ರಾಕೇಶ್ ಅಂತಿಮ ದರ್ಶನಕ್ಕೆ ಹೋಗದ ಚಿತ್ರತಂಡದ ವಿರುದ್ಧ ಹಿತೇಶ್ ಗರಂ
ರಾಕೇಶ್ ಪೂಜಾರಿ ಅವರ ಅಂತಿಮ ಕಾರ್ಯ ಅವರ ಹುಟ್ಟೂರು ಉಡುಪಿಯಲ್ಲಿ ನಡೆದಿದೆ. ಅವರ ಅಂತಿಮ ದರ್ಶನ ಪಡೆಯಲು ಹಲವು ಸೆಲೆಬ್ರಿಟಿಗಳು, ಸಹಕಲಾವಿದರು ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಆಗಮಿಸಿದ್ದರು. ರಾಕೇಶ್ ಪೂಜಾರಿ ನಿಧನದ ಬಳಿಕ ಚಿತ್ರತಂಡವೊಂದು ತೋರಿದ ವರ್ತನೆ ಬಗ್ಗೆ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪ್ಯಾಕು ಪ್ಯಾಕು ಹಿತೇಶ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.