ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮೈಸೂರಿನಲ್ಲಿ ಸಿಎಂ ಸಿಟಿ ರೌಂಡ್ಸ್‌; ಅಭಿವೃದ್ಧಿ ಕಾರ್ಯಗಳ ವೀಕ್ಷಣೆ, ಗುಣಮಟ್ಟ ಕಾಪಾಡಲು ಸೂಚನೆ

ಮೈಸೂರಿನಲ್ಲಿ ಸಿಎಂ ಸಿಟಿ ರೌಂಡ್ಸ್‌; ಅಭಿವೃದ್ಧಿ ಕಾರ್ಯಗಳ ವೀಕ್ಷಣೆ

CM Siddaramaiah: ಮೈಸೂರಿನ ರಸ್ತೆಗಳು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ನಮ್ಮ ಸರ್ಕಾರವೇ ಕೈಗೊಂಡಿದ್ದು, ಬಿಜೆಪಿಯವರು ಕೇವಲ ಸರ್ಕಾರವನ್ನು ವಿರೋಧಿಸುವ, ಟೀಕಿಸುವ, ಸುಳ್ಳು ಹೇಳುವ ಕೆಲಸದಲ್ಲಿ ನಿರತವಾಗಿದೆ. ಜನರಿಗೆ ಅನುಕೂಲ ಕಲ್ಪಿಸುವ ಯಾವುದೇ ಯೋಜನೆಗಳನ್ನು ಬಿಜೆಪಿಯು ತನ್ನ ಅಧಿಕಾರಾವಧಿಯಲ್ಲಿ ಕೈಗೊಳ್ಳಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

NEET-UG 2026 Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಿಎಂ ಆಗ್ರಹ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇಂದ್ರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ: ಸಿಎಂ

ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳವರೆಗೆ ಪೇಪರ್ ಲೀಕ್ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೊಸ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Tesla Cars: ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಬೆಂಗಳೂರಿನಲ್ಲಿ ಟೆಸ್ಲಾ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

Tesla first Experience Center: ಬೆಂಗಳೂರಿನ ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ತನ್ನ ಚೊಚ್ಚಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಗುರುವಾರ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದ ವಾಹನ ಪ್ರಿಯರಿಗೆ ಟೆಸ್ಲಾ ಕಾರುಗಳ ಭವ್ಯ ಅನುಭವವನ್ನು ನೇರವಾಗಿ ಒದಗಿಸಲಿದೆ.

ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದಿರುವುದು ಅತ್ಯಂತ ದುರದೃಷ್ಟಕರ: ಜೋಶಿ ಕಿಡಿ

ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಹಿಂಪಡೆದಿರುವುದು ಅತ್ಯಂತ ದುರದೃಷ್ಟಕರ: ಜೋಶಿ

Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಲ್ಲೂ 'ವಿಭಜಕ ನೀತಿ' ಅನುಸರಿಸಿ ಶಾಲಾ ಶಿಸ್ತನ್ನು ಹದಗೆಡಿಸುವ ಹುನ್ನಾರಕ್ಕೆ ಮುಂದಾಗಿರುವುದು ನಿಜಕ್ಕೂ ಶೋಚನೀಯ. ಕೇಂದ್ರ ಸರ್ಕಾರ ದೇಶದೆಲ್ಲೆಡೆ ‌ಏಕರೂಪ ನಾಗರಿಕ ಸಂಹಿತೆ ಜಾರಿ ತರುತ್ತಿರುವ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಧರ್ಮಗಳನ್ನು ಒಡೆದಾಳುವ ನೀತಿಗೆ ಕೈ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ; ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ

ನಟ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬೇಗ ಜೈಲಿನಿಂದ ಬಿಡುಗಡೆಯಾಗಿ ಸಿನಿಮಾ ಜಗತ್ತಿಗೆ ಮರಳಬೇಕು ಎಂದು ಕಾಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಾಳೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಚಿತ್ರರಂಗ ಮತ್ತು ದರ್ಶನ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

karnataka Hijab row: ಶಾಲೆಗಳಿಗೆ ಕೇಸರಿ ಶಾಲು ಕೂಡ ಹಾಕಿಕೊಂಡು ಬರುವಂತಿಲ್ಲ: ಸಿಎಂ ಸಿದ್ದರಾಮಯ್ಯ

ಶಾಲೆಗಳಿಗೆ ಕೇಸರಿ ಶಾಲು ಕೂಡ ಹಾಕಿಕೊಂಡು ಬರುವಂತಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಸರ್ಕಾರ ಮತ್ತೆ ಅವಕಾಶ ನೀಡಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಶಾಲಾ, ಕಾಲೇಜುಗಳಲ್ಲಿ ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರು ನಾಗರಿಕರಿಗೆ ಭೂ ಗ್ಯಾರಂಟಿ; ಡಿಸಿಎಂ ಘೋಷಿಸಿದ ಆಫರ್‌ನಲ್ಲೇನಿದೆ?

