Viral Video: ಸಲಿಂಗ ವಿವಾಹಕ್ಕಾಗಿ ಲಿಂಗ ಬದಲಾಯಿಸಿಕೊಂಡ ವ್ಯಕ್ತಿ; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ...
ಉತ್ತರಪ್ರದೇಶದ ಖುಷಿನಗರದ ಪ್ರೇಮ್ ಎಂಬಾತನನ್ನು ಮದುವೆಯಾಗಲು ಸೋನು ಎಂಬ ವ್ಯಕ್ತಿ ತನ್ನ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಂಡು ಸೋನಿಯಾ ಆಗಿದ್ದಾನೆ. ಇದೀಗ ಈ ಜೋಡಿ ಗ್ರಾಮಸ್ಥರ ವಿರೋಧದ ನಡುವೆ ಮದುವೆಯಾಗಿದ್ದು, ಅವರ ಮದುವೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: 'ಪ್ರೀತಿಗೆ ಕಣ್ಣಿಲ್ಲ' ಎಂದು ಹೇಳುತ್ತಾರೆ. ಈ ಬಾರಿ ಉತ್ತರಪ್ರದೇಶದ ಖುಷಿನಗರದ(Kushinagar) ಇಬ್ಬರು ಪುರುಷರು ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಈ ಇಬ್ಬರು ಪುರುಷರು ಸಲಿಂಗ ವಿವಾಹದ ಮೇಲಿನ ಕಾನೂನು ನಿರ್ಬಂಧಗಳನ್ನು ಧಿಕ್ಕರಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಒಟ್ಟಿಗೆ ಬದುಕುವುದಕ್ಕಾಗಿ ವಿಭಿನ್ನವಾದ ಮಾರ್ಗವೊಂದನ್ನು ಆರಿಸಿಕೊಂಡಿದ್ದಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ಸೋನು ಎಂಬ ವ್ಯಕ್ತಿ ತನ್ನ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಂಡು ಸೋನಿಯಾ ಆಗಿದ್ದಾನೆ. ಈ ಜೋಡಿಯ ಮದುವೆಯ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಈ ಘಟನೆ ನೆಬುವಾ ನೌರಂಗಿಯಾದ ಸಿತಾಲ್‌ಪುರದಲ್ಲಿ ನಡೆದಿದೆ. ಪ್ರೇಮ್ ಹಾಗೂ ಸೋನು ಇಬ್ಬರೂ ದೀರ್ಘಕಾಲದಿಂದ ಪರಸ್ಪರ ಸಂಬಂಧ ಹೊಂದಿದ್ದರು. ಪ್ರೇಮ್ ಜೊತೆ ಮದುವೆಯಾಗಲು ಸೋನು ತನ್ನ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಂಡು ಸೋನಿಯಾ ಆಗಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
प्यार के लिए उसने पहचान बदल दी... और समाज से टकरा गया.
— State Mirror Hindi (@statemirrornews) June 24, 2025
उत्तर प्रदेश के कुशीनगर से सामने आई एक अनोखी प्रेम कहानी, जहां दो लड़कों को हुआ प्यार, फिर Sonu ने Gender Change कराया और Sonia बनकर अपने प्रेमी से शिव मंदिर में विवाह रचा लिया.#Love #Gender #Kushinagar #LoveStory… pic.twitter.com/s197LAFg80
ವಿಡಿಯೊದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೊದಲ್ಲಿ, ಈ ದಂಪತಿ ಮದುವೆಯಾಗಿರುವ ದೃಶ್ಯ ಸೆರೆಯಾಗಿದೆ. ಪ್ರೇಮ್ ಮತ್ತು ಸೋನಿಯಾ ಇಬ್ಬರು ಶಿವ ಮಂದಿರದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಎಲ್ಲರ ಗಮನಸೆಳೆದು ಈಗ ವೈರಲ್ ಆಗಿದೆ.
ಗ್ರಾಮಸ್ಥರ ಪ್ರತಿಕ್ರಿಯೆ
ಇವರಿಬ್ಬರ ಮದುವೆಗೆ ಗ್ರಾಮಸ್ಥರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರಿಬ್ಬರು ಊರು ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ದೂರು ನೀಡಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ.
ಭಾರತದಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಲ್ಲ
ಭಾರತದಲ್ಲಿ, ಸಲಿಂಗ ವಿವಾಹಕ್ಕೆ ಪ್ರಸ್ತುತ ಕಾನೂನು ಮಾನ್ಯತೆ ಇಲ್ಲ. ಸುಪ್ರೀಂ ಕೋರ್ಟ್‌ನ 2023 ರ ತೀರ್ಪಿನಲ್ಲಿ, LGBTQIA+ ವ್ಯಕ್ತಿಗಳು ಸಮಾನ ಹಕ್ಕುಗಳಿಗೆ ಅರ್ಹರಾಗಿದ್ದರೂ, ಸಂವಿಧಾನದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಇಲ್ಲದ ಕಾರಣ ಅದಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿತು. ಈ ವಿಶೇಷ ವಿವಾಹ ಕಾಯ್ದೆಯ ಬದಲಾವಣೆಗಳು ಸಂಸತ್ತಿನ ವ್ಯಾಪ್ತಿಗೆ ಬರುತ್ತವೆ ಮತ್ತು ನ್ಯಾಯಾಂಗ ಹಸ್ತಕ್ಷೇಪದ ಮೂಲಕ ಅಲ್ಲ ಎಂದು ನ್ಯಾಯಾಲಯವು ಹೇಳಿದೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನ ದುರಂತದ ನೋವಿನ್ನೂ ಮಾಸಿಲ್ಲ; ಡಿಜೆ ಪಾರ್ಟಿ ಮಾಡಿ ಕುಣಿದ ಸಿಬ್ಬಂದಿ: ಏನಿದು ವೈರಲ್ ಸ್ಟೋರಿ?
ರಾಹುಲ್ ರಾಗಿಣಿ ಆದ ಕತೆ!
ಇದೇ ರೀತಿಯ ಘಟನೆ ಈ ಹಿಂದೆ ಕೂಡ ಉತ್ತರಪ್ರದೇಶದಲ್ಲಿ ವರದಿಯಾಗಿತ್ತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬಳಿಯ ಕೌಶಂಬಿ ಜಿಲ್ಲೆಯ ನಿವಾಸಿ ರಾಹುಲ್ ಎಂಬಾತ ಪಕ್ಕದ ಹಳ್ಳಿಯ ವ್ಯಕ್ತಿಯನ್ನು ಪ್ರೀತಿಸುತ್ತಿದ್ದನು. ರಾಹುಲ್ ತನ್ನ ಪ್ರಿಯಕರನಿಗಾಗಿ ತನ್ನ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಂಡು ರಾಗಿಣಿ ಎಂದು ಹೆಸರಿಟ್ಟುಕೊಂಡನು. ಶಸ್ತ್ರಚಿಕಿತ್ಸೆಯ ನಂತರ, ಅವರು ದೇವಸ್ಥಾನದಲ್ಲಿ ವಿವಾಹವಾದರು. ಆದರೆ ನಂತರ ರಾಗಿಣಿಯಲ್ಲಿ ಆಕೆಯ ಪ್ರೇಮಿ ತನ್ನ ಹೆಂಡತಿಯಾಗಿ ಇಟ್ಟುಕೊಳ್ಳಲು ನಿರಾಕರಿಸಿದ್ದಾನಂತೆ.