ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರರ ಪಟ್ಟಿಯು ಅತ್ಯಂತ ಮೂಲಭೂತ ದಾಖಲೆ: ಜಿಲ್ಲಾಧಿಕಾರಿ ಜಿ ಪ್ರಭು ಕರೆ

ಬೃಹತ್ ಜಾಗೃತಿ ಕಾಲ್ನಡಿಗೆ ಜಾಥಾದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್  ಸಮಿತಿಯ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವುದರ ಉದ್ದೇಶವೇ ನಾಗರೀಕರಿಗೆ ಜಾಗೃತಿ ಮೂಡಿಸುವುದೇ ಆಗಿದೆ. ಆ ಮೂಲಕ ಅರ್ಹ ಮತದಾರರು ಪಟ್ಟಿಯಿಂದ ಕೈತಪ್ಪಿ ಹೋಗದಂತೆ ನೋಡಿಕೊಳ್ಳುವುದೇ ಆಗಿದೆ

Karnataka SIR: ಪ್ರತಿಯೊಬ್ಬರೂ ಎನ್ಯುಮರೇಷನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ: ಸಿಎಂ ಡಿಕೆಶಿ ಕರೆ

ಪ್ರತಿಯೊಬ್ಬರೂ ಎನ್ಯುಮರೇಷನ್ ಅರ್ಜಿ ತುಂಬಿ: ಸಿಎಂ ಡಿ.ಕೆ. ಶಿವಕುಮಾರ್

CM DK Shivakumar: ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ಜೂ. 30ರಿಂದ ಜು. 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ, ಬಿಎಲ್ಓಗಳು ನಿಮ್ಮ ಮನೆಗಳಿಗೆ ಬಂದು ಅರ್ಜಿ ನೀಡಲಿದ್ದಾರೆ. 30 ದಿನಗಳ ಅವಧಿಯಲ್ಲಿ ಕಡ್ಡಾಯವಾಗಿ ಈ ಎನ್ಯುಮರೇಷನ್ ಅರ್ಜಿ ತುಂಬಿ ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡಬೇಕು. ಇದು ಮತದಾರರ ಕರ್ತವ್ಯವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Karnataka SIR: ರಾಜ್ಯದಲ್ಲಿ ನಾಳೆಯಿಂದ ಎಸ್‌ಐಆರ್‌ ಶುರು; ಎನ್ಯುಮರೇಷನ್ ಫಾರ್ಮ್‌ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನಾಳೆಯಿಂದ ಎಸ್‌ಐಆರ್‌; ಎನ್ಯುಮರೇಷನ್ ಫಾರ್ಮ್‌ ಭರ್ತಿ ಮಾಡುವುದು ಹೇಗೆ?

How to fill SIR Enumeration Form: ರಾಜ್ಯದಲ್ಲಿ ಸದ್ಯ ಒಟ್ಟು 5,54,32,314 (5.54 ಕೋಟಿಗೂ ಹೆಚ್ಚು) ಮತದಾರರಿದ್ದಾರೆ. ಈ ಎಲ್ಲಾ ಮತದಾರರು ಈ ಬಾರಿ ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈ ವಿಶೇಷ ಪರಿಷ್ಕರಣೆಯ ಅಂಗವಾಗಿ ನಿಯೋಜನೆಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು ನಾಳೆಯಿಂದ ಜುಲೈ 29ರವರೆಗೆ ಮನೆ-ಮನೆಗೆ ಖುದ್ದಾಗಿ ಎಸ್‌ಐಆರ್‌ ಪ್ರಕ್ರಿಯೆ ನಡೆಸಲಿದ್ದಾರೆ.

MLA KH Puttaswamy Gowda: ರಾಜ್ಯಕ್ಕೆ ಬೆಂಗಳೂರು ಅಕ್ಷಯ ಪಾತ್ರೆ ಇದ್ದಂತೆ : ಶಾಸಕ ಪುಟ್ಟಸ್ವಾಮಿ ಗೌಡ

