ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಮದ್ದೂರು ತಾಲೂಕಿನ 4 ಗ್ರಾಮ ಪಂಚಾಯತ್‌ ನಗರಸಭೆ ಸೇರ್ಪಡೆಗೆ ವಿರೋಧ; ಸ್ಥಳೀಯರಿಂದ ಆಕ್ರೋಶ, ಸಿಎಂಗೆ ಕೇಂದ್ರ ಸಚಿವರ ಪತ್ರ

ಮದ್ದೂರು ತಾಲೂಕಿನ 4 ಗ್ರಾ.ಪಂ. ಮದ್ದೂರು ನಗರಸಭೆ ಸೇರ್ಪಡೆಗೆ ವಿರೋಧ

Mandya News: ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಮುಂತಾದ ಗ್ರಾಮ ಪಂಚಾಯತ್‌ಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ‌ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವು, ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ ಪ್ರವಾಸಿಗರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ

ಯುಎಇನಲ್ಲಿರುವ ಸದ್ಯದ ಪರಿಸ್ಥಿತಿ, ಅಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಕ್ಕೆ ಅನಿವಾಸಿ ಕನ್ನಡಿಗರ ಪೋಷಕರಾದ ರೊನಾಲ್ಡ್ ಕೊಲಸೋ ಅವರ ನೇತೃತ್ವದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ಅಪಪ್ರಚಾರಗಳನ್ನು ನಂಬಬೇಡಿ, ಸುಳ್ಳು ಮಾಹಿತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದರು.

prahlad Joshi: ರಾಯಭಾರಿಗಳ ಜತೆ ಮಾತುಕತೆ, ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಸಚಿವ ಪ್ರಹ್ಲಾದ ಜೋಶಿ

ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಸಚಿವ ಪ್ರಹ್ಲಾದ ಜೋಶಿ

ಜಗತ್ತಿನ ಎಲ್ಲೇ ಆಗಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಹಿಂದೆ ಉಕ್ರೇನ್‌ನಲ್ಲಿ ಸಿಲುಕಿದ್ದವರನ್ನು ಮರಳಿ ಕರೆ ತಂದಿದ್ದೇವೆ. ಭಾರತೀಯರು ಎಲ್ಲೇ ಇದ್ದರೂ ಅವರ ಸುರಕ್ಷತೆಗೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Assault Case: ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪಿಯುಸಿ ಪರೀಕ್ಷೆ ಬರೆಯಲು ಹೋಗದಂತೆ ವಿದ್ಯಾರ್ಥಿನಿ ಮೇಲೆ ಸೋದರಮಾವನ ಹಲ್ಲೆ

ಪೂರ್ಣಿಮಾ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ. ಆಕೆ ಪರೀಕ್ಷೆ (2nd PUC Exam) ಮುಗಿಸಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಸೋದರ ಮಾವ ಸೋಮಣ್ಣ ಎಂಬಾತ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನಲೆಯಲ್ಲಿ, ನೀನು ಓದಬಾರದು ಅಂತ ಹಲ್ಲೆ ಮಾಡಿದ್ದಾನೆ.

Physical Abuse: ಡ್ರಗ್ಸ್‌ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಕಾರ್ಪೊರೇಟರ್‌ ಮಗ ಅಂದರ್‌

ಡ್ರಗ್ಸ್‌ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಕಾರ್ಪೊರೇಟರ್‌ ಮಗ ಅಂದರ್‌

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಬಂಧನವಾಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

Lunar Eclipse: ನಾಳೆ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ

ನಾಳೆ ಚಂದ್ರಗ್ರಹಣ: ಪ್ರಮುಖ ದೇವಾಲಯಗಳ ದರ್ಶನ ಸಮಯ ಬದಲಾವಣೆ

ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ (temple) ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

Heart Attack: ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

ಪೊಲೀಸ್‌ ಮ್ಯಾರಥಾನ್‌ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

ನಿನ್ನೆ ಪೊಲೀಸ್ ಇಲಾಖೆ ಮ್ಯಾರಥಾನ್ ಆಯೋಜಿಸಿತ್ತು. ‘ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ ಓಟ ಆರಂಭಗೊಂಡಿತ್ತು. ಉಡುಪಿ ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಎಸ್‌ಐ ಕುಸಿದುಬಿದ್ದಿದ್ದಾರೆ.

