ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೊ ಸಂಚಾರ ಸ್ಥಗಿತ

ಯಶವಂತಪುರ-ನಾಗಸಂದ್ರ ನಡುವೆ ಮೆಟ್ರೊ ಸಂಚಾರ ಸ್ಥಗಿತ

ಮೆಟ್ರೊ ಸಂಚಾರ ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತುಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ರೇಷ್ಮೆ ಸಂಸ್ಥೆ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೊ ರೈಲುಗಳು ಶಾರ್ಟ್-ಲೂಪ್ ಆಗಿ ಸಂಚರಿಸುತ್ತಿವೆ.

Chikkaballapur News: ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಗುರುಪೂಜೆ-ಸಂಗೀತೋತ್ಸವದ ಪೂರ್ವಭಾವಿ ಸಭೆ

ಗುರುಹುಣ್ಣಿಮೆಯ ಅಂಗವಾಗಿ ಶ್ರೀಕ್ಷೇತ್ರ ಕೈವಾರದಲ್ಲಿ ಹಲವಾರು ವರ್ಷಗಳಿಂದಲೂ ವೈಶಿಷ್ಟ್ಯತೆ ಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೈವಾರದ ಶ್ರೀಯೋಗಿನಾರೇಯಣ ತಾತಯ್ಯ ನವರು ತತ್ವಬೋಧನೆಗಳಿಂದ ಕೂಡಿರುವ ಹಲವಾರು ಕೀರ್ತನೆ, ಶತಕಗಳನ್ನು ಬರೆದು ಜನಮಾನಸ ದಲ್ಲಿ ನೆಲೆ ನಿಂತಿದ್ದಾರೆ. ಅವರು ರಚಿಸಿರುವ ಕೀರ್ತನೆಗಳನ್ನು ಭಜನೆಯ ರೂಪದಲ್ಲಿ ಹಾಡುತ್ತಾ ಜನಸಮೂಹಕ್ಕೆ ತಲುಪಿಸುವ ಕೆಲಸವನ್ನು ಸಹಸ್ರಾರು ಭಜನಾ ತಂಡಗಳು ಸಕ್ರಿಯವಾಗಿ ಮಾಡುತ್ತಿದ್ದಾರೆ.

Gauribidanur News: ಗೌರಿಬಿದನೂರು ರಾಜ್ಯ ಮಟ್ಟದಲ್ಲಿ ಮುಂಚೂಣಿ; 2.14 ಲಕ್ಷ ಮತದಾರರಲ್ಲಿ 1.65 ಲಕ್ಷ ಮಾಹಿತಿ ಸಂಗ್ರಹ

ಆ.8ರವರೆಗೆ ಮತದಾರರ ವಿಶೇಷ ಪರಿಷ್ಕರಣೆ ಅವಧಿ ವಿಸ್ತರಣೆ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು-214210 ಮತದಾರರು ಇದ್ದು, ಇದುವರೆಗೆ 165007 ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಪರಿಷ್ಕರಣೆ ಕಾರ್ಯ ಯಶಸ್ವಿ ಯಾಗಿ ನಡೆಯುತ್ತಿದ್ದು, ಈ ಪ್ರಗತಿಯಲ್ಲಿ ಗೌರಿಬಿದನೂರು ತಾಲೂಕು ರಾಜ್ಯ ಮಟ್ಟದಲ್ಲೇ ಮುಂಚೂಣಿಯಲ್ಲಿದೆ

Chinthamani News: ಕೀರ್ತನೆ ಹಾಡುವಾಗ ಶಾಸ್ತ್ರೀಯತೆಗಿಂತಲೂ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು : ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಮನವಿ

ಕೀರ್ತನೆ ಹಾಡುವಾಗ ಭಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು

ಹಾಡುಗಾರರು ಪ್ರಾತ:ಕಾಲದಲ್ಲಿ ಒಂದು ಕಡೆ ಕುಳಿತು ಒಂದು ಕೀರ್ತನೆಯನ್ನು ಹಾಡುತ್ತಾ ಮಾನಸಿಕ ವಾಗಿ ಪರಮಾತ್ಮನಿಗೆ ಅರ್ಪಿಸಿದರೆ ಅದು ಧ್ಯಾನವಾಗುತ್ತದೆ. ಅದರಿಂದ ಹೆಚ್ಚಿನ ಫಲ ಸಿಗುತ್ತದೆ. ಭಕ್ತಿಯ ಗಾಯನದಿಂದ ಮನಸ್ಸು ಸ್ವಚ್ಛವಾಗಬೇಕು. ಬಹಿರಂಗಕ್ಕಿಂತಲೂ ಮಾನಸಿಕವಾದ ಅಂತರAಗದ ಸ್ವಚ್ಛತೆ ಬಹಳ ಶ್ರೇಷ್ಠವಾದುದು.