ರಾಜ್ಯಕ್ಕೆ ಬೆಂಗಳೂರು ಅಕ್ಷಯ ಪಾತ್ರೆ ಇದ್ದಂತೆ

ನಾಡಪ್ರಭು ಕೆಂಪೇಗೌಡರ ನಿರೀಕ್ಷೆಗೂ ಮೀರಿ ಇಂದು ಬೆಂಗಳೂರು ಇಡೀ ವಿಶ್ವದಲ್ಲಿಯೇ ಪ್ರಖ್ಯಾತಿ ಯನ್ನು ಪಡೆದಿದೆ. ಸುಮಾರು ಒಂದೂವರೆ ಕೋಟಿ ಜನರು ಬೆಂಗಳೂರಿನಲ್ಲಿ ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಅಪಾರ ಕೊಡುಗೆ ಇದೆ. ಬೆಂಗಳೂರಿನ ವಾತಾ ವರಣ. ಇಲ್ಲಿನ ಜನರ ಸಹಬಾಳ್ವೆಯಿಂದಾಗಿ ಬೆಂಗಳೂರಿನಲ್ಲಿ ಪ್ರಪಂಚದ ಇತರೆ ದೇಶಗಳ ದೊಡ್ಡ ದೊಡ್ಡ ಕಂಪನಿಗಳು ಬಂಡವಾಳ ಹೂಡುತ್ತಿವೆ.

ಪಾವಗಡದಲ್ಲಿ ಜನಸಂಪರ್ಕ ಸಭೆ: ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎಚ್.ವಿ. ವೆಂಕಟೇಶ್

ಪಾವಗಡದಲ್ಲಿ ಜನಸಂಪರ್ಕ ಸಭೆ ನಡೆಸಿದ ಶಾಸಕ ಎಚ್.ವಿ. ವೆಂಕಟೇಶ್

Pavagada News: ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಶಾಸಕರ ಭವನದಲ್ಲಿ ಜನಸಂಪರ್ಕ ಸಭೆ ನಡೆಯಿತು. ಸಭೆಗೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ತಮ್ಮ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ಶಾಸಕರ ಮುಂದಿಟ್ಟರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕರು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು: ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ

ಶಿಕ್ಷಣಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ: ಷಡಕ್ಷರಿ ಮುನಿ ಸ್ವಾಮೀಜಿ

Madhugiri News: ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಶತಮಾನಗಳಿಂದ ತುಳಿತಕ್ಕೊಳಗಾದ ಸಮಾಜಗಳು ಉದ್ದಾರವಾಗಬೇಕಾದರೆ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಬೇಕು. ಇದರಿಂದ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತವೆ ಎಂದು ಹಿರಿಯೂರು ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

Chinthamani News: ಚಿಂತಾಮಣಿ ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಿ: ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕೆ ಆರ್ ಎಸ್ ಪಕ್ಷದಿಂದ ಮನವಿ

ಚಿಂತಾಮಣಿ ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಿ

ಅನಿಯಮಿತ ವಾಹನ ನಿಲುಗಡೆ, ರಸ್ತೆ ಬದಿಯ ಅತಿಕ್ರಮಣ,ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಭಾರಿ ವಾಹನಗಳ ಅವ್ಯವಸ್ಥಿತ ಸಂಚಾರದಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ತೀವ್ರ ತೊಂದರೆ ಅನು ಭವಿಸುತ್ತಿದ್ದಾರೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ತುರ್ತು ಸೇವೆಗಳ ವಾಹನಗಳು ರಸ್ತೆ ದಾಟಲು ಮತ್ತು ಸಂಚರಿಸಲು ಹರಸಾಹಸ ಪಡಬೇಕಾಗಿದ್ದು, ಅಪಘಾತಗಳ ಭಯವೂ ಹೆಚ್ಚಾಗಿದೆ

ಚಿಕ್ಕಬಳ್ಳಾಪುರದಲ್ಲಿ ಟಾರ್ಗೆಟ್ ರಾಜಕಾರಣ: 9 ಜೆಡಿಎಸ್‌ ಕಾರ್ಯಕರ್ತರ ಬಂಧನಕ್ಕೆ ನಿಖಿಲ್ ಕಿಡಿ

ಚಿಕ್ಕಬಳ್ಳಾಪುರದಲ್ಲಿ 9 ಜೆಡಿಎಸ್‌ ಕಾರ್ಯಕರ್ತರ ಬಂಧನಕ್ಕೆ ನಿಖಿಲ್ ಕಿಡಿ

ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. ಆದರೆ ಸುಮೋಟೋ ಕೇಸ್ ಹಾಕುವಷ್ಟು ದೊಡ್ಡ ಅಪರಾಧವನ್ನು ಇಲ್ಲಿ ಯಾರೂ ಮಾಡಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವವರನ್ನೇ ಗುರಿಯಾಗಿಸಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

KPCC: ಎಸ್ ಐ ಆರ್ ಪ್ರಕ್ರಿಯೆ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ: ಕೆಪಿಸಿಸಿ ಸದಸ್ಯ ಸೈಯದ್ ಎಜಾಜ್ ಸ್ಪಷ್ಟನೆ

