Helicopter crash: ಹೆಲಿಕಾಪ್ಟರ್ ಪತನ; 5 ಪ್ರವಾಸಿಗರು ದುರಂತ ಸಾವು
Uttarakhand Helicopter crash: ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದುಐವರು ಪ್ರವಾಸಿಗರು ದುರಂತ ಸಾವನ್ನಪ್ಪಿದ್ದಾರೆ. ಉತ್ತರಾಕಾಶಿಯಲ್ಲಿ ಇಂದು ಮುಂಜಾನೆ ಈ ದುರುಂತ ಸಂಭವಿಸಿದೆ. ಹೆಲಿಕಾಪ್ಟರ್ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.


ಡೆಹ್ರಾಡೂನ್: ಉತ್ತರಾಖಂಡದಲ್ಲಿ ಖಾಸಗಿ ಹೆಲಿಕಾಪ್ಟರ್ ಪತನಗೊಂಡಿದ್ದು(Helicopter crash), ಐವರು ಪ್ರವಾಸಿಗರು ದುರಂತ ಸಾವನ್ನಪ್ಪಿದ್ದಾರೆ. ಉತ್ತರಾಕಾಶಿಯಲ್ಲಿ ಇಂದು ಮುಂಜಾನೆ ಈ ದುರುಂತ ಸಂಭವಿಸಿದೆ. ಹೆಲಿಕಾಪ್ಟರ್ನಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಒಬ್ಬನಿಗೆ ಗಂಭೀರವಾಗಿ ಗಾಯವಾಗಿದೆ. ಡೆಹ್ರಾಡೂನ್ನಿಂದ ಹರ್ಸಿಲ್ ಹೆಲಿಪ್ಯಾಡ್ಗೆ ಈ ಹೆಲಿಕಾಪ್ಟರ್ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರು, ಸೇನೆ, ವಿಪತ್ತು ನಿರ್ವಹಣಾ ಪಡೆ ಮತ್ತು ಅಂಬ್ಯುಲೆನ್ಸ್ ಉತ್ತರಕಾಶಿಯಲ್ಲಿ ಜಂಟೀ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
Uttarakhand | Five passengers dead, two seriously injured in a helicopter crash near Ganganani in Uttarkashi district, confirms Garhwal Divisional Commissioner Vinay Shankar Pandey.
— ANI (@ANI) May 8, 2025
Administration and relief teams are present at the helicopter crash site.
(Photo source:… pic.twitter.com/JKoYpq7z1Q
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಂಚಿಕೊಂಡಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮಡಿದವರ ಆತ್ಮಗಳಿಗೆ ದೇವರು ಶಾಂತಿ ನೀಡಲಿ ಮತ್ತು ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬಗಳಿಗೆ ನೀಡಲಿ ಎಂದು ಅವರು ಬರೆದಿದ್ದಾರೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಮತ್ತು ಅಪಘಾತದ ತನಿಖೆ ನಡೆಸಲು ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಶ್ರೀ ಧಾಮಿ ಹೇಳಿದರು. ಈ ನಿಟ್ಟಿನಲ್ಲಿ ನಾನು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದುರ್ಘಟನೆಯ ರಣ ಭೀಕರ ದೃಶ್ಯ ಇಲ್ಲಿದೆ
उत्तरकाशी-सुबह 9 बजे गंगनानी से आगे हुआ एक हेलीकॉप्टर हादसा,प्राइवेट कम्पनी का बताया जा रहा है
— Pyara Uttarakhand प्यारा उत्तराखंड (@PyaraUKofficial) May 8, 2025
हेलीकॉप्टर, गंगोत्री की ओर जा रहा था ये हेलीकाफ्टर। 5 से 6 यात्री सवार थे जिसमें 2 लोग अभी घायल बताए जा रहे हैं।
उक्त स्थान हेतु पुलिस, आर्मी फोर्स, आपदा प्रबंधन QRT , टीम 108… https://t.co/ZXIoQWQjFt pic.twitter.com/BaB4l1RRep
ಈ ಸುದ್ದಿಯನ್ನೂ ಓದಿ: Helicopter Crash: ತರಬೇತಿ ವಿಮಾನ ಪತನ; ಓರ್ವ ಪೈಲೆಟ್ ಸಾವು
ಒಟ್ಟು ಏಳು ಮಂದಿ ಪ್ರಯಾಣಿಕರಿಂದ ತುಂಬಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್ನಿಂದ ಹರ್ಸಿಲ್ ಹೆಲಿಪ್ಯಾಡ್ಗೆ ಹಾರುತ್ತಿತ್ತು. ಅಲ್ಲಿಂದ ಪ್ರವಾಸಿಗರು ರಸ್ತೆ ಮೂಲಕ ಸುಮಾರು 30 ಕಿ.ಮೀ ದೂರವನ್ನು ಕ್ರಮಿಸಿ ಗಂಗೋತ್ರಿಗೆ ತೆರಳಲು ನಿರ್ಧರಿಸಿದ್ದರು.