ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್; ಡಿಸೆಂಬರ್‌ 23ರಿಂದ ಹಳದಿ ಮಾರ್ಗದಲ್ಲಿ 6ನೇ ರೈಲು ಸಂಚಾರ

ನಮ್ಮ ಮೆಟ್ರೋ; ನಾಳೆಯಿಂದ ಹಳದಿ ಮಾರ್ಗದಲ್ಲಿ 6ನೇ ರೈಲು ಸಂಚಾರ

Namma Metro: ಮಂಗಳವಾರ (ಡಿಸೆಂಬರ್ 23) ಬೆಂಗಳೂರು ನಮ್ಮ ಮೆಟ್ರೋದ ಹಳದಿ ಲೈನ್‌ನಲ್ಲಿ 6ನೇ ಹೊಸ ರೈಲಿನ ಓಡಾಟ ಆರಂಭವಾಗಲಿದೆ. ಇದರಿಂದ ಇನ್ನುಮುಂದೆ ಹೆಚ್ಚು ಹೊತ್ತು ರೈಲಿಗಾಗಿ ಕಾಯಬೇಕಾಗಿಲ್ಲ. ಈ ಬಗ್ಗೆ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ.

Dr.M.C.Sudhakar: ಶುದ್ದ ಕುಡಿಯುವ ನೀರಿನ ಘಟಕ ಮತ್ತು ಹೈಮಾಸ್ಟ್ ದೀಪ ಉದ್ಘಾಟಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್

ಶುದ್ದ ಕುಡಿಯುವ ನೀರಿನ ಘಟಕ ಮತ್ತು ಹೈಮಾಸ್ಟ್ ದೀಪ ಉದ್ಘಾಟನೆ

ನಗರದ ನೆಕ್ಕುಂದಿ ಕೆರೆಯ ಅಭಿವೃದ್ಧಿಗೆ 74 ಕೋಟಿ ರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಚಿಂತಾಮಣಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜನರ ಬೇಡಿಕೆ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ.

Actress Aditi Prabhudev: ಶಿಕ್ಷಣವೇ ಎಲ್ಲ ವಿಮೋಚನೆಗಳ ಪ್ರಬಲ ಅಸ್ತ್ರವಾಗಿದೆ : ಚಲನಚಿತ್ರ ನಟಿ ಅದಿತಿ ಪ್ರಭುದೇವ್

ಶಿಕ್ಷಣವೇ ಎಲ್ಲ ವಿಮೋಚನೆಗಳ ಪ್ರಬಲ ಅಸ್ತ್ರವಾಗಿದೆ

ಸಂಕಲ್ಪ ಎಂಬ ದಿಕ್ಸೂಚಿ ಹೇಳಿಕೆಯಿಂದ ನಡೆಯುತ್ತಿರುವ ಕಾರ್ಯಕ್ರಮಗಳು ದೃಢ ಸಂಕಲ್ಪದಿAದ ಹೊರ ಹೊಮ್ಮುವ ಸಾಧನೆಗಳನ್ನು ಈ ಕಾರ್ಯಕ್ರಮವು ತೆರೆದಿಡುತ್ತಿದೆ. ಸಂಕಲ್ಪ ಎಂದರೆ ವ್ಯಕ್ತಿಯ ಸಮಗ್ರ ಪರಿವರ್ತನೆಯ ಉದ್ದೇಶಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಸಾಮರ್ಥ್ಯಗಳ. ಪೂರ್ಣ ಮನಸ್ಸು, ಅದಮ್ಯ ಇಚ್ಛಾಶಕ್ತಿ, ಸಂಯಮ ಮತ್ತು ಆತ್ಮವಿಶ್ವಾಸದಿಂದ ಅಂತರಂಗದ ಸಾಮರ್ಥ್ಯ ಗಳು ಸಹಜವಾಗಿ ಹೊರ ಹೊಮ್ಮಬೇಕು.

ಶಿವಮೊಗ್ಗದಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕು ಇರಿದ ಕಿಡಿಗೇಡಿಗಳು!

