ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇರಾನ್ ವಿರುದ್ಧದ ಆಪರೇಷನ್ ಮಿಡ್‌ನೈಟ್ ಹ್ಯಾಮರ್‌ನಲ್ಲಿ ಬಳಕೆಯಾದ ಬಿ-2 ಬಾಂಬರ್ ವಿನ್ಯಾಸ ಮಾಡಿದ ಭಾರತೀಯ ಮೂಲದ ಎಂಜಿನಿಯರ್‌ಗೆ ಜೈಲು ಶಿಕ್ಷೆಯಾಗಿದ್ದು ಯಾಕೆ?

ಅಮೆರಿಕ ವಾಯುಪಡೆಯ ಬಿ-2 ಸ್ಪಿರಿಟ್ ಬಾಂಬರ್‌ಗೆ ಸ್ಟೆಲ್ತ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಲು ಭಾರತ ಮೂಲದ ವಿಜ್ಞಾನಿ ನೋಶಿರ್ ಶೆರಿಯಾರ್ಜಿ ಗೊವಾಡಿಯಾ ಸಹಾಯ ಮಾಡಿದ್ದರು. ಬಳಿಕ ಅವರು ಚೀನಾ ಮತ್ತು ಇತರ ವಿದೇಶಿ ಸಂಸ್ಥೆಗಳಿಗೆ ಇದರ ರಹಸ್ಯ ಮಾಹಿತಿಯನ್ನು ರವಾನಿಸಿದ್ದು, ಇದಕ್ಕಾಗಿ ಅವರು ಅಮೆರಿಕದಲ್ಲಿ 32 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.

ಬಿ-2 ಬಾಂಬರ್ ಬಗ್ಗೆ ಚೀನಾಕ್ಕೆ ಮಾಹಿತಿ ನೀಡಿದ ಭಾರತ ಮೂಲದ ವಿಜ್ಞಾನಿ

ನವದೆಹಲಿ: ಭಾರತ ಮೂಲದ ಅಮೆರಿಕನ್ ವಿಜ್ಞಾನಿಯೊಬ್ಬರು (Indian-American Scientist) ಬಿ-2 ಬಾಂಬರ್ (B-2 Bomber) ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇದರ ರಹಸ್ಯಗಳನ್ನು ಬಳಿಕ ಚೀನಾಕ್ಕೆ (China) 91 ಲಕ್ಷ ರೂ. ಗೆ ಮಾರಾಟ ಮಾಡಿದ್ದರು. ಇದಕ್ಕಾಗಿ ಅವರು 32 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಮಿಲಿಟರಿ ತಂತ್ರಜ್ಞಾನದ ರಹಸ್ಯವನ್ನು ಮಾರಾಟ ಮಾಡಿರುವ ಆರೋಪದಲ್ಲಿ ಬಿ-2 ಬಾಂಬರ್ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಂಬೈ ಮೂಲದ ಎಂಜಿನಿಯರ್ ನೋಶಿರ್ ಶೆರಿಯಾರ್ಜಿ ಗೊವಾಡಿಯಾ ಅವರನ್ನು ಅಮೆರಿಕದಲ್ಲಿ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಅಮೆರಿಕ ವಾಯುಪಡೆಯ ಬಿ-2 ಸ್ಪಿರಿಟ್ ಬಾಂಬರ್‌ಗೆ ಸ್ಟೆಲ್ತ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲು ನೋಶಿರ್ ಶೆರಿಯಾರ್ಜಿ ಗೊವಾಡಿಯಾ ಸಹಾಯ ಮಾಡಿದ್ದರು. ಬಳಿಕ ಅವರು ಚೀನಾ ಮತ್ತು ಇತರ ವಿದೇಶಿ ಸಂಸ್ಥೆಗಳಿಗೆ ಇದರ ರಹಸ್ಯ ಮಾಹಿತಿಯನ್ನು ರವಾನಿಸಿದ್ದು, ಇದಕ್ಕಾಗಿ ಅವರು ಅಮೆರಿಕದಲ್ಲಿ 32 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಯಿತು.

