ನುವ ಮುನ್ನ ಈ ಸ್ಟೋರಿ ಓದಿ

ಉಡುಪಿಯ ವಿಟ್ಲಪಿಂಡಿ ಉತ್ಸವಕ್ಕೆ ಬಂದಿದ್ರಾ ದಳಪತಿ ವಿಜಯ್? ವಿಡಿಯೊ ನೋಡಿ

Krishna Janmashtami 2026: ಉಡುಪಿಯಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ವಿಜಯ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ರಥಬೀದಿ ಮೂಲಕ ತೆರೆದ ವಾಹನದಲ್ಲಿ ಅವರು ಸವಾರಿ ಮಾಡಿದ್ದು ಬ್ಲ್ಯಾಕ್‌ ಕೋಟ್ ಧರಿಸಿ ಮಿಂಚಿದ್ದಾರೆ. ಜತೆಗೆ ಭರ್ಜರಿ ಡ್ಯಾನ್ಸ್‌ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

₹20 Lakh Grant for 'Darideepa' Shelter: ಉದ್ಯಮಿ ಚಂದ್ರಶೇಖರ್ ಉದಾರ ನೆರವು: ದಾರಿದೀಪ ಅಂಧ ಹೆಣ್ಣುಮಕ್ಕಳ ಆಶ್ರಮಕ್ಕೆ 20 ಲಕ್ಷ ಸಹಾಯಧನ

ದಾರಿದೀಪ ಅಂಧ ಹೆಣ್ಣುಮಕ್ಕಳ ಆಶ್ರಮಕ್ಕೆ 20 ಲಕ್ಷ ಸಹಾಯಧನ

ನಗರದ ಬಟವಾಡಿಯ ನಿರ್ಗತಿಕ, ಅನಾಥ ಹಾಗೂ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಶ್ರಮಿಸುತ್ತಿರುವ 'ದಾರಿದೀಪ' ಅಂಧ ಹೆಣ್ಣುಮಕ್ಕಳ ಆಶ್ರಮಕ್ಕೆ ಆರ್ಥಿಕ ಬಲ ತುಂಬುವ ಮಹತ್ವದ ಘಟನೆ ನಡೆಯಿತು. ಸಮಾಜಮುಖಿ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕಾಪ್ರಾಡ್ ಇಂಡಸ್ಟ್ರೀಸ್ ವತಿಯಿಂದ ದಾರಿದೀಪ ಆಶ್ರಮದ ಕಟ್ಟಡ ಖರೀದಿಗೆ 20 ಲಕ್ಷ ಸಹಾಯಧನ ವನ್ನು ಘೋಷಿಸಿ, ಚೆಕ್ ಅನ್ನು ವಿತರಿಸಿದೆ.

ನೈಸ್‌ ಯೋಜನೆಯ ನಿವೇಶನಗಳ ಹಂಚಿಕೆ ತೀರ್ಮಾನಕ್ಕೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧ; ಸಿಎಂ ಡಿಕೆಶಿಗೆ ಪತ್ರ

ನೈಸ್ ಸಂಸ್ಥೆಗೆ ಭೂಮಿ ಕೊಟ್ಟವರಿಗೆ ನಿವೇಶನ; ಸಿಎಂಗೆ ದೇವೇಗೌಡರ ಪತ್ರ

ನೈಸ್ ಅಕ್ರಮ ನಡೆಯಲು ರಾಜಕೀಯ ಮುಖಂಡರ ಸಹಕಾರ ಇದೆ. ಇದರಲ್ಲಿ ಯಾರ್‍ಯಾರ ಪಾತ್ರ ಇದೆ ಅಂತ ಹೇಳುವುದಿಲ್ಲ. ಆದರೆ, ನೈಸ್ ಸಂಸ್ಥೆ ಬಗ್ಗೆ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ರೈತರಿಗೆ ನ್ಯಾಯ ಒದಗಿಸಲು ಶಕ್ತಿ ಮೀರಿ ನಮ್ಮ ಪಕ್ಷದಿಂದ ಹೋರಾಟ ಮಾಡಲಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಹೇಳಿದ್ದಾರೆ.