ಶಿವಮೊಗ್ಗದಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕು ಇರಿತ

Shivamogga News: ಚಾಕು ಇರಿತಕ್ಕೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಳೆ ವೈಷಮ್ಯದಿಂದಾಗಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Gokarna News: ಸಂತೋಷದಲ್ಲಿ ಸಂದೇಶವಿರಲಿ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿ

ಸಂತೋಷದಲ್ಲಿ ಸಂದೇಶವಿರಲಿ: ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿ

ನಮ್ಮ ಅಂತರಂಗದಲ್ಲಿ ಅಸಂಖ್ಯಾತ ಬೆಳಕಿನ ಪುಂಜವಿದ್ದು ಅದನ್ನು ದಾಟಿ ಪರಂಜ್ಯೋತಿ ಇದೆ. ಅದನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕು. ಅಂತರಂಗದ ಮಹಾ ಯಾತ್ರೆಯಲ್ಲಿ ಒಂದೊಂದು ಚಕ್ರಗಳು ಒಂದೊಂದು ನಿಲ್ದಾಣ ಗಳಿದ್ದಂತೆ. ಸಾಧಕನಿಗೆ ಎಲ್ಲವೂ ಅತಿ ಮುಖ್ಯವಾದವು. ಈ ಸಪ್ತ ಚಕ್ರಗಳು ಅಧ್ಯಾತ್ಮವನ್ನು ಮಾತ್ರ ಸೂಚಿಸದೇ ಲೌಕಿಕ ಬದುಕಿಗೂ ಸಹಕಾರಿ. ಅವುಗಳಿಲ್ಲದೇ ಬದುಕಿನ ಬಂಡಿ ಸಾಗದು

ವಾಣಿಜ್ಯ ವಾಹನಗಳೊಂದಿಗೆ ರೀಮಾ ಟ್ರಾನ್ಸ್‌ಪೋರ್ಟ್ ಔಷಧ ಪೂರೈಕೆ ಸರಪಳಿ ದಕ್ಷತೆ ಹೆಚ್ಚಿಸುತ್ತದೆ ಟಾಟಾ ಮೋಟಾರ್ಸ್

ಔಷಧ ಪೂರೈಕೆ ಸರಪಳಿ ದಕ್ಷತೆ ಹೆಚ್ಚಿಸುತ್ತದೆ ಟಾಟಾ ಮೋಟಾರ್ಸ್

RTPL ತನ್ನ ಬಲವಾದ ಕಾರ್ಯಾಚರಣೆಯ ಶಿಸ್ತು, ಪ್ರಕ್ರಿಯೆಯ ಶ್ರೇಷ್ಠತೆ ಮತ್ತು ನಿರಂತರ ನಾವೀನ್ಯತೆಗೆ ಬದ್ಧತೆಯ ಮೂಲಕ ಕೋಲ್ಡ್ ಚೈನ್ ವಿಭಾಗದಲ್ಲಿ ನಾಯಕತ್ವದ ಸ್ಥಾನವನ್ನು ಗಳಿಸಿದೆ. ಕಂಪನಿಯು ದೃಢವಾದ SOP ಗಳು, ಸಮಗ್ರ ಆಕಸ್ಮಿಕ ಯೋಜನೆ ಮತ್ತು ಸುಧಾರಿತ ಮೇಲ್ವಿಚಾರಣಾ ತಂತ್ರಜ್ಞಾನಗಳ ಏಕೀಕರಣದೊಂದಿಗೆ ತನ್ನ ಜಾಲದ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ನಿರ್ವಹಿಸುತ್ತದೆ.

ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ; ಪ್ರತಿವಾದಿಗೆ ನೋಟಿಸ್ ಜಾರಿ

ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ತಡೆಯಾಜ್ಞೆ

ರಾಮೇಶ್ವರಂ ಕೆಫೆಯು ಕೆಲವು ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಉದ್ದೇಶಪೂರ್ವಕ ವಾಗಿ ಸತ್ಯವನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ್ದು, ಈ ದಾರಿ ತಪ್ಪಿಸುವ ನಿರೂಪಣೆಗಳನ್ನು ಪರಿಶೀಲನೆ ಇಲ್ಲದೆ ಬೇಜವಾಬ್ದಾರಿಯಿಂದ ವರ್ಧಿಸಲಾಗುತ್ತಿದೆ, ಇದು ಸಾರ್ವಜನಿಕ ರಲ್ಲಿ ತಪ್ಪಿಸಬಹುದಾದ ಗೊಂದಲವನ್ನು ಉಂಟುಮಾಡುತ್ತದೆ.