ಭೂ ಗ್ಯಾರಂಟಿಯ ಬಂಪರ್ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್

Shivakumar announced a bumper guarantee: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ (ಮೇ 13) ಮಾಧ್ಯಮಗೋಷ್ಠಿ ನಡೆಸಿ ಅನೇಕ ನಾಗರಿಕಸ್ನೇಹಿ ಘೋಷಣೆಗಳನ್ನು ಮಾಡಿದರು.

12 ನೇ ತರಗತಿಯವರೆಗೆ  ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು: ಸಿಎಂ ಸಿದ್ದರಾಮಯ್ಯ

ಧಾರ್ಮಿಕ ಸಂಕೇತಗಳನ್ನು ವಿದ್ಯಾರ್ಥಿಗಳು ಧರಿಸಬಹುದು: ಸಿಎಂ

ರಾಜ್ಯದಲ್ಲಿ ಮತ್ತೆ ಹಿಜಾಬ್‌ ವಿವಾದ ಮುನ್ನೆಲೆಗೆ ಬಂದಿದ್ದು, ಸರ್ಕಾರ ಹಿಜಾಬ್‌ ಸೇರಿದಂತೆ ಜನಿವಾರ, ರುದ್ರಾಕ್ಷಿಯನ್ನು ಹಾಕಲು ಅನುಮತಿ ನೀಡಿದೆ. ಪ್ರಾಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಎಂದು ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು ನಾಗರಿಕರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದ ಭೂ ಗ್ಯಾರಂಟಿಯ ಬಂಪರ್ ಘೋಷಣೆ

ಬೆಂಗಳೂರು ನಾಗರಿಕರಿಗೆ ಡಿಸಿಎಂ ಅವರಿಂದ ಭೂ ಗ್ಯಾರಂಟಿಯ ಬಂಪರ್ ಘೋಷಣೆ

"ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ 'ಭೂ ಗ್ಯಾರಂಟಿ' ಮೂಲಕ ಬೆಂಗಳೂರು ನಾಗರಿಕರಿಗೆ 'ಇ' ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ 'ಎ' ಯಿಂದ 'ಬಿ' ಖಾತಾ ಶುಲ್ಕ ಪಾವತಿಸಿದರೆ ಶೇ. 60 ರಷ್ಟು ರಿಯಾಯಿತಿ, ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ, ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ, ಬಿಡಿಎ ಮನೆಗಳ ಮಾರಾಟ ಸೇರಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ನಾಗರಿಕರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಂಪರ್ ಕೊಡುಗೆಯಾಗಿ ಘೋಷಿಸಿದ್ದಾರೆ.

Belgaum Municipal Corporation controversy: ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸದಸ್ಯರ ಆಗ್ರಗಕ್ಕೆ ಧ್ವನಿಗೂಡಿಸಿದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಈಗಾಗಲೇ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದ್ದು ಬೆಳಗಾವಿ ಮಹಾ ನಗರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇದೆಯಾ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತದೆ.

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್‌; ಸರ್ಕಾರದ ನಡೆಗೆ ಸಿಡಿದೆದ್ದ ಬಿಜೆಪಿ

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್‌; ಸರ್ಕಾರದ ನಡೆಗೆ ಬಿಜೆಪಿ ಕಿಡಿ

Karnataka withdraws 2022 uniform order: ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಸರ್ಕಾರ ಮತ್ತೆ ಅವಕಾಶ ನೀಡಿದೆ. ಆದರೆ ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

Shidlaghatta News: ಜೈ ಭೀಮ್ ಘೋಷಣೆಯೊಂದಿಗೆ ಯುವತಿಯರ ಸಂಭ್ರಮ : ಅಂಬೇಡ್ಕರ್ ಆದರ್ಶ ಸಾರಿದ ಅಲಸೂರುದಿನ್ನೆ ಯುವತಿಯರು

ಜೈ ಭೀಮ್ ಘೋಷಣೆಯೊಂದಿಗೆ ಯುವತಿಯರ ಸಂಭ್ರಮ

ಕಾರ್ಯಕ್ರಮದಲ್ಲಿ ಬಾಲಕಿಯರು ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಗ್ರಾಮ ಸ್ಥರಿಗೆ ಸಂವಿಧಾನದ ಮಹತ್ವ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು. ಮಹಿಳೆಯರು ಹಾಗೂ ಯುವತಿಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಆಶಯವನ್ನು ಕಾರ್ಯಕ್ರಮ ಪ್ರತಿಬಿಂಬಿಸಿತು.

