ಗ್ಯಾಲಕ್ಸಿ ಎಫ್ ಸೀರೀಸ್‌ನ ಅತಿ ತೆಳುವಾದ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್56 ಬಿಡುಗಡೆ ಮಾಡಿದ ಸ್ಯಾಮ್‌ಸಂಗ್
"ಗ್ಯಾಲಕ್ಸಿ ಎಫ್56 5ಜಿ ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ಸಂಗ್ ಸಂಸ್ಥೆ ಯು ಗ್ರಾಹಕರ ಜೀವನ ವನ್ನು ಸಶಕ್ತಗೊಳಿಸಲು ನೆರವಾಗುವ ಶಕ್ತಿಯುತ, ಭವಿಷ್ಯ ಸಿದ್ಧ ತಂತ್ರಜ್ಞಾನ ವನ್ನು ಒದಗಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿದೆ. ಗ್ಯಾಲಕ್ಸಿ ಎಫ್56 5ಜಿ ಸ್ಮಾರ್ಟ್ ಫೋನ್ ಅತ್ಯುತ್ತಮ ವಿನ್ಯಾಸ ಮತ್ತು ಅದ್ಭುತ ಕಾರ್ಯನಿರ್ವಹಣೆಯ ಪರಿಪೂರ್ಣ ಸಮ್ಮಿಲನವಾಗಿದ್ದು, ತಮ್ಮ ಜೀವನ ಶೈಲಿಗೆ ಮತ್ತಷ್ಟು ಹೊಳಪು ಒದಗಿಸುವ ಫೋನ್ ಅನ್ನು ಬಯಸುವ ಯುವ ಗ್ರಾಹಕರಿಗೆ ಅತ್ಯುತ್ತಮ ಅನುಭವ ಕಟ್ಟಿಕೊಡಲಿದೆ"


ಎಫ್56 5ಜಿ ಕೇವಲ 7.2 ಮಿಮೀ ತೆಳುವಾಗಿದ್ದು, ವಿಶಿಷ್ಟ ಫೀಚರ್ ಗಳನ್ನು ಹೊಂದಿದೆ. ಗ್ರಾಹಕರು ಗ್ಯಾಲಕ್ಸಿ ಎಫ್56 5ಜಿ ಅನ್ನು ಸ್ಯಾಮ್‌ಸಂಗ್ ಫೈನಾನ್ಸ್+ ಮೂಲಕ ತಿಂಗಳಿಗೆ ಕೇವಲ ರೂ.1556 ಇಎಂಐ ಕಟ್ಟುವ ಮೂಲಕ ಖರೀದಿಸಬಹುದು.
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಇದೀಗ ಎಫ್-ಸೀರೀಸ್‌ನ ಅತಿ ತೆಳುವಾದ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್56 5ಜಿ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಕೇವಲ 7.2 ಮಿಮೀನಷ್ಟು ತೆಳುವಾಗಿದ್ದು, ಅತ್ಯುತ್ತಮ ಕ್ಯಾಮೆರಾ, 6 ಜನರೇಷನ್ ಆಂಡ್ರಾಯ್ಡ್ ಅಪ್‌ಗ್ರೇಡ್, ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಪ್ರೊಟೆಕ್ಷನ್ ಮತ್ತು ಅತ್ಯಾಧುನಿಕ ಎಐ ಎಡಿಟಿಂಗ್ ಟೂಲ್ ಗಳಂತಹ ವಿಭಾಗ ಶ್ರೇಷ್ಠ ವಿಶಿಷ್ಟ ಫೀಚರ್ ಗಳನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ಡೈರೆಕ್ಟರ್ ಅಕ್ಷಯ್ ಎಸ್ ರಾವ್ ಅವರು, "ಗ್ಯಾಲಕ್ಸಿ ಎಫ್56 5ಜಿ ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ಸಂಗ್ ಸಂಸ್ಥೆ ಯು ಗ್ರಾಹಕರ ಜೀವನವನ್ನು ಸಶಕ್ತಗೊಳಿಸಲು ನೆರವಾಗುವ ಶಕ್ತಿಯುತ, ಭವಿಷ್ಯ ಸಿದ್ಧ ತಂತ್ರಜ್ಞಾನ ವನ್ನು ಒದಗಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿದೆ. ಗ್ಯಾಲಕ್ಸಿ ಎಫ್56 5ಜಿ ಸ್ಮಾರ್ಟ್ ಫೋನ್ ಅತ್ಯುತ್ತಮ ವಿನ್ಯಾಸ ಮತ್ತು ಅದ್ಭುತ ಕಾರ್ಯನಿರ್ವಹಣೆಯ ಪರಿಪೂರ್ಣ ಸಮ್ಮಿಲನವಾಗಿದ್ದು, ತಮ್ಮ ಜೀವನಶೈಲಿಗೆ ಮತ್ತಷ್ಟು ಹೊಳಪು ಒದಗಿಸುವ ಫೋನ್ ಅನ್ನು ಬಯಸುವ ಯುವ ಗ್ರಾಹಕರಿಗೆ ಅತ್ಯುತ್ತಮ ಅನುಭವ ಕಟ್ಟಿಕೊಡಲಿದೆ" ಎಂದು ಹೇಳಿದರು.
