ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಸೃಜನಶೀಲತೆ ಹೊರಹೊಮ್ಮಲು ತೊಡಗಿಸಿಕೊಳ್ಳುವಿಕೆ ಮುಖ್ಯ: ಪ.ಸ. ಕುಮಾರ್

ಸೃಜನಶೀಲತೆ ಹೊರಹೊಮ್ಮಲು ತೊಡಗಿಸಿಕೊಳ್ಳುವಿಕೆ ಮುಖ್ಯ: ಪ.ಸ.ಕುಮಾರ್

Prasanna Heggodu: ಪ್ರಸನ್ನ ಒಬ್ಬ ರಂಗಕರ್ಮಿ. ದಶಕಗಳಿಂದ ರಂಗಭೂಮಿಯ ಆತ್ಮವೇ ಆಗಿದ್ದಾರೆ. ಇಲ್ಲಿ ಮೂಡಿರುವ ಕಪ್ಪು ಬಿಳುಪು ಚಿತ್ರಗಳು ಅಲ್ಲಿನ ಪಾತ್ರಗಳೇ ಆಗಿವೆ. ಅವು ನಮಗೆ ಬಾಹ್ಯವಾಗಿ ಕಾಣುವ ನೋಟವಲ್ಲ. ಅವರ ಅಂತರಂಗದಲ್ಲಿ ಒಂದು ಭಿನ್ನ ನೋಟವಿದೆ. ಅದು ಇಲ್ಲಿ ಚಿತ್ರಗಳಾಗಿ ಢಾಳಾಗಿ ಮೂಡಿವೆ ಎಂದು ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ತಿಳಿಸಿದ್ದಾರೆ.

Pralhad Joshi: ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ ಮೆಚ್ಚುಗೆ

ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ

Wind Energy India 2025: ಚೆನ್ನೈನಲ್ಲಿ ಗುರುವಾರ ನಡೆದ ʼವಿಂಡ್‌ ಎನರ್ಜಿ ಇಂಡಿಯಾ-2025ʼರ 7ನೇ ಆವೃತ್ತಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ಒಟ್ಟಾಗಿ ಭಾರತದ ಪವನ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಕೊಡುಗೆ ನೀಡುತ್ತಿದ್ದು, ಇದು 54 GW ಆಗಿದೆ. ಭಾರತ ವಿಶ್ವದ 4ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದ್ದು, 2030ರ ವೇಳೆಗೆ 500 GW ಇಂಧನ ಉತ್ಪಾದನೆ ಗುರಿಯತ್ತ ಸಾಗುತ್ತಿದೆ. ಇದರಲ್ಲಿ ಪವನ ಶಕ್ತಿಯು 100 GW ಕೊಡುಗೆ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ದೇಶದ ಪವನ ವಿದ್ಯುತ್‌ ಸಾಮರ್ಥ್ಯದ ಶ್ರೇಯಾಂಕವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ನೆರೆ ಹಾವಳಿಯಿಂದ ವ್ಯಾಪಕ ಕೃಷಿ ಹಾನಿ; 1,545 ಕೋಟಿ ರೂ. ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನ

1,545.23 ಕೋಟಿ ರೂ. ಪರಿಹಾರ ಒದಗಿಸಲು ಕೇಂದ್ರಕ್ಕೆ ಮನವಿ

2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಹಾನಿಗೊಳಗಾದ ಮೂಲ ಸೌಕರ್ಯಗಳ ಪುನನಿರ್ಮಾಣವನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್‌ನ ಚೇತರಿಕೆ ಮತ್ತು ಪುನರ್‌ನಿರ್ಮಾಣ ವಿಂಡೋದ ಅಡಿಯಲ್ಲಿ ಜಿಲ್ಲಾ ಮತ್ತು ವಲಯವಾರು ಹಾನಿ ಮೌಲ್ಯಮಾಪನದ ವಿವರಗಳೊಂದಿಗೆ ಸುಮಾರು 1,545.23 ಕೋಟಿ ರೂ. ಆರ್ಥಿಕ ಸಹಾಯವನ್ನು ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಭಾರತ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಪರಿಹಾರ ನಿಧಿಯನ್ನು ಅನುಮೋದಿಸಿದ ನಂತರ, ಆರ್ಥಿಕ ಪರಿಣಾಮಗಳ ಪ್ಯಾರ‍್ಯಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ವೆಚ್ಚವನ್ನು ಹಂಚಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.

