ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರ: ಎರಡು ಗುಂಪುಗಳ ಮಧ್ಯೆ ಘರ್ಷಣೆ

ಭಾನುವಾರ ಬೆಳಗ್ಗೆ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲು, ಮಹರ್ಷಿ ವಾಲ್ಮೀಕಿ ನಾಮಫಲಕ ಅಡ್ಡವಿರುವುದರಿಂದ ಅದನ್ನು ಅಂಬೇಡ್ಕರ್ ಪುತ್ಥಳಿ ಪಕ್ಕದಲ್ಲಿ ನಿಲ್ಲಿಸಲು ಪರಿಶಿಷ್ಟ ಜಾತಿ ಮುಖಂ ಡರು ನಾಯಕ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.ಇದಕ್ಕೆ ಒಪ್ಪದ ಮುಖಂಡರು ಶನಿಮಹಾತ್ಮ ದೇವಸ್ಥಾನದ ಟ್ರಸ್ಟ್ಗೆ ಧಾನವಾಗಿ ನೀಡಿರುವ ಜಾಗದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲಾಗಿದೆ

ಅಂಬೇಡ್ಕರ್ ಪುತ್ಥಳಿ ಮುಂಭಾಗ ವಾಲ್ಮೀಕಿಯ ಭಾವಚಿತ್ರ: ಘರ್ಷಣೆ

ಗೌರಿಬಿದನೂರು ತಾಲೂಕು ಹಂಪಸಂದ್ರ ಗ್ರಾಮದಲ್ಲಿ ನಾಯಕ ಸಮುದಾಯ ಮತ್ತು ದಲಿತ ಸಮುದಾಯದ ನಡುವೆ ಅಂಬೇಡ್ಕರ್ ಪುತ್ಥಳಿ ಸಂಬಂಧ ಸಂಘರ್ಷ ಏರ್ಪಟ್ಟಿದ್ದು ಸ್ಥಳಕ್ಕೆ ಎಸ್ಪಿ, ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Profile Ashok Nayak Apr 28, 2025 10:53 PM

ಗೌರಿಬಿದನೂರು : ಹಂಪಸಂದ್ರ ಗ್ರಾಮದಲ್ಲಿನ ಗುಂಡುತೋಪಿನ ಸರಕಾರಿ ಜಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಿ ಅಂಬೇಡ್ಕರ್ ಜಯಂತಿ ಆಚರಿಸಲು ಗ್ರಾಮಸ್ಥರು ವ್ಯವಸ್ಥೆ ಮಾಡಿರುವ ಸಂದರ್ಭದಲ್ಲಿ ಪುತ್ಥಳಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರವಿರುವ ನಾಮಫಲಕ ವನ್ನು ತಂದು ನಿಲ್ಲಿಸಿದ ಪರಿಣಾಮ, ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ತಾಲ್ಲೂಕಿನ ಹಂಪಸಂದ್ರ ಗ್ರಾಮದ ನಿವಾಸಿ  ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸಿದ್ದಗಂಗಮ್ಮ ಎಂಬುವವರು ಅಂಬೇಡ್ಕರ್ ಪುತ್ಥಳಿ ನಿರ್ಮಿಸಿರುವ ಜಾಗದ ಮಾಲಕಿಯಾಗಿದ್ದು ಸದರಿ ಜಾಗವನ್ನು ಶನಿಮಹಾತ್ಮ ದೇವಸ್ಥಾನಕ್ಕೆ ಈಕೆ ದಾನ ನೀಡಿದ್ದದ್ದರು ಎನ್ನಲಾಗಿದ್ದು, ಖಾಲಿ ನಿವೇಶನದಲ್ಲಿ ಪರಿಶಿಷ್ಟ ಜಾತಿಯವರು ರಾತ್ರೋರಾತ್ರಿ ಅಂಬೇಡ್ಕರ್ ಪುತ್ತಳಿ ಪ್ರತಿಷ್ಟಾಪನೆ  ಮಾಡಿದ್ದಾರೆ.ಇದನ್ನು ಗಮನಿಸಿದ ವಾಲ್ಮೀಕಿ ಸಮುದಾಯ ಕೂಡ ವಾಲ್ಮೀಕಿ ಇರುವ ಭಾವಚಿತ್ರದ ನಾಮಫಲಕವನ್ನು ತಂದು ಅದೇ ಸ್ಥಳದಲ್ಲಿ ನೆಟ್ಟಿರುವುದೇ ಸಂಘರ್ಷಕ್ಕೆ ಕಾರಣವಾಗಿದ್ದು ಸ್ಥಳಕ್ಕೆ ಎಸ್ಪಿ, ತಹಶೀಲ್ದಾರ್ ಡಿವೈಎಸ್ಪಿ ಭೇಟಿ ನೀಡಿ ಘಟನೆಯ ಅವಲೋಕನ ಮಾಡಿದ್ದಾರೆ.