Renaming MGNREGA: ಗಾಂಧೀಜಿ ಹೆಸರಿಗೆ ಕತ್ತರಿ; ಬಿಜೆಪಿ ಅಂತಿಮ ದಿನಗಳು ಆರಂಭ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ

ಗಾಂಧೀಜಿ ಹೆಸರಿಗೆ ಕತ್ತರಿ; ಬಿಜೆಪಿ ಅಂತಿಮ ದಿನಗಳು ಆರಂಭ ಎಂದ ಡಿಕೆಶಿ

ಆರ್ಟಿಕಲ್ 21ರ ಮೂಲಕ ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ ಎಂದು ನನಗೆ ಅನಿಸುತ್ತಿದೆ ಎಂದು ಡಿಸಿಎಂ‌ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Karnataka CM Row: ಜನವರಿ 15ರೊಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಖ್ಯಾತ ಜ್ಯೋತಿಷಿ ಭವಿಷ್ಯ!

ಜನವರಿ 15ರೊಳಗೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಜ್ಯೋತಿಷಿ ಭವಿಷ್ಯ!

ಬಬಲೇಶ್ವರ ಜ್ಯೋತಿಷಿ ಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಉಲ್ಲಾಸ್ ಜೋಶಿ ಅವರು ರಾಜ್ಯ ರಾಜಕೀಯದ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಡಿ.ಕೆ.ಶಿವಕುಮಾ‌ರ್ ಅವರು ಸಿಎಂ ಆಗುವುದು ಯಾವಾಗ ಎಂಬ ಬಗ್ಗೆ ಜ್ಯೋತಿಷಿ ಭವಿಷ್ಯ ನುಡಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಡೈರಿ ಸರ್ಕಲ್‌-ನಾಗವಾರ, ಸಿಲ್ಕ್ ಬೋರ್ಡ್‌-ಕೆ.ಆರ್‌.ಪುರ ಮೆಟ್ರೋ ಮಾರ್ಗ 2026ರ ಡಿಸೆಂಬರ್‌ಗೆ ಉದ್ಘಾಟನೆ: ಡಿಕೆಶಿ

ಡೈರಿ ಸರ್ಕಲ್‌-ನಾಗವಾರ ಭೂಗತ ಮೆಟ್ರೋ 2026ರ ಡಿಸೆಂಬರ್‌ಗೆ ಉದ್ಘಾಟನೆ

Namma Metro: 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ ಮಾರ್ಗ ಕಾರ್ಯಾರಂಭ ಮಾಡಲಾಗುವುದು. ಆ ಮೂಲಕ ಬೆಂಗಳೂರಿನಲ್ಲಿ 175 ಕಿ.ಮೀ ಉದ್ದದ ಮಾರ್ಗ ಕಾರ್ಯನಿರ್ವಹಿಸಲಿದೆ. ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ: ಬೊಮ್ಮಾಯಿ ಕಿಡಿ

ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ: ಬೊಮ್ಮಾಯಿ

Basavaraj Bommai: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಈಗ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಈಗ ಒಟ್ಟು ಮೂವತ್ತು ಅಂಕ ಬಿದ್ದರೆ ಸಾಕು. ಅದರಲ್ಲಿ 16 ಅಂಕ ಆಂತರಿಕ ಅಂಕ ಕೊಡ್ತಾರಂತೆ. ಇದರಿಂದ ಶಿಕ್ಷಣ ಗುಣಮಟ್ಟ ಹಾಳಾಗುತ್ತದೆ.‌ ಇದನ್ನು ತಡೆಗಟ್ಟಿ, ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ರೂ. ಎಲ್ಲಿ ಹೋಯ್ತು?; ಸಿಎಂಗೆ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ

ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ರೂ. ಎಲ್ಲಿ ಹೋಯ್ತು?: ಎಚ್‌ಡಿಕೆ ಪ್ರಶ್ನೆ