ಲಾ ಸ್ಕೂಲ್‌ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಆಲ್ ಅಮೀನ್ ಮತ್ತು ಸೇಂಟ್ ಜೋಸೆಫ್ ಲಾ ಕಾಲೇಜಿಗೆ ಪ್ರಶಸ್ತಿ

ಆಲ್ ಅಮೀನ್ ಮತ್ತು ಸೇಂಟ್ ಜೋಸೆಫ್ ಲಾ ಕಾಲೇಜಿಗೆ ಪ್ರಶಸ್ತಿ

ಉತ್ತಮ ಪುರುಷ ಮೂಟರ್ ಪ್ರಶಸ್ತಿಯನ್ನು ಎಸ್. ಯೋಗಿನಾಥ್ (ಕೆಎಲ್‌ಇ ಲಾ ಕಾಲೇಜು) ರೂ. 2,500 ನಗದು ಬಹುಮಾನ ಸಹಿತವಾಗಿ ಪಡೆದರು. ಉತ್ತಮ ಮಹಿಳಾ ಮೂಟರ್ ಪ್ರಶಸ್ತಿಯನ್ನು ಸೇಂಟ್ ಜೋಸೆಫ್ ಲಾ ಕಾಲೇಜಿನ ಸಾವನ್ನಾ ಮೇರಿ ಅಲೆಕ್ಸಾಂಡರ್ ಅವರಿಗೆ ರೂ. 2,500 ನಗದು ಬಹುಮಾನ ಸಹಿತವಾಗಿ ನೀಡಲಾಯಿತು.

Bangalore News: ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಬಿಎಂಎಸ್.ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ದೇಶದಲ್ಲಿ ಇಂಜನಿಯರಿಂಗ್ ಪದವಿ ಪಡೆದವರು ಸಂಖ್ಯೆ ಹೆಚ್ಚಬೇಕು. ದೇಶ ಅಭಿವೃದ್ದಿಯಲ್ಲಿ ಇಂಜನಿಯರ್ ಗಳು ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ದೇಶದಲ್ಲಿ ಇಂಜನಿಯರ್ʼಗಳಿಗೆ ಉತ್ತಮ ಅವಕಾಶವಿದೆ. ಉತ್ತಮ ಮನುಷ್ಯರಾಗಲು ಕಠಿಣ ಪರಿಶ್ರಮ ಪಡಬೇಕು. ಸಾಧನೆ ಮಾಡಲು ಗುರಿ ಇರಬೇಕು ಮತ್ತು ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕು.

Indi News: ರಾಷ್ಟ್ರಪ್ರೇಮದ ಅಲೆ ಜನತೆಯ ಹೃದಯದಲ್ಲಿ ಮೂಡಿಸಿದ ಶಿವಾಜಿ ಮಹಾರಾಜರು

ರಾಷ್ಟ್ರಪ್ರೇಮದ ಅಲೆ ಜನತೆಯ ಹೃದಯದಲ್ಲಿ ಮೂಡಿಸಿದ ಶಿವಾಜಿ ಮಹಾರಾಜರು

ಭಾರತೀಯರ ತುಂಬ ಆದರ ಅಭಿಮಾನ ಮತ್ತು ಗೌರವಗಳಿಗೆ ಪಾತ್ರನಾದ ರಾಜ ಶಿವಾಜಿಯವರು. ಅವರ ಹೆಸರು ಪಾವಿತ್ರ್ಯ ಸ್ವಾಭಿಮಾನ ಸಂಘಟನಾ ಬಲಗಳ ಸಂಕೇತವಾಗಿದೆ. ಸ್ವಾತಂತ್ರ್ಯಪ್ರಿಯತೆ ಕಷ್ಟ ಸಹಿ ಷ್ಣುತೆ ರಾಷ್ಟ್ರಪ್ರೇಮದ ಅಲೆಯನ್ನು ದೇಶದ ಜನತೆಯ ಹೃದಯ ದಲ್ಲಿ ಮೂಡಿಸಿದ ಶಿವಾಜಿ ಮಹಾ ರಾಜರ ವ್ಯಕ್ತಿತ್ವ ಸದಾ ಅಮರ.

