ಚಂದ್ರಗ್ರಹಣ ಸಂಪೂರ್ಣ ದರ್ಶನ, ರಕ್ತವರ್ಣದಲ್ಲಿ ಮಿಂದೆದ್ದ ಚಂದಿರ
ಬಹುತೇಕ ಜಿಲ್ಲೆಗಳಲ್ಲಿ ರಕ್ತಚಂದಿರನನ್ನು ಜನ ಕಣ್ತುಂಬಿಕೊಂಡರು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಸಾರ್ವಜನಿಕರಿಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯಸ್ಕರು ಸೇರಿದಂತೆ ನೂರಾರು ಮಂದಿ ದೂರದರ್ಶಕದಲ್ಲಿ ಚಂದಿರನ ಅಗ್ನಿರೂಪವನ್ನು ಕುತೂಹಲದಿಂದ ವೀಕ್ಷಿಸಿದರು. ಮೋಡಗಳು ಸರಿದು ಗ್ರಹಣ ದರ್ಶನ ಮಾಡಿಸಿದವು.