HD Kumaraswamy: ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷ್ಮಿ‌ ಹಣ ಎಲ್ಲಿ ಹೋಗಿದೆ? ಆ ಹಣ ಖಜಾನೆಯಲ್ಲಿ ಇದೆಯಾ? ಇಲ್ಲವಾ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರು ಮತ್ತು ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿದೇಶಕ್ಕೆ ಪ್ರಯಾಣವೇ? ಅಂತರರಾಷ್ಟ್ರೀಯ ಪ್ರಯಾಣ ವಿಮೆ ಪಡೆಯಲು ಸರಳ ಮಾರ್ಗದರ್ಶಿ

ವಿದೇಶಕ್ಕೆ ಪ್ರಯಾಣವೇ? ವಿಮೆ ಪಡೆಯಲು ಸರಳ ಮಾರ್ಗದರ್ಶಿ

ಅಂತರರಾಷ್ಟ್ರೀಯ ರಜಾದಿನವನ್ನು ಯೋಜಿಸುವುದು ತನ್ನದೇ ಆದ ಉತ್ಸಾಹ ವನ್ನು ಹೊಂದಿರುತ್ತದೆ. ನೀವು ಸರಿಯಾದ ವಿಮಾನಗಳನ್ನು ಹುಡುಕುತ್ತೀರಿ, ಎಲ್ಲಿ ಉಳಿಯಬೇಕು ಎಂದು ಲೆಕ್ಕಾಚಾರ ಮಾಡು ತ್ತೀರಿ ಮತ್ತು ನಿಮಗೆ ಖುಷಿ ನೀಡುವ ಪ್ರವಾಸದ ಯೋಜನೆಯನ್ನು ರೂಪಿಸುತ್ತೀರಿ. ಇದೆಲ್ಲವನ್ನೂ ಮಾಡುವಾಗ, ಪ್ರಯಾಣ ವಿಮೆಗಾಗಿ ಒಂದು ಕ್ಷಣ ಮೀಸಲಿಡುವುದು ಯೋಗ್ಯವಲ್ಲವೇ?

ಸರ್ಫೆಸಿ ಕಾಯ್ದೆಗೆ ಪರಿಹಾರ; ದೆಹಲಿಗೆ ಕಾಫಿ ಬೆಳೆಗಾರರ ನಿಯೋಗ ಬರುವಂತೆ ಎಚ್.ಡಿ. ಕುಮಾರಸ್ವಾಮಿ ಸಲಹೆ

ದೆಹಲಿಗೆ ಕಾಫಿ ಬೆಳೆಗಾರರ ನಿಯೋಗ ಬರುವಂತೆ ಎಚ್.ಡಿ. ಕುಮಾರಸ್ವಾಮಿ ಸಲಹೆ

ಸೆಕ್ಯುರಿಟೈಸೇಶನ್ ಮತ್ತು ಹಣಕಾಸು ಆಸ್ತಿಗಳ ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯ್ದೆ (SARFAESI), ಕಾಫಿ ಬೆಳೆಗಾರರಿಗೆ ಮರಣಶಾಸನವಾಗಿದೆ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದೆಹಲಿಗೆ ನಿಯೋಗ ಬರುವಂತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಮದುವೆಗೆ ಒಪ್ಪದ ಪ್ರಿಯಕರ; ಬಳ್ಳಾರಿಯಲ್ಲಿ ವಿಡಿಯೊ ಮಾಡುತ್ತಲೇ ವಿವಾಹಿತ ಮಹಿಳೆ ಆತ್ಮಹತ್ಯೆ

ಮದುವೆಗೆ ಒಪ್ಪದ ಪ್ರಿಯಕರ; ವಿಡಿಯೊ ಮಾಡುತ್ತಲೇ ವಿವಾಹಿತ ಮಹಿಳೆ ಆತ್ಮಹತ್ಯೆ

Bellary News: ಮಹಿಳೆಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದು, ಪತಿಯಿಂದ ದೂರವಿದ್ದಳು. ಈ ನಡುವೆ ಯುವಕನೊಬ್ಬನ ಜತೆ ಸ್ನೇಹವಾಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಹೀಗಾಗಿ ತನ್ನನ್ನು ಮದುವೆ ಆಗುವಂತೆ ಪ್ರಿಯಕರನಿಗೆ ಒತ್ತಾಯ ಮಾಡಿದ್ದಳು. ಆದರೆ, ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದು, ಮಹಿಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಮುಂಬೈಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ನೇರ ವಿಮಾನ ಸೇವೆ ನಿಲ್ಲಿಸಲಿದೆ ಏರ್ ಇಂಡಿಯಾ; ಕಾರಣವೇನು?