SIRA News: ಡಾ.ಪುನೀತ್ ರಾಜ್ ಕುಮಾರ್ ಎಂದಿಗೂ ಅಜರಾಮರ: ಡಾ.ಸಿ.ಎಂ.ರಾಜೇಶ್ ಗೌಡ

ಡಾ.ಪುನೀತ್ ರಾಜ್ ಕುಮಾರ್ ಎಂದಿಗೂ ಅಜರಾಮರ

ಪುನೀತ್ ರಾಜ್‌ಕುಮಾರ್ ಅವರು ೨೬ ಅನಾಥಾಶ್ರಮಗಳು, ೧೬ ವೃದ್ಧಾಶ್ರಮಗಳು, ಸಾಕಷ್ಟು ಗೋ ಶಾಲೆಗಳು ಹಾಗೂ ೪೫ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ನೆರವು ನೀಡಿದ್ದಾರೆ. ತಮ್ಮ ಜನಸೇವೆ ಯನ್ನು ಎಡಗೈನಲ್ಲಿ ಮಾಡಿದ ಕೆಲಸ ಬಲಗೈಗೆ ತಿಳಿಯದಂತೆ ಮಾಡಿದ್ದಾರೆ. ಕನ್ನಡಿಗರ ಪಾಲಿಗೆ ಅಪ್ಪು ದೇವರಂತೆ, ಜನರಿಂದ ಮರೆಯಾದರೂ ಎಂದಿಗೂ ಅಭಿಮಾನಿಗಳ ಮನಸ್ಸಿಂದ ಮರೆಯಾಗದ ಮಾಣಿಕ್ಯ ಅಪ್ಪು ಅವರ ಉತ್ತಮ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು

ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ದಯಾಸಾಗರ ಪಾಟೀಲ ಇವರಿಗೆ ಜಿಲ್ಲೆಯಿಂದ ಹೊರ ಹಾಕಲು ಆಗ್ರಹ: ಮಲ್ಲು ಲೋಣಿ

ಅಶಾಂತಿಗೆ ಕಾರಣವಾದ ದಯಾಸಾಗರ ಪಾಟೀಲರನ್ನು ಜಿಲ್ಲೆಯಿಂದ ಹೊರ ಹಾಕಿ

ಶಾಸಕ ಯಶವಂತರಾಯಗೌಡ ಪಾಟೀಲ ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರ ವಿರುದ್ಧ ದಯಾಸಾಗರ ಪಾಟೀಲ ಮಾಡಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ರಾಜಕೀಯ ಷೆಡ್ಯಂತರ ಶಾಸಕ ಹೆಸರು ಕೆಡಿಸುವ ಹುನ್ನಾರ, ಕಳೆದ ೮ ವರ್ಷಗಳ ಹಿಂದೆ ೨ ಬಾರಿ ಯಶವಂತರಾಯಗೌಡ ಪಾಟೀಲ ಶಾಸಕರಾಗಿ ಜನಮನ ಗೆದ್ದಿದ್ದಾರೆ.

Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ

Sathya sai grama: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 76ನೇ ದಿನವಾದ ಗುರುವಾರ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ʼʼಸತ್ಯ ಸಾಯಿ ವಿಶ್ವವಿದ್ಯಾಲಯದಿಂದ ರೈತರಿಗಾಗಿ ಕೌಶಲ್ಯ ಪ್ರಮಾಣೀಕರಣ ಪತ್ರ ನೀಡುವ ಹೊಸ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ರೈತರಿಗೆ ತಮ್ಮ ಕೌಶಲ್ಯ ಹಾಗೂ ಜ್ಞಾನವನ್ನು ಗುರುತಿಸಿ, ಗೌರವಿಸುವ ಯಾವುದೇ ಪ್ರಮಾಣ ಪತ್ರಗಳು ಇಲ್ಲ. ಹೀಗಾಗಿ ಈ ಕಾರ್ಯಕ್ರಮನ್ನು ರೂಪಿಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ.

