ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಜಾಗತಿಕ ಲಿಂಗಾಹತ ಮಹಾಸಭಾದ ವಕ್ತಾರರೂ ಮೌಢ್ಯದಿಂದ ಕೂಡಿದ್ದಾರೆ

ದಶಕಗಳ ಹಿಂದೆ ಒಮ್ಮೆ ಬೀದರಿನಲ್ಲಿ ನನ್ನ ಸ್ನೇಹಿತರು ಇವರ ಭಾಷಣವನ್ನು ಏರ್ಪಡಿಸಿದ್ದರು. ಆ ಸಮಯದಲ್ಲಿ ನಾನು ಭಾರತ ಪ್ರವಾಸದಲ್ಲಿದ್ದು ಹೈದರಾಬಾದಿನಲ್ಲಿದ್ದೆ. ನಾನಿದ್ದ ಕುಕ್ಕಟಪಳ್ಳಿ ಯಿಂದ ಕೇವಲ ಒಂದು ಗಂಟೆಯಲ್ಲಿ ಬೀದರ್ ತಲುಪಬಹುದು, ಬನ್ನಿ ಎಂದರು. ಅಂದು ಆ ಸಭೆಯಲ್ಲಿ ಪ್ರವರ್ಧ ಮಾನಕ್ಕೆ ಬರುತ್ತಿದ್ದ ನಿಜಗುಣಾನಂದರ ಭಾಷಣವು ಹದಿನೈದು ಸಾವಿರ ರುಪಾಯಿಗಳ ‘ಗೌರವ’ಧನಕ್ಕೆ ನಿಷ್ಕರ್ಷೆಯಾಗಿತ್ತು.

ಜಾಗತಿಕ ಲಿಂಗಾಹತ ಮಹಾಸಭಾದ ವಕ್ತಾರರೂ ಮೌಢ್ಯದಿಂದ ಕೂಡಿದ್ದಾರೆ

Profile Ashok Nayak May 14, 2025 8:20 AM

ಬಸವ ಮಂಟಪ‌ (ಭಾಗ-2)

ರವಿ ಹಂಜ್

ಪ್ರಾಧ್ಯಾಪಕ-ಸಾಹಿತಿ-ಸಂಶೋಧಕ-ಚಿಂತಕ-ಸಾಕ್ಷಿಪ್ರಜ್ಞೆಗಳು ಹೇಗೆ ಶರಣರ ಚಳವಳಿಯನ್ನು ಅಧ್ಯಾತ್ಮ ಶೂನ್ಯ ಮಾಡಿ ಸಮಾಜವಾದಿ ರಾಜಕಾರಣಿಗಳನ್ನಾಗಿ ತಲೆಕೆಳಗು ಮಾಡಿದರೋ ಅದೇ ರೀತಿ ಶ್ವೇತ/ಕಾವಿಧಾರಿಗಳು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದ ಬಸವಣ್ಣನ ಅನುಭಾವವನ್ನು ತಿಪ್ಪರಲಾಗ ಹಾಕಿಸಿ ‘ಜಂಗಮಕ್ಕಳಿವುಂಟು ಸ್ಥಾವರಕ್ಕಳಿವಿಲ್ಲ’ ಎಂದು ಸ್ಥಾವರದ ಮೇಲೆ ಸ್ಥಾವರಮಯವಾಗಿ ಬಸವಣ್ಣನನ್ನು ಸೋಸಿ ಸೋಸಿ ಶೋಷಿಸಿದ್ದಾರೆ. ಇವರಲ್ಲಿ ಅನೇಕರು ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅಲ್ಲಿಗೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟುಗಳು ಹೇಗೆ ಪರವಶಗೊಂಡಿವೆ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ.