ಅಕ್ರಮ ನುಸುಳುಕೋರರ ಪತ್ತೆಗೆ 'SIR' ಅಸ್ತ್ರ...ಕಾಂಗ್ರೆಸ್ ವಿರೋಧಕ್ಕೆ ಸೀಕಲ್ ಆನಂದ್ ಗೌಡ ಕಿಡಿ...!

ಮತದಾರರ ಪಟ್ಟಿ ಪರಿಷ್ಕರಣೆ ವೇಗ ಹೆಚ್ಚಿಸಲು ಆನಂದ್ ಗೌಡ ಆಗ್ರಹ

​"ಕ್ಷೇತ್ರದ ದಂಡಾಧಿಕಾರಿಗಳು ಹಾಗೂ ಇ.ಆರ್.ಓ.ಅವರೊಂದಿಗೆ ನಾವು ನಿರಂತರ ಸಂಪರ್ಕ ದಲ್ಲಿದ್ದು, ಪ್ರತಿದಿನದ ಅಪ್‌ಡೇಟ್‌ಗಳನ್ನು ಪಡೆಯುತ್ತಿದ್ದೇವೆ.ಗ್ರಾಮೀಣ ಭಾಗದಲ್ಲಿ ಈಗಾಗಲೇ ಸುಮಾರು ಶೇಕಡಾ 50 ರಷ್ಟು ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ,ಭರ್ತಿ ಮಾಡಿ ಕಲೆಕ್ಟ್ ಮಾಡಲಾಗಿದೆ. ಆದರೆ ಇನ್ನುಳಿದ ಶೇಕಡಾ 50 ರಷ್ಟು ಕಾರ್ಯ ಬಾಕಿ ಉಳಿದಿದೆ.ಇನ್ನು ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕೇವಲ ಶೇಕಡಾ 40 ರಷ್ಟು ಮಾತ್ರ ಪ್ರಗತಿಯಾಗಿದ್ದು, ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ

ನಾಯಿಗಳ ದಾಳಿಗೆ ಸಿಲುಕಿ ತಪತೇಶ್ವರ ಕಾಲೋನಿಯ ಮನೆಯ ಶೌಚಾಲಯಕ್ಕೆ ಸೇರಿದ ಜಿಂಕೆ ರಕ್ಷಣೆ

ಕಾಲೋನಿಯ ಮನೆಯ ಶೌಚಾಲಯಕ್ಕೆ ಸೇರಿದ ಜಿಂಕೆ ರಕ್ಷಣೆ

ತಪತೇಶ್ವರ ಕಾಲೋನಿಗೆ ಆಕಸ್ಮಿಕವಾಗಿ ಕಾಡು ಜಿಂಕೆಯೊಂದು ಆಗಮಿಸಿತ್ತು. ಇದನ್ನು ಕಂಡ ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ಕಚ್ಚಲು ಪ್ರಾರಂಭಿಸಿದವು. ನಾಯಿಗಳ ದಾಳಿಯಿಂದ ಭಯಭೀತಗೊಂಡ ಜಿಂಕೆ, ಪ್ರಾಣ ರಕ್ಷಿಸಿಕೊಳ್ಳಲು ಓಡುವಾಗ ಸ್ಥಳೀಯ ನಿವಾಸಿ ವೆಂಕಟರಮಣ ಎಂಬುವವರ ಮನೆಯ ಶೌಚಾಲಯದ ಒಳಗೆ ನುಗ್ಗಿತ್ತು

Chikkaballapur News: ಸಾಲ ನೀಡುವಾಗ ಬೆಳೆ ವಿಮೆಗೆ ರೈತರನ್ನು ಕಡ್ಡಾಯವಾಗಿ ಪ್ರೇರೇಪಿಸಿ: ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಸಾಲ ನೀಡುವಾಗ ಬೆಳೆ ವಿಮೆಗೆ ರೈತರನ್ನು ಕಡ್ಡಾಯವಾಗಿ ಪ್ರೇರೇಪಿಸಿ