ಅತ್ಯುತ್ತಮ ದರ್ಜೆಯ ಕ್ಯಾಮೆರಾ
ಗ್ಯಾಲಕ್ಸಿ ಎಫ್56 5ಜಿ 50ಎಂಪಿ ಓಐಎಸ್ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ, ಕಂಪನ-ಮುಕ್ತ ವೀಡಿಯೋಗಳು ಮತ್ತು ಫೋಟೋಗಳನ್ನು ತೆಗೆಯಲು ಅನುವು ಮಾಡಿಕೊಡುತ್ತದೆ. 12ಎಂಪಿ ಹೆಚ್ ಡಿ ಆರ್ ಫ್ರಂಟ್ ಕ್ಯಾಮೆರಾ ಅತ್ಯಾಕರ್ಷಕ ಸೆಲ್ಫಿಗಳನ್ನು ತೆಗೆಯಲು ಸೂಕ್ತವಾಗಿದೆ. ಈ ಫೊನ್ ಕಡಿಮೆ ಬೆಳಕಿನಲ್ಲಿ ಕೂಡ ಫೋಟೋಗಳು ಮತ್ತು ವೀಡಿಯೊ ಗಳು ಉತ್ತಮವಾಗಿ ತೆಗೆಯಲು ನೆರವಾಗುವ ಬಿಗ್ ಪಿಕ್ಸೆಲ್ ಟೆಕ್ನಾಲಜಿ, ಲೋ ನಾಯ್ಸ್ ಮೋಡ್ ಮತ್ತು ಎಐ ಐ ಎಸ್ ಪಿ ತಂತ್ರಜ್ಞಾನವನ್ನು ಹೊಂದಿದ್ದು, ನೈಟೋಗ್ರಫಿಯನ್ನು ಅದ್ಭುತವಾಗಿ ಮಾಡಿದೆ. ಅಲ್ಲದೇ ಈ ಕ್ಯಾಮೆರಾವನ್ನು ವಿವಿಧ ರೀತಿಯ ಫೋಟೋ, ವೀಡಿಯೋ ತೆಗೆಯಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ರೇರ್ ಕ್ಯಾಮೆರಾದಲ್ಲಿ 2X ಜೂಮ್ ಹೊಂದಿರುವ ಪೋರ್ಟ್ರೇಟ್ 2.0 ಸೌಲಭ್ಯವಿದ್ದು, ಈ ಮೂಲಕ ಬೊಕೆ ಎಫೆಕ್ಟ್ ಹೊಂದಬಹುದಾಗಿದೆ.
ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ
ಬಳಕೆದಾರರು ಇದರಲ್ಲಿ 4ಕೆ 30 ಎಫ್ ಪಿ ಎಸ್ ವೀಡಿಯೊಗಳನ್ನು 10- ಬಿಟ್ ಹೆಚ್ ಡಿ ಆರ್ ನಲ್ಲಿ ರೆಕಾರ್ಡ್ ಮಾಡಬಹುದು. ಆಬ್ಜೆಕ್ಟ್ ಎರೇಸರ್, ಎಡಿಟ್ ಸಜೆಶನ್ಸ್ ನಂತಹ ಎಐ ಆಧರಿತ ಎಡಿಟಿಂಗ್ ಟೂಲ್ ಗಳು ಸಾಮಾಜಿಕ ಜಾಲತಾಣಕ್ಕೆ ಸೂಕ್ತವಾದ ಫೋಟೋಗಳನ್ನು ಸಿದ್ಧಗೊಳಿಸಲು ಸಹಾಯ ಮಾಡುತ್ತವೆ.