ಇರಾನ್ ವಿರುದ್ಧದ ಆಪರೇಷನ್ ಮಿಡ್‌ನೈಟ್ ಹ್ಯಾಮರ್‌ನಲ್ಲಿ ಇತ್ತೀಚೆಗೆ ಇಸ್ರೇಲ್‌ನಲ್ಲಿರುವ ಅಮೆರಿಕ ಸೇನೆಯು ಬಿ-2 ಬಾಂಬರ್ ಅನ್ನು ಬಳಸಿಕೊಂಡಿತ್ತು. ಇದನ್ನು ತಯಾರಿಸಲು 1968ರಲ್ಲಿ ಗೋವಾಡಿಯಾ ವಿನ್ಯಾಸಗೊಳಿಸಲು ಸಹಾಯ ಮಾಡಿದ ಸ್ಟೆಲ್ತ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ.

ವಾಯುಯಾನ ಎಂಜಿನಿಯರಿಂಗ್ ಅಧ್ಯಯನ ಮಾಡಲು 1963ರಲ್ಲಿ ಮುಂಬೈಯಿಂದ ಅಮೆರಿಕಕ್ಕೆ ತೆರಳಿದ್ದ ಗೋವಾಡಿಯ 1969ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದರು. ಬಳಿಕ ಅವರು 1997ರವರೆಗೆ ಅಲ್ಲಿನ ಸರ್ಕಾರಿ ಯೋಜನೆಗಳ ನಿರ್ವಹಣೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿದರು.

2003 ಮತ್ತು 2005ರ ನಡುವೆ ಚೀನಾಕ್ಕೆ ತೆರಳಿದ ಗೋವಾಡಿಯಾ ಅಲ್ಲಿನ ಕ್ರೂಸ್ ಕ್ಷಿಪಣಿ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುವ ಚೀನಾದ ಅಧಿಕಾರಿಗಳಿಗೆ ಬಿ-2 ಬಾಂಬರ್ ವಿನ್ಯಾಸದ ಮಾಹಿತಿಯನ್ನು ನೀಡಿದರು. ಅವರು ಅಲ್ಲಿ ವಾಯುಯಾನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಕ್ಷಿಪಣಿಗಳ ಶಾಖ ತಡೆಯುವ ಸಾಮರ್ಥ್ಯದ ಕಡಿತಕ್ಕೆ ಸಲಹೆ ನೀಡಿದರು. ಜತೆಗೆ ಕ್ಷಿಪಣಿ ವ್ಯವಸ್ಥೆಗಳಲ್ಲಿದ್ದ ವಿನ್ಯಾಸ ದೋಷಗಳನ್ನು ಪತ್ತೆ ಹಚ್ಚಿದರು.

2016ಕ್ಕಿಂತ ಮೊದಲು ಚೀನಾ ದೀರ್ಘ-ಶ್ರೇಣಿಯ ವಿಮಾನವಾದ ಎಚ್ -20 ಸ್ಟೆಲ್ತ್ ಬಾಂಬರ್‌ನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ ವಿಮಾನದ ಕೆಲಸ 2000ರಲ್ಲಿ ಪ್ರಾರಂಭವಾಗಿತ್ತು. ಗೋವಾಡಿಯಾ ಜರ್ಮನಿ, ಇಸ್ರೇಲ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಬಿ-2 ಬಾಂಬರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‌Viral Video: ವಿಮಾನ ನಿಲ್ದಾಣದಲ್ಲಿ ಚಿಕ್ಕ ಮಗುವನ್ನು ಎತ್ತಿ ನೆಲಕ್ಕೆ ಬಿಸಾಕಿದ ಕಿರಾತಕ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಅವರು ಇದಕ್ಕಾಗಿ ಸುಮಾರು 1,10,000 ಡಾಲರ್ ಅಂದರೆ ಸರಿಸುಮಾರು 91 ಲಕ್ಷ ರೂ. ಪಡೆದಿದ್ದಾರೆ. ಈ ಹಣವನ್ನು ಹವಾಯಿಯ ಮಾಯಿಯಲ್ಲಿರುವ ಐಷಾರಾಮಿ ಮನೆಯ ಮೇಲಿನ ಸಾಲ ಪಾವತಿಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. 2005ರಲ್ಲಿ ಗೋವಾಡಿಯಾ ಅವರನ್ನು ಬಂಧಿಸಲಾಗಿದ್ದು, ಐದು ವರ್ಷಗಳ ವಿಚಾರಣೆಯ ಅನಂತರ 2010ರಲ್ಲಿ ಅವರನ್ನು ದೋಷಿ ಎಂದು ತೀರ್ಮಾನಿಸಿ ಜೈಲು ಶಿಕ್ಷೆಯನ್ನು ಘೋಷಿಸಲಾಯಿತು.