ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ: ದೇವಾಲಯಗಳಲ್ಲಿ ವಿಶೇಷ ಪೂಜೆ

ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಪಟ್ಟಣದ ಜಡಲ ಬೈರವೇಶ್ವರ ದೇವಸ್ಥಾನ, ಪರಗೋಡಿನ ಪಂಚಲಿಂಗ ದೇವಾಲಯ, ಪಾತಪಾಳ್ಯ ಹಿರೇಣ್ಯೇಶ್ವರ ದೇವಾಲಯ ನಗರ್ಲ ಗ್ರಾಮದ ಬಯಲು ಆಂಜನೇಯ ದೇವಸ್ಥಾನ, ಬಾಗೇಪಲ್ಲಿ ಪಟ್ಟಣದ ಕೊಡಕೊಂಡೆ ರಸ್ತೆಯಲ್ಲಿರುವ ಶಿವನ ದೇವಾಲಯ, ಗೂಳೂರು ನಿಡುಮಾಮಿಡಿ ಮಠ  ಪೀಠದಲ್ಲಿ ಶಿವನ ದೇವಾಲಯದಲ್ಲಿ ಮಹಾ ರುದ್ರಾಭಿಷೇಕ, ಹಾಲಭಿಷೇಕ, ಬಿಲ್ವಾರ್ಚನೆ, ನಿವೇದನೆ, ದೂಪದಾರತಿ, ತುಪ್ಪದಾರತಿ, ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಿತು

Shidlaghatta News: 75 ವರ್ಷಗಳ ಪರಂಪರೆಯ ದೇವಾಲಯದಲ್ಲಿ ಮಹಾಶಿವರಾತ್ರಿ ವೈಭವ...

75 ವರ್ಷಗಳ ಪರಂಪರೆಯ ದೇವಾಲಯದಲ್ಲಿ ಮಹಾಶಿವರಾತ್ರಿ ವೈಭವ...

ಶಿವನ ಆರಾಧನೆ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ತೃಪ್ತಿ ನೀಡುತ್ತದೆ. ಯುವಜನತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ಥ ಮಂಡಳಿ ಅಧ್ಯಕ್ಷ ಶಿವಶಂಕರ್ ಕರೆ ನೀಡಿದರು

Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾ ಶಿವರಾತ್ರಿಯ ಸಂಭ್ರಮ: ಇಶಾ ಮತ್ತು ಶಿವನ ದೇವಾಲಯಗಳಿಗೆ ಹರಿದು ಬಂದ ಭಕ್ತ ಸಾಗರ

ವಾಹನದಟ್ಟಣೆ ಕಿರಿಕಿರಿ ನಿಭಾಯಿಸಲು ಪೊಲೀಸ್ ಇಲಾಖೆ ಸುಸ್ತೋ ಸುಸ್ತು

ಮುಂಜಾನೆಯಿಂದಲೇ ಹರ ದೇವಾಲಯಗಳತ್ತ ಭಕ್ತರ ದಂಡು ಹರಿದು ಬರುವ ಹಿನ್ನೆಲೆಯಲ್ಲಿ, ಮೂಲ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ನೈವೇದ್ಯಗಳನ್ನು ಅರ್ಪಿಸುವ ಜೊತೆಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪುರೋಹಿತ ವರ್ಗ, ದೇವಾಲಯಗಳ ಆಡಳಿತ ಮಂಡಳಿ ನೆರವೇರಿಸಿದರು.

Mahashivratri 2026: ಮಲೆ ಮಹದೇಶ್ವರ ದೇವಾಲಯಕ್ಕೆ ಸಿಎಂ ಭೇಟಿ, ತಂದೆ ಎಚ್.ಡಿ. ದೇವೇಗೌಡರ ಜತೆ ಶಿವನ ದರ್ಶನ ಪಡೆದ ಎಚ್‌ಡಿಕೆ

ಮಲೆ ಮಹದೇಶ್ವರ ದೇವಾಲಯಕ್ಕೆ ಸಿಎಂ ಭೇಟಿ, ಶಿವನ ದರ್ಶನ ಪಡೆದ ಎಚ್‌ಡಿಕೆ

ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಶಿವದೇವಾಲಯಗಳು ಭಕ್ತರಿಂದ ತುಂಬಿತುಳುಕಿದವು. ಬೆಳಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿಗೆ ದರ್ಶನ ಪಡೆದರು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಹಬ್ಬದ ಹಿನ್ನೆಲೆಯಲ್ಲಿ ಮಹಾಶಿವನ ದರ್ಶನ ಪಡೆದಿದ್ದಾರೆ.