ಇನ್ನು ನಿಜಗುಣಾನಂದ ಎನ್ನುವ ಹರಿಕಾರರಂತೂ ತಮ್ಮ ಭಾಷಣಕ್ಕೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಪಡೆದು ಕನಿಷ್ಠ ಏಳುನೂರ ಎಪ್ಪತ್ತು ಗಣಂಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಬಂದರೆ ಮಾತ್ರ ಬಿಜಯಂಗೈಯುವುದಾಗಿ ನಿಬಂಧನೆಗಳನ್ನು ಹಾಕುತ್ತಾರೆ. ಇವರ ಅಸಲಿಯತ್ ಹೀಗಿzಗ ಇವರು ವಿರಕ್ತ ಬಸವತತ್ವ ಬೋಧಕರೋ ಅಥವಾ ಭಾಷಣವೀರ ನಟರೋ? ಎಂಬ ಸಂದೇಹ ಮೂಡುತ್ತದೆ.

ದಶಕಗಳ ಹಿಂದೆ ಒಮ್ಮೆ ಬೀದರಿನಲ್ಲಿ ನನ್ನ ಸ್ನೇಹಿತರು ಇವರ ಭಾಷಣವನ್ನು ಏರ್ಪಡಿಸಿದ್ದರು. ಆ ಸಮಯದಲ್ಲಿ ನಾನು ಭಾರತ ಪ್ರವಾಸದಲ್ಲಿದ್ದು ಹೈದರಾಬಾದಿನಲ್ಲಿದ್ದೆ. ನಾನಿದ್ದ ಕುಕ್ಕಟಪಳ್ಳಿ ಯಿಂದ ಕೇವಲ ಒಂದು ಗಂಟೆಯಲ್ಲಿ ಬೀದರ್ ತಲುಪಬಹುದು, ಬನ್ನಿ ಎಂದರು. ಅಂದು ಆ ಸಭೆ ಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ನಿಜಗುಣಾನಂದರ ಭಾಷಣವು ಹದಿನೈದು ಸಾವಿರ ರುಪಾಯಿ ಗಳ ‘ಗೌರವ’ಧನಕ್ಕೆ ನಿಷ್ಕರ್ಷೆಯಾಗಿತ್ತು.

72 R

ಭಾಷಣ ಮುಗಿದ ತಕ್ಷಣ ತಮಗೆ ಬೇರೆ ಕಾರ್ಯಕ್ರಮವಿದೆ ಎಂದು ಹೊರಟ ನಿಜಗುಣರಿಗೆ ಗೌರವ ಧನದ ಲಕೋಟೆಯನ್ನು ಕೊಟ್ಟು ಅಡ್ಡಬಿದ್ದ ನನ್ನ ಸ್ನೇಹಿತರಿಗೆ ಶ್ರೀಗಳು, “ಎಷ್ಟಿದೆ?" ಎಂದರು. ಅದಕ್ಕೆ ನನ್ನ ಮಿತ್ರರು “ಹದಿನೈದು ಸಾವಿರು ರು.ಗಳಿವೆ, ಬುದ್ಧಿ" ಎಂದರು. ಆಗ ಶ್ರೀಗಳು, “ಕಾರಿನ ಪೆಟ್ರೋಲು, ಡ್ರೈವರನ ಭತ್ಯೆ?!" ಎಂದಾಗ ಈ ಇತರೆ ಖರ್ಚುಗಳ ಬಗ್ಗೆ ಅರಿವಿರದ ನನ್ನ ಸ್ನೇಹಿತರು ತಮ್ಮ ವಿಶೇಷ ದಿರಿಸಿನಲ್ಲಿ ಹಣವನ್ನು ಇಟ್ಟುಕೊಳ್ಳದ ಕಾರಣ, “ಬುದ್ಧಿ, ನಂತರ ತಲುಪಿಸುವೆ" ಎಂದರು.