ಎಸ್ ಐ ಆರ್ ಪ್ರಕ್ರಿಯೆ:ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ

ಫಾರ್ಮ್ ಭರ್ತಿ ಮಾಡುವಾಗ ಹೆಸರು ಹಾಗೂ ಇತರೆ ವಿವರಗಳ ಸ್ಪೆಲ್ಲಿಂಗ್ ಸರಿಯಾಗಿದೆಯೇ ಎಂಬು ದನ್ನು ಖಚಿತಪಡಿಸಿಕೊಳ್ಳಬೇಕು.ಮಾಹಿತಿ ಭರ್ತಿ ಮಾಡಿದ ಬಳಿಕ ಸಹಿ ಮಾಡಬೇಕು. ಒಂದು ಪ್ರತಿಯನ್ನು ಅಧಿಕಾರಿಗಳು ಕೊಂಡೊಯ್ಯಲಿದ್ದು, ಮತ್ತೊಂದು ಪ್ರತಿಯನ್ನು ಸಾರ್ವಜನಿಕರು ರಸೀದಿಯಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು.

Shidlaghatta News: ಎಸ್‌ಐಆರ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ, ಮತದಾನದ ಹಕ್ಕು ಉಳಿಸಿಕೊಳ್ಳಿ: ತಹಶೀಲ್ದಾರ್ ಗಗನ ಸಿಂಧು

ಎಸ್‌ಐಆರ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ

ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂದಣಾಧಿಕಾರಿ ಎಸ್‌.ಎಸ್‌. ಅಬೀದ್ ಮಾತನಾಡಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ಹೆಸರುಗಳು ಉಳಿಯದಂತೆ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಬಿಎಲ್‌ಒ ಗಳಿಗೆ ಸಲ್ಲಿಸಿ ಸಹಕರಿಸಿದರೆ ಮಾತ್ರ ಶುದ್ಧ ಮತ್ತು ನಿಖರ ಮತದಾರರ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗು ತ್ತದೆ

Chinthamani News: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -ಜಾಗೃತಿ ಜಾಥಾಗೆ ಚಾಲನೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -ಜಾಗೃತಿ ಜಾಥಾಗೆ ಚಾಲನೆ

ವಿದ್ಯಾರ್ಥಿಗಳು ಮತದಾನ ನಮ್ಮ ಹಕ್ಕು ಯಾರೂ ಮತದಾನದಿಂದ ವಂಚಿತರಾಗಬೇಡಿ ಎಂಬ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಜೂ.30 ರಿಂದ ಜುಲೈ 29ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು,ಅರ್ಹ ನಾಗರಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಈ ಸಂದರ್ಭದಲ್ಲಿ ಕೋರಲಾಯಿತು.

National Pulse Polio Campaign: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ: ಜಿಲ್ಲೆಯ 1.23 ಲಕ್ಷ ಮಕ್ಕಳಿಗೆ ಎರಡು ಹನಿ ಲಸಿಕೆ ಗುರಿ

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

ಪೋಲಿಯೋ ನಿರ್ಮೂಲನೆಗೆ ಸರ್ಕಾರ ನಿರಂತರವಾಗಿ ಕೈಗೊಳ್ಳುತ್ತಿರುವ ಲಸಿಕಾ ಅಭಿಯಾನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ. ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತ ವಾಗದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ ಯರು ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು

Hassan IIT: ಹಾಸನ ಉದ್ದೇಶಿತ ಐಐಟಿ ಭೂ ಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಹಾಸನ ಐಐಟಿ ಭೂ ಸಂತ್ರಸ್ತರಿಗೆ ಕೋರ್ಟ್ ಆದೇಶದಂತೆ ಪರಿಹಾರ

ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿದರು. 7 ಗ್ರಾಮಗಳ ಭೂಸಂತ್ರಸ್ತರ ಅಹವಾಲು ಆಲಿಸಿದ ಸಿಎಂ ಅವರು, ಕಾನೂನುಬದ್ಧ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Gudibande News: ವ್ಯಾಸಂಗದ ಸಮಯವನ್ನು ವ್ಯರ್ಥ ಮಾಡದೇ ಓದುವ ಮೂಲಕ ಸಾಧನೆ ಮಾಡಿ: ಭರತ್ ಪಟೇಲ್