ಇದನ್ನೂ ಓದಿ: Chikkaballapur News: ಶಾಸಕ ಸುಬ್ಬಾರೆಡ್ಡಿ ವಿರುದ್ಧ ರೈತರ ಪ್ರತಿಭಟನೆ

ಭಾನುವಾರ ಬೆಳಗ್ಗೆ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲು, ಮಹರ್ಷಿ ವಾಲ್ಮೀಕಿ ನಾಮಫಲಕ ಅಡ್ಡವಿರುವುದರಿಂದ ಅದನ್ನು ಅಂಬೇಡ್ಕರ್ ಪುತ್ಥಳಿ ಪಕ್ಕದಲ್ಲಿ ನಿಲ್ಲಿಸಲು ಪರಿಶಿಷ್ಟ ಜಾತಿ ಮುಖಂಡರು ನಾಯಕ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.ಇದಕ್ಕೆ ಒಪ್ಪದ ಮುಖಂಡರು ಶನಿಮಹಾತ್ಮ ದೇವಸ್ಥಾನದ ಟ್ರಸ್ಟ್ಗೆ ಧಾನವಾಗಿ ನೀಡಿರುವ ಜಾಗದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲಾಗಿದೆ.ಇದು ನಮಗೆ ಸೇರಬೇಕು ಎಂದು ಪಟ್ಟುಹಿಡಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ, ಆಗ ತಹಶೀಲ್ದಾರ್  ಮಹೇಶ್ ಎಸ್ ಪತ್ರಿ ಮತ್ತು ಸಿಬ್ಬಂದಿ ಮಹರ್ಷಿ ವಾಲ್ಮೀಕಿ ನಾಮಫಲಕವನ್ನು, ಅಂಬೇಡ್ಕರ್ ಪುತ್ತಳಿಯ ಪಕ್ಕದಲ್ಲಿ ನಿಲ್ಲಿಸಿ, ಎರಡಕ್ಕೂ ಮಾಲಾರ್ಪಣೆ ಮಾಡಿದರು.

ವಾಲ್ಮೀಕಿ ಫಲಕ ಅಳವಡಿಕೆ
ಒಂದೆಡೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದರೆ ಇನ್ನೊಂದೆಡೆ ವಾಲ್ಮೀಕಿ ಸಮುದಾಯದವರು ಅದೇ ಜಾಗದಲ್ಲಿ ಭಾನುವಾರ ಬೆಳಗ್ಗೆ ವಾಲ್ಮೀಕಿ ನಾಮಫಲಕ ಅನಾವರಣಗೊಳಿಸಿದ್ದಾರೆ. ಇದು ಜಟಾಪಟಿಗೆ ಕಾರಣವಾಗಿದೆ.

ಅಂಬೇಡ್ಕರ್ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ದೇವಾ ಲಯದ ಆವರಣದ ಜಾಗವನ್ನು ಒತ್ತುವರಿ ಮಾಡಿಕೊಂಡು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಸರಿಯಲ್ಲ. ಗ್ರಾಮದಲ್ಲಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದೇ ವಿಚಾರಕ್ಕೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಕಲ್ಲು ತೂರಾಟ ನಡೆಸುವ ಹಂತಕ್ಕೆ ತಲುಪಿದೆ. ಎರಡೂ ಗುಂಪಿನ ಮಹಿಳೆಯರೂ ಕೂಡ ಸಂಘರ್ಷದಲ್ಲಿ ಪಾಲ್ಗೊಂಡಿದ್ದಾರೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆಎಸ್ ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ, ಶಿವಕುಮಾರ್, ವೃತ ನಿರೀಕ್ಷಕ ಸತ್ಯನಾರಾಯಣ, ಸಶಸ್ತ್ರ ಮೀಸಲುಪಡೆಯೊಂದಿಗೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಎರಡೂ ಗುಂಪುಗಳ ಮುಖಂಡರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ, ಮಾತುಕತೆ ವಿಫಲವಾಗಿದೆ, ನಾಳೆ ಎರಡು ಸಮುದಾಯಗಳ ಮುಖಂಡರೊAದಿಗೆ ಶಾಂತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈ ಗೊಳ್ಳುವುದಾಗಿ ಅಧಿಕಾರಿಗಳು ಮುಖಂಡರ ಮನವೊಲಿಸಿದ್ದಾರೆ.