ಅದಕ್ಕೆ ನಿಜಗುಣಾನಂದರು ತಮ್ಮ ನಿಜಗುಣ ತೋರಿ, “ಹೊಳಿ ದಾಟಿದ ಮ್ಯಾಲ ಅಂಬಿಗ ಮಿಂಡ" ಎಂದರು. ಈ ಮಾತನ್ನು ವೇದಿಕೆಯ ಮೇಲೆ ಆಸೀನರಾಗಿದ್ದ ಮತ್ತೊಬ್ಬ ಅತಿಥಿಗಳಾದ ಹುಮನ ಬಾದ ಕ್ಷೇತ್ರದ ಮಾಜಿ ಶಾಸಕರು ಮತ್ತು ಮಾಜಿ ಸಚಿವರಾದ ಬಸವರಾಜ ಎಚ್.ಪಾಟೀಲರು ಕೇಳಿಸಿ ಕೊಂಡು ಮುಜುಗರಗೊಂಡು ತಕ್ಷಣ ತಮ್ಮ ಜೇಬಿನಿಂದ ಎರಡೂವರೆ ಸಾವಿರ ರು.ಗಳನ್ನು ನೀಡಿ ನಿಜಗುಣರನ್ನು ಆನಂದಗೊಳಿಸಿ ಕಳಿಸಿದರು.

ಕಳೆದ ವರ್ಷ ಆಡಳಿತ ಪಕ್ಷ ಕೊಟ್ಟ ರಾಜ್ಯೋತ್ಸವ ಪ್ರಶಸ್ತಿಯ ನಿಶೆ ಇನ್ನೂ ಇಳಿಯದ ಈ ನಿಜಗುಣರೇ ಕೂಡಲಸಂಗಮದಲ್ಲಿ ನಡೆದ ಈ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನನ್ನು ಆಡಳಿತ ಪಕ್ಷದ ಚುನಾವಣಾ ಚಿಹ್ನೆಯಾಗಿಸಿ ಅದ್ಭುತ ಚುನಾವಣಾ ಭಾಷಣ ಮಾಡಿ ಮಂತ್ರಿಮಹೋದಯರನ್ನು ಹಾಡಿಹೊಗಳಿ ಋಣ ಸಂದಾಯ ಮಾಡಿದರು. ಅಲ್ಲದೆ ರಥಯಾತ್ರೆ ಯಲ್ಲಿ ಬಸವಣ್ಣನೊಂದಿಗೆ ಯಾವೊಬ್ಬ ಶರಣನ ಚಿತ್ರವಾಗಲೀ ಮೂರ್ತಿಯನ್ನಾಗಲೀ ಇಡದೆ ಶರಣ ಚಳವಳಿಗೆ ಸಂಬಂಧಿಸದ ಅಂಬೇಡ್ಕರ್, ಯೇಸು, ಮಹಾವೀರ, ಗುರು ನಾನಕ, ಶಿಶುನಾಳ ಶರೀಫ್, ನಾರಾಯಣ ಗುರು ಇವರ ಮೂರ್ತಿಗಳನ್ನಿಟ್ಟು ಪಕ್ಷನಿಷ್ಠೆ‌ ಮೆರೆಯುವ ಮಟ್ಟಿಗೆ ಬಸವಣ್ಣ ನನ್ನು ಸೋಸಿ ಸೋಸಿ ಶೋಷಿಸಿದರು.

ಇದನ್ನೂ ಓದಿ: ‌Ravi Hunj Column: ಬೌದ್ಧಿಕ ದಾರಿದ್ರ್ಯಕ್ಕೆ ಕವಚವಾಗಿ ಬಳಕೆಯಾದ ಬಸವಣ್ಣ !