Gubbi News: ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ : ಅಧಿಕಾರಿಗಳಿಗೆ ಧೈರ್ಯ ತುಂಬಿದ ಪಪಂ ಸದಸ್ಯರು

ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ

ಕಳೆದ ಸಭೆಯಲ್ಲಿ ನಾವು ಚರ್ಚೆ ಮಾಡಿದ ವಿಚಾರ ಈ ಸಭೆಯ ನಡಾವಳಿಯಲ್ಲಿ ಮುದ್ರಣವೇ ಮಾಡಿಲ್ಲ. 4 ನೇ ವಾರ್ಡ್ ನಲ್ಲಿ ನಡೆದ ಪೈಪ್ ಲೈನ್ ಬಿಲ್ ಪಾವತಿ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಆದರೆ ನಡಾವಳಿ ಯಲ್ಲಿ ಕೈ ಬಿಡಲಾಗಿದೆ ಎಂದು ಕಿಡಿಕಾರಿದ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಕಾಂಪೌಂಡ್ ಬಿದ್ದು ಬಹಳ ವರ್ಷವಾಗಿದೆ. ಬಾಕಿ ಇರುವ ಹಳೇಯ ತಡೆ ಗೋಡೆ ತೆರವು ಮಾಡಬೇಕು.

Cabinet Meeting: ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು

Cabinet Decisions: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳನ್ನು 360 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡುವುದು ಮತ್ತು ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರಕ್ಕೆ ವಹಿಸಿ, ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

Sadhguru Shri Madhusudan Sai: ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ

ಭಾರತ ಮತ್ತು ಪೊಲೆಂಡ್ ಸಂಬಂಧಗಳು ಬಹಳ ಹಳೆಯದು. ವಿಶ್ವ ಯುದ್ಧದ ಸಮಯದಲ್ಲಿ ಐರೋಪ್ಯ ದೇಶಗಳು ಪೊಲೆಂಡ್ ಜನರನ್ನು ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಆದರೆ ಅಂತಿಮವಾಗಿ ಅವರು ಗುಜರಾತ್‌ಗೆ ಬಂದರು. ಪ್ರತಿ ಯೊಂದು ದೇಶಕ್ಕೂ ತನ್ನದೇ ಆದ ಮೋಡಿ, ಸೌಂದರ್ಯ, ಸಂಸ್ಕೃತಿ ಇರುತ್ತದೆ. ಇಂಥದ್ದೇ ವೈಶಿಷ್ಟ್ಯಗಳನ್ನು ನಾವು ಪೊಲೆಂಡ್‌ನಲ್ಲೂ ಕಾಣುತ್ತೇವೆ

Gauribidanur News: ಮಕ್ಕಳ ಜೀವದ ರಕ್ಷಣೆಯ ಹೊಣೆಯನ್ನು ಚಾಲಕರ ಜೊತೆಗೆ ಶಾಲಾ ಮುಖ್ಯಸ್ಥರು ಹೊರಬೇಕು

ಮಕ್ಕಳ ರಕ್ಷಣೆಯ ಹೊಣೆಯನ್ನು ಚಾಲಕರು, ಶಾಲಾ ಮುಖ್ಯಸ್ಥರು ಹೊರಬೇಕು

ಸಮಸ್ಯೆಗಳನ್ನು ಖುದ್ದು ಅರಿತುಕೊಂಡು ಅಗತ್ಯ ಜಾಗೃತಿ ಮೂಡಿಸಬೇಕು. ರಸ್ತೆ ದಾಟುವಾಗ ಕೆಂಪು ದೀಪವಿದ್ದಾಗಲೂ ಬಸ್ ಓಡಿಸಿಕೊಂಡು ಹೋಗುವುದರಿಂದ ಸಿಗ್ನಲ್ ಜಂಪ್ ಮಾಡಬಹುದು ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡಿದಂತಾಗುತ್ತದೆ. ಪೋಷಕರ ಮತ್ತು ಶಿಕ್ಷಕರ ಚಾಲಕರ ನಡವಳಿಕೆಯೂ ಮಕ್ಕಳ ಮೇಲೆ ಪರಿಣಾಮ ಬೀರಿದಂತೆ ಎಚ್ಚರಿಕೆ ವಹಿಸಬೇಕು.