ಶಿವರಾತ್ರಿಯಂದು ಗೋಕರ್ಣ ಆತ್ಮಲಿಂಗ ದರ್ಶನ ಪಡೆದ ಕೆಲವೇ ಹೊತ್ತಲ್ಲಿ ಭಕ್ತ ನಿಧನ

ಗೋಕರ್ಣ ಆತ್ಮಲಿಂಗ ದರ್ಶನ ಪಡೆದ ಕೆಲವೇ ಹೊತ್ತಲ್ಲಿ ಭಕ್ತ ನಿಧನ

Uttara Kannada News: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಆತ್ಮಲಿಂಗ ದರ್ಶನ ಪಡೆದು ಕೆಲ‌ ನಿಮಿಷಗಳಲ್ಲಿ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಗೋವಾದ ರತ್ನಾಕರ (76) ಎಂದು ಗುರುತಿಸಲಾಗಿದೆ. ಆತ್ಮಲಿಂಗದ ದರ್ಶನ ಪಡೆದು ದೇವಸ್ಥಾನದಿಂದ ಹೊರಕ್ಕೆ ಹೋದ ಬಳಿಕ ಅವರಿಗೆ ಹೃದಯಾಘಾತವಾಯಿತು.

ನಿಲ್ಲದ ವ್ಯಾಘ್ರಗಳ ಸಾವು; ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಮೃತದೇಹ ಪತ್ತೆ

ಬಿಳಿಗಿರಿರಂಗನ ಬೆಟ್ಟದಲ್ಲಿ ಅನುಮಾನಾಸ್ಪದವಾಗಿ ಹುಲಿ ಸಾವು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಳಿಯ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ವರ್ಷ ಒಂದು ಹುಲಿ ಮತ್ತು ನಾಲ್ಕು ಹುಲಿ ಮರಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದವು. ಇದೀಗ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ.

ಹಂಪಿಯಲ್ಲಿ ಜಾನಪದ ಕಲಾ ಸೊಬಗಿನೊಂದಿಗೆ ತಾಯಿ‌ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ

ಹಂಪಿ ಉತ್ಸವದಲ್ಲಿ ತಾಯಿ‌ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ

Hampi Utsav 2026: ಹಂಪಿ ಉತ್ಸದ ಕೊನೆಯ ದಿನ ಭಾನುವಾರ ನಡೆದ ಜಾನಪದ ವಾಹಿನಿ ಮೆರವಣಿಗೆಯಲ್ಲಿ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು, ನಾಡದೇವಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಘೋರ ಘಟನೆ; ಗರ್ಭಿಣಿ ಫೋಟೊಶೂಟ್​ ವೇಳೆ ನೀರಿನ ತೊಟ್ಟಿಗೆ ಬಿದ್ದು ಮೊದಲ ಮಗು ಸಾವು

ಗರ್ಭಿಣಿ ಫೋಟೊಶೂಟ್​ ವೇಳೆ ನೀರಿನ ತೊಟ್ಟಿಗೆ ಬಿದ್ದು ಮೊದಲ ಮಗು ಸಾವು

Maternity Photoshoot Tragedy: ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ಘಟನೆ ನಡೆದಿದೆ. ಮೆಟರ್ನಿಟಿ ಫೋಟೊಶೂಟ್​ ಮಾಡಿಸಿಕೊಳ್ಳುತ್ತಿದ್ದ ಸಂತಸದ ಸಮಯದಲ್ಲೇ ಮೊದಲ ಮಗುವನ್ನು ದಂಪತಿ ಕಳೆದುಕೊಂಡಿರುವುದು ದುರಂತವಾಗಿದೆ. ಮೂರು ವರ್ಷದ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಪ್ರಯಾಣಿಕರಿಗೆ ಶಾಕ್‌; ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜ್ ದರ ಹೆಚ್ಚಳ

ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜ್ ದರ ಹೆಚ್ಚಳ

ನಾಳೆಯಿಂದ (ಫೆ.16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕ್ರತ ದರ ಜಾರಿಗೆಯಾಗಲಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಏರಿಕೆ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.

