ಟೆಸ್ಟ್ ಕ್ರಿಕೆಟ್ನ ನಾಲ್ಕನೇ ಇನಿಂಗ್ಸ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳು!
ಲೀಡ್ಸ್ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಮಂಗಳವಾರ ಅಂತ್ಯವಾದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 5 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ತಂಡದ ಪರ ಜೋ ರೂಟ್ ಅರ್ಧಶತಕವನ್ನು ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ನಾಲ್ಕನೇ ಇನಿಂಗ್ಸ್ನಲ್ಲಿ 1700 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.



ಟೆಸ್ಟ್ ನಾಲ್ಕನೇ ಇನಿಂಗ್ಸ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅಗ್ರ ಸ್ಥಾನದಲ್ಲಿದ್ದಾರೆ. ಇದೀಗ ಈ ಸಾಧನೆ ಮಾಡಿದ ಅಗ್ರ ಐವರು ಬ್ಯಾಟ್ಸ್ಮನ್ಗಳನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

1.ಜೋ ರೂಟ್
ಟೆಸ್ಟ್ ಪಂದ್ಯಗಳ ನಾಲ್ಕನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ 1739 ರನ್ ಗಳಿಸಿದ್ದಾರೆ. ಅವರು ಅಂತಿಮ ಇನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟೆಸ್ಟ್ ಪಂದ್ಯಗಳ 4ನೇ ಇನಿಂಗ್ಸ್ನಲ್ಲಿ 1700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2.ಸಚಿನ್ ತೆಂಡೂಲ್ಕರ್
ಟೆಸ್ಟ್ ಪಂದ್ಯಗಳ ನಾಲ್ಕನೇ ಇನಿಂಗ್ಸ್ನಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ 1684 ರನ್ ಗಳಿಸಿದ್ದಾರೆ. 200 ಪಂದ್ಯಗಳಲ್ಲಿ 15921 ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರ ಹೆಸರಿನಲ್ಲಿದೆ.

3.ಗ್ರೇಮ್ ಸ್ಮಿತ್
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಗ್ರೇಮ್ ಸ್ಮಿತ್ 1611 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ನಾಯಕ ದ್ವಿತೀಯ ಇನಿಂಗ್ಸ್ನಲ್ಲಿ 4 ಶತಕಗಳನ್ನು ಗಳಿಸಿದ್ದಾರೆ. ಅವರು 53.11ರ ಸರಾಸರಿಯಲ್ಲಿ ಈ ರನ್ಗಳನ್ನು ಗಳಿಸಿದ್ದಾರೆ.

4.ಆಲ್ಸ್ಟೈರ್ ಕುಕ್
ಇಂಗ್ಲೆಂಡ್ ತಂಡದ ದಂತಕಥೆ ನಾಯಕ ಆಲ್ಸ್ಟೈರ್ ಕುಕ್ ಟೆಸ್ಟ್ ಪಂದ್ಯಗಳ ನಾಲ್ಕನೇ ಇನಿಂಗ್ಸ್ನಲ್ಲಿ 1611 ರನ್ ಗಳಿಸಿದ್ದಾರೆ. ಅವರು ಇಂಗ್ಲೆಂಡ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ದೀರ್ಘಾವಧಿ ಸ್ವರೂಪದಲ್ಲಿ 12472 ರನ್ ಗಳಿಸಿದ್ದಾರೆ.

5.ಶಿವನಾರಾಯಣ್ ಚಂದ್ರಪಾಲ್
ವೆಸ್ಟ್ ಇಂಡೀಸ್ನ ದಂತಕಥೆ ಶಿವನಾರಾಯಣ್ ಚಂದ್ರಪಾಲ್ ಟೆಸ್ಟ್ ಪಂದ್ಯಗಳ ನಾಲ್ಕನೇ ಇನಿಂಗ್ಸ್ನಲ್ಲಿ 1580 ರನ್ ಗಳಿಸಿದ್ದಾರೆ. ಅವರು ನಾಲ್ಕನೇ ಇನಿಂಗ್ಸ್ನಲ್ಲಿ ಎರಡು ಶತಕ ಮತ್ತು 11 ಅರ್ಧಶತಕಗಳೊಂದಿಗೆ ಅತಿ ಹೆಚ್ಚು 50+ ಸ್ಕೋರ್ಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.