ಜಾರ್ಜಿಯಾದ ರಾಜಧಾನಿ, ಸುಂದರ ಗಿರಿಧಾಮ ಟಿಬಿಲಿಸಿಯಲ್ಲಿ ವಿಶ್ವವಾಣಿ ಮಾಧ್ಯಮಸಂಸ್ಥೆ ಏರ್ಪಡಿಸಿದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದ ಸುಂದರ ಕಾರ್ಯಕ್ರಮದಲ್ಲಿ 17 ಮಂದಿ ಕನ್ನಡ ನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾರ್ಜಿಯಾದ ಜನಪ್ರತಿನಿಧಿಗಳು, ರಾಯಭಾರ ಕಚೇರಿಯ ಅಧಿಕಾರಿಗಳು, ಅನಿವಾಸಿ ಭಾರತೀಯರು ಮತ್ತು ಬೆಂಗಳೂರಿನಿಂದ ತೆರಳಿದ್ದ ವಿಶೇಷ ನಿಯೋಗದ ಸದಸ್ಯರ ಸಮ್ಮುಖದಲ್ಲಿ ಜಾರ್ಜಿಯಾ ಕಲಾವಿದರ ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಕನ್ನಡ ನಾಡಿನಲ್ಲಿ ಕಲೆ, ಶಿಕ್ಷಣ, ಸಮಾಜ ಸೇವೆ, ಕೃಷಿ, ಕೈಗಾರಿಕೋದ್ಯಮ, ರಾಜಕಾರಣ, ಹೋಟೆಲ್ ಉದ್ಯಮ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆ ಕೈಗೊಂಡ ಸ್ಫೂರ್ತಿವಂತರಿಗೆ ಮತ್ತು ಅನಿವಾಸಿ ಕನ್ನಡಿಗರಿಗೆ ವಿಶ್ವವಾಣಿಯ ಅಂತಾರಾಷ್ಟ್ರೀಯ ಪ್ರಶಸ್ತಿಯ ಕಿರೀಟ ತೊಡಿಸಲಾಯಿತು. ಈ ಸಮಾರಂಭದ ಫೋಟೋಗಳು ಇಲ್ಲಿವೆ.