MP Dr. K. Sudhakar: ಸಮುದಾಯ ಭವನಕ್ಕೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಧನ ಸಹಾಯ ಮಾಡುವುದಾಗಿ ಸಂಸದ ಡಾ.ಕೆ.ಸುಧಾಕರ್ ಭರವಸೆ

ಸಮುದಾಯ ಭವನಕ್ಕೆ ಧನ ಸಹಾಯ: ಸಂಸದ ಡಾ.ಕೆ.ಸುಧಾಕರ್ ಭರವಸೆ

ಸುಮಾರು 400 ವರ್ಷಗಳಷ್ಟು ಪುರಾತನ ವಾದ ದೇವಾಲಯದ ಈ ಧಾರ್ಮಿಕ ಸಮಾರಂಭ ದಲ್ಲಿ ಭಾಗವಹಿಸಲು ಸಂತೋಷ ವಾಗುತ್ತಿದೆ. ಇದು ಮಹಿಮಾನ್ವಿತವಾದ ಸ್ಥಳ ಸಹ ಆಗಿದೆ. ಇದು ಮತ್ತಷ್ಟು ಅಭಿವೃದ್ಧಿ ಯಾಗಿ ಈ ಕ್ಷೇತ್ರದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸು ವಂತಾಗಬೇಕಾಗಿದೆ. ಆದ್ದರಿಂದಲೇ ಇದರ ಅಭಿವೃದ್ಧಿಗೆ ಹೆಗಲೆಣೆಯಾಗಿರುತ್ತೇನೆ

Chinthamani News: ಕರ್ತವ್ಯನಿಷ್ಠ ಅಧಿಕಾರಿಗೆ ಗೌರವ: ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಪಿ ಬೀಳ್ಕೊಡುಗೆ ಸಮಾರಂಭ

ಚಿಂತಾಮಣಿಯಲ್ಲಿ ಡಿವೈಎಸ್ಪಿ ಮುರಳಿಧರ್ ಪಿ ಬೀಳ್ಕೊಡುಗೆ

ಮುರಳಿಧರ್ ಅವರು ತಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಅಧಿಕಾರಿಗಳು ವರ್ಗಾವಣೆಗೊಳ್ಳುವುದು ಸಹಜ, ಆದರೆ ತಾವು ಕೆಲಸ ಮಾಡಿದ ಕ್ಷೇತ್ರದಲ್ಲಿ ಜನಮಾನಸದಲ್ಲಿ ಉಳಿಯುವುದು ಮುಖ್ಯ

Chinthamani News: ಹೊಸ ರೂಪದಲ್ಲಿ ಸ್ಮೈಲ್ ನೆಸ್ಟ್: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

ಕ್ಲಿನಿಕ್‌ನ ವೈದ್ಯರಾದ ಡಾ.ಆರ್ಷಿತ ಮತ್ತು ಡಾ.ಭುವನ್ ಅವರು ಕ್ಲಿನಿಕ್‌ನಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.ನಮ್ಮಲ್ಲಿ ಹಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುವುದು.ಮುಖ್ಯವಾಗಿ ರೂಟ್ ಕೆನಾಲ್, ಕಾಂಪೋ ಸಿಟ್ ಫಿಲ್ಲಿಂಗ್,ಮತ್ತು ದಂತ ಜೋಡಣೆಯಂತಹ (Orthodontic)ಚಿಕಿತ್ಸೆಗಳು ಲಭ್ಯವಿವೆ ಎಂದು ತಿಳಿಸಿದರು.

Sir M.V. Lawyer's Cup: 12 ತಂಡಗಳ ಭಾಗಿ; ಮೇ 17ರಂದು ಫೈನಲ್ ಪಂದ್ಯ: ಸತ್ಯಸಾಯಿ ಗ್ರಾಮದಲ್ಲಿ ವಕೀಲರ ಸಂಘದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

12 ತಂಡಗಳ ಭಾಗಿ; ಮೇ 17ರಂದು ಫೈನಲ್ ಪಂದ್ಯ

ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, “ಯಾವುದೇ ವೃತ್ತಿಯಲ್ಲಿದ್ದರೂ ಕ್ರೀಡೆಗೆ ಆದ್ಯತೆ ನೀಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಗೆ ಮನ್ನಣೆ ನೀಡುವ ದೇಶವು ಆರ್ಥಿಕತೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