ಬಸವಣ್ಣನನ್ನು ವಿರಕ್ತರು ಮಾರುತ್ತಿದ್ದಾರೆ, ರಾಜಕಾರಣಿಗಳು ಕೊಂಡು ಪರವಶ ಮಾಡುತ್ತಿದ್ದಾ ರೆಯೇ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ. ಇನ್ನು ಜಾಗತಿಕ ಲಿಂಗಾಹತ ಮಹಾ ಸಭಾದ ಪ್ರತಿಯೊಬ್ಬ ವಕ್ತಾರನೂ ಅದೆಷ್ಟು ಮೌಢ್ಯದಿಂದ ಕೂಡಿದ್ದಾರೆ ಅಥವಾ ಜಗತ್ತು ಮೂರ್ಖ ವಿದೆ, ಅದಕ್ಕೆ ತಾವು ಹೇಗೆ ಬೇಕಿದ್ದರೂ ಮಂಕುಬೂದಿ ಎರಚಬಹುದು ಎಂಬ ಅಹಮ್ಮಿನಿಂದ ಒಡಮೂಡಿದ್ದಾರೆ ಎಂಬು ದನ್ನು ಹಿಂದಿನ ಲೇಖನಗಳಲ್ಲಿ ಅರಿತಿದ್ದೇವಷ್ಟೇ.

ಹೀಗಿದ್ದೂ ಮೊನ್ನೆ ಜಾಮದಾರರು ಸಿದ್ಧಾರೂಢರ ಕುರಿತು ಧಾರ್ಷ್ಟ್ಯದಿಂದ “ಅವರು ಲಿಂಗವನ್ನು ಕಾಶಿಯಲ್ಲಿ ಹರಿದುಹಾಕಿ ‘ಅಲಕ್ ನಿರಂಜನ್’ (ವ್ಯಂಗ್ಯಭರಿತ) ಎಂದು ವೇದಾಂತದ ಭಾಗವಾದ ಆರೂಢಕ್ಕೆ ಸೇರಿ ಹುಬ್ಬಳ್ಳಿಗೆ ವಕ್ಕರಿಸಿದರು" ಎಂದದ್ದನ್ನು ಓದಿದ್ದೀರಷ್ಟೇ. ಅಸಲಿಗೆ ಸಿದ್ಧಾರೂಢರು ಕಾಶಿಯಲ್ಲಿ ತಮ್ಮ ಗುರುಗಳಾದ ಗಜದಂಡ ಶ್ರೀಗಳಿಗೆ ಗುರುದಕ್ಷಿಣೆಯಾಗಿ ತಾವು ಧರಿಸಿದ್ದ ಬೆಳ್ಳಿಯ ಕರಡಿಗೆಯನ್ನು ಲಿಂಗ ಸಮೇತ ನೀಡಿದ್ದರು.

ಏಕೆಂದರೆ ಷಟ್‌ಸ್ಥಲದ ಐಕ್ಯ ಸ್ಥಲವನ್ನು ತಲುಪಿದ ನಂತರ ಅರುಹನ್ನು ಆವಾಹಿಸಿಕೊಂಡು ಧ್ಯಾನಮಗ್ನರಾಗಲು ಕುರುಹಿನ ಅವಶ್ಯಕತೆ ಇರುವುದಿಲ್ಲ. ಅಂಥ ಸಾಧನೆಯನ್ನು ತಲುಪಿದ್ದ ಸಿದ್ಧಾರೂಢರಿಗೆ ಕರಡಿಗೆ, ಲಿಂಗ ಎಂಬ ಕುರುಹಿನ ಅಗತ್ಯವಿರಲಿಲ್ಲ. ಹಾಗಾಗಿ ಅದನ್ನು ತಮ್ಮ ಗುರುವಿಗೆ ಗುರುದಕ್ಷಿಣೆಯಾಗಿ ನೀಡಿದ್ದರು ಎಂಬುದು ಇತಿಹಾಸ. ನೂರಿಪ್ಪತ್ತು ವರ್ಷದ ಇತಿಹಾಸ ವನ್ನೇ ಅರಿಯದ ಜಾಮದಾರರು ತಮ್ಮ ಭಾಷಣದುದ್ದಕ್ಕೂ ಕಲ್ಯಾಣದಲ್ಲಿ ಬಸವಣ್ಣನ ಸಹಪಾಠಿ ಯಾಗಿ ಸಹವರ್ತಿಯಾಗಿ ಇದ್ದರೇನೋ ಎನ್ನಿಸುವಷ್ಟು ಸಾಕ್ಷೀಭೂತವಾಗಿ ಮಾತನಾಡುತ್ತಾರೆ.

