Viral News: ಆಡೋ ಮಕ್ಕಳ ಕೈಯಲ್ಲಿ ಫುಲ್ ಲೋಡೆಡ್ ಗನ್- ಆಮೇಲೇನಾಯ್ತು? ಈ ಶಾಕಿಂಗ್ ವಿಡಿಯೊ ವೈರಲ್
ನ್ಯೂ ಮೆಕ್ಸಿಕೋದಲ್ಲಿ 7 ಮತ್ತು 9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಲೋಡ್ ಮಾಡಲಾದ ಹ್ಯಾಂಡ್‌ಗನ್ ಅನ್ನು ಹಿಡಿದುಕೊಂಡು ಆಟವಾಡಿದ್ದು, ಅದನ್ನು ಮರಳಿ ಪಡೆಯಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಈ ದೃಶ್ಯವನ್ನು ಡ್ರೋನ್‍ನಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.


ನವದೆಹಲಿ: ಲೋಡ್ ಮಾಡಲಾದ ಗನ್‌ವೊಂದನ್ನು ಹಿಡಿದು ಮಕ್ಕಳು ಆಡುತ್ತಿರುವ ಘಟನೆಯೊಂದು ನ್ಯೂ ಮೆಕ್ಸಿಕೋದಲ್ಲಿ ನಡೆದಿದೆ. 7 ಮತ್ತು 9 ವರ್ಷದ ಇಬ್ಬರು ಮಕ್ಕಳ ಕೈಯಲ್ಲಿ ಫುಲ್ ಲೋಡ್ ಮಾಡಲಾದ ಹ್ಯಾಂಡ್‌ಗನ್ ಇರುವುದನ್ನು ಗಮನಿಸಿದ ಪೊಲೀಸರು ಅದನ್ನು ಅವರಿಂದ ತೆಗೆದುಕೊಳ್ಳಲು ಹರಸಾಹಸ ಮಾಡಿದ್ದಾರೆ. ಈ ದೃಶ್ಯವನ್ನು ಡ್ರೋನ್‍ನಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.ವೈರಲ್ ವಿಡಿಯೊದಲ್ಲಿ ಮಕ್ಕಳಿಬ್ಬರು ಗನ್‍ನೊಂದಿಗೆ ಆಟವಾಡುತ್ತಾ, ಅದಕ್ಕಾಗಿ ಪರಸ್ಪರ ಕಿತ್ತಾಡುತ್ತಾ ಮತ್ತು ಅಧಿಕಾರಿಗಳ ಕಡೆಗೆ ತೋರಿಸುವುದು ಸೆರೆಯಾಗಿದೆ.
ಪೊಲೀಸ್ ಅಧಿಕಾರಿಗಳು ಮಕ್ಕಳ ಬಳಿ ಗನ್ ಅನ್ನು ಕೆಳಗಿಡುವಂತೆ ಪದೇ ಪದೆ ವಿನಂತಿಸಿಕೊಂಡರೂ, ಮಕ್ಕಳು ಮಾತನ್ನು ಕೇಳಲಿಲ್ಲವಂತೆ. ಹಾಗಾಗಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಲು , ಅಧಿಕಾರಿಗಳು ಎಚ್ಚರಿಕೆಯಿಂದ ಮಕ್ಕಳ ಬಳಿ ಪ್ರಾಣಾಪಾಯಕಾರಿಯಲ್ಲದ ಗುಂಡು ಹಾರಿಸಲು ನಿರ್ಧರಿಸಿದರು. ಕೊನೆಗೆ ಪೊಲೀಸರು ಮಕ್ಕಳ ಸುತ್ತ ಸುತ್ತುವರಿದು ಅವರ ಕೈಯಿಂದ ಗನ್ ಅನ್ನು ತೆಗೆದುಕೊಂಡು ಅವರನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.
ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ. ಲೋಡ್ ಮಾಡಲಾದ ಬಂದೂಕನ್ನು ಮಕ್ಕಳು ಕೈಗೆ ಹೇಗೆ ಸಿಕ್ಕಿತು ಎಂಬುದು ತಿಳಿದಿಲ್ಲವಂತೆ.ಈ ಗನ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಹಿಂದೆ ವ್ಯಕ್ತಿಯೊಬ್ಬ ತನ್ನ ಮೂರು ವರ್ಷದ ಮಗನಿಗೆ ಬಂದೂಕು ಲೋಡ್ ಮಾಡಲು ಕಲಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದರು. ರಿವಾಲ್ವರ್‌ಗೆ ಗುಂಡುಗಳನ್ನು ಹೇಗೆ ಲೋಡ್ ಮಾಡಬೇಕೆಂದು ಮಗನಿಗೆ ತೋರಿಸುವುದನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಆ ವ್ಯಕ್ತಿ ಬ್ಯಾರೆಲ್ ಅನ್ನು ಮಗನ ಕಡೆಗೆ ತೋರಿಸಿ ಬಂದೂಕನ್ನು ತನ್ನ ಮಗನಿಗೆ ಹಸ್ತಾಂತರಿಸಿದ್ದನು.
ಈ ಸುದ್ದಿಯನ್ನೂ ಓದಿ:Viral Video: ಮತ್ತೊಂದು ಚಿತ್ರ-ವಿಚಿತ್ರ ರೆಸಿಪಿ! ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದಾಗ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರದಲ್ಲಿ ಬಡ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿರುವ ವ್ಯಕ್ತಿ ಆತನಾಗಿದ್ದು, ಆತನ ಪಿಸ್ತೂಲ್‍ಗೆ ಲೈಸೆನ್ಸ್ ಇದೆ ಎಂಬುದಾಗಿ ತಿಳಿದುಬಂದಿದೆ. ಹಾಗೂ ವಿಚಾರಣೆಯ ವೇಳೆ ಆತ ಪಿಸ್ತೂಲ್‍ಗೆ ಸಂಬಂಧಿತ ದಾಖಲೆಗಳನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದರು. ಮತ್ತು ಆ ಹುಡುಗನಿಗೆ ಅದರ ಬಗ್ಗೆ ಕುತೂಹಲವಿದ್ದ ಕಾರಣ ತಾನು ಅದನ್ನು ತೋರಿಸಿಕೊಟ್ಟಿರುವುದಾಗಿ ಆತ ತಿಳಿಸಿದ್ದನು