Nirmalanandanath Mahaswamiji: ಚಿಕ್ಕಬಳ್ಳಾಪುರದ ಸಂಘ ರಾಜ್ಯಕ್ಕೆ ಮಾದರಿ: ನಿರ್ಮಲಾನಂದನಾಥ ಮಹಾಸ್ವಾಮೀಜಿ

ಚಿಕ್ಕಬಳ್ಳಾಪುರದ ಸಂಘ ರಾಜ್ಯಕ್ಕೆ ಮಾದರಿ: ನಿರ್ಮಲಾನಂದನಾಥ ಮಹಾಸ್ವಾಮೀಜಿ

ಸುಮಾರು 80 ವರ್ಷ ಇತಿಹಾಸವಿರುವ ಒಕ್ಕಲಿಗರ ಸಂಘದ ಕಲ್ಯಾಣ ಮಂಟಪ ಇಂದು ಬೃಹದಾಕಾರವಾಗಿ ಎದ್ದು ನಿಂತಿರುವ ಈ ವಾಣಿಜ್ಯ ಕಟ್ಟಡದ ಜಾಗವನ್ನ ದಾನವಾಗಿ ನೀಡಿ ಉಳಿಸಿಕೊಂಡು ಬಂದಿರುವ ಕೀರ್ತಿ ನಾರಾಯಣಪ್ಪ ಮತ್ತು ಪೊಲೀಸ್ ದೊಡ್ಡಪ್ಪ ಎನ್ನು ವವರನ್ನು ಈಗ ನೆನೆಯಲೇ ಬೇಕು. ಒಕ್ಕಲುತನದಲ್ಲಿ ಮಣ್ಣಿನ ವಾಸನೆಯೊಂದನೆ ಬೆಳೆಯು ತ್ತಿರುವ ಸಮುದಾಯಕ್ಕೆ ಕ್ಷಮಿಸುವ ಗುಣ ಇದೆ.

ವಕ್ಕಲಿಗ ಸಮುದಾಯ ನಾಯಕತ್ವದ ಸಮುದಾಯ: ಡಾ.ಎಂ.ಸಿ.ಸುಧಾಕರ್

ವಕ್ಕಲಿಗ ಸಮುದಾಯ ನಾಯಕತ್ವದ ಸಮುದಾಯ: ಡಾ.ಎಂ.ಸಿ.ಸುಧಾಕರ್

ವಕ್ಕಲಿಗ ಮಹಿಳೆಯರಂತೂ ಉದ್ಯಮ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವುದು ಅಭಿನಂದನೀಯ. ವಕ್ಕಲಿಗರ ವೃತ್ತಿ ಯಾವುದಾದರೂ ಗೌರವಹಿತವಾದ ಬದುಕನ್ನು ಬದುಕಿ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಮತ್ತು ಅವರಿಂದ ಸಮಾಜಕ್ಕೆ ಉತ್ತಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆಂದರು.

2028ಕ್ಕೆ ಕರ್ನಾಟಕದಲ್ಲಿ ಎನ್‌ಡಿಎ ಸರ್ಕಾರ ಬರುವುದು ಖಚಿತ: ನಿಖಿಲ್ ಕುಮಾರಸ್ವಾಮಿ

2028ಕ್ಕೆ ಕರ್ನಾಟಕದಲ್ಲಿ ಎನ್‌ಡಿಎ ಸರ್ಕಾರ ಬರುವುದು ಖಚಿತ: ನಿಖಿಲ್

Nikhil Kumaraswamy: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ ₹29,764.10 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅನುದಾನವನ್ನು ₹190 ಕೋಟಿಯಿಂದ ₹50 ಕೋಟಿಗೆ ಇಳಿಸಿ, ₹140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

MP Dr. K. Sudhakar: ವಕ್ಕಲಿಗ ಸಮುದಾಯ ಸಂಘಟಿತ ಶಕ್ತಿಯ ಪ್ರತಿರೂಪ: ಸಂಸದ ಡಾ.ಕೆ.ಸುಧಾಕರ್

ವಕ್ಕಲಿಗ ಸಮುದಾಯ ಸಂಘಟಿತ ಶಕ್ತಿಯ ಪ್ರತಿರೂಪ: ಸಂಸದ ಡಾ.ಕೆ.ಸುಧಾಕರ್

ಇದು ನಮ್ಮ ಸಮುದಾಯದ ಆತ್ಮವಿಶ್ವಾಸದ ಪ್ರತೀಕ. ಇದು ನಮ್ಮ ಬೇರುಗಳನ್ನು ಮರೆಯದೇ ಭವಿಷ್ಯದ ಕಡೆ ಸಾಗುವ ಸಂಕಲ್ಪವಾಗಿದೆ. ಒಕ್ಕಲಿಗರ ಕಲ್ಯಾಣ ಮಂಟಪ, ಕೆಂಪೇಗೌಡ ಕಾನೂನು ಮಹಾ ವಿದ್ಯಾಲಯ ಹಾಗೂ ಒಕ್ಕಲಿಗರ ವಿದ್ಯಾರ್ಥಿ ನಿಲಯ ಕೂಡ ಹೊಸದಾಗಿ ನಿರ್ಮಾಣ ವಾಗುತ್ತಿರುವುದು ಸಮಾಜದ ದೂರದೃಷ್ಟಿ ಮತ್ತು ಸಂಘಟಿತ ಶಕ್ತಿಗೆ ಸಾಕ್ಷಿಯಾಗಿದೆ.

ಯಕ್ಷಗಾನದ ಹಿರಿಯ ಭಾಗವತ ಕಪ್ಪೆಕರೆ ಸುಬ್ರಾಯ ಹೆಗಡೆ ನಿಧನ

ಯಕ್ಷಗಾನದ ಹಿರಿಯ ಭಾಗವತ ಕಪ್ಪೆಕರೆ ಸುಬ್ರಾಯ ಹೆಗಡೆ ನಿಧನ

ಯಕ್ಷಗಾನ ಲೋಕದ ದಿಗ್ಗಜ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಅವರು ಮೇ 13 ರಂದು ಬುಧವಾರ ನಿಧನರಾದರು. ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಇವರು, ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಎಂದು ಹೆಸರುವಾಸಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

DK Shivakumar: ಕೋರ್ಟ್ ನಿರ್ದೇಶನದಂತೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿ.ಕೆ. ಶಿವಕುಮಾರ್

ಕೋರ್ಟ್ ನಿರ್ದೇಶನದಂತೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿ.ಕೆ. ಶಿವಕುಮಾರ್

DK Shivakumar: ಜಿಬಿಎ ಚುನಾವಣೆ ಯಾವಾಗ ನಡೆಯಲಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯುತ್ತದೆ ಎಂದು ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ದೇಶದ ಹಿತದೃಷ್ಟಿಯಿಂದ ಪಿಎಂ ಸಲಹೆ; ವಿರೋಧ ಮಾಡುವುದನ್ನು ಕೈಬಿಡಿ ಎಂದ ಎನ್. ರವಿಕುಮಾರ್

ದೇಶದ ಹಿತದೃಷ್ಟಿಯಿಂದ ಪಿಎಂ ಸಲಹೆ: ಎನ್. ರವಿಕುಮಾರ್

N Ravikumar: ಪ್ರಧಾನಿಯವರ ಕರೆಗೆ ಜನರು, ಸರ್ಕಾರಗಳೂ ಸ್ಪಂದಿಸುತ್ತಿವೆ. ಕೇಂದ್ರವನ್ನು ಟೀಕಿಸಬೇಕು, ವಿರೋಧಿಸಬೇಕೆಂಬ ಚಾಳಿ ಇರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದವರು ಇದನ್ನು ವಿರೋಧಿಸುವ ಮನಸ್ಥಿತಿ ಹೊಂದಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಟೀಕಿಸಿದ್ದಾರೆ.

ಸರ್ಕಾರದ 6ನೇ ಭೂ ಗ್ಯಾರಂಟಿಯಲ್ಲಿ ಯಾವುದೇ  ವಿಶೇಷತೆ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಸರ್ಕಾರದ 6ನೇ ಭೂ ಗ್ಯಾರಂಟಿಯಲ್ಲಿ ವಿಶೇಷತೆ ಇಲ್ಲ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಬೆಂಗಳೂರಲ್ಲಿ ರಸ್ತೆ ಗುಂಡಿಗಳು ಹಾಗೇ ಇವೆ. ಜನರ ಕೋಪ ಎದುರಿಸಲಾಗದೇ ಕಾಂಗ್ರೆಸ್ ಸರ್ಕಾರ ಜಿಬಿಎ ಚುನಾವಣೆಯನ್ನು ನವೆಂಬರ್ ತಿಂಗಳಿಗೆ ಮುಂದಕ್ಕೆ ಹಾಕಲು ಕೋರ್ಟಿಗೆ ಅರ್ಜಿ ಹಾಕಿದೆ. ಕಾಂಗ್ರೆಸ್ ಪಕ್ಷ ಚುನಾವಣಾ ಭೀತಿ ಹೊಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

Loading...