ಬೆಂಗಳೂರು-ಸ್ಯಾನ್ ಫ್ರಾನ್ಸಿಸ್ಕೋ ನೇರ ವಿಮಾನ ಸೇವೆ ರದ್ದು

Air India to discontinue direct flights: ಏರ್ ಇಂಡಿಯಾ ಮಾರ್ಚ್ 1ರಿಂದ ಮುಂಬೈ ಮತ್ತು ಬೆಂಗಳೂರು ನಗರಗಳಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ನೇರ ವಿಮಾನ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದೆ. ವಾಯು ಪ್ರದೇಶ ನಿರ್ಬಂಧಗಳಿಗೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಏರ್ ಇಂಡಿಯಾ ತಿಳಿಸಿದೆ.

Bengaluru Power Cut: ಗಮನಿಸಿ; ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

BESCOM News: 66/11 ಕೆವಿ ಕುಂಬಳಗೋಡು ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಡಿ.23ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನ ಪಾದಚಾರಿ ಮಾರ್ಗಗಳ ಸ್ಥಿತಿ ನೋಡಿ; ವಿಡಿಯೊ ಶೇರ್ ಮಾಡಿದ ಕೆನಡಾ ವ್ಯಕ್ತಿ ಹೇಳಿದ್ದೇನು?

ಬೆಂಗಳೂರಿನ ಪಾದಚಾರಿ ರಸ್ತೆಯ ಅವ್ಯವಸ್ಥೆ: ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

Viral Video: ಸಿಲಿಕಾನ್ ಸಿಟಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರೂ ಇಲ್ಲಿನ ಮೂಲ ಸೌಕರ್ಯಗಳ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದ ಅತ್ಯಂತ ಪ್ರತಿಷ್ಠಿತ ಪ್ರದೇಶದಲ್ಲಿ ಒಂದಾದ ಇಂದಿರಾನಗರದ ಪಾದಚಾರಿ ಮಾರ್ಗಗಳ ಸಮಸ್ಯೆಯನ್ನು ಅವರು ಶೇರ್ ಮಾಡಿಕೊಂಡಿದ್ದು ಸದ್ಯ ಭಾರಿ ವೈರಲ್ ಆಗಿದೆ.

No Salary: 6 ತಿಂಗಳಿಂದ ಸಂಬಳ ಕೊಡಲಿಲ್ಲವೆಂದು ರಾಜೀನಾಮೆ ಕೊಟ್ಟ ವೈದ್ಯಾಧಿಕಾರಿ

6 ತಿಂಗಳಿಂದ ಸಂಬಳ ಕೊಡಲಿಲ್ಲವೆಂದು ರಾಜೀನಾಮೆ ಕೊಟ್ಟ ವೈದ್ಯಾಧಿಕಾರಿ

ವೈದ್ಯರಾದ ಡಾ.ಕುಲದೀಪ್ ಎಂ.ಡಿ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡೂವರೆ ವರ್ಷದಿಂದ ವೈದ್ಯಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಸಂಬಳ ಬಾರದೇ ವೈಯಕ್ತಿಕ ಜೀವನಕ್ಕೆ ಸಮಸ್ಯೆ ಆಗುತ್ತಿದೆ. ಆರ್ಥಿಕ ಸಮಸ್ಯೆ ಉಂಟಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೋಮ-ಹವನ; ಅಹಿತಕರ ಘಟನೆ ನಡೆಯದಿರಲೆಂದು ದೇವರ ಮೊರೆ ಹೋದ ಕೆಎಸ್‌ಸಿಎ

ದೇವರ ಮೊರೆ ಹೋದ ಕೆಎಸ್‌ಸಿಎ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೋಮ-ಹವನ

Chinnaswamy Stadium: ಆರ್‌ಸಿಬಿ ತಂಡ ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಜೂನ್ 4ರಂದು ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಇದಾದ ನಂತರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಬ್ರೇಕ್‌ ಬಿದ್ದಿತ್ತು. ಆದರೆ, ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿರುವ ಹಿನ್ನೆಲೆಯಲ್ಲಿ ಕೆಎಸ್‌ಸಿಎ ನೂತನ ಪದಾಧಿಕಾರಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ.