ಜಿಲ್ಲಾಡಳಿತ ಭವನದಲ್ಲಿ ನಡೆದ ಬೆಳೆ ವಿಮೆ ನೋಂದಣಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2026-27ರ ಮುಂಗಾರು ಹಂಗಾಮಿಗೆ 80 ಸಾವಿರ ರೈತರನ್ನು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸುವ ಗುರಿ ಇದ್ದರೂ, ಇದುವರೆಗೆ ಕೇವಲ 22406 ಪ್ರಸ್ತಾವನೆಗಳು ಮಾತ್ರ ದಾಖಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Guarantee Scheme: ಗೃಹಲಕ್ಷ್ಮಿ ಸಮಸ್ಯೆ, ಬಸ್ ಕೊರತೆ ಸೇರಿ ವಿವಿಧ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಮುನಿಯಪ್ಪ ಸೂಚನೆ

ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಹಲವಾರು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗ ದಿರುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಸದಸ್ಯರು ಅಧಿಕಾರಿಗಳ ಗಮನ ಸೆಳೆದರು. ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

Chikkaballapur News: ರಾಮಪ್ಪ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ ಆರೋಪ: ತಡೆಗೆ ಗ್ರಾಮಸ್ಥರ ಒತ್ತಾಯ

ರಾಮಪ್ಪ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ ಆರೋಪ

ಅಕ್ರಮ ಮಣ್ಣು ತೆಗೆಯುವ ಪರಿಣಾಮ ಕೆರೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರು ಅಥವಾ ಜಾನುವಾರುಗಳು ಅಜಾಗರೂಕತೆಯಿಂದ ಬಿದ್ದರೆ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇನ್ನೂ ಮಣ್ಣು ತುಂಬಿದ ಟಿಪ್ಪರ್ ಲಾರಿಗಳು ಗ್ರಾಮ ರಸ್ತೆಗಳ ಮೂಲಕ ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ಧೂಳು ಹೆಚ್ಚಾಗಿ ಏಳಿ, ರಸ್ತೆ ಬದಿಯ ಕೃಷಿ ಬೆಳೆಗಳಿಗೆ ಹಾನಿಯಾಗುತ್ತಿದೆ.

Karnataka weather: ಹವಾಮಾನ ವರದಿ: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಹವಾಮಾನ ವರದಿ: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

Weather Report: ರಾಜ್ಯದಲ್ಲಿ ಮುಂಗಾರಿನಲ್ಲಿ ಮಳೆಯ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆಯ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರದ ಸ್ಥಿತಿ ನಿರ್ಮಾಣವಾಗಿದೆ. I ಈ ನಡುವೆ ವಿವಿಧ ಜಿಲ್ಲೆಗಳಿಗೆ ಇಂದು ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Shidlaghatta News: ಶಿಡ್ಲಘಟ್ಟದಲ್ಲಿ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾ; ವೆಂಕಟೇಶ್ವರ ಚಿತ್ರಮಂದಿರದಲ್ಲಿ ಡಾ. ಸುಭಾಷ್ ಪತ್ರೀಜಿ ಜೀವನಾಧಾರಿತ ಕಿರುಚಿತ್ರ ಪ್ರದರ್ಶನ

ಧ್ಯಾನ–ಸಸ್ಯಾಹಾರದಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ: ಆರತಿ

ನಗರದಲ್ಲಿ ಪಿರಮಿಡ್ ಧ್ಯಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೃಹತ್ ಸಸ್ಯಾಹಾರ ಜನಜಾಗೃತಿ ಜಾಥಾದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿದಿನ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಧ್ಯಾನವು ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಪೂರಕವಾಗಿದ್ದು, ಜೀವನವನ್ನು ಶಾಂತಿ, ಸಂತೃಪ್ತಿ ಮತ್ತು ಸಮತೋಲನದತ್ತ ಕೊಂಡೊಯ್ಯುತ್ತದೆ

Chikkaballapur News: ಆಕ್ಸಿಜನ್ ಕೊರತೆಯಿಂದ ಬಾಲಕಿ ಸಾವು ಆರೋಪ; ಆಸ್ಪತ್ರೆ ಎದುರು ಗ್ರಾಮಸ್ಥರ ಪ್ರತಿಭಟನೆ

ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವಿರುದ್ಧ ಆಕ್ರೋಶ

ಪೆರೇಸಂದ್ರ ಗ್ರಾಮದ ನವೀನ್–ಚಂದ್ರಿಕಾ ದಂಪತಿಯ ಪುತ್ರಿ ಶಶಿಕಲಾ ಮನೆ ಮುಂದೆ ತಿಂಡಿ ತಿನ್ನುತ್ತಿದ್ದ ವೇಳೆ ಕೋತಿ ದಾಳಿ ನಡೆಸಿ ಕೈಯಲ್ಲಿದ್ದ ತಿಂಡಿಯನ್ನು ಕಸಿದುಕೊಂಡಿದೆ. ಇದರಿಂದ ಭಯಗೊಂಡ ಬಾಲಕಿ ಓಡಿ ಹೋಗಿ ಮನೆಯಲ್ಲಿ ನೀರು ಕುಡಿದ ಬಳಿಕ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿ ದ್ದಾರೆ.

ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ವಿಜ್ಞಾನ ಪ್ರದರ್ಶನ, ವೃಕ್ಷ ವಂದನೆ ಹಾಗೂ 2 ಸಾವಿರಕ್ಕೂ ಅಧಿಕ ಸೀಡ್ ಬಾಲ್ ತಯಾರಿಕೆ

ಅಗಲಗುರ್ಕಿ ಬಿಜಿಎಸ್ ಶಾಲೆಯಲ್ಲಿ ವಿಜ್ಞಾನ–ಪರಿಸರ ಸಂಭ್ರಮ

ಶಾಲೆಯ ವಿದ್ಯಾರ್ಥಿಗಳು ನೇರೆಳೆ, ಬೇವು, ಹೊಂಗೆ, ಹಿಪ್ಪೆ, ಕಾಡು ಹುಣಸೆ, ಸಪೋಟ, ಹೀಚಲ, ಕಾಡು ಬಾದಾಮಿ ಸೇರಿದಂತೆ ವಿವಿಧ ಜಾತಿಯ ಮರಗಳ ಬೀಜಗಳನ್ನು ಮನೆಗಳಿಂದ ತಂದು ಮಣ್ಣಿನ ಉಂಡೆಗಳೊಂದಿಗೆ ಸಂಯೋಜಿಸಿ ೨ ಸಾವಿರಕ್ಕೂ ಹೆಚ್ಚು ಸೀಡ್ ಬಾಲ್‌ಗಳನ್ನು ತಯಾರಿಸಿ ದರು. ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ ಸಂತೃಪ್ತಿಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು

Chikkaballapur News: ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ: ಕದಸಂಸ ರಾಜ್ಯ ವಿಭಾಗೀಯ ಸಂಚಾಲಕರಾಗಿ ಜಿ.ಎನ್. ಸುರೇಶ್ ನೇಮಕ

ಕದಸಂಸ ರಾಜ್ಯ ವಿಭಾಗೀಯ ಸಂಚಾಲಕರಾಗಿ ಜಿ.ಎನ್. ಸುರೇಶ್ ನೇಮಕ

ಪ್ರೊ. ಬಿ. ಕೃಷ್ಣಪ್ಪ ಅವರ ಹೋರಾಟದ ಆದರ್ಶಗಳನ್ನು ಮುಂದುವರಿಸುವ ಉದ್ದೇಶದಿಂದ ರಾಜ್ಯ ಸಮಿತಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ಯನ್ನು ಜಿ.ಎನ್. ಸುರೇಶ್ ಅವರಿಗೆ ವಹಿಸಿದೆ ಎಂದು ಹೇಳಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಚಿಂತನೆಗಳ ಆಧಾರದಲ್ಲಿ ಬಡವರು ಹಾಗೂ ಅವಕಾಶ ವಂಚಿತ ಸಮುದಾಯ ಗಳ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಹೋರಾಟ ನಡೆಸಲಿದ್ದಾರೆ

ವಿದ್ಯುತ್ ಸ್ಥಗಿತ ಖಂಡಿಸಿ ಬೆಸ್ಕಾಂ ಕಚೇರಿ ಎದುರು ರೈತರ ಧರಣಿ: ಕೃಷಿ ಪಂಪ್‌ಸೆಟ್‌ಗಳಿಗೆ ಹಿಂದಿನಂತೆ ಏಳು ಗಂಟೆ ವಿದ್ಯುತ್ ಪೂರೈಕೆಗೆ ಒತ್ತಾಯ

