ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ರಾಜ್ಯದಲ್ಲಿ 13,675 ಅಕ್ರಮ ವಲಸಿಗರು

ರಾಜ್ಯದಲ್ಲಿ 13,675 ಅಕ್ರಮ ವಲಸಿಗರು

ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಅಕ್ರಮ ವಲಸಿಗರ ಪಟ್ಟಿಯನ್ನು ಗೃಹ ಇಲಾಖೆ ಅಧಿಕೃತವಾಗಿ ಸಿದ್ಧಪಡಿಸಿದೆ. ಗೃಹ ಇಲಾಖೆಯ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 13675 ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಅತಿ ಹೆಚ್ಚು ಅಂದರೆ ಬರೋಬ್ಬರಿ 10650 ಮಂದಿ ಅಕ್ರಮವಾಗಿ ನೆಲೆಸಿದ್ದು ಅಂಕಿ-ಅಂಶಗಳಿಂದ ತಿಳಿದುಬಂದಿದೆ

ಕರ್ನಾಟಕದಲ್ಲಿ  ಮತದಾರರ ಪಟ್ಟಿ ಪರಿಷ್ಕರಣೆ ಶುರು; ನಾಳೆಯಿಂದ ಮನೆಮನೆಗೆ ಎಸ್‌ಐಆರ್

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು

ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿಯನ್ನು ನೀಡಲಿದ್ದಾರೆ.

ಸಿಸಿಟಿವಿ ಕಣ್ಗಾವಲು: ಅಪರಾಧಗಳಿಗೆ ಅಂಕುಶ

ಸಿಸಿಟಿವಿ ಕಣ್ಗಾವಲು: ಅಪರಾಧಗಳಿಗೆ ಅಂಕುಶ

ಕರ್ನಾಟಕ ಸಾರ್ವಜನಿಕ ಸುರಕ್ಷತಾ (ಕ್ರಮಗಳು) ಜಾರಿ ಕಾಯಿದೆ 2017 ರಂತೆ ಸಾರ್ವಜನಿಕ ಪ್ರದೇಶ ಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ವಾಣಿಜ್ಯ ಸಂಸ್ಥೆ, ಶಿಕ್ಷಣ ಸಂಸ್ಥೆ, ಬಹುಮಹಡಿ ಅಪಾರ್ಟ್‌ ಮೆಂಟ್ ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವಿದೆ. ಈ ಕಾಯ್ದೆಯ ಅನುಷ್ಠಾನಕ್ಕೆ ವೇಗ ನೀಡಿರುವ ರಾಜ್ಯ ಪೊಲೀಸರು 12 ಲಕ್ಷ ಸಿಸಿಟಿವಿ ಅಳವಡಿಸುವಲ್ಲಿ ಸಫಲರಾಗಿದ್ದಾರೆ.

ಸಂಪುಟ ಸಂಕಟ: ಕೈ ನಾಯಕರ ಪರದಾಟ

ಸಂಪುಟ ಸಂಕಟ: ಕೈ ನಾಯಕರ ಪರದಾಟ

20 ಸ್ಥಾನಗಳಿಗೆ ಸುಮಾರು 42ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಯಾರಿಗೆ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ಗೊಂದಲ ಪಕ್ಷದ ವರಿಷ್ಠರದ್ದಾಗಿದೆ. ಈ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಬಂದ ನಂತರ ರಾಜ್ಯ ನಾಯಕ ರನ್ನು ಕರೆಸಿ ಮಾತುಕತೆ ನಡೆಸಿ ನಂತರವಷ್ಟೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಕರಾವಳಿ- ಉತ್ತರ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ; ಹಲವೆಡೆ ಆರೆಂಜ್ ಅಲರ್ಟ್

ಕರಾವಳಿ- ಉತ್ತರ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ

ಇಂದು ರಾಜ್ಯದಲ್ಲಿ ಹಲವೆಡೆ ಮಳೆಯಲಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವುದು.