ಎಲ್ಲಾ ಸಮಾಜಗಳಿಗೆ ನೆರಳು, ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ

ಎಲ್ಲಾ ಸಮಾಜಗಳಿಗೆ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ‌ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ‌ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದಾರೆ.

Jyotibha Phule State Award: ಡಾ.ಕಾಂತು ಇಂಡಿ ಇವರಿಗೆ ಜ್ಯೋತಿಭಾ ಪುಲೆ ರಾಜ್ಯಪ್ರಶಸ್ತಿ

ಡಾ.ಕಾಂತು ಇಂಡಿ ಇವರಿಗೆ ಜ್ಯೋತಿಭಾ ಪುಲೆ ರಾಜ್ಯಪ್ರಶಸ್ತಿ

ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನದಲ್ಲಿ ಜ್ಯೋತಿಭಾ ಫುಲೆ ರಾಜ್ಯ ಪ್ರಶಸ್ತಿಯನ್ನು ಡಾ.ಕಾಂತು ಇಂಡಿ ಇವರಿಗೆ ಲಭಿಸಿದೆ. ಇವರು ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 8 ತಾಲೂಕು ಸಮ್ಮೇಳನ, 1 ಜಿಲ್ಲೆ ಸಮ್ಮೇಳ, 1 ಮಹಿಳಾ ಸಮ್ಮೇಳನ ಮಾಡಿದ್ದಾರೆ.

ದೇಶದಲ್ಲಿ ಮುಸ್ಲಿಂ ಲೀಗ್ ಸ್ಥಾನವನ್ನು ತುಂಬುತ್ತಿದೆ ಕಾಂಗ್ರೆಸ್ ಪಕ್ಷ: ಜೋಶಿ ಕಿಡಿ

ಮುಸ್ಲಿಂ ಲೀಗ್ ಸ್ಥಾನವನ್ನು ತುಂಬುತ್ತಿದೆ ಕಾಂಗ್ರೆಸ್ ಪಕ್ಷ: ಜೋಶಿ

ಧಾರವಾಡದಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಅನುಮತಿ ಕೊಟ್ಟಿಲ್ಲ. ಆನೆ ದಾಳಿ ಪ್ರಕರಣದಲ್ಲಿ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆಗೆ ಇಳಿದವರ ಮೇಲೆ ಲಾಠಿ ಪ್ರಹಾರ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಈ ಸರ್ಕಾರ ಹೋರಾಟ ಹತ್ತಿಕ್ಕುವ ಇಂದಿರಾಗಾಂಧಿ ಮನಸ್ಥಿತಿಯಲ್ಲೇ ಇರುವುದು ಸ್ಪಷ್ಟವಾಗಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ.

Chikkaballapur News: ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರುಗಳ ಋಣ ತೀರಿಸಲಾಗದು: ಕೆ.ವಿ.ನವೀನ್ ಕಿರಣ್

ವಿದ್ಯಾರ್ಥಿಗಳ ಜೀವನ ರೂಪಿಸಿದ ಗುರುಗಳ ಋಣ ತೀರಿಸಲಾಗದು

ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷನಾಗಿದ್ದರೂ ನಾನೂ ಸಹ ಶಿಕ್ಷಕರ ಶಿಷ್ಯನೇ ಆಗಿದ್ದೇನೆ. ಸಮಾಜದಿಂದ ನಾವು ಏನಾದರೂ ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿ ಆದರ್ಶ ವ್ಯಕ್ತಿಗಳಾಗಿ ಬಾಳಬೇಕು ಎಂಬುದು ನಮ್ಮ ಶಿಕ್ಷಕರ ಆಶಯವಾಗಿತ್ತು

ಮಧ್ಯಪ್ರಾಚ್ಯದಿಂದ ಕನ್ನಡಿಗರು ಹಿಂದಿರುಗಲು ಅಗತ್ಯ ವ್ಯವಸ್ಥೆ ಕಲ್ಪಿಸಿ: ವಿಮಾನಯಾನ ಸಚಿವಾಲಯಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ

ಮಧ್ಯಪ್ರಾಚ್ಯದಿಂದ ಕನ್ನಡಿಗರು ಹಿಂದಿರುಗಲು ಸಹಕರಿಸಿ: ಕೇಂದ್ರಕ್ಕೆ ಪತ್ರ

iran–israel war: ಅರಬ್‌ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು ಸ್ವದೇಶಕ್ಕೆ ವಾಪಸ್‌ ಆಗಲು ಅಗತ್ಯ ವಿಮಾನಗಳ ವ್ಯವಸ್ಥೆ ಮಾಡಲು ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಟಿಕೆಟ್‌ಗಳನ್ನು ಕಾಯ್ದಿರಿಸಿ, ಹಿಂದಿರುಗಲು ಸಾಧ್ಯವಾಗದವರಿಗೆ ಅಗತ್ಯ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿನಂತಿಸಿದ್ದಾರೆ.

ಬೆಂಗಳೂರಿನ ತರಕಾರಿಯಲ್ಲಿ ವಿಷಕಾರಿ ಅಂಶಕ್ಕೆ ಅತಿಯಾದ ರಾಸಾಯನಿಕಗಳ ಬಳಕೆ ಕಾರಣ: ಸುತಾರಿಯಾ

ತರಕಾರಿಯಲ್ಲಿ ವಿಷಕಾರಿ ಅಂಶಕ್ಕೆ ಅತಿಯಾದ ರಾಸಾಯನಿಕಗಳ ಬಳಕೆ ಕಾರಣ

ಬೆಂಗಳೂರಿನ ಕುಮಾರ ಪಾರ್ಕ್‌ನ ಗಾಂಧಿಭವನದಲ್ಲಿ ದಿ ಫಾರ್ವರ್ಡ್ ಫೌಂಡೇಶನ್ ವತಿಯಿಂದ ಸಾವಯವ ಕೃಷಿಯಲ್ಲಿ ʼಗೋಕೃಪಾಮೃತ; ಮಹತ್ವ ಸಾರಲು ರೈತರೊಂದಿಗಿನ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಗುಜರಾತ್‌ನ ಪ್ರಸಿದ್ಧ ಬನ್ಸಿ ಗಿರ್ ಗೋಶಾಲಾ ಖ್ಯಾತಿಯ ಗೋಪಾಲ್ ಭಾಯ್ ಸುತಾರಿಯಾ ಅವರು ಮಾತನಾಡಿದ್ದಾರೆ.

9.34 ರುಪಾಯಿ ಬಾಕಿ ಕೇಳಿದ ಬ್ಯಾಂಕ್‌ಗೆ ಪಾಠ ಕಲಿಸಿದ ರೈತ: 10 ರುಪಾಯಿ ಕಟ್ಟಿ 66 ಪೈಸೆ ವಾಪಸ್ ನೀಡುವಂತೆ ಪಟ್ಟು

66 ಪೈಸೆಗಾಗಿ ಕೆನರಾ ಬ್ಯಾಂಕ್‌ನಲ್ಲಿ ಪಟ್ಟು ಹಿಡಿದ ರೈತ

Viral News: ಹಾಸನದಲ್ಲಿ ರೈತ ಮತ್ತು ಬ್ಯಾಂಕ್‌ ನಡುವೆ ವಿಚಿತ್ರ ವಿವಾದ ಉಂಟಾದ ಘಟನೆಯೊಂದು ನಡೆದಿದೆ.‌ 9 ರುಪಾಯಿ 34 ಪೈಸೆ ಸಾಲ ಕಟ್ಟುವಂತೆ ಕೆನರಾ ಬ್ಯಾಂಕ್‌ನಿಂದ ರೈತರೊಬ್ಬರಿಗೆ ಕರೆ ಬಂದಿತ್ತು.‌ ಈ ಹಿನ್ನೆಲೆಯಲ್ಲಿ 10 ರುಪಾಯಿ ಸಾಲ ಕಟ್ಟಿದ ರೈತ ಉಳಿದ 66 ಪೈಸೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರ ವೈರಲ್‌ ಆಗುತ್ತಿದ್ಧಂತೆ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ.