Mahashivratri 2026: ಮಹಾಶಿವರಾತ್ರಿ ಜಾಗರಣೆಯು ಸಮಾಧಿ ಸ್ಥಿತಿ ತಲುಪಲು ಸಹಕಾರಿ: ಶ್ರೀ ಮಧುಸೂದನ್ ಸಾಯಿ

ಜಾಗರಣೆಯು ಸಮಾಧಿ ಸ್ಥಿತಿ ತಲುಪಲು ಸಹಕಾರಿ: ಮಧುಸೂದನ್ ಸಾಯಿ

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದ ಮಹಾಶಿವರಾತ್ರಿ ಪೂಜೆ ವೇಳೆ ಸದ್ಗುರು ಶ್ರೀ ಮಧುಸೂದನ್ ಸಾಯಿ ಮಾತನಾಡಿದ್ದಾರೆ. ಪೂಜೆ, ಅಭಿಷೇಕ ಹಾಗೂ ಜಪಗಳು ಕೇವಲ ಆಚರಣೆಗಳಲ್ಲ; ಅವು ಅಂತರಂಗ ಶುದ್ಧಿಗೆ ಇರುವ ಮಾರ್ಗ. ಆತ್ಮಸಾಧನೆಯಲ್ಲಿ ಮಾಡಿದ ಯಾವುದೇ ಪ್ರಯತ್ನವೂ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಗಂಡನ ಜತೆ ಇರುವುದು ಇಷ್ಟವಿರಲಿಲ್ಲ; ಪ್ರಿಯಕರನ ಜತೆ ಎಸ್ಕೇಪ್‌ ಆಗಿದ್ದ ಪ್ರಿಯಾಂಕ ಸಿಕ್ಕಿಬಿದ್ದಿದ್ದು ಹೇಗೆ?

ಪ್ರಿಯಕರನ ಜತೆ ಎಸ್ಕೇಪ್‌ ಆಗಿದ್ದ ಪ್ರಿಯಾಂಕ ಸಿಕ್ಕಿಬಿದ್ದಿದ್ದು ಹೇಗೆ?

Kunigal woman Missing Case: ನಾಪತ್ತೆಯಾಗಿದ್ದ ಪ್ರಿಯಾಂಕ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿ ಹೋಗಿದ್ದರಿಂದ ದರೋಡೆಕೋರರಿಂದ ಕೊಲೆಯಾಗಿರಬಹುದಾ ಅಥವಾ ಕಿಡ್ನ್ಯಾಪ್‌ ಆಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಶಾಕಿಂಗ್‌ ವಿಚಾರಗಳು ಬಯಲಾಗಿವೆ.

ಶಿವರಾತ್ರಿಯಂದೇ ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು

ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿದ ಕಿಡಿಗೇಡಿಗಳು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರಲ್ಲಿ ಶ್ರೀ ರಾಮೇಶ್ವರ, ನಂದಿ ವಿಗ್ರಹವನ್ನು ಭಗ್ನಗೊಳಿಸಲಾಗಿದೆ. ಭಾನುವಾರ ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಗ್ರಾಮಸ್ಥರು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

ಶಿವಾರಾಧನೆಯಿಂದ ಸಕಲ ಕಷ್ಟಗಳು ಪರಿಹಾರವಾಗುತ್ತವೆ: ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಶಿವಾರಾಧನೆಯಿಂದ ಕಷ್ಟಗಳಿಗೆ ಪರಿಹಾರ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಮಧುಗಿರಿಯ ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯ ವೇಳೆ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ್ದಾರೆ. ಶಿವನನ್ನು ಒಂದು ಬಿಲ್ವ ಪತ್ರೆಯಿಂದ ಪೂಜಿಸಿದರೆ ಸಾಕು ನೂರು ಜನ್ಮಗಳ ಪಾಪ ನಿವಾರಣೆ ಆಗುತ್ತದೆ. ಶಿವರಾತ್ರಿಯಂದು ಉಪವಾಸವಿದ್ದರೆ ಉತ್ತಮ ಆರೋಗ್ಯ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಕಲಬುರಗಿ ಕೋಟೆಯ ಶ್ರೀ ಸ್ವಯಂಭೂ ಸೋಮೇಶ್ವರ ಪೂಜೆಗೆ ಮುಂದಾದ ಹಿಂದೂ ಕಾರ್ಯಕರ್ತರ ಬಂಧನ

ಸ್ವಯಂಭೂ ಸೋಮೇಶ್ವರನಿಗೆ ಪೂಜೆ; ಹಿಂದೂ ಕಾರ್ಯಕರ್ತರ ಬಂಧನ

ಶಿವರಾತ್ರಿ ಹಿನ್ನೆಲೆಯಲ್ಲಿ ಕಲಬುರಗಿ ಕೋಟೆಯೊಳಗಿನ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಿಂದೂ ಕಾರ್ಯರ್ತರು ಮುಂದಾಗಿದ್ದರು. ಆದರೆ, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು, ಕೋಟೆಯೊಳಗೆ ಯಾರನ್ನೂ ಬಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ನಿಯಮಿತ ತಪಾಸಣೆಗಾಗಿ ಬೆಂಗಳೂರಿನಲ್ಲಿ ಮಹಿಳಾ ಬೈಕರ್‌ನನ್ನು ನಿಲ್ಲಿಸಿದ ಪೊಲೀಸ್; ಮುಂದೇನಾಯ್ತು, ಇಲ್ಲಿದೆ ವಿಡಿಯೊ

ಮಹಿಳಾ ಬೈಕರ್‌ನನ್ನು ನಿಲ್ಲಿಸಿದ ಪೊಲೀಸ್; ಮುಂದೇನಾಯ್ತು

Police Stop Woman Biker: ಇನ್‌ಸ್ಟಾಗ್ರಾಮ್‌ನಲ್ಲಿ ರಿತು ಚತುರ್ವೇದಿ ಎಂಬುವವರು ಹಂಚಿಕೊಂಡಿರುವ ವಿಡಿಯೊದಲ್ಲಿ ಮಹಿಳಾ ಬೈಕರ್ ಒಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾಗ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ನಿಲ್ಲಿಸುವಂತೆ ಹೇಳಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರಿ ವೈರಲ್ ಆಗಿದೆ.

Organ donation: ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲ ಕೋಟ (30) ನೂರಾರು ಕನಸು ಕಟ್ಟಿಕೊಂಡಿರುವ ಯುವಕ, ಸಾಧಿಸಬೇಕು ಎನ್ನುವ ಹುಮ್ಮಸ್ಸುನಲ್ಲಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು ಫೆ.9 ಆತನ ಕೊನೆಯ ದಿನವಾ ಗಿತ್ತು ಫೆ.9ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿಎಲ್‌ಡಿಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು.

ಬಿಕ್ಲು ಶಿವ ಕೊಲೆ ಕೇಸ್‌; ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ

Byrathi Basavaraj: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ತಮಗೆ ಹೃದಯ ಸಂಬಂಧಿ ಸಮಸ್ಯೆ ಇದೆ ಎಂದು ತಿಳಿಸಿದ್ದು, ಈ ಹಿನ್ನೆಲೆ 2 ದಿನಗಳಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಹಾಗೂ ಪರೀಕ್ಷೆ ನಡೆಸಲಾಗಿತ್ತು. ಇದೀಗ ನ್ಯಾಯಾಲಯ ಬೈರತಿ ಬಸವರಾಜ್‌ ಅವರನ್ನು 7 ದಿನಗಳ CID ಕಸ್ಟಡಿಗೆ ನೀಡಲು ಆದೇಶಿಸಿದೆ.

ಹೆಚ್ಚು ವರ್ಷ ಬದುಕೋಣ, ಉತ್ತಮವಾಗಿ ಯೋಜಿಸೋಣ: ಹಿರಿಯರ ಆರೈಕೆಯ ಅಗತ್ಯತೆಯ ಬಗ್ಗೆ ಜಾಗೃತಿ, ಕೈಜೋಡಿಸಿದ ಎಸ್‌ಯುಡಿ ಲೈಫ್-ಅಂತಾರಾ

ಹೆಚ್ಚು ವರ್ಷ ಬದುಕೋಣ, ಉತ್ತಮವಾಗಿ ಯೋಜಿಸೋಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 2021ರ ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಆಫ್ ಇಂಡಿಯಾ (LASI) ವರದಿ ಪ್ರಕಾರ, ಕೇವಲ 28% ಹಿರಿಯರಿಗೆ ಸರ್ಕಾರದ ಸವಲತ್ತು ಗಳು, ಯೋಜನೆಗಳು ಅಥವಾ ಲಾಭಗಳ ಬಗ್ಗೆ ಅರಿವು ಇದೆ. ಕೇವಲ 18% ಜನರು ಆರೋಗ್ಯ ವಿಮಾ ವ್ಯಾಪ್ತಿಯಲ್ಲಿ ಇದ್ದರೆ, 78% ಜನರು ಪಿಂಚಣಿ ರಕ್ಷಣೆಯಿಲ್ಲದೆ ಬದುಕುತ್ತಿದ್ದಾರೆ.

IIT ಮದ್ರಾಸ್‌ನಿಂದ ಕ್ಯಾಲಿಫೋರ್ನಿಯಾವರೆಗೆ; ಮೃತ ಸಾಕೇತ್‌ ಶ್ರೀನಿವಾಸಯ್ಯ ಶೈಕ್ಷಣಿಕ ಸಾಧನೆ ಹೇಗಿತ್ತು ಗೊತ್ತಾ?

ಮೃತ ಸಾಕೇತ್‌ ಶ್ರೀನಿವಾಸಯ್ಯ ಶೈಕ್ಷಣಿಕ ಸಾಧನೆ ಹೇಗಿತ್ತು ಗೊತ್ತಾ?

Saketh Sreenivasaiah: 22 ವರ್ಷದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿ ಆರು ದಿನಗಳ ನಂತರ ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಸಾಕೇತ್ ಫೆಬ್ರವರಿ 9 ರಂದು ನಾಪತ್ತೆಯಾಗಿದ್ದರು.

ನೆಲಮಂಗಲ ಬಳಿ ಭೀಕರ ಅಪಘಾತ;  KSRTC ಬಸ್​​ಗೆ ಗುದ್ದಿದ ಕಾರು,  ಐವರು ಸ್ಥಳದಲ್ಲಿಯೇ ಸಾವು

KSRTC ಬಸ್​​ಗೆ ಗುದ್ದಿದ ಕಾರು, ಐವರು ಸ್ಥಳದಲ್ಲಿಯೇ ಸಾವು

ಮಹಾ ಶಿವರಾತ್ರಿಯಂದೇ ಘೋರ ಘಟನೆ ನಡೆದಿದ್ದು, ನೆಲಮಂಗಲ ಜಿಂದಾಲ್ ಬಳಿ KSRTC ಬಸ್​​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದೊಡ್ಡಬಳ್ಳಾಪುರದ ಹರ್ಷಿತ್, ನಿಖಿತ್ ಸೇರಿ ಇತರರು ಮೃತ ದುರ್ದೈವಿಗಳಾಗಿದ್ದಾರೆ.

Chikkaballapur News: ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ: ಜಿಲ್ಲಾಧಿಕಾರಿ ಜಿ ಪ್ರಭು

ಜಿಲ್ಲಾ ಉಸ್ತುವಾರಿ ಸಚಿವರಿಂದ ಸೋಮವಾರ ರಾಗಿ ಖರೀದಿಗೆ ಚಾಲನೆ

2025-26ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ 7392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಛೆ ಪಟ್ಟಿರುತ್ತಾರೆ. ಅದರಂತೆ 6 ತಾಲೂಕಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ.

ಬ್ರಾಹ್ಮಣರ ಕುರಿತು ಅವಹೇಳನಕಾರಿ ಹೇಳಿಕೆ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು ದಾಖಲು

ಬ್ರಾಹ್ಮಣರ ಅವಹೇಳನ; ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು

ಹೊನ್ನಾವರ ತಾಲೂಕು ಮೊಳ್ಕೊಡದ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವದ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರು, ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಕೆಟ್ಟ ಉದ್ದೇಶದಿಂದ ಹಲವು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಸಾಗರ ಘಟಕ ದೂರು ಸಲ್ಲಿಸಿದೆ.

ಭೀಮಣ್ಣ ಖಂಡ್ರೆ ಕನಸು ನನಸಾಗಿಸಲು ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಮಂಜೂರು: ಡಿ.ಕೆ. ಶಿವಕುಮಾರ್ ಭರವಸೆ

ಹಾಸ್ಟೆಲ್ ನಿರ್ಮಾಣ ಮಾಡಲು ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿಕೆಶಿ

DK Shivakumar: ಇತ್ತೀಚೆಗೆ ಈಶ್ವರ್ ಖಂಡ್ರೆ ಅವರು ನನ್ನನ್ನು ಭೇಟಿ ಮಾಡಿ, ವೀರಶೈವ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಬಡ ಮಕ್ಕಳು, ಹೊರಗಡೆಯಿಂದ ಬಂದ ಮಕ್ಕಳಿಗೆ ಒಂದು ಹಾಸ್ಟೆಲ್ ವ್ಯವಸ್ಥೆ ಆಗಬೇಕು ಎಂಬುದು ನಮ್ಮ ತಂದೆಯವರ ಕನಸಾಗಿತ್ತು. ಅದು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಜಾಗ ಒದಗಿಸಿಕೊಡಬೇಕು ಎಂದು ತಿಳಿಸಿದರು. ಈ ಕೆಲಸವನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿಕೊಡುತ್ತೇವೆ ಎಂದು ಈ ಭವ್ಯ ಸಭೆಯಲ್ಲಿ ತಿಳಿಸಲು ಬಯಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಫೆ.14 ರಿಂದ ಮಾರ್ಚ್ 1ರವರೆಗೆ ಕಮ್ಮನಹಳ್ಳಿಯಲ್ಲಿ `ಜೋಯಾಲುಕ್ಕಾಸ್ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

ಫೆ.14 ರಿಂದ `ಜೋಯಾಲುಕ್ಕಾಸ್ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ'

ದೈನಂದಿನ ಧಾರಣೆಗೆ ಸೊಗಸಾದ ವಧುವಿನ ಅಗತ್ಯಗಳನ್ನು ಪೂರೈಸುವ ಸಮಕಾಲೀನ ವಿನ್ಯಾಸ ಗಳಿಗೆ ಸೊಗಸಾದ ವಿಸ್ತೃತ ಶ್ರೇಣಿಯನ್ನು ಹೊಂದಿರುವ ಈ ಪ್ರದರ್ಶನವು ಕಾಲಾತೀತ ಕರಕುಶಲತೆ ಮತ್ತು ಆಧುನಿಕ ಸಂವೇದನೆಗಳನ್ನು ಒಟ್ಟುಗೂಡಿಸುತ್ತದೆ. ಪ್ರತಿಯೊಂದು ಸೃಷ್ಟಿ ಯು ಅಪೂರ್ವ ವಿವರ ಮತ್ತು ವಿನ್ಯಾಸದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ. ಇದು ಆಭರಣ ಪ್ರದರ್ಶನದ ಸಮಯದಲ್ಲಿ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

Loading...