ಪ್ರತಿಫಲಾಪೇಕ್ಷೆಯಿಲ್ಲದ ಸಮಾಜಸೇವೆ ಮಾದರಿಯಾಗಲಿ
ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಪೂಜಿಸುವ ಸಂಸ್ಕೃತಿ ನಮ್ಮದು. ತಾಯಿ ಭುವನೇಶ್ವರಿ ಯ ಆರಾಧನೆಯ ಸಂದರ್ಭದಲ್ಲಿ ಮಾತೃಸ್ವರೂಪದ ಮಹಿಳೆಯರನ್ನು ಗೌರವಿಸುವುದು ಅರ್ಥಪೂರ್ಣ ವಾಗಿದೆ. ದೇಶದ ಏಕೀಕರಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಮಹತ್ವದ್ದು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾದ ಬಳಿಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಮತ್ತಷ್ಟು ಗುರುತಿನ ಗೌರವ ದೊರೆತಿದೆ.