ಇದು ಅವರಲ್ಲಿ ಪೆಡಂಭೂತವಾಗಿರುವ ಅಧಿಕಾರಶಾಹಿ, ಊಳಿಗಮಾನ ದರ್ಪದ ಸಂಕೇತವಷ್ಟೇ. ‘ವಿಭಜಿಸಿ ಆಳು’ ಎಂಬ ನೀತಿಯ ದೇಶದಲ್ಲಿ ಓದಿಕೊಂಡು ಬಂದಿರುವ ಈ ಊಳಿಗಮಾನ ಮನಸ್ಥಿತಿ ಯ ವ್ಯಕ್ತಿ ವೀರಶೈವ ಲಿಂಗವಂತಕ್ಕೆ ವಕ್ಕರಿಸಿರುವುದೇ ವಿಭಜಿಸಿ ಆಳಲು ಎಂಬುದನ್ನು ಈ ಸಮಾಜವು ಅರಿತು ಇವರಿಗೆ ‘ಧರ್ಮ ತೊರೆದು ತೊಲಗಿ’ ಎನ್ನುವ ಹೋರಾಟವನ್ನು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲಿ ಹಮ್ಮಿಕೊಳ್ಳುವುದೋ ಎನ್ನುವುದು ಸಮಾಜಿಗರ ಅಳಿವು ಉಳಿವಿಗೆ ಬಿಟ್ಟ ವಿಷಯ.

ಇನ್ನು ಪ್ರತಿಯೊಬ್ಬ ವಿರಕ್ತನು ಹೇಗಿರಬೇಕೆಂದರೆ, “ವಿರಕ್ತನಾದ ಬಳಿಕ ವಿಷಯಕ್ಕೆ ದೂರ ನಾಗಿರಬೇಕು. ಒಣಗಿದ ಮರನ ವಾಯು ಅಪ್ಪಿದಂತಿರಬೇಕು. ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಗನು ಕಂಡ ಕನಸಿನಂತಿರಬೇಕು. ಜಾಲಗಾರ ಕಂಡ ರತ್ನದಂತಿರಬಲ್ಲಡೆ ವಿರಕ್ತನೆಂಬೆನು. ಹೀಂಗಲ್ಲದೆ, ಅರುಹುಳ್ಳವರೆಂದು ತಮ್ಮ ಅಗಮ್ಯವ ಬೀರುವ ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ, ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ ಅಘೋರನರಕ ತಪ್ಪದು ಕಾಣಾ ಅಮುಗೇಶ್ವರಲಿಂಗವೆ" ಎಂದು ಅಮುಗೆ ರಾಯಮ್ಮ ಹೇಳಿದ್ದಾಳೆ.

ಇಂಥ ಒಬ್ಬನೇ ಒಬ್ಬ ವಿರಕ್ತ ಇಂದು ಜಾಗತಿಕ ಲಿಂಗಾಹತ ಮಹಾಸಭಾದಲ್ಲಿ ಭೂತಗನ್ನಡಿ ಹಾಕಿ ಹುಡುಕಿದರೂ ಕಾಣುವುದಿಲ್ಲ! ಇಂಥ ವಿರಕ್ತ ನಮ್ಮಲ್ಲಿದ್ದಾರೆ, ಅವರೇ ಇವರು ಎಂದು ಜಾಗತಿಕ ಲಿಂಗಾಹತರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ತಮ್ಮ ಲಿಂಗವನ್ನು ಕೈಯಲ್ಲಿ ಹಿಡಿದು ಪ್ರಮಾಣ ಮಾಡಿ ಘೋಷಿಸಬಲ್ಲರೇ? ಖಂಡಿತವಾಗಿ ಹಾಗೆ ಘೋಷಿಸುವ ವೀರತ್ವ ಅವರಲ್ಲಿ ಇಲ್ಲ.

ಹೀಗಿದ್ದಾಗ ಇವರಲ್ಲಿ ಯಾವ ಅಧ್ಯಾತ್ಮವಿದೆ? ಧರ್ಮತತ್ವವಿದೆ? ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ. ಇರಲಿ, ಇನ್ನು ತಿಂಗಳಿಗೊಮ್ಮೆ ‘ಬಸವ ಬೆಳಕು’ ಹೊಮ್ಮಿಸುವ ಸತ್ಯಾರಾಧ್ಯ ವಿಶ್ವಂಪೇಟೆ ಎನ್ನುವವರ ‘ಬಸವ ಮಾರ್ಗ’ದಲ್ಲಿ ಕೆಲವು ಹೆಜ್ಜೆ ಹಾಕೋಣ. ಶ್ರೀಯುತ ವಿಶ್ವಂ ಪೇಟೆಯವರು ತಮ್ಮ ತಂದೆಯವರನ್ನು ವಿರೋಽಸಿಕೊಂಡೇ ಬಂದವರು. ಯಾವಾಗ ಅವರ ತಂದೆ ಕಾಲವಾದರೋ, ಇವರು ಅವರ ಮಾರ್ಗವನ್ನು ಆಕ್ರಮಿಸಿಕೊಂಡರು. ತಮ್ಮ ಕೂಡುಕುಟುಂಬದ ಮನೆಯನ್ನು ತಮ್ಮ ಸೋದರನ ಗಮನಕ್ಕೆ ತರದೆ ಎಂಬತ್ತು ಲಕ್ಷ ರು.ಗಳಿಗೆ ಒತ್ತೆಯಿಟ್ಟು ಸಾಲ ಎತ್ತಿದ್ದಾರೆ ಎಂದು ಅವರ ಸೋದರ ವಿಜಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಎರಡು ವರ್ಷಗಳ ಹಿಂದೆ ಅಲವತ್ತುಕೊಂಡಿದ್ದರು.

ವಿಜಯ ಅವರು, “ಇವತ್ತು ಮುಂಜಾನೆ, ಹಿರಿಯ ಸಹೋದರ (...ರಾಧ್ಯ) ಒಟ್ಟಿಗೆ ಮಾತನಾಡಿದರೆ, ‘ಏನು ಮಾಡತೀ .. ಮಾಡಿಕೋ.. ಹೋಗು... ನನ್ನ ಹತ್ತಿರ ಏನೂ ಇಲ್ಲ.. ನಾ ಮನೆಯ ಮೇಲೆ ಸಾಲ ಮಾಡಿದ್ದು ನಿಜ, ನಾ ತೀರಿಸುತ್ತೇನೆ’ ಎಂಬ ಹಾರಿಕೆಯ ಉತ್ತರ ನೀಡಿದರು. ‘ಹೌದು ನಿಜ ನೀನು ಯಾರನ್ನು ಕೇಳಿ, 80 ಲಕ್ಷ ಹಣ ಸಾಲ ಮಾಡಿದ್ದು?’ ಎಂದು ಕೇಳಿದರೆ, ‘ಅದನ್ನೆ ಕೇಳಲು ನೀನು ಯಾರು...?’ ಎಂಬ ಬೆದರಿಕೆ ಮಾತು ಕೂಡ ಹಾಕಿದ್ದಾರೆ.

ನಿನ್ನನ್ನು ಒಂದು ಕೈ ನೋಡೇಬಿಡುತ್ತೇವೆ ಎಂದು ಧಮಕಿ ಹಾಕಿ, ತಕ್ಷಣವೇ ಪೋನ್ ಕಟ್ ಮಾಡಿದರು" ಎಂದಿರುವುದಲ್ಲದೆ, “ಮನೆ ಮೇಲೆ ಸಾಲ, ಮಾಡಿದವರು ಯಾರು? ಹೊಲದ ಮೇಲೆ ಸಾಲ ಸವಲತ್ತು ಪಡೆದವರು ಯಾರು? ಅಪ್ಪನ ಹೆಸರಲ್ಲಿ ಮುಖವಾಡ ಧರಿಸಿ ಓಡಾಡುವವರು ಯಾರು? ನನ್ನ ಕುಟುಂಬದ ಸದಸ್ಯರು ನನಗೆ ಮೋಸ ಮಾಡಿzರೆ. ಮನೆ ಮತ್ತು ಹೊಲಗಳ ಮೇಲೆ ಸಾಲ ಮಾಡಿ ಮೆರೆಯುತ್ತಿದ್ದಾರೆ.

ಕೇಳಿದರೆ ‘ನೀ ಯಾರು?! ಸುಮ್ಮನೆ ಕುಂತಿದ್ದರೆ ಪಾಡು (ಒಳ್ಳೆಯದು) ಇಂದ್ರೆ, ನಿನ್ನ ಮುಗಿಸಿಬಿಡ್ತೀವಿ’ ಅಂತಾರೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯ ಕೇಳಿದ್ದರು. ತಮ್ಮ ಸೋದರನಿಗೇ ದಾಸೋಹ ಅರ್ಪಿಸದ ಈ ವ್ಯಕ್ತಿ ವಿಶ್ವಕ್ಕೆ ಏನು ದಾಸೋಹದ ಕುರಿತು ಹೇಳಿಯಾರು? ಅಂದ ಹಾಗೆ ‘ಸಾರ್ವಜನಿಕರಿಂದ ಹಣ ಪಡೆದು ತಮ್ಮ ಮನೆಯಲ್ಲಿ ಬಸವ ಬೆಳಗು’ ಎಂಬ ಕಾರ್ಯಕ್ರಮ ಮಾಡುವ ಇವರು ಅದಕ್ಕೆ ಯಾವುದೇ ಲೆಕ್ಕ ಪತ್ರವಿಡುವುದಿಲ್ಲ.

ಇದೇ ಇವರ ಬೆವರಿಳಿಸಿ ದುಡಿಯುವ ಕಾಯಕ(?)ವಾಗಿದೆ ಎಂಬ ಗುರುತರ ಆರೋಪಗಳಿವೆ. ನೂರಕ್ಕೆ ತಿಂಗಳಿಗೆ 5 ಪ್ರತಿಶತ ಬಡ್ಡಿ ವ್ಯವಹಾರವೇ ಇವರ ಪ್ರಮುಖ ‘ಕಾಯಕ ಮಾರ್ಗ’ವಾಗಿದೆ ಎಂದು ಅನೇಕರು ಆರೋಪಿಸಿzರೆ. ಹೀಗೆ ತಮ್ಮನ್ನೇ ತಾವು ಅರಿಯದ ನಿಕೃಷ್ಟರು ಲಿಂಗವೆಂಬ ಘನವ ಅರಿಯಬಲ್ಲರೇ? ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ.

ಇನ್ನುಳಿದಂತೆ ಚಿಲ್ಟಾರಿ, ಪುಲ್ಟಾರಿ, ಚಿನ್ನಾರಿ, ಚಿನಕುರುಳಿ ‘ವಚನ ದಟ್, ವಚನ ದಿಸ್, ವಚನ ಎಟ್ಸೆಟ್ರಾ ಎಟ್ಸೆಟ್ರಾ ಎಟ್ಸೆಟ್ರಾ’, ‘ಬಸವ ದಟ್, ಬಸವ ದಿಸ್, ಬಸವ ಬುಲ್ಶಿಟ್’ಗಳು ಬಸವನನ್ನು ಕೆಂಪು ನಂದಿನಿ, ನೀಲಿ ನಂದಿನಿ, ಹಸಿರು ನಂದಿನಿ ಹಾಲಾಗಿಸಿ, ಕೆನೆ ಮೊಸರಾಗಿಸಿ, ಮಜ್ಜಿಗೆ, ಬೆಣ್ಣೆ, ತುಪ್ಪ, ಮೈಸೂರುಪಾಕು ಇನ್ನೂ ಏನೇನು ಸಾಧ್ಯವೋ ಅದೆಲ್ಲವನ್ನೂ ಆಗಿಸಿ ಸೋಸಿ ಸೋಸಿ ಹಿಂಡುತ್ತಿದ್ದಾರೆ.

ಇಂಥ ಆಮ್ಲೀಯ ಉಬ್ಬರದ ಬಸವ ಭ್ರಷ್ಟರು ತಟ್ಟೆಕಾಸು, ಜೋಳಿಗೆ, ಪುರೋಹಿತಶಾಹಿ ಎಂದೆ ಮಾತನಾಡುತ್ತಲೇ ತಿಜೋರಿ ಲಪಟಾಯಿಸಿzರೆ. ಇವರ ಬಾಯಲ್ಲಿ ಬಸವ, ಜಂಗಮ, ದಾಸೋಹ ಎನ್ನುವುದೇ ಒಂದು ವಿಪರ್ಯಾಸ! ಹಾಗಾಗಿಯೇ ಬಸವಣ್ಣ, “ಆನು ಒಬ್ಬನು, ಸುಡುವರೈವರು, ಮೇಲೆ ಕಿಚ್ಚು ಘನ, ನಿಲಲುಬಾರದು. ಕಾಡ ಬಸವನ ಹುಲಿ ಕೊಂಡೊಯ್ದಡೆ ಆರೈಯಲಾಗದೆ ಕೂಡಲಸಂಗಮದೇವಾ" ಎಂದು ಜಗದಗಲ ಮುಗಿಲಗಲ ಮಿಗೆಯಗಲದ ಪಾತಾಳ ದಿಂದವತ್ತತ್ತ ಬ್ರಹ್ಮಾಂಡದಿಂದವತ್ತತ್ತದ ಲೋಕದಿಂದ ತನ್ನ ಶೋಷಣೆಯನ್ನು ಕಂಡು ಮಮ್ಮಲ ಮರುಗು ತ್ತಿದ್ದಾನೆ.

ಇದನ್ನೆ ಪಾತಾಳದಿತ್ತಣ ಬ್ರಹ್ಮಾಂಡದಿತ್ತಣ ಇಂದಿನ ಮಾಹಿತಿ ತಂತ್ರಜ್ಞಾನ ಲೋಕದ ಪ್ರಜೆಗಳು ಈ ಶುದ್ಧ ಸೋಸಿತ ಶೋಷಣೆಯನ್ನು ತಮ್ಮ ಬೆರಳ ತುದಿಯ ಪರಾಂಬರಿಸಿ ನೋಡಬಹುದಾದ ಸಟಿಕ ಸದೃಶ ಮಾಹಿತಿಯಿದ್ದರೂ ಯಾರೂ ಗಮನ ಹರಿಸುತ್ತಿಲ್ಲ! ಇದಕ್ಕೆ ಕಾರಣ ಮೇಲಿನ ಪ್ರಾಧ್ಯಾಪಕ-ಸಾಹಿತಿ-ಸಂಶೋಧಕ-ಚಿಂತಕ-ಸಾಕ್ಷಿಪ್ರeಗಳು ಸೃಷ್ಟಿಸಿದ ಭ್ರಾಮಕ ಜಗತ್ತು! ಈ ಸ್ಟಾಕ್‌ಹೋಮ್ ಸಿಂಡ್ರೋಮಿನಿಂದ ರಾಜ್ಯದ ಜನತೆಯನ್ನು ಬಿಡಿ, ಕನಿಷ್ಠ ಲಿಂಗವಂತ ವೀರಶೈವರು ಎಚ್ಚರಗೊಳ್ಳ ಬಲ್ಲರೇ?!?

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲು ವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!" ಉಳಿದಂತೆ ಎಲ್ಲವೂ ನಿಮ್ಮ ಆಲೋಚನೆಗೆ ಬಿಟ್ಟ ವಿಷಯ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)