Chikkaballapur News: "2028ರಲ್ಲಿ ಎಷ್ಟು ಮತಗಳ ಅಂತರದಲ್ಲಿ ಸೋಲುತ್ತೀಯೋ ಕಾದು ನೋಡು" ಸವಾಲು

"ಮಾನಸಿಕ ಆಸ್ಪತ್ರೆಯಲ್ಲಿ ಇರಬೇಕಾದವರು ಶಾಸಕರಾಗಿರುವುದು ಕ್ಷೇತ್ರದ ದುರಂತ"

"ಇಂತಹ ನಡವಳಿಕೆಯನ್ನು ಒಬ್ಬ ಶಾಸಕ ಬಿಡಿ, ಸಾಮಾನ್ಯ ವ್ಯಕ್ತಿಯೂ ತೋರಿಸುವುದಿಲ್ಲ. ಒಂದು ಜನಾಂಗದ ವಿರುದ್ಧ ಇಷ್ಟೊಂದು ಆಕ್ರೋಶ ಮತ್ತು ನಿಂದನೆ ಮಾಡಿರುವ ಘಟನೆ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಇಂತಹ ವ್ಯಕ್ತಿ ಯಾವುದೇ ಕ್ಷೇತ್ರದ ಶಾಸಕರಾಗಿರುವುದು ಆ ಕ್ಷೇತ್ರಕ್ಕೆ ಶಾಪವೇ ಸರಿ"

Raichur News: ದೇವದುರ್ಗದಲ್ಲಿ ಕಟ್ಟಡದ ಮೇಲ್ಚಾವಣಿ ಕುಸಿದು ಇಬ್ಬರ ಸಾವು; ಕಿರುಚಿತ್ರದ ಪೋಸ್ಟರ್ ಅಂಟಿಸುವ ವೇಳೆ ದುರಂತ

ದೇವದುರ್ಗದಲ್ಲಿ ಕಟ್ಟಡದ ಮೇಲ್ಚಾವಣಿ ಕುಸಿದು ಇಬ್ಬರ ಸಾವು

ಯುವಕರು ತಾವೇ ನಿರ್ಮಿಸಿದ್ದ ಕಿರುಚಿತ್ರದ ಪೋಸ್ಟರ್ ಅಂಟಿಸಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಕಟ್ಟಡದ ಮೇಲ್ಚಾವಣಿಯ ಸಜ್ಜಾ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಾಳುಗಳನ್ನು ದೇವದುರ್ಗ ತಾಲೂಕಾಸ್ಪತ್ರೆ ಹಾಗೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Dr K Sudhakar: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕು, ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ: ಸಂಸದ ಡಾ.ಕೆ.ಸುಧಾಕರ್

ಶಾಸಕರಿಂದಾಗಿ ಚಿಕ್ಕಬಳ್ಳಾಪುರದ ಜನತೆ ತಲೆ ತಗ್ಗಿಸುವಂತಾಗಿದೆ

ಶಾಸಕರ ವಿರುದ್ಧ ಪ್ರತಿಭಟಿಸುವುದಿದ್ದರೆ, ಕಾರ್ಯಕರ್ತರು ಒಂದು ದಿನ ನಿಗದಿ ಮಾಡಬಹುದಿತ್ತು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಟಿಸಬಾರದಿತ್ತು. ಎಲ್ಲಿಗೂ ಬಾರದ ಶಾಸಕರು ಬೇಕೆಂದೇ ದುರುದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಶಾಸಕರು ಮೊದಲು ಸಿದ್ದರಾಮಯ್ಯ(Siddaramaiah)ನವರ ಪರವಾಗಿದ್ದು, ಬಳಿಕ ಸಿಎಂ ಡಿ.ಕೆ.ಶಿವಕುಮಾರ್(Chief Minister D K Shivkumar) ಅವರ ಪರವಾಗಿದ್ದಾರೆ

KR Puram Triple Murder Case: ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಪ್ರಿಯಕರ ಕೆನೆತ್;‌ ವಿಚಾರಣೆ ವೇಳೆ ಉಲ್ಟಾ ಹೊಡೆದ ಶ್ವೇತಾ!

ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಕೆನೆತ್: ಶ್ವೇತಾ

ಕೆ.ಆರ್‌.ಪುರ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ, ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಶ್ವೇತಾ ನೀಡಿರುವ ಹೊಸ ಹೇಳಿಕೆ ಇಡೀ ತನಿಖೆಯ ದಿಕ್ಕನ್ನೇ ಬದಲಿಸಿದೆ. ಈವರೆಗೆ ಕುಟುಂಬದವರನ್ನು ತಾನೇ ಕೊಂದಿದ್ದು ಎಂದು ಹೇಳುತ್ತಿದ್ದ ಶ್ವೇತಾ ಇದೀಗ ಪೊಲೀಸರ ಮುಂದೆ ಉಲ್ಟಾ ಹೊಡೆದಿದ್ದಾಳೆ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ 'ಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್‌ʼ ಸೇವೆಗೆ ಸಚಿವ ಜೋಶಿ ಚಾಲನೆ

ಹುಬ್ಬಳ್ಳಿಯಲ್ಲಿ 'ಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್‌ʼ ಸೇವೆಗೆ ಚಾಲನೆ

Mobile Diagnostic Van: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಎನ್‌ಎಂಆರ್ ಫೌಂಡೇಶನ್ ಸಹಯೋಗದಲ್ಲಿ ಒದಗಿಸಿದ ʼಮೊಬೈಲ್ ಡಯಾಗ್ನೋಸ್ಟಿಕ್ ವಾಹನʼ ಸೇವೆಗೆ ಕೇಂದ್ರ ಸಚಿವ ಸಚಿವ ಪ್ರಲ್ಹಾದ್‌ ಜೋಶಿ ಅವರು ಚಾಲನೆ ನೀಡಿದ್ದಾರೆ.

Bidadi Township: ಬಿಡದಿ ಟೌನ್‌ಶಿಪ್‌ ಬಿಕ್ಕಟ್ಟು; ಸಿಎಂ ಜತೆ ಚರ್ಚೆಗೆ ನಾನು ಈಗಲೂ ಸಿದ್ಧ ಎಂದ ಎಚ್.ಡಿ.ಕುಮಾರಸ್ವಾಮಿ

ಸಿಎಂ ಜತೆ ಚರ್ಚೆಗೆ ನಾನು ಈಗಲೂ ಸಿದ್ಧ ಎಂದ ಎಚ್.ಡಿ.ಕುಮಾರಸ್ವಾಮಿ

ರೈತರ ಹಿತಕ್ಕಿಂತ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಆಸಕ್ತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ನಾಲ್ಕು ಗೋಡೆಗಳ ನಡುವೆ ಕೂತು ಭೂಮಿ ಕಳೆದುಕೊಳ್ಳುತ್ತಿರುವ ರೈತರನ್ನು ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Devarayanadurga Hill: ಸೆಲ್ಫಿ ತಂದ ಆಪತ್ತು; ದೇವರಾಯನದುರ್ಗ ಬೆಟ್ಟದಲ್ಲಿ ಕಾಲು ಜಾರಿ 50 ಅಡಿ ಆಳಕ್ಕೆ ಬಿದ್ದ ಉಪನ್ಯಾಸಕ!

ದೇವರಾಯನದುರ್ಗ ಬೆಟ್ಟದಲ್ಲಿ ಕಾಲು ಜಾರಿ 50 ಅಡಿ ಆಳಕ್ಕೆ ಬಿದ್ದ ಉಪನ್ಯಾಸಕ!

ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ಘಟನೆ ನಡೆದಿದೆ. ತುಮಕೂರು ತಾಲೂಕಿನ ಓಬಳಾಪುರ ಮೂಲದ ಉಪನ್ಯಾಸಕ ಶಿವಪ್ರಸಾದ್ ಎಂಬುವವರು, ದೇವರಾಯನದುರ್ಗ ಬೆಟ್ಟದ ಬಂಡೆಯ ಮೇಲಿಂದ 50 ಅಡಿ ಆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

Pulse Polio Drive: ಎರಡು ಹನಿ ಜೀವ ರಕ್ಷಕ; ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಸಿಎಂ ಕರೆ

ಎರಡು ಹನಿ ಜೀವ ರಕ್ಷಕ, ಪೋಲಿಯೋ ಮುಕ್ತ ಸಮಾಜಕ್ಕೆ ನಮ್ಮ ಸಂಕಲ್ಪ

ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಭಾನುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ದೇಶದ ಆರೋಗ್ಯವಂತ ಭವಿಷ್ಯ ನಮ್ಮ ಮಕ್ಕಳ ಕೈಯಲ್ಲಿದೆ. ಹಾಗಾಗಿ, 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಲಸಿಕೆ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

MP P C Mohan: ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತನ್ನಿ: ವಿದ್ಯಾರ್ಥಿಗಳಿಗೆ ಸಂಸದ ಪಿ.ಸಿ.ಮೋಹನ್ ಕಿವಿಮಾತು

ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತನ್ನಿ

ಸುಮಾರು 124 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಲಿಜ ಸಮುದಾಯದ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಗಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆರ್ಥಿಕವಾಗಿ ಹಿಂದುಳಿ ದಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು

MLA Dr.M.C.Sudhakar: ಕೆಂಪೇಗೌಡ ಜಯಂತಿ ಆಚರಣೆ: ಪಕ್ಷಾತೀತವಾಗಿ ಪಾಲ್ಗೊಂಡ ನಾಗರಿಕರಿಗೆ ಶಾಸಕ ಡಾ.ಎಂ.ಸಿ. ಸುಧಾಕರ್ ಶ್ಲಾಘನೆ

ಜಯಂತಿಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು

ಸಮಾಜದ ಚಿಂತಕರು ಮತ್ತು ಸಾಧಕರ ಜಯಂತೋತ್ಸವಗಳನ್ನು ಆಚರಿಸುವ ಮುಖ್ಯ ಉದ್ದೇಶ, ನಮ್ಮ ಮುಂದಿನ ಪೀಳಿಗೆಗೆ ಅವರ ಸಾಧನೆಗಳು, ಕೊಡುಗೆಗಳು ಹಾಗೂ ಆದರ್ಶಗಳ ಪರಿಚಯ ಮಾಡಿಕೊಡುವು ದಾಗಿದೆ. ಯುವ ಪೀಳಿಗೆಯು ಇಂತಹ ಮಹನೀಯರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ಇದು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Haveri Drought: ಮಳೆ ಇಲ್ಲದೆ ಬೆಳೆ ನಾಶಕ್ಕೆ ಮುಂದಾದ ಅನ್ನದಾತ; ಬರಗಾಲ ಘೋಷಣೆಗೆ ಆಗ್ರಹ

ಮಳೆ ಇಲ್ಲದೆ ಬೆಳೆ ನಾಶಕ್ಕೆ ಮುಂದಾದ ಅನ್ನದಾತ; ಬರಗಾಲ ಘೋಷಣೆಗೆ ಆಗ್ರಹ

Rain Deficit in Haveri: ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಒಣಗುತ್ತಿವೆ. ವಾಡಿಕೆಯಷ್ಟೂ ಮಳೆಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗುವ ಭೀತಿ ಎದುರಾಗಿದೆ.

Chikkaballapur News: ಜಿಲ್ಲಾಧಿಕಾರಿ ನಿವಾಸದ ಎದುರು ಕಾಂಗ್ರೆಸ್ ಕಾರ್ಯಕರ್ತರ ದಿಡೀರ್ ಪ್ರತಿಭಟನೆ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

ಕೆಂಪೇಗೌಡ ಜಯಂತಿಯಲ್ಲಿ ಶಾಸಕರಿಗೆ ಅವಮಾನ ಆರೋಪ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಅವಮಾನಿಸಿದ್ದು, ಜನಪ್ರತಿನಿಧಿಗೆ ಸಲ್ಲಬೇಕಾದ ಗೌರವ ನೀಡದೆ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು. ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು

ಕಿಂಚಿತ್ ಅಮಲು ಪದಾರ್ಥ ಬೆರೆಸಿದರೂ ರಾಜ್ಯದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ನಿಷೇಧ: ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

ಕಿಂಚಿತ್ ಅಮಲು ಪದಾರ್ಥ ಬೆರೆಸಿದರೂ ಪಾನ್ ಮಸಾಲಾ, ಗುಟ್ಕಾ ನಿಷೇಧ

ಮಾದಕ ದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಮಾದಕ ವ್ಯಸನ ತಡೆಯುವಿಕೆ ದೊಡ್ಡ ಸವಾಲಾಗಿದ್ದು, ನಾವೆಲ್ಲರೂ ಒಂದಾಗಿ ಸೇರಿ, ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕರೆ ನೀಡಿದ್ದಾರೆ.

ಕೇತನ್‌ ಹತ್ಯೆಗೂ 2 ದಶಕಗಳ ಹಿಂದೆ ನಡೆದ ಬೆಂಗಳೂರು ಕೊಲೆಗೂ ಇದೆ ಸಾಮ್ಯತೆ; ರಿಂಗ್‌ ರೋಡ್‌ ಶುಭಾ ಪ್ರಕರಣ ಮುನ್ನೆಲೆಗೆ ಬಂದಿದ್ದೇಕೆ?