Chinnaswamy Stadium: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯ ನಡೆಸುವ ಕುರಿತು ಪರಿಶೀಲನೆಗೆ ಸಮಿತಿ ರಚನೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸುವ ಬಗ್ಗೆ ಪರಿಶೀಲನೆಗೆ ಸಮಿತಿ

ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಬಿಎ ಆಯುಕ್ತರು, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳಿರುವ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Pravasi Prapancha: ಕುಂದಾಪುರ ಎಜುಕೇಷನ್ ಸೊಸೈಟಿಗೆ ಬಂಗಾರದ ಸಿಂಗಾರ

ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಕುಂದಾಪುರ ಎಜುಕೇಷನ್ ಸೊಸೈಟಿ

ಕಳೆದ 5 ದಶಕಗಳಿಂದ ಕುಂದಾಪುರ ಮತ್ತು ಬೈಂದೂರು ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಮೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಕುಂದಾಪುರ ಎಜುಕೇಷನ್ ಸೊಸೈಟಿ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಈ ವಿದ್ಯಾ ಸಂಸ್ಥೆಯ ವಿಶೇಷತೆಗಳೇನು ಎನ್ನುವ ವಿವರ ಇಲ್ಲಿದೆ.

ಪಿವಿ ಸಿಂಧು ಮತ್ತು ವಿಕ್ರಾಂತ್ ಮಾಸ್ಸಿ ಅಭಿನಯದ ಹೊಚ್ಚ ಹೊಸ ‘ವೇರ್ ಯುವರ್ ಸ್ಟೋರಿ’ ಜಾಹೀರಾತು ಅಭಿಯಾನ ಬಿಡುಗಡೆ ಮಾಡಿದ ಟೈಟಾನ್

ಜಾಹೀರಾತು ಅಭಿಯಾನ ಬಿಡುಗಡೆ ಮಾಡಿದ ಟೈಟಾನ್

ಟೈಟಾನ್ ಸಂಸ್ಥೆಯು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಕ್ರಾಂತ್ ಮಾಸ್ಸಿ ಅಭಿನಯಿಸಿರುವ ‘ವೇರ್ ಯುವರ್ ಸ್ಟೋರಿ’ ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೇಳಲಿಕ್ಕೆ ಒಂದು ಕಥೆ ಇರುತ್ತದೆ. ಆ ಕಥೆ ಅವರು ಯಾರು ಎಂಬುದರಿಂದ, ಅವರು ಹೊಂದಿರುವ ನಂಬಿಕೆಗಳಿಂದ ಮತ್ತು ಅವರು ಮಾಡುವ ಆಯ್ಕೆಗಳಿಂದ ಹುಟ್ಟಿಕೊಳ್ಳುತ್ತದೆ. ಅದು ಅವರ ಸತ್ಯ ಮತ್ತು ಅವರ ನಿಜ ವ್ಯಕ್ತಿತ್ವ, ಆ ವ್ಯಕ್ತಿತ್ವವೇ ಅವರ ಸ್ಟೈಲ್ ಅನ್ನು ರೂಪಿಸುತ್ತದೆ.

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಸಿಎಂ ಸಿದ್ದರಾಮಯ್ಯ

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದ ಸಿಎಂ

ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಮೈಲಾರಿ ಹೋಟೆಲ್‌ನ ದೋಸೆ ಅಚ್ಚುಮೆಚ್ಚು. ನಗರಕ್ಕೆ ಭೇಟಿ ನೀಡಿದಾಗ ಸಾಮಾನ್ಯವಾಗಿ ಅವರು ಈ ಹೋಟೆಲ್‌ಗೆ ತೆರಳಿ ಉಪಾಹಾರ ಸೇವಿಸುತ್ತಾರೆ. ಇಂದು ಕೂಡ ಅಧಿಕಾರಿಗಳು, ಶಾಸಕರ ಜತೆ ತೆರಳಿ ಸಿಎಂ ಅವರು ಇಡ್ಲಿ, ಮಸಾಲೆ ದೋಸೆ ಸೇವಿಸಿದ್ದಾರೆ.

Loading...