Elephant attack in Madikeri: ಮಡಿಕೇರಿಯಲ್ಲಿ ಆನೆ ದಾಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾವು

ಮಡಿಕೇರಿಯಲ್ಲಿ ಆನೆ ದಾಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾವು

Elephant attack: ಮಡಿಕೇರಿಯ ಸಂತ ಮೈಕೆಲ್ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಕಾಲೇಜು ಮುಗಿಸಿ ಸಂಜೆ ಮನೆಗೆ ಹೋಗುವಾಗ ಕಾಡಾನೆ ದಾಳಿ ಮಾಡಿದೆ. ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ. ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೌರಭ 2026; ನಾಗಾರ್ಜುನ ಡಿಗ್ರಿ ಕಾಲೇಜಿಗೆ ಡಾ.ರಾಜಕುಮಾರ್ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕ

ನಾಗಾರ್ಜುನ ಕಾಲೇಜಿಗೆ ರಾಜಕುಮಾರ್ ಸರ್ವೋತ್ತಮ ಕಾಲೇಜು ಪಾರಿತೋಷಕ

Sourabha 2026: ರಂಗ ಸೌರಭದಿಂದ ಆಯೋಜಿಸಿದ್ದ ಸೌರಭ 2026; ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ಶನಿವಾರ ನೆರವೇರಿತು.

Iran–Israel war: ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ

ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ

Iran–Israel war: ಅರಬ್‌ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದೀಗ ಗಲ್ಫ್‌ ರಾಷ್ಟ್ರಗಳಲ್ಲಿ ಭಾರತೀಯರ ನೆರವಿಗಾಗಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಂದ ಸಹಾಯವಾಣಿ ಆರಂಭಿಸಲಾಗಿದೆ.

Iran–Israel war: ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು: ಸಿಎಂ ಸಿದ್ದರಾಮಯ್ಯ

ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲಾಗುವುದು: ಸಿಎಂ

ದುಬೈ ಸೇರಿದಂತೆ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದು, ಬಳಿಕ ಅವರನ್ನು ತವರಿಗೆ ವಾಪಸ್ ಕರೆ ತರುವ ಸಂಬಂಧ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇರಾನ್ ಮೇಲೆ ಅಮೆರಿಕದಿಂದ ಅನಗತ್ಯ ದಾಳಿ; ಖಮೇನಿ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದ ಸಿಎಂ

ಖಮೇನಿ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದ ಸಿಎಂ ಸಿದ್ದರಾಮಯ್ಯ

ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಬೃಹತ್‌ ಪ್ರತಿಭಟನೆ; ಕಣ್ಣೀರಿಟ್ಟ ಗ್ರಾಮಸ್ಥರು

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಬೃಹತ್‌ ಪ್ರತಿಭಟನೆ

ಇರಾನ್ ಮೇಲೆ ಅಮೆರಿಕ-ಇಸ್ರೇಲ್‌ ದಾಳಿ ಹಾಗೂ ಇಸ್ಲಾಂ ಧಾರ್ಮಿಕ ನಾಯಕ ಖಮೇನಿ ಹತ್ಯೆ ಖಂಡಿಸಿ ಅಲೀಪುರ ಗ್ರಾಮಸ್ಥರು ಭಾನುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಾಯಕನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

ಶಿಗ್ಗಾಂವಿಯಲ್ಲಿ ಭೀಕರ ಅಪಘಾತ; ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನವದಂಪತಿ ದುರ್ಮರಣ

ಲಾರಿಗೆ ಕಾರು ಡಿಕ್ಕಿಯಾಗಿ 15 ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಸಾವು

Haveri Accident: ಶಿಗ್ಗಾಂವಿ ಸಮೀಪದ ಅಂಬುಜಾ ಪ್ಯಾಕ್ಟರಿ ಬಳಿ ಭೀಕರ ಅಪಘಾತ ನಡೆದಿದೆ. ದೇವರ ದರ್ಶನ ಮುಗಿಸಿಕೊಂಡು ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾನುವಾರ ಮುಂಜಾನೆ ಹೋಗುತ್ತಿದ್ದಾಗ ದುರಂತ ಸಂಭವಿಸಿದ್ದು, 15 ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಮೃತಪಟ್ಟಿದ್ದಾರೆ.

Loading...