Gauribidanur News: ಗ್ರಾಚ್ಯುಟಿ ಹಣವನ್ನು ಕೂಡಲೇ ನೀಡಬೇಕು : ಸಿದ್ದಗಂಗಪ್ಪ

ಗ್ರಾಚ್ಯುಟಿ ಹಣವನ್ನು ಕೂಡಲೇ ನೀಡಬೇಕು : ಸಿದ್ದಗಂಗಪ್ಪ

ಇಂತಹ ಯೋಜನೆಯ ಅಭಿವೃದ್ಧಿಗೆ 150 ಹಾಗೂ 75 ರೂಗಳಿಂದ ಹಿಡಿದು ಸಾವಿರಾರು ಜನ ಕಾರ್ಯ ಕರ್ತರು ಸಹಾಯಕಿಯರು ದುಡಿದಿದ್ದಾರೆ. 25 ಏಪ್ರಿಲ್ 2022 ರಂದು ಸುಪ್ರೀಂಕೋರ್ಟ್ ಅಂಗನ ವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ 1972 ಕಾಯಿದೆ ಅನ್ವಯಿಸುತ್ತವೆ 303 ನಿಬಂಧನೆಗಳು ತೀರ್ಪನ್ನು ನೀಡಿದೆ.

ನವೆಂಬರ್ 7 ರಿಂದ 9, 2025ರವರೆಗೆ ಕಲೆ, ಸಂಸ್ಕೃತಿ, ಸಮರ ಕಲೆಗಳು ಮತ್ತು ಸಾಂಪ್ರದಾಯಿಕ ಆಟಗಳ ಮೂರು ದಿನಗಳ ಅದ್ಧೂರಿ ಆಚರಣೆ

2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟಕ್ಕೆ ಬೆಂಗಳೂರು ಆತಿಥ್ಯ

ಸ್ಪರ್ಧೆಗಳು ಮತ್ತು ಪ್ರದರ್ಶನಗಳು ಆಧುನಿಕ ಪೈಥಿಯನ್ ಕ್ರೀಡಾಕೂಟಗಳ ವಿವಿಧ ವಿಭಾಗಗಳನ್ನು ಪ್ರತಿನಿಧಿಸುತ್ತವೆ. ಅವುಗಳೆಂದರೆ: ಸಂಗೀತ, ನೃತ್ಯ, ಗಾಯನ, ಕವನ, ಚಿತ್ರಕಲೆ, ರಂಗೋಲಿ, ಮೆಹಂದಿ ವಿನ್ಯಾಸ, ಮಲ್ಲಕಂಬ, ಹಗ್ಗದಾಟ, ಗತ್ಕಾ, ಆರ್ಮ್ ರೆಸ್ಲಿಂಗ್, ರೋಲರ್ ಮ್ಯೂಸಿಕಲ್ ಚೇರ್ಸ್, ಸಿಲಂಬಂ, ಕರಾಟೆ, ಟೇಕ್ವಾಂಡೋ, ಪಿಟ್ಟು, ಕಳರಿಪಯಟ್ಟು, ಟಗ್ ಆಫ್ ವಾರ್, ಚೀಲ ಓಟ, ಒಂದೇ ಕಾಲಿನ ಓಟ ಮತ್ತು ಬರಿಗಾಲಿನ ಓಟ.

DK Shivakumar: ಧರ್ಮಸ್ಥಳ ಪ್ರಕರಣ; ಎಸ್‌ಐಟಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ: ಡಿ.ಕೆ. ಶಿವಕುಮಾರ್‌

ಧರ್ಮಸ್ಥಳ ಪ್ರಕರಣ; ಎಸ್‌ಐಟಿ ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ: ಡಿಕೆಶಿ

Dharmasthala Case: ʼʼಧರ್ಮಸ್ಥಳ ಪ್ರಕರಣದ ಕುರಿತಾಗಿ ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆಯೇ, ಇಲ್ಲವೇ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ವರದಿಯನ್ನು ಶೀಘ್ರದಲ್ಲೇ ನೀಡಬೇಕು ಎಂದು ಗೃಹ ಸಚಿವರು ಹೇಳಿರುವುದನ್ನು ಗಮನಿಸಿದ್ದೇನೆ. ಎಸ್‌ಐಟಿ ವರದಿ ಬಂದ ನಂತರ ಏನಿದೆ ಎಂಬುದನ್ನು ಗಮನಿಸೋಣ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ʼʼವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವವೇ ಬೇರೆ. ಆ ಸಂಸ್ಥೆಯ ಹೆಸರಿಗೆ ಹಾನಿಯಾಗುತ್ತಿದೆಯಲ್ಲ ಎಂದು ಬೇಸರವಾಗಿತ್ತು. ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎನ್ನುವ ಗಾದೆ ಇದೆ. ತಿರುಪತಿಯಲ್ಲಿ ಕಾಸಿನ ಹರಕೆ, ಧರ್ಮಸ್ಥಳದಲ್ಲಿ ಮಾತಿನ ಹರಕೆ ಕಟ್ಟಿಕೊಂಡರೆ ಬಿಡುವಂತಿಲ್ಲ. ಇಂತಹ ಪದ್ಧತಿಯಲ್ಲಿ ನಡೆದುಕೊಂಡು ಹೋಗುವ ಕಡೆ ಯಾವುದೇ ಸಮಸ್ಯೆ ಇಲ್ಲ ಎಂಬುದು ನನ್ನ ನಂಬಿಕೆʼʼ ಎಂದು ಹೇಳಿದ್ದಾರೆ.

Raktha Kashmira Movie: ಮತ್ತೆ ತೆರೆಮೇಲೆ ಮಿಂಚಲು ಮೋಹಕ ತಾರೆ ರಮ್ಯಾ ಸಜ್ಜು; ʼರಕ್ತ ಕಾಶ್ಮೀರʼ ಚಿತ್ರ ಶೀಘ್ರದಲ್ಲೇ ತೆರೆಗೆ

ಉಪೇಂದ್ರ-ರಮ್ಯಾ ಜೋಡಿಯ ʼರಕ್ತ ಕಾಶ್ಮೀರʼ ಚಿತ್ರ ಶೀಘ್ರದಲ್ಲೇ ತೆರೆಗೆ

Sandalwood News: ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ - ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿರುವ ʼರಕ್ತ ಕಾಶ್ಮೀರʼ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಮಾತನಾಡಿ, ʼʼಈ ವರ್ಷ ನನಗೆ ಬಹಳ ವಿಶೇಷ. ನಾನು ನಿರ್ದೇಶಕನಾಗಿ 50 ವರ್ಷಗಳಾಗಿದೆ ಹಾಗೂ ನಾನು ನಿರ್ದೇಶಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಅದರಲ್ಲಿ ಮೊದಲು ʼರಕ್ತ ಕಾಶ್ಮೀರʼ ಚಿತ್ರ ಬಿಡುಗಡೆಯಾಗುತ್ತಿದೆ. ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಹಾಗೂ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ‌‌‌ʼʼ ಎಂದರು.

Umashree: ಡಾ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌, ಡಾ. ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟ; ಉಮಾಶ್ರೀಗೆ ಗೌರವ

ಡಾ. ರಾಜ್‌ಕುಮಾರ್‌ ಪ್ರಶಸ್ತಿಗೆ ಉಮಾಶ್ರೀ ಆಯ್ಕೆ

Dr. Rajkumar Award: ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್​​ಕುಮಾರ್ ಪ್ರಶಸ್ತಿ, ವಿಷ್ಣುವರ್ಧನ್ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಅಕ್ಟೋಬರ್‌ 30ರಂದು ಘೋಷಿಸಲಾಗಿದೆ. 2019ನೇ ಸಾಲಿನ ಪ್ರಶಸ್ತಿ ಇದಾಗಿದೆ. ಇದರೊಂದಿಗೆ 2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ, ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದೆ. ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಡಾ. ರಾಜ್​​ಕುಮಾರ್ ಪ್ರಶಸ್ತಿ ಸಂದಿದೆ. ಇನ್ನು ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ನಿರ್ದೇಶಕ ಎನ್.‌ಆರ್‌. ನಂಜುಂಡೇಗೌಡ ಮತ್ತು ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ನಿರ್ಮಾಪಕ/ನಿರ್ದೇಶಕ ರಿಚರ್ಡ್‌ ಕ್ಯಾಸ್ಟಲಿನೊ ಅವರಿಗೆ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಟೆರೆಸಿಟಾ — ಕಾಕ್‌ಟೇಲ್ ಪ್ರಿಯರ ಕಾರ್ಟೆಲ್ ಕ್ವೀನ್ ಇಂದಿರಾನಗರದಲ್ಲಿ ಪಾದಾರ್ಪಣೆ

ಕಾಕ್‌ಟೇಲ್ ಪ್ರಿಯರ ಕಾರ್ಟೆಲ್ ಕ್ವೀನ್ ಇಂದಿರಾನಗರದಲ್ಲಿ ಪಾದಾರ್ಪಣೆ

ಆಯುಷಿ ಅರೋರಾ ಅವರ ಪರಿಕಲ್ಪನೆಯ ಮೇರೆಗೆ, ತೆರೆಸಿತಾ ಕಾಕ್ಟೈಲ್ ಸಂಸ್ಕೃತಿಯನ್ನು ಸ್ಪಷ್ಟವಾಗಿ ಸ್ತ್ರೀಲಿಂಗ ಆದರೆ ಅಪಾಯಕಾರಿ ಅಂಚಿನೊಂದಿಗೆ ಮರು ವ್ಯಾಖ್ಯಾನಿಸುತ್ತಾರೆ - ಅಲ್ಲಿ ಪ್ರತಿಯೊಂದು ಮೂಲೆಯೂ ಒಂದು ಕಥೆಯನ್ನು ಹೇಳುತ್ತದೆ, ಪ್ರತಿ ಕಾಕ್ಟೈಲ್ ಶಕ್ತಿಯನ್ನು ಒಯ್ಯುತ್ತದೆ ಮತ್ತು ಪ್ರತಿ ಸಿಪ್ ಸ್ವಲ್ಪ ನಿಷಿದ್ಧವೆಂದು ಭಾವಿಸುತ್ತದೆ.

Rajyotsava Award 2025: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್ ಸೇರಿ 70 ಸಾಧಕರು ಆಯ್ಕೆ

ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2025-26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅಕ್ಟೋಬರ್ 30ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪಡೆದವರ ಹೆಸರು ಪ್ರಕಟಿಸಿದರು. ಈ ಪೈಕಿ ಸಿನಿಮಾ ಕ್ಷೇತ್ರದಿಂದ ಬಹುಭಾಷಾ ನಟ ಪ್ರಕಾಶ್​ ರಾಜ್​, ವಿಜಯಲಕ್ಷ್ಮೀ ಸಿಂಗ್‌ ಸೇರಿದ್ದಾರೆ. ಸಾಹಿತ್ಯ, ಜಾನಪದ, ಸಂಗೀತ, ನೃತ್ಯ, ಚಲನಚಿತ್ರ/ಕಿರುತೆರೆ, ಆಡಳಿತ, ವೈದ್ಯಕೀಯ, ಸಮಾಜಸೇವೆ, ಸಂಕೀರ್ಣ, ಹೊರನಾಡು/ಹೊರದೇಶ, ಪರಿಸರ, ಕೃಷಿ, ಮಾಧ್ಯಮ, ವಿಜ್ಞಾನ/ತಂತ್ರಜ್ಞಾನ, ಸಹಕಾರ, ಯಕ್ಷಗಾನ, ಬಯಲಾಟ, ರಂಗಭೂಮಿ, ಶಿಕ್ಷಣ, ಕ್ರೀಡೆ, ನ್ಯಾಯಾಂಗ, ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಮುಂತಾದ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

Hospet News: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸ್ವಂತ ಕಟ್ಟಡ ನ.1ಕ್ಕೆ ಉದ್ಘಾಟನೆ: ವಿಶ್ವನಾಥ್ ಚ.ಹಿರೇಮಠ

ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸ್ವಂತ ಕಟ್ಟಡ ನ.1ಕ್ಕೆ ಉದ್ಘಾಟನೆ

ನ.1ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭನಡೆಯಲಿದೆ. ಕೊಟ್ಟೂರು ಬಸವಲಿಂಗ ಮಹಾ ಸ್ವಾಮೀಜಿ ಮತ್ತು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸುವರು. ವಿ ಸಾಫ್ಟ್ ಸಂಸ್ಥೆಯ ಮೂರ್ತಿ ವೀರಗಂಟಿ, ಗೋದ್ರೆಜ್ ಕಂಪನಿಯ ಉಪಾಧ್ಯಕ್ಷ ಪರ್ಸಿ ಮಾಸ್ಟರ್ ಬಹಾದ್ದೂ‌ರ್ ಇರಲಿದ್ದಾರೆ

Cyber Crime: ಡಿಸಿಗೂ ತಟ್ಟಿದ್ದ ಸೈಬರ್ ಕಳ್ಳರ ಕಾಟ; ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

ಜಿಲ್ಲಾಧಿಕಾರಿಗೂ ತಟ್ಟಿದ್ದ ಸೈಬರ್ ಕಳ್ಳರ ಕಾಟ

Yadgir News: ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ವರದಿಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಫೋಟೊ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶಕ್ಕೆ ಪ್ರತಿಕ್ರಿಯಿಸಿ ಆರೋಗ್ಯ ಇಲಾಖೆ ಅಧಿಕಾರಿಯೋರ್ವರು 50 ಸಾವಿರ ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ವಾಟ್ಸ್ಆ್ಯಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಹೆಸರು ಮತ್ತು ಫೋಟೊ ಬಳಸಿ ಮೊಬೈಲ್ ಸಂಖ್ಯೆ 84922021308, 84886912413 ಮೂಲಕ ನಕಲಿ ಖಾತೆಗಳನ್ನು ರಚಿಸಿ ಸಂದೇಶ ರವಾನಿಸಲಾಗಿತ್ತು.

ಕೊಟಕ್ 811 ರಿಂದ 3 ಇನ್ 1 ಸೂಪರ್ ಅಕೌಂಟ್ ಪ್ರಾರಂಭ: ಉಳಿತಾಯ, ವ್ಯಯ, ಸಾಲ ಮತ್ತು ಗಳಿಕೆ ಎಲ್ಲವೂ ಒಂದರಲ್ಲಿ

ಕೊಟಕ್ 811 ರಿಂದ 3 ಇನ್ 1 ಸೂಪರ್ ಅಕೌಂಟ್ ಪ್ರಾರಂಭ

ಇದು ವೇತನದಾರ ಉದ್ಯೋಗಿಗಳು, ಡಿಜಿಟಲ್ ನೇಟಿವ್ ಗಳು, ವಿದ್ಯಾರ್ಥಿಗಳು, ಮೊದಲ ಸಲ ಉದ್ಯೋಗ ಪಡೆಯುವವರು ಮತ್ತಿತರರನ್ನು ಒಳಗೊಂಡಿದೆ. ಇವರು ಸಣ್ಣದಾಗಿ ಪ್ರಾರಂಭಿಸಿ, ನಿಯಂತ್ರಣದಲ್ಲಿರಿಸಿ ಕೊಂಡು ಅವರ ಹಣದಿಂದ ಹೆಚ್ಚಿನ ನಿರೀಕ್ಷೆ ಹೊಂದಿದವರಾಗಿದ್ದಾರೆ. ಈ 3 ಇನ್ 1 ಸೂಪರ್ ಖಾತೆ ಯನ್ನು ಅವರ ಅಗತ್ಯಗಳಿಗೆ ಒಂದು ಸುಲಭ ಬಳಕೆಯ ಪರಿಹಾರದೊಂದಿಗೆ ಪೂರೈಸಲು ವಿನ್ಯಾಸ ಗೊಳಿಸಲಾಗಿದೆ.

ಮಹೀಂದ್ರಾ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಡಿಜಿಟಲ್ ಕಾರ್ ಕೀ ಪರಿಚಯಿಸಿದ ಸ್ಯಾಮ್‌ಸಂಗ್ ವ್ಯಾಲೆಟ್

ಡಿಜಿಟಲ್ ಕಾರ್ ಕೀ ಪರಿಚಯಿಸಿದ ಸ್ಯಾಮ್‌ಸಂಗ್ ವ್ಯಾಲೆಟ್

ನಮ್ಮ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳಾದ ಎಕ್ಸ್ಇವಿ 9ಇ ಮತ್ತು ಬಿಇ 6 ವಾಹನಗಳು ಸುಧಾರಿತ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಇದೀಗ ನಾವು ಸ್ಯಾಮ್‌ಸಂಗ್ ಜೊತೆಗಿನ ಸಹಯೋಗದ ಮೂಲಕ ಮತ್ತೊಂದು ಪ್ರಥಮ ದರ್ಜೆಯ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಸ್ಯಾಮ್‌ಸಂಗ್ ವ್ಯಾಲೆಟ್ ಮೂಲಕ ಡಿಜಿಟಲ್ ಕಾರ್ ಕೀ ಸೌಲಭ್ಯ ಒದಗಿಸಲು ಸಂತೋಷ ಪಡುತ್ತೇವೆ. ಈ ಮೂಲಕ ಪ್ರತೀ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುತ್ತಿದ್ದೇವೆ ಮತ್ತು ಅನುಕೂಲಕರಗೊಳಿಸುತ್ತಿದ್ದೇವೆ.

DK Shivakumar: ತೇಜಸ್ವಿ ಸೂರ್ಯ ಎಳಸು, ಅನುಭವವಿಲ್ಲದ ವೇಸ್ಟ್ ಮೆಟೀರಿಯಲ್- ಡಿಕೆಶಿ ವಾಗ್ದಾಳಿ

ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವಾಗ್ದಾಳಿ

DK Shivakumar slams MP Tejasvi Surya: ಟನಲ್ ರಸ್ತೆ ಬೇಡ ಎಂದು ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು? ಈ ದೇಶದಲ್ಲಿ, ಪ್ರಪಂಚದಲ್ಲಿಯೇ ಟನಲ್ ರಸ್ತೆಗಳೇ ಬೇಡ ಎಂದು ಅವನು ಕೇಂದ್ರ ಸಚಿವನಾದ ಮೇಲೆ ಲೋಕಸಭೆಯಲ್ಲಿ ತೀರ್ಮಾನ ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

Govind Karajol: ಕಾಂಗ್ರೆಸ್ ಸರ್ಕಾರದಿಂದ ಒಳಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶ- ಗೋವಿಂದ ಕಾರಜೋಳ ಆರೋಪ

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾರಜೋಳ ಗರಂ

State Congress Government: ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಪರಿಶಿಷ್ಟ ಜನಾಂಗ, ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಆಗಬೇಕು. 101 ಜಾತಿಗಳಿಗೆ ಸಾಮಾಜಿಕ ನ್ಯಾಯದಲ್ಲಿ ಎಲ್ಲರಿಗೂ ಮೀಸಲಾತಿ ಸೌಲಭ್ಯ ಸಿಗಬೇಕೆಂದು ನಿರಂತರ ಹೋರಾಟ ಮಾಡಿದ್ದರ ಪ್ರಯುಕ್ತ ನರೇಂದ್ರ ಮೋದಿ ಅವರ ಸರ್ಕಾರವು ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿ ಕೊಟ್ಟು ಇಂದಿಗೆ ಒಂದು ವರ್ಷ 3 ತಿಂಗಳಾಗಿದೆ. ಆದರೂ ಕರ್ನಾಟಕದ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಿಳಂಬ ನೀತಿ ಜತೆಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.

Smart Locker: ಸ್ಮಾರ್ಟ್ ಲಾಕರ್‌ ಭ್ರಷ್ಟಾಚಾರ- ಯು.ಟಿ. ಖಾದರ್ ರಾಜೀನಾಮೆಗೆ ಶಾಸಕ ಸಿಮೆಂಟ್ ಮಂಜುನಾಥ್ ಆಗ್ರಹ

ಸ್ಪೀಕರ್‌ ಯು.ಟಿ. ಖಾದರ್ ರಾಜೀನಾಮೆಗೆ ಶಾಸಕ ಸಿಮೆಂಟ್ ಮಂಜುನಾಥ್ ಆಗ್ರಹ

Cement Manjunath: ಸ್ಪೀಕರ್ ಯು.ಟಿ. ಖಾದರ್ ಅವರು ತಮ್ಮ ಕಚೇರಿ ಮೂಲಕ ಶಾಸಕರ ಭವನದ 224 ಕೊಠಡಿಗಳಿಗೆ ಸ್ಮಾರ್ಟ್ ಲಾಕ್ (ಡೋರ್ ಲಾಕ್) ಅಳವಡಿಸಿದ್ದಾರೆ. ಶಾಸಕರು ಇದನ್ನು ಕೇಳಿರದಿದ್ದರೂ ಹಾಕಿದ್ದು, ಲಾಕ್ ವೆಚ್ಚ ಮತ್ತು ಬಿಲ್ ಖರ್ಚಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಬೀಗ ಖರೀದಿ ವೆಚ್ಚದಲ್ಲಿ 3 ಲಾಕ್ ಖರೀದಿಸಬಹುದಾದಷ್ಟು ವೆಚ್ಚವನ್ನು ತೋರಿಸಿದ್ದಾರೆ ಎಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಆರೋಪಿಸಿದ್ದಾರೆ.

Loading...