ಕೇತನ್‌ ಹತ್ಯೆಗೂ ರಿಂಗ್‌ ರೋಡ್‌ ಶುಭಾ ಪ್ರಕರಣಕ್ಕೂ ಇದೆ ಸಾಮ್ಯತೆ

Ring Road Murder Case: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಲೋಹಗಢ ಕೋಟೆ ಮೇಲಿನಿಂದ ಸುಮಾರು 350 ಅಡಿಯ ಆಳದ ಕಂದಕಕ್ಕೆ ತಳ್ಳಿ ಉದ್ಯಮಿ ಕೇತನ್‌ ಅಗರ್ವಾಲ್‌ ಅವರನ್ನು ತಳ್ಳಿ ಕೊಲೆ ಮಾಡಿದ ಪ್ರಕರಣಕ್ಕೂ 2003ರಲ್ಲಿ ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೂ ಸಾಮ್ಯತೆ ಇದೆ. ಅದೇನು ಎನ್ನುವ ವಿವರ ಇಲ್ಲಿದೆ.

ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆದ ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಬಂಧನ; 150 ಮಂದಿ ವಿರುದ್ಧ ತನಿಖೆ

ಶಾಸಕ ಪ್ರದೀಪ್ ಈಶ್ವರ್‌ ಮೇಲೆ ಚಪ್ಪಲಿ ಎಸೆದವರ ಬಂಧನ

Pradeep Eshwar: ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್‌ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಕುಶಾಲ್ ಚೌಕ್ಸಿ ಅವರು, ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್(ರಿ)ದಿಂದ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಮೆಗಾ ಆರೋಗ್ಯ ಶಿಬಿರ ಆಯೋಜನೆ

ಅಂತರರಾಷ್ಟ್ರೀಯ ಯೋಗ ದಿನ ಮತ್ತು ಮೆಗಾ ಆರೋಗ್ಯ ಶಿಬಿರ ಆಯೋಜನೆ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್(ರಿ) ಸಮುದಾಯ ಯೋಗಕ್ಷೇಮ ಮತ್ತು ಜೀವ ಉಳಿಸುವ ಉಪಕ್ರಮಗಳನ್ನು ಉತ್ತೇಜಿಸುವ ಗುರಿ ಹೊಂದಿರುವ ರಕ್ತದಾನ ಶಿಬಿರ ಮತ್ತು ಕಣ್ಣಿನ ತಪಾಸಣೆ ಸೇರಿದಂತೆ ಸಮಗ್ರ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದೆ

ಮಗ ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ವ್ಯಕ್ತಿ

ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ವ್ಯಕ್ತಿ

ಗಂಡು ಮಗು ಹುಟ್ಟಿದೆ ಪಾರ್ಟಿ ಕೊಡಿಸು ಎಂದು ಕೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ‌ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.ವಣ್ಣೂರ ಗ್ರಾಮದ ಹನುಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ವ್ಯಕ್ತಿ. ಅದೇ ಊರಿನ ವಿಶ್ವನಾಥ ಪೂಜೇರಿ ಕೊಲೆ ಮಾಡಿರುವ ಆರೋಪಿ. ಹನುಮಂತಪ್ಪನನ್ನು ವಿಶ್ವನಾಥ ಕಲ್ಲಿನಿಂದ ಕೊಲೆ ಮಾಡಿದ್ದಾನೆ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ

ಖ್ಯಾತ ನಿರ್ದೇಶಕ, ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ

N.S. Shankar Passed away: ಕನ್ನಡ ಚಿತ್ರರಂಗದ ನಿರ್ದೇಶಕ, ಹಿರಿಯ ಪತ್ರಕರ್ತ, ಲೇಖಕ ಎನ್.ಎಸ್. ಶಂಕರ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನಲ್ಲಿ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಚಾಲನೆ;  ಟ್ರಾಫಿಕ್‌ನಿಂದ ಸಿಗುತ್ತಾ ಮುಕ್ತಿ?

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಚಾಲನೆ

D.K.Shivakumar: ಬೆಂಗಳೂರು ನಗರದಲ್ಲಿ ನಿರ್ಮಾಣವಾದ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಗೆ ಬೆಳಗ್ಗೆ 9:30 ಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಲಿದ್ದಾರೆ.

Loading...