ಹೊಸ ವಿನ್ಯಾಸ, ಡಿಸ್‌ಪ್ಲೇ ಮತ್ತು ಅತ್ಯುತ್ತಮ ಬಾಳಿಕೆ
ಗ್ಯಾಲಕ್ಸಿ ಎಫ್56 5ಜಿ ಕೇವಲ 7.2 ಮಿಮೀನಷ್ಟು ತೆಳುವಾಗಿದ್ದು, ಎರಡೂ ಬದಿಗಳಲ್ಲಿ ಕಾರ್ನಿಂಗ್® ಗೊರಿಲ್ಲಾ® ಗ್ಲಾಸ್ ವಿಕ್ಟಸ್® ರಕ್ಷಣೆಯನ್ನು ಹೊಂದಿದೆ. ಹಾಗಾಗಿ ಈ ಸ್ಮಾರ್ಟ್ ಫೋನ್ ಗಟ್ಟಿ ಮುಟ್ಟಾಗಿದೆ ಮತ್ತು ಆರಾಮದಾಯಕವಾಗಿ ಬಳಕೆ ಮಾಡಬಹುದಾಗಿದೆ. 6.7” ಫುಲ್ ಹೆಚ್ ಡಿ+ ಸೂಪರ್ ಅಮೋಲ್ಡ್+ ಡಿಸ್‌ಪ್ಲೇ ಹೊಂದಿದ್ದು, 1200 ನಿಟ್ಸ್ ನ ಹೈ ಬ್ರೈಟ್‌ನೆಸ್ ಮೋಡ್ ಮತ್ತು ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಅವರಿಷ್ಟದ ಕಂಟೆಂಟ್ ಅನ್ನು ಸೂರ್ಯನ ಬೆಳಕಿನಲ್ಲೂ ಸ್ಪಷ್ಟವಾಗಿ ನೋಡಬಹುದಾಗಿದೆ. 120 ಹರ್ಟ್ಜ್ ರಿಫ್ರೆಶ್ ರೇಟ್ ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲಿಂಗ್ ಮಾಡುವುದು ಸುಲಭ ವಾಗುತ್ತದೆ ಮತ್ತು ಸರಾಗವಾಗುತ್ತದೆ. ಗ್ಲಾಸ್ ಬ್ಯಾಕ್ ಮತ್ತು ಮೆಟಲ್ ಕ್ಯಾಮೆರಾ ಡೆಕೋ ಈ ಫೋನ್ ಗೆ ಪ್ರೀಮಿಯಂ ಲುಕ್ ಒದಗಿಸುತ್ತದೆ. ಇದು ಗ್ಯಾಲಕ್ಸಿ ಎಫ್ ಸರಣಿಯಲ್ಲಿಯೇ ಆಕರ್ಷಕ ವಿನ್ಯಾಸ ಹೊಂದಿದೆ. ಈ ಫೋನ್ ಗ್ರೀನ್ ಮತ್ತು ವೈಲೆಟ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಅತ್ಯುತ್ತಮ ಕಾರ್ಯಕ್ಷಮತೆ
ಎಲ್ ಪಿ ಡಿ ಡಿ ಆರ್5ಎಕ್ಸ್ ಜೊತೆಗೆ ಎಕ್ಸಿನೋಸ್ 1480 ಪ್ರೊಸೆಸರ್ ಹೊಂದಿರುವ ಗ್ಯಾಲಕ್ಸಿ ಎಫ್56 5ಜಿ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ವಿದ್ಯುತ್ ದಕ್ಷತೆ ಒದಗಿಸುತ್ತದೆ. 5ಜಿ ಸಂಪರ್ಕ ಇರುವುದರಿಂದ ನೀವು ಎಲ್ಲೇ ಇದ್ದರೂ ಎಲ್ಲರ ಜೊತೆ ಕನೆಕ್ಟ್ ಆಗಿರಬಹುದು ಮತ್ತು ಈ ಫೋನ್ ವೇಗವಾಗಿ ಡೌನ್‌ಲೋಡ್ ಮಾಡಲು, ಸ್ಟ್ರೀಮಿಂಗ್ ಮತ್ತು ಬ್ರೌಸಿಂಗ್ ಮಾಡಲು ಅನುವು ಮಾಡಿ ಕೊಡುತ್ತದೆ. ಅದ್ಭುತ ದರ್ಜೆಯ ವೇಪರ್ ಕೂಲಿಂಗ್ ಚೇಂಬರ್ ಹೊಂದಿದ್ದು, ಈ ಸೌಲಭ್ಯವು ಬಳಕೆದಾರರಿಗೆ ಅತ್ಯುತ್ತಮ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಅತ್ಯುತ್ತಮ ದರ್ಜೆಯ ಆಡಿಯೋ ಮತ್ತು ವಿಡಿಯೋ ಸಾಮರ್ಥ್ಯ ಹೊಂದಿದೆ.
ಈ ಸ್ಮಾರ್ಟ್ ಫೋನ್ 5000ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟರಿ ದೀರ್ಘ ಕಾಲದವರೆಗೆ ಫೋನ್ ಬಳಕೆಗೆ ಸಹಾಯಕವಾಗಿದೆ. ಈ ಫೋನ್ ಯಾವುