ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಎಸ್‌ಟಿ ನಿಗಮದ ಹಣದ ಅಕ್ರಮ ವರ್ಗಾವಣೆ: ನಾಗೇಂದ್ರರಿಂದ ಸ್ಪಷ್ಟನೆಗೆ ಸೋನಾಲಿ ಸರ್ನೋಬತ್ ಆಗ್ರಹ

ಎಸ್‌ಟಿ ನಿಗಮದ ಹಣದ ಅಕ್ರಮ ವರ್ಗಾವಣೆ: ಸ್ಪಷ್ಟನೆಗೆ ಸರ್ನೋಬತ್ ಆಗ್ರಹ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರು ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್(Dr Sonali Sarnobat) ಆಗ್ರಹಿಸಿದ್ದಾರೆ.

Gudibande News: ಭೂಮಾನಂದ ಹತ್ಯೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹ

ಭೂಮಾನಂದ ಹತ್ಯೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹ

ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳ ಬೇಕು. ಅಲ್ಲದೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಅಗತ್ಯ ಭದ್ರತೆ ಒದಗಿಸಬೇಕು. ರಾಜ್ಯದಲ್ಲಿ ದಲಿತರು ಹಾಗೂ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.

ಬೆಂಗಳೂರಿನ ಸ್ಮೃತಿ ಅಕಾಡೆಮಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಬೆಂಗಳೂರಿನ ಸ್ಮೃತಿ ಅಕಾಡೆಮಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Independence Day 2026: ಬೆಂಗಳೂರು ನಗರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಸ್ಮೃತಿ ಅಕಾಡೆಮಿ ಸ್ಕೂಲ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ಮೃತಿ ಅಕಾಡೆಮಿ ಸ್ಕೂಲ್‌ನ ಸಹ ಸಂಸ್ಥಾಪಕ ರವಿ ರಾಮಚಂದ್ರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Festival Season 2026: ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳಿಗೆ ಬೇಡಿಕೆ

Festival Season 2026: ವರಮಹಾಲಕ್ಷ್ಮೀಯ ಅಲಂಕಾರಿಕ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳು, ಅಲಂಕಾರಿಕ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ. ಯಾವ್ಯಾವುದಕ್ಕೆ ಬೇಡಿಕೆ? ಈ ಬಾರಿ ಯಾವ್ಯಾವ ಡಿಸೈನ್‌ನವು ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ನಾಗರ ಪಂಚಮಿ ಹಬ್ಬದಂದೇ ಘೋರ ದುರಂತ; ಹಾವು ಕಡಿದು ಇಬ್ಬರು ಸಾವು

ನಾಗರ ಪಂಚಮಿ ಹಬ್ಬದಂದೇ ಹಾವು ಕಡಿದು ಇಬ್ಬರು ಸಾವು

Snake Bite: ನಾಗರ ಪಂಚಮಿ ಹಬ್ಬದಂದು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಡಿದು ಇಬ್ಬರು ಮೃತಪಟ್ಟ ಘಟನೆ ಬೀದರ್‌ ಮತ್ತು ಬೆಳಗಾವಿಯಲ್ಲಿ ನಡೆದಿದೆ. ಮೃತರನ್ನು ಮೃತರನ್ನು ಬೀದರ್‌ನ ಭೀಮ ಜಾಧವ (48) ಮತ್ತು ಬೆಳಗಾವಿಯ ಸತ್ಯವ್ವ ಶಿಂಗೆ (43) ಎಂದು ಗುರುತಿಸಲಾಗಿದೆ.

BJP Protest: ಚಿಕ್ಕಬಳ್ಳಾಪುರದಲ್ಲಿ ನಾಗೇಂದ್ರ ವಿರುದ್ಧ ಬಿಜೆಪಿ ಅನಿರ್ದಿಷ್ಟಾವಧಿ ಧರಣಿ

ಚಿಕ್ಕಬಳ್ಳಾಪುರದಲ್ಲಿ ನಾಗೇಂದ್ರ ವಿರುದ್ಧ ಬಿಜೆಪಿ ಅನಿರ್ದಿಷ್ಟಾವಧಿ ಧರಣಿ

ಹಗರಣದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ತನಿಖೆ ಮುಂದುವರಿದಿರುವಾಗಲೇ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರು ವುದು ಅಕ್ಷಮ್ಯ ಎಂದು ಸುಧಾಕರ್ ಟೀಕಿಸಿದರು. ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆ ಯಲ್ಲಿ ಅವರಿಗೆ ಇನ್ನೂ ಯಾವುದೇ ಕ್ಲೀನ್‌ಚಿಟ್ ಸಿಕ್ಕಿಲ್ಲ

Dr M C Sudhakar: ಚಿಂತಾಮಣಿಯಲ್ಲಿ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್ ಅಭಿವೃದ್ಧಿ: ಶಾಸಕ ಡಾ.ಎಂ.ಸಿ.ಸುಧಾಕರ್

ಕೈವಾರದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮ ಚಿಂತಾಮಣಿಯಲ್ಲಿ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್ ಹಾಗೂ ಕ್ರಿಕೆಟ್ ಸ್ಟೇಡಿಯಂ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಯುವಕರು ಮತ್ತು ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು

Gauribidanur News: ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಿ

ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಬೆಳೆಸಿಕೊಳ್ಳಿ

ನೇಮಕಾತಿ ಪ್ರಕ್ರಿಯೆ, ಸಂದರ್ಶನ ಎದುರಿಸುವ ವಿಧಾನ ಹಾಗೂ ಕಂಪನಿಗಳ ನಿರೀಕ್ಷೆಗಳ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗ ದರ್ಶನ ನೀಡಿದರು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ವರಲಕ್ಷ್ಮಿ ಮಾತನಾಡಿ, ನಿರಂತರವಾಗಿ ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ‘ಯಾರಿವಳು ಯಾರಿವಳು’ ಸಾಂಗ್ ಹಾಡಿದ ಕಾವಿಧಾರಿ; ಸ್ವಾಮೀಜಿಯ ಬಿಂದಾಸ್ ವಿಡಿಯೊ ವೈರಲ್

ಮದ್ಯದ ಬಾಟಲ್‌ ಎದುರುಗಡೆ ಇಟ್ಟುಕೊಂಡು ಸಿನಿಮಾ ಗೀತೆ ಹಾಡಿದ ಸ್ವಾಮೀಜಿ

Viral Video: ಕಲಬುರಗಿಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ವೈರಲ್‌ ವಿಡಿಯೊದಲ್ಲಿ ಅವರು ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳು ಕಾಣಿಸಿಕೊಂಡಿದೆ.

ಚಾಮರಾಜನಗರದಲ್ಲಿ ಶೂಟೌಟ್‌; ಕರ್ನಾಟಕ-ತಮಿಳುನಾಡು ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಯ್ತು ಮೂವರು ತಮಿಳರ ಸಾವು

ಚಾಮರಾಜನಗರ ಗುಂಡಿನ ದಾಳಿ; ತಮಿಳುನಾಡು ಸಿಎಂ ವಿಜಯ್‌ ಕಿಡಿ

Tamil Nadu CM C Joseph Vijay: ಚಾಮರಾಜನಗರದ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶಂಕಿತ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ತಮಿಳರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಹೇಳಿದರೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಘಟನೆಯನ್ನು ಹತ್ಯಾಕಾಂಡ ಎಂದು ಆರೋಪಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಪ್ರಕರಣದ ಕುರಿತು ಪ್ರತಿಭಟನೆಗಳೂ ನಡೆದಿವೆ.

ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಸಂಚು ನಡೆಯುತ್ತಿದೆ: ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ: ಎಚ್‌ಡಿಕೆ

HD Kumaraswamy: ನನಗೆ ಒಂದು ಮಾಹಿತಿ ಇದೆ, ನೈಸ್ ಯೋಜನೆಯನ್ನು ಆ ಕಂಪನಿಯಿಂದ ಯಾರೋ ಈಗ ಟೇಕ್ ಓವರ್ ಮಾಡಲು ಹೊರಟಿದ್ದಾರೆ. ಮುಖ್ಯಮಂತ್ರಿಯನ್ನು ಕೇಳುತ್ತೇನೆ, ಇದರಲ್ಲಿ ಯಾರ ಪಾಲಿದೆ? ಯಾರು ಅದನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಇವೆಲ್ಲವನ್ನೂ ಅವರೇ ಹೇಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಾಲು ಸಾಲು ಯಡವಟ್ಟಿನ ಬಳಿಕವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ಅವ್ಯವಸ್ಥೆ; ಪ್ರಜ್ವಲ್‌ ರೇವಣ್ಣ ಬಳಿ ಮತ್ತೊಂದು ಫೋನ್‌ ಪತ್ತೆ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್‌ ಬಳಿ ಮತ್ತೊಂದು ಫೋನ್‌ ಪತ್ತೆ

Prajwal Revanna: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್‌ ರೇವಣ್ಣ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಇತ್ತೀಚೆಗೆ ಹೊರ ಬಂದು ಭಾರಿ ಸಂಚಲನ ಮೂಡಿಸಿತ್ತು. ಇದೀಗ ಮತ್ತೆ ಅವರ ಸೆಲ್‌ನಲ್ಲಿ ಮತ್ತೊಂದು ಫೋನ್‌ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ

Cognizant: ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮಕ್ಕಾಗಿ ದೇಶದ 37 ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಹೊಸದಾಗಿ 489 ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಹನೂರು ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ಹನೂರು ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ವೇದಿಕೆಯ ಸಂಚಾಲಕ ಮುನಿವೆಂಕಟಪ್ಪ ಎಂ.ಪಿ., ತೋಮಿಯಾರ್ ಪಾಳ್ಯದ ಮೂವರು ರೈತರ ಸಾವಿನ ಕುರಿತು ಸಮಗ್ರ ಹಾಗೂ ಸ್ವತಂತ್ರ ತನಿಖೆ ನಡೆಯಬೇಕು. ಕಾಡಂಚಿನಲ್ಲಿ ವಾಸಿಸುವ ಜನರು ಅರಣ್ಯ ಇಲಾಖೆಯಿಂದ ದಬ್ಬಾಳಿಕೆಗೆ ಒಳಗಾಗುತ್ತಿರುವುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಆರೋಪಿಸಿ ದರು.

24 ಗಂಟೆಗಳ ಚಾರಿಟಿ ರೋಯಿಂಗ್ ಚಾಲೆಂಜ್‌: 100ಕ್ಕೂ ಹೆಚ್ಚು ಮಂದಿ ಭಾಗಿ!

24 ಗಂಟೆಗಳ ಚಾರಿಟಿ ರೋಯಿಂಗ್ ಚಾಲೆಂಜ್‌: 100ಕ್ಕೂ ಹೆಚ್ಚು ಮಂದಿ ಭಾಗಿ!

ಒಲಿಂಪಿಯನ್ ನಿಶಾ ಮಿಲ್ಲೆಟ್, ಐರನ್‌ಮ್ಯಾನ್ ವರ್ಲ್ಡ್ ಚಾಂಪಿ ಯನ್‌ಶಿಪ್ ಕ್ವಾಲಿಫೈಯರ್ ಸಾಗರ್, HYROX ಬ್ರಾಂಡ್ ಅಂಬಾಸಿಡರ್ ಹಾಗೂ ಅಥ್ಲೀಟ್ ಮಿತಾ ಪಟ್ನಾಯಕ್ ಮತ್ತು HYROX ವರ್ಲ್ಡ್ ಚಾಂಪಿಯನ್‌ಶಿಪ್ ಕ್ವಾಲಿಫೈಯರ್ ಅಂಕಿತ್ ಕಟಾರಿ ಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ದ್ದರು. ಇವರೊಂದಿಗೆ ವಿವಿಧ ಕಂಪನಿಗಳ ಸಿಇಒಗಳು, ಸಿಎಫ್‌ಒಗಳು, ಉದ್ಯಮಿಗಳು, ವೃತ್ತಿಪರರು, ಕೋಚ್‌ಗಳು ಹಾಗೂ ‘ಕ್ರಾಸ್‌ಫಿಟ್ 9ಒನ್’ ಸಮುದಾಯದ ಸದಸ್ಯರು ಕೈಜೋಡಿಸಿದರು.

ಕನ್ನಡಿಗನಿಗೆ ಒಲಿದ ಪಟ್ಟ: ಬಿಜೆಪಿಯ ಹೊಸ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರೊ. ಎಂ. ನಾಗರಾಜ್ ನೇಮಕ

ಬಿಜೆಪಿಯ ಹೊಸ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರೊ. ಎಂ. ನಾಗರಾಜ್ ನೇಮಕ

ಕೇಂದ್ರ ಬಿಜೆಪಿಯಲ್ಲಿ ಮೇಜರ್‌ ಸರ್ಜರಿ ನಡೆದಿದ್ದು, ಅಧ್ಯಕ್ಷ ನಿತಿನ್‌ ನಬಿನ್‌ ನೇತೃತ್ವದ ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಹಲವು ಪ್ರಮುಖ ನಾಯಕರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಶಿಕ್ಷಣ ತಜ್ಞ, ಒಬಿಸಿ ನಾಯಕ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಕರ್ನಾಟಕದ ಪ್ರೊ. ಎಂ. ನಾಗರಾಜ ಅವರಿಗೆ ಸ್ಥಾನ ನೀಡಲಾಗಿದೆ.

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

ಬೀದರ್-‌ನಾಂದೇಡ್‌ ರೈಲ್ವೆ ಮಾರ್ಗ ವಿಳಂಬ

ಮಾರ್ಗ ನಿರ್ಮಾಣಕ್ಕೆ ಉಚಿತವಾಗಿ ಜಮೀನು ಕೊಡುವುದರ ಜತೆಗೆ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಶೇ 50 ರಷ್ಟು ಪಾಲು ಭರಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳನ್ನು ಕೋರಿತ್ತು. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹಲವು ಬಾರಿ ಈ ಕುರಿತು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ರಾಜ್ಯ ಸರಕಾರ ಆರ್ಥಿಕ ಪಾಲು ನೀಡಲು ಹಿಂದೇಟು ಹಾಕಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಒಟ್ಟು 157 ಕಿಮೀ ಮಾರ್ಗದಲ್ಲಿ 101 ಕಿಮೀ ಮಹಾರಾಷ್ಟ್ರದಲ್ಲಿ ಮತ್ತು 56 ಕಿಮೀ ಕರ್ನಾಟಕದಲ್ಲಿ ಬರುತ್ತದೆ.

ಚಾಮರಾಜನಗರ ಶೂಟೌಟ್‌: ಮೃತಪಟ್ಟವರು ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದ ಸಚಿವ ರಾಮಲಿಂಗಾ ರೆಡ್ಡಿ

ಚಾಮರಾಜನಗರ ಶೂಟೌಟ್‌ ಪ್ರಕರಣಕ್ಕೆ ಟ್ವಿಸ್ಟ್‌; ಸರ್ಕಾರ ಹೇಳಿದ್ದೇನು?

Chamarajanagara Shootout Case: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಸಭೆಯಲ್ಲೂ ಸದ್ದು ಮಾಡಿದೆ. ಈ ಕುರಿತು ಮಾಹಿತಿ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಮೃತಪಟ್ಟವರು ತಮ್ಮ ಜಮೀನಿಗೆ ಹೋಗಿರಲಿಲ್ಲ. ಬದಲಾಗಿ ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕಕ್ಕೆ ಮತ್ತೆ ಆಘಾತ; ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್‌ ಸೂಚನೆ

ರಾಜ್ಯಕ್ಕೆ ಆಘಾತ; ಕಾವೇರಿ ಪ್ರಾಧಿಕಾರದ ನಿರ್ದೇಶನ ಎತ್ತಿ ಹಿಡಿದ ಸುಪ್ರೀಂ

Cauvery Water Dispute: ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆ ಮೂಲಕ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ಎತ್ತಿಹಿಡಿಯಲಾಗಿದೆ.

ಹನೂರು ಎನ್‌ಕೌಂಟರ್‌ ಪ್ರಕರಣ; ಜಿಂಕೆ ಮಾಂಸ ಸೇರಿ ಹಲವು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ!

ಹನೂರು ಎನ್‌ಕೌಂಟರ್‌ ಪ್ರಕರಣ; ಸಾಕ್ಷ್ಯ ಬಿಡುಗಡೆ ಅರಣ್ಯ ಇಲಾಖೆ

Hanur Encounter Case: ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಇದೀಗ ಈ ಕುರಿತು ತನಿಖೆ ಆರಂಭವಾಗಿದ್ದು, ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ.

ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್; ಕಲ್ಲು ಸ್ಫೋಟಕ್ಕೆ ಅಕ್ರಮವಾಗಿ ಬಳಕೆ ಆರೋಪ

ಬೆಂಗಳೂರಿನಲ್ಲಿ 800 ಕೆಜಿ ಜಿಲೆಟಿನ್ ಸೀಜ್

Bengaluru News: ಕಾಮಗಾರಿಗೆ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 800 ಕೆಜಿ ಜಿಲೆಟಿನ್​​ನನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.

ವಾಯುಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಯುಮಾಲಿನ್ಯ ತಪಾಸಣೆ ದರ ಹೆಚ್ಚಳ!

ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿಸಿ) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಿರುವು ದನ್ನು ಉಲ್ಲೇಖಿಸಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಡಿಸೆಂನರ್‌ʼನೊಳಗೆ ತಾಪಂ, ಜಿಪಂ ಚುನಾವಣೆ: ಡಿಕೆಶಿ

ಡಿಸೆಂನರ್‌ʼನೊಳಗೆ ತಾಪಂ, ಜಿಪಂ ಚುನಾವಣೆ: ಡಿಕೆಶಿ

ನೀವೆಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮ್ಮ ಶ್ರಮಕ್ಕೆ ತಕ್ಕಂತೆ ನಿಮಗೆ ಅಧಿಕಾರ ನೀಡಬೇಕು ಎನ್ನುವುದು ನಮ್ಮ ಆಸೆ. ಅಧಿಕಾರ ಹಂಚಿಕೆ ಯಾದಾಗ ಮಾತ್ರ ಎಲ್ಲ ಸರಕಾರಿ ಕೆಲಸ ಕಾರ್ಯಗಳಿಗೆ ವೇಗ ಸಿಗಲು ಸಾಧ್ಯ ಎಂದು ಕಾರ್ಯಕರ್ತ ರಲ್ಲಿ ಹುರುಪು ತುಂಬಿದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ‘ಭಾರತ್ ಜೋಡೋ ಯುವ ಘಟಕ’ಗಳನ್ನು ನಿರ್ಮಾಣ ಮಾಡಲಾಗು ವುದು. ಆ ಮೂಲಕ ಯುವಕರನ್ನು ಸಂಘಟಿಸಿ ಪಕ್ಷದ ಸಿದ್ಧಾಂತಗಳನ್ನು ತಲುಪಿಸಲಾಗುವುದು ಎಂದರು

ನೈಸ್‌ ರಸ್ತೆಯಲ್ಲಿನ ಟೋಲ್‌ ಮುಚ್ಚಿಸಿ: ಸಿಎಂ ಡಿಕೆಶಿಗೆ ಪತ್ರ ಬರೆದ ಕುಮಾರಸ್ವಾಮಿ

ನೈಸ್‌ ರಸ್ತೆಯಲ್ಲಿನ ಟೋಲ್‌ ಮುಚ್ಚಿಸಿ

ಸರಕಾರ ನ್ಯಾಯಾಲಯದ ಆದೇಶದ ಕಡೆ ಗಮನ ಹರಿಸುತ್ತಿಲ್ಲ. ನ್ಯಾಯಾಲಯದ ಆದೇಶ ಹಾಗೂ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟು ಕೊಂಡು ನೈಸ್ ಯೋಜನೆ ಯನ್ನು ಸರಕಾರ ವಶಕ್ಕೆ ಪಡೆದು ಟೋಲ್ ಸಂಗ್ರಹವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

Loading...