Gubbi News: ವಿಜೃಂಭಣೆಯಿಂದ ಜರುಗಿದ ಸಿಡಿಲು ಬಸವಣ್ಣ ಪರೇವು ಜಾತ್ರೆ

ವಿಜೃಂಭಣೆಯಿಂದ ಜರುಗಿದ ಸಿಡಿಲು ಬಸವಣ್ಣ ಪರೇವು ಜಾತ್ರೆ

ಪ್ರತಿ ವರ್ಷದಂತೆ ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಪರೇವು ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ರುದ್ರಾಭಿಷೇಕ ಮೂಲಕ ಪೂಜಾ ವಿಧಿವತ್ತಾಗಿ ನಡೆದು ನಂತರ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಿತು. ಈ ಜಾತ್ರೆಯ ವಿಶೇಷ ಮಹಾ ದಾಸೋಹ ಅಚ್ಚುಕಟ್ಟಾಗಿ ಸಾವಿರಾರು ಭಕ್ತರಿಗೆ ಸಮಿತಿಯ ಮೂಲಕ ಹಂಚಲಾಯಿತು.

ಯುವಶಕ್ತಿಯೇ ಭಾರತದ ಭವಿಷ್ಯ; ಕೆಪಿಎಸ್‌ಸಿಗೆ ಕಾಯಕಲ್ಪ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ: ಬಿ.ವೈ. ವಿಜಯೇಂದ್ರ

ಕೆಪಿಎಸ್‌ಸಿಗೆ ಕಾಯಕಲ್ಪ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ: ವಿಜಯೇಂದ್ರ

BY Vijayendra: ಭಾರತದಲ್ಲಿ 35ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸುಮಾರು ಶೇ.65 ರಷ್ಟಿದ್ದು, 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿಯಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

NICE Road Project: ನೈಸ್ ರಸ್ತೆಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯಲಿ: ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಮನವಿಗೆ ಸರ್ಕಾರ ಸ್ಪಂದನೆ, ಪರಿಶೀಲನೆಗೆ ಸೂಚನೆ

ನೈಸ್ ರಸ್ತೆ ಸ್ವಾಧೀನಕ್ಕೆ ಮನವಿ; ಪರಿಶೀಲನೆಗೆ ರಾಜ್ಯ ಸರ್ಕಾರ ಸೂಚನೆ

ನೈಸ್–ಬಿಎಂಐಸಿಪಿ ಯೋಜನೆ ಕುರಿತು ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಗಂಭೀರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ, ಯೋಜನೆಯ ರಸ್ತೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯುವುದು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕ ಹಾಗೂ ವಾಣಿಜ್ಯ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ಮನವಿ ಸಲ್ಲಿಸಿದ್ದರು. ಇದೀಗ ಮನವಿ ಬಗ್ಗೆ ಪರಿಶೀಲಿಸಲು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Kuntoji Basavanna Jatra: ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ: ನಾಳೆ ಎರಡನೇ ವರ್ಷದ ರಥೋತ್ಸವ

ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ

ನಾಡಿನ ಹರಗುರು ಚರಮೂರ್ತಿಗಳನ್ನು ಕರೆಸಿ ಅವರ ಅಮೃತ ಹಸ್ತದಿಂದ ಮೊಟ್ಟ ಮೊದಲ ತೇರೆಳೆದು ಸಂಭ್ರಮಿಸಿದರು. ತಮ್ಮ ಊರಿನಿಂದ ಸಾವಿರಾರು ಕಿ.ಮೀ.ಗಳ ದೂರ ಇದ್ದವರು ಕೂಡಾ ಕಳೆದ ವರ್ಷ ತಮ್ಮ ಆರಾಧ್ಯ ದೈವದ ಪ್ರಥಮ ತೇರೆಳೆದು ಕೃತಾರ್ಥ ರಾಗಿದ್ದರು. ಈಗ ಎರಡನೇ ವರ್ಷದ ತೇರೆಳೆಯುವ ಸಂಭ್ರಮದಲ್ಲಿದಾರೆ. ಇಂದು ಶ್ರಾವಣ ಮಾಸದ ಕಡೆಯ ಸೋಮವಾ ರದಂದು ಬಸವಣ್ಣನ ಜಾತ್ರೆ ಆರಂಭವಾಗಲಿದೆ. ಅದರ ನಿಮಿತ್ಯವಾಗಿ ಇಂದು ನಸುಕಿನಲ್ಲಿ ಮಹಾ ಪೂಜೆ ರುದ್ರಾಭಿಷೇಕ ನೆರವೇರಲಿದೆ.

Ganeshotsava: ಗಣೇಶೋತ್ಸವ: ಮಾರ್ಗಸೂಚಿ ಪಾಲನೆಗೆ ಫ್ಲೆಕ್ಸ್, ಡಿಜೆ ಮಾಲೀಕರಿಗೆ ಎಸ್ಪಿ ಸೂಚನೆ

ಗಣೇಶೋತ್ಸವ: ಮಾರ್ಗಸೂಚಿ ಪಾಲನೆಗೆ ಫ್ಲೆಕ್ಸ್, ಎಸ್ಪಿ ಸೂಚನೆ

ಫ್ಲೆಕ್ಸ್ ಮುದ್ರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ನಿಯಮಗಳನ್ನು ಪಾಲಿಸಬೇಕು. ಡಿಜೆ ಸೌಂಡ್ ಸಿಸ್ಟಮ್ ಬಳಕೆಯಲ್ಲಿಯೂ ಸರ್ಕಾರ ನಿಗದಿಪಡಿಸಿರುವ ನಿಯಮ, ಸಮಯ ಹಾಗೂ ಧ್ವನಿಮಿತಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾಗದಂತೆ ಮಾಲೀಕರು ಹಾಗೂ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

Bigboss Fashion 2026: ಮೆನ್ಸ್ ಹೈ ಫ್ಯಾಷನ್‌ ಟಾಪ್‌ ಲಿಸ್ಟ್‌ಗೆ ಸೇರಿದ ಸುದೀಪ್‌ ಬ್ಲ್ಯಾಕ್‌  ಡಿಸೈನರ್‌ ಜಾಕೆಟ್‌

ಫ್ಯಾಷನ್‌ ಟಾಪ್‌ ಲಿಸ್ಟ್‌ಗೆ ಸೇರಿದ ಸುದೀಪ್‌ ಬ್ಲ್ಯಾಕ್‌ ಡಿಸೈನರ್‌ ಜಾಕೆಟ್‌

ಬಿಗ್‌ಬಾಸ್‌ ಸೀಸನ್‌13ರ ವೇದಿಕೆಯಲ್ಲಿ ಸುದೀಪ್‌ ಧರಿಸಿದ್ದ ಬ್ಲ್ಯಾಕ್‌ ಶೇಡ್‌ನ ವೆಲ್ವೆಟ್‌ ಡಿಸೈನರ್‌ ಜಾಕೆಟ್‌ ಸದ್ಯ ಹೈ ಫ್ಯಾಷನ್‌ ಲಿಸ್ಟ್‌ಗೆ ಸೇರ್ಪಡೆಯಾಗಿದೆ. ಅಂದಹಾಗೆ, ಸುದೀಪ್‌ರ ಈ ಅತ್ಯಾಕರ್ಷಕ ಔಟ್‌ಫಿಟ್‌ ಸೃಷ್ಟಿಕರ್ತ ಬೇರ್ಯಾರು ಅಲ್ಲ! ಎಂದಿನಂತೆ ಪ್ರತಿ ಬಾರಿಯೂ ಡಿಸೈನ್‌ ಮಾಡುವ ಸೆಲೆಬ್ರೆಟಿ ಡಿಸೈನರ್‌ ಭರತ್‌ ಸಾಗರ್‌. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

Bengaluru accident: ಬೆಂಗಳೂರಿನಲ್ಲಿ ಟಿಪ್ಪರ್‌ ಲಾರಿ ಹರಿದು 5 ವರ್ಷದ ಬಾಲಕ ಸಾವು; ತಾಯಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ದುರಂತ!

ಬೆಂಗಳೂರಿನಲ್ಲಿ ಘೋರ ಘಟನೆ; ಟಿಪ್ಪರ್‌ ಲಾರಿ ಹರಿದು 5 ವರ್ಷದ ಬಾಲಕ ಸಾವು!

ಬೆಂಗಳೂರು ನಗರದ ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ಅಪಘಾತ ಸಂಭವಿಸಿದೆ. ಮಗನನ್ನು ಶಾಲೆಗೆ ಬಿಡಲು ತಾಯಿ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಸದ್ಯ ಮೃತ ಬಾಲಕನ ತಂದೆ ನೀಡಿದ ದೂರಿನನ್ವಯ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Loading...