ವ್ಯಾಸಂಗದ ಸಮಯವನ್ನು ವ್ಯರ್ಥ ಮಾಡದೇ ಓದುವ ಮೂಲಕ ಸಾಧನೆ ಮಾಡಿ

ವಿದ್ಯಾರ್ಥಿಗಳು ಓದುವ ಸಮಯವನ್ನು ಅನಗತ್ಯ ಚಟುವಟಿಕೆಗಳಲ್ಲಿ ವ್ಯರ್ಥ ಮಾಡದೆ, ಗುರಿ ಯೊಂದಿಗೆ ಅಧ್ಯಯನ ನಡೆಸಬೇಕು. ಶಿಕ್ಷಣವೇ ಜೀವನದ ಭದ್ರ ಅಡಿಪಾಯವಾಗಿದ್ದು, ಇಂದಿನ ಪರಿಶ್ರಮವೇ ನಾಳಿನ ಯಶಸ್ಸಿಗೆ ದಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯದ ಮಹತ್ವ ಅರಿತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಾದ ತಾವುಗಳು ತಮ್ಮ ಕುಟುಂಬ, ಪೋಷಕರು ಹಾಗೂ ಶಿಕ್ಷಕರನ್ನು ಗೌರವಿಸಬೇಕು

ವಿದ್ಯುತ್ ನಿಗಮಗಳ ಖಾಸಗೀಕರಣ ಬೇಡ ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಭರವಸೆ

ವಿದ್ಯುತ್ ನಿಗಮಗಳ ಖಾಸಗೀಕರಣ ವಿಚಾರ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ

CM DK Shivakumar: ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ನಂದಿಬೆಟ್ಟದ ಹೋಮ್‌ಸ್ಟೇನಲ್ಲಿ ಬೆಂಗಳೂರಿನ ಯುವತಿ ಅನುಮಾನಾಸ್ಪದ ಸಾವು: ಲವ್ ಜಿಹಾದ್ ಆರೋಪ

ನಂದಿಬೆಟ್ಟದ ಹೋಮ್‌ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಮ್‌ಸ್ಟೇನಲ್ಲಿ ಘಟನೆ ನಡೆದಿದೆ. ಮಗಳ ಸಾವಿನ ಹಿನ್ನೆಲೆಯಲ್ಲಿ ಆಕೆಯ ತಾಯಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನೈತಿಕತೆ ಪಾಠಕ್ಕೂ ಮುನ್ನ ಸಾಂವಿಧಾನಿಕ ಹುದ್ದೆಗೆ ಗೌರವ ತೋರಿ: ಕೆಪಿಸಿಸಿ ಅಧ್ಯಕ್ಷರಿಗೆ ಪ್ರಲ್ಹಾದ್‌ ಜೋಶಿ ತಿರುಗೇಟು

ಸಾಂವಿಧಾನಿಕ ಹುದ್ದೆಗೆ ಗೌರವ ತೋರಿ: ಕೆಪಿಸಿಸಿ ಅಧ್ಯಕ್ಷರಿಗೆ ಜೋಶಿ ತಿರುಗೇಟು

Pralhad Joshi: ಸಮಾಜದ ಶಾಂತಿ-ಸೌಹಾರ್ದತೆ ಬಲಿ ಕೊಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವವರು ಬಿ.ಕೆ. ಹರಿಪ್ರಸಾದ್. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದೆಡೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಹೊಸ ಅಧ್ಯಕ್ಷರು ಅಧಿಕಾರದ ಮದದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಬೆಂಗಳೂರಿನ 3 ಸೇರಿ ದೇಶದ 5 ಸ್ಟಾರ್ಟಪ್‌ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’: ಕಂಪನಿಯ ಪ್ಲ್ಯಾನ್‌ ಏನು?

ದೇಶದ 5 ಸ್ಟಾರ್ಟ್ಅಪ್‌ಗಳೊಂದಿಗೆ ಕೈಜೋಡಿಸಿದ ‘ಮಾರುತಿ ಸುಜುಕಿ’

Maruti Suzuki: ಭಾರತದ ಪ್ರಮುಖ ಆಟೋಮೊಬೈಲ್ ಕಂಪನಿ 'ಮಾರುತಿ ಸುಜುಕಿ ಇಂಡಿಯಾ ಲಿ.' ಮಹತ್ವದ ಹೆಜ್ಜೆ ಇಟ್ಟಿದ್ದು, ತನ್ನ ವ್ಯವಹಾರಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಗ್ರಾಹಕರ ಅನುಭವವನ್ನು ಉತ್ತಮಗೊಳಿಸಲು ಕಂಪನಿಯು 5 ವಿನೂತನ ಸ್ಟಾರ್ಟ್ಅಪ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ ಮಾರ್ಗ: ವಿ. ಸೋಮಣ್ಣ

ಬೆಂಗಳೂರಿನಿಂದ 100 ಕಿ.ಮೀ. ದೂರದ ಸ್ಥಳಗಳಿಗೆ ಚತುಷ್ಪಥ ರೈಲ್ವೆ ಮಾರ್ಗ

V Somanna: ಚನ್ನಪಟ್ಟಣ ತಾಲೂಕಿನ ಎಲೆಕೇರಿ ಬಳಿ ನೂತನವಾಗಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆಯನ್ನು ಸೋಮವಾರ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ ಚತುಷ್ಪಥ ರೈಲ್ವೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

D.V. Sadananda Gowda: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಕೆಳಗಿಳಿಸಲು ಪಿತೂರಿ; ಸದಾನಂದ ಗೌಡರದ್ದು ಎನ್ನಲಾದ ಆಡಿಯೊ ವೈರಲ್‌!