ವಿದ್ಯುತ್ ಸ್ಥಗಿತ ಖಂಡಿಸಿ ಬೆಸ್ಕಾಂ ಕಚೇರಿ ಎದುರು ರೈತರ ಧರಣಿ

ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ವಿದ್ಯುತ್ ಕಡಿತವೂ ತೀವ್ರ ಹೊರೆ ತಂದಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ನೀಡುತ್ತಿದ್ದ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯ ಕರ್ತರು ಸೋಮವಾರ ನಗರದ ಬೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು

Chikkaballapur News: ಗಾನಕೋಗಿಲೆ ಎಸ್.ಜಾನಕಿ ಹಾಗೂ ಚನ್ನಮ್ಮ ದೇವೇಗೌಡರಿಗೆ ಶಾಂತ ಶಿಕ್ಷಣ ಸಂಸ್ಥೆಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಎಸ್.ಜಾನಕಿ, ಚನ್ನಮ್ಮ ದೇವೇಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಶ್ರದ್ಧಾಂಜಲಿ ಸಭೆಯಲ್ಲಿ ದಿವಂಗತರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಂತ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಕೋಡಿರಂಗಪ್ಪ, ಎಸ್. ಜಾನಕಿ ತಮ್ಮ ಅಮೋಘ ಗಾಯನದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದರೆ, ಚನ್ನಮ್ಮ ದೇವೇಗೌಡ ಅವರು ಸರಳತೆ, ಅನ್ನದಾನ, ಅತಿಥಿ ಸತ್ಕಾರ ಮತ್ತು ಸೇವಾಭಾವದಿಂದ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಬ್ಯಾಂಕ್‌ನಲ್ಲೇ ಸಿಬ್ಬಂದಿ ಲಾಕ್‌!

ಹಾಸನ ಜಿಲ್ಲೆಯ ಅರಕಲಗೂಡುದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರು ಸಿಬ್ಬಂದಿಯನ್ನು ತಡರಾತ್ರಿವರೆಗೆ ಕಚೇರಿಯಲ್ಲೇ ಉಳಿಯುವಂತೆ ಒತ್ತಾಯಿಸಿ, ಮುಖ್ಯ ಗೇಟ್‌ಗೆ ಬೀಗ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮ್ಯಾನೇಜರ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ರಾಮಸ್ಥರ ಕನಸಿಗೆ ಜೀವ ತುಂಬಿದ ಶಾಸಕ ಪ್ರದೀಪ್ ಈಶ್ವರ್ : ದೇವಿಶೆಟ್ಟಿಹಳ್ಳಿಯಲ್ಲಿ 25 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಗ್ರಾಮಸ್ಥರ ಕನಸಿಗೆ ಜೀವ ತುಂಬಿದ ಶಾಸಕ ಪ್ರದೀಪ್ ಈಶ್ವರ್

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಯಲ್ಲವಳ್ಳಿ ರಮೇಶ್, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಸಕ ಪ್ರದೀಪ್ ಈಶ್ವರ್ ಮೊದಲ ಆದ್ಯತೆ ನೀಡಿದ್ದು, ಜನರು ಸಮಸ್ಯೆ ಹೇಳಿಕೊಂಡ ತಕ್ಷಣ ಪರಿಹಾರದ ದಾರಿಯನ್ನು ಹುಡುಕಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು

ವೈಜ್ಞಾನಿಕ ಚಿಂತನೆ ಬೆಳೆಸಲು ಕೆಜೆವಿಎಸ್ ನಿರಂತರ ಪ್ರಯತ್ನ: ಈ.ಬಸವರಾಜು

ವಿಜ್ಞಾನ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಸ್ವಾತಂತ್ರ‍್ಯ ಚಳವಳಿ ಕುರಿತ ರಾಜ್ಯಮಟ್ಟದ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲಾಗುತ್ತಿದೆ. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ

ಬಿಜೆಪಿ ಹೆಮ್ಮರವಾಗಿ ಬೆಳೆಯಲು ರಾಮಚಂದ್ರಗೌಡರ ಕೊಡುಗೆ ಅನನ್ಯ: ಬಿ.ಎಸ್.ಯಡಿಯೂರಪ್ಪ

ಬಿಜೆಪಿ ಬೆಳೆಯಲು ರಾಮಚಂದ್ರಗೌಡರ ಕೊಡುಗೆ ಅನನ್ಯ: ಬಿಎಸ್‌ವೈ

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ರಾಮಚಂದ್ರಗೌಡ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಲಾಟರಿ ನಿಷೇಧ ಆಗಲು ಹೋರಾಟ ಮಾಡಿ ಯಶಸ್ವಿಯಾದವರಲ್ಲಿ ಗೌಡರು ಪ್ರಮುಖರು. ಇಡೀ ಪಕ್ಷ ಅವರ ಕುಟುಂಬದ ದುಃಖದಲ್ಲಿ ಭಾಗಿಯಾಗಿದೆ ಎಂದು ತಿಳಿಸಿದ್ದಾರೆ.

Vijayanagara News: ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ

ಹೊಸಪೇಟೆ ನಗರದ ರಾಣಿಪೇಟೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಜಯಶ್ರೀ ಚೈಲ್ಡ್ ಕೇರ್ ಮಕ್ಕಳ ಹಾಗೂ ನವಜಾತ ಶಿಶುಗಳ ಆರೈಕೆ ಆಸ್ಪತ್ರೆ ಉದ್ಘಾಟನೆಯಾಗಿದೆ. ಆಸ್ಪತ್ರೆಯನ್ನು ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಬಲ್ಡೋಟಾ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದೇರ್ಶಕ ನರೇಂದ್ರ ಬಲ್ಡೋಟಾ ಉದ್ಘಾಟಿಸಿದರು.

Hospet News: ವಿಜಯಶ್ರೀ ಚೈಲ್ಡ್ ಕೇರ್' ಆಸ್ಪತ್ರೆ ಉದ್ಘಾಟನೆ

ವಿಜಯಶ್ರೀ ಚೈಲ್ಡ್ ಕೇರ್' ಆಸ್ಪತ್ರೆ ಉದ್ಘಾಟನೆ

ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಅನುಭವಿ ಮಕ್ಕಳ ತಜ್ಞರು ಹಾಗೂ ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ಮಕ್ಕಳಿಗೆ ಸುರಕ್ಷಿತ, ಗುಣಮಟ್ಟದ ಮತ್ತು ಕರುಣಾಮಯ ಆರೋಗ್ಯ ಸೇವೆಗಳನ್ನು ನೀಡಲು ಬದ್ಧವಾಗಿದೆ ಎಂದು ಡಾ. ಹರ್ಷಿತಾ ಜೈನ್ ತಿಳಿಸಿದರು.

ಬೆಂಗಳೂರಿನಲ್ಲಿ ಗರ್ಲ್‌ ಫ್ರೆಂಡ್‌ ಮಾತನಾಡ್ತಿಲ್ಲ ಅಂತ 41 ವರ್ಷದ ವ್ಯಕ್ತಿ ಆತ್ಮಹತ್ಯೆ!

ಗರ್ಲ್‌ ಫ್ರೆಂಡ್‌ ಮಾತನಾಡ್ತಿಲ್ಲ ಅಂತ 41 ವರ್ಷದ ವ್ಯಕ್ತಿ ಆತ್ಮಹತ್ಯೆ

Bengaluru News: ಬೆಂಗಳೂರು ನಗರದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಘಟನೆ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ದೇವಸ್ಥಾನದ ಎದುರಿನ ಮರವೊಂದಕ್ಕೆ ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ವೈಯಾಲಿಕಾವಲ್‌ ಆರಕ್ಷಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Gudibande News: ಮಾಚಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿ

ಮಾಚಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಯಶಸ್ವಿ

ಚುನಾವಣೆಯ ಅಂಗವಾಗಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಚುನಾ ವಣಾ ಪ್ರಚಾರ, ರಹಸ್ಯ ಮತದಾನ, ಮತ ಎಣಿಕೆ, ಫಲಿತಾಂಶ ಘೋಷಣೆ, ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಪ್ರಮಾಣವಚನ ಸ್ವೀಕಾರ ಸೇರಿದಂತೆ ಎಲ್ಲ ಹಂತಗಳನ್ನು ಕ್ರಮ ಬದ್ಧವಾಗಿ ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಅನುಭವಿಸಿದರು

Loading...