ತಹಶೀಲ್ದಾರ್ ಭೇಟಿ

ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಸ್ಥಳಕ್ಕೆ ಭೇಟಿ ನೀಡಿ, ಜಾಗದ ದಾಖಲೆಗಳ ಪರಿಶೀಲನೆ ನಡೆಸಿ ದರು. ರಾತ್ರಿ ವೇಳೆ ನಡೆಯುವ ಅಂಬೇಡ್ಕರ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಡಿ.ಜೆ ಗೆ  ಅನುಮತಿ ನೀಡಬೇಕೆಂದು ಯುವಕರು ಒತ್ತಾಯಿಸಿದ್ದಾರೆ. ಆದರೆ ಯಾವುದೇ ರೀತಿ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ ತಹಶೀಲ್ದಾರ್ ಅವರು  ಸಿದ್ದಗಂಗಮ್ಮಗೆ ಗ್ರಾಮ ಪಂಚಾಯಿತಿ ಯಿಂದ ಜಾಗ ಮಂಜೂರಾಗಿದೆ. ಈಗಾಗಲೆ ಆಕೆಗೆ ವಸತಿಯಿರುವ ಕಾರಣಕ್ಕೆ ಆ ಜಾಗವನ್ನು ಶನಿಮಹಾತ್ಮ ದೇವಾಲಯಕ್ಕೆ ಬಿಟ್ಟಕೊಟ್ಟಿದ್ದಾರೆ. ಈ ಬಗ್ಗೆ  ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎರಡೂ ಸಮುದಾಯಗಳು ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಅಂಬೇಡ್ಕರ್ ಅವರ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಮೀಸಲು ಪಡೆ ನಿಯೋಜನೆ
ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಮನೆ ಮಾಡಿರುವ ಕಾರಣ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಸೋಮವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದು ಯಥಾಸ್ಥಿತಿ ಕಾಪಾಡಬೇಕು ಎಂದು ತಿಳಿಸಿದರು.

ಸ್ಥಳದಲ್ಲಿ ಕೆ ಎಸ್ ಆರ್ ಪಿ ತುಕಡಿ ಸೇರಿದಂತೆ,  ೧೫೦ ಕ್ಕೂ ಹೆಚ್ಚು  ಪೊಲೀಸರು ಸ್ಥಳದಲ್ಲೇ  ಬೀಡು ಬಿಟ್ಟಿದ್ದು, ೧೪೪ ಸೆಕ್ಷನ್ ಜಾರಿಗೊಳಿಸಿದ್ದಾರೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡoತಿದೆ.
*

ಗ್ರಾಮದಲ್ಲಿ ೩ ಎಕರೆ ಗುಂಡು ತೋಪಿನಲ್ಲಿ ಈ ಹಿಂದೆ ಗ್ರಾಮ ಪಂಚಾಯತಿಯಲ್ಲಿ ೩೩ ಮನೆಗಳನ್ನು ನಿರ್ಮಿಸಿಕೊಳ್ಳಲು ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಆ ಪೈಕಿ ಐದು ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳದೆ ಖಾಲಿ ಬಿಡಲಾಗಿತ್ತು. ಅದರಲ್ಲಿ ನಿವೇಶನದ ಹಕ್ಕು ಪತ್ರ ಪಡೆದಿದ್ದ ಸಿದ್ದಗಂಗಮ್ಮ ಎಂಬುವವರು ಗ್ರಾಮದಲ್ಲಿ ಶನಿಮಹಾತ್ಮ ಸ್ವಾಮಿ ದೇವಾಲಯದ ಟ್ರಸ್ಟ್ ಗೆ ದೇವಾಲಯ ನಿರ್ಮಾಣ ಮಾಡಲು ತಮಗೆ ಮಂಜೂರಾಗಿದ್ದ ನಿವೇಶನದ ಜಾಗವನ್ನು ದಾನವಾಗಿ ಉಯಿಲು ಬರೆದು ಕೊಟ್ಟಿದ್ದಾರೆ. ಈ ಖಾಲಿ ನಿವೇಶನದಲ್ಲಿ ಶನಿವಾರ ರಾತ್ರಿ  ಇದ್ದಕ್ಕಿದ್ದಂತೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿರುವುದು ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿದೆ.  
ತಹಶೀಲ್ದಾರ್ ಮಹೇಶ್ ಎಸ್ ಪತ್ರಿ.

ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಕಾರಣ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಒಂದು ಕೆ ಎಸ್ ಆರ್ ಪಿ ತುಕಡಿ, ೧೫೦ ಪೊಲೀಸ್ ಸಿಬ್ಬಂದಿ,
ಡಿ ವೈ ಎಸ್ ಪಿ, ವೃತ್ತ ನಿರೀಕ್ಷಕ, ೩ ಪಿ ಎಸ್ ಐ ಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಸ್ ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ ನೀಡಿದ್ದಾರೆ.