ವಿಜಯೇಂದ್ರ ಕೆಳಗಿಳಿಸಲು ಪಿತೂರಿ; ಸದಾನಂದ ಗೌಡರ ಆಡಿಯೊ ವೈರಲ್‌!

ದೆಹಲಿ ಮಟ್ಟದ ನಾಯಕರೊಬ್ಬರ ಜತೆಯಲ್ಲಿ ಮಾತನಾಡಿರುವ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರದ್ದು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನು ಮುಂದುವರಿಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಆಡಿಯೊದಲ್ಲಿ ಒತ್ತಾಯಿಸಿರುವುದು ಕಂಡುಬಂದಿದೆ.

BJP Karnataka: ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಆರೋಪ; ಬಿಜೆಪಿಯಿಂದ ಎಂ.ಜಿ. ಮಹೇಶ್  6 ವರ್ಷ ಉಚ್ಚಾಟನೆ

ಬಿಜೆಪಿಯಿಂದ ಎಂ.ಜಿ. ಮಹೇಶ್ 6 ವರ್ಷ ಉಚ್ಚಾಟನೆ

M.G. Mahesh: ಪಕ್ಷದ ಸಭೆಯಲ್ಲಿ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಬಿಜೆಪಿ ಪ್ರಮುಖರ ಕುರಿತಾಗಿ ಇಲ್ಲಸಲ್ಲದ ಮತ್ತು ಕೀಳುಮಟ್ಟದ, ಅವಹೇಳನಕಾರಿ ಆರೋಪಗಳನ್ನು ಮಾಡಿ, ಪಕ್ಷದ ಸಂಘಟನೆಯಲ್ಲಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮೈಸೂರಿನ ಎಂ.ಜಿ. ಮಹೇಶ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.

ಗಾಢ ನಿದ್ದೆಯಲ್ಲಿದ್ದ ಪತ್ನಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪತಿ

ಪತ್ನಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪತಿ

ಪತ್ನಿಯ ಚಾರಿತ್ರ್ಯ ಶಂಕೆಯಿದ್ದ ಕಾರಣ ಪತಿಯೊಬ್ಬಗಾಢ ನಿದ್ರೆಯಲ್ಲಿದ್ದ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಥಣಿ ತಾಲೂಕಿನ ಖಾವತ್‌ಖೋಪ್ ಗ್ರಾಮದ ಮೂಲದ ಶೋಭಾ ಪರಗೊಂಡ ಸರ್ವಾಡ್ ಎಂದು ಗುರುತಿಸಲಾಗಿದೆ.

ರಾಜ್ಯದಲ್ಲಿ 13,675 ಅಕ್ರಮ ವಲಸಿಗರು

ರಾಜ್ಯದಲ್ಲಿ 13,675 ಅಕ್ರಮ ವಲಸಿಗರು

ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಅಕ್ರಮ ವಲಸಿಗರ ಪಟ್ಟಿಯನ್ನು ಗೃಹ ಇಲಾಖೆ ಅಧಿಕೃತವಾಗಿ ಸಿದ್ಧಪಡಿಸಿದೆ. ಗೃಹ ಇಲಾಖೆಯ ಪ್ರಕಾರ, ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 13675 ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಅತಿ ಹೆಚ್ಚು ಅಂದರೆ ಬರೋಬ್ಬರಿ 10650 ಮಂದಿ ಅಕ್ರಮವಾಗಿ ನೆಲೆಸಿದ್ದು ಅಂಕಿ-ಅಂಶಗಳಿಂದ ತಿಳಿದುಬಂದಿದೆ

ಕರ್ನಾಟಕದಲ್ಲಿ  ಮತದಾರರ ಪಟ್ಟಿ ಪರಿಷ್ಕರಣೆ ಶುರು; ನಾಳೆಯಿಂದ ಮನೆಮನೆಗೆ ಎಸ್‌ಐಆರ್

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶುರು

ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿಯನ್ನು ನೀಡಲಿದ್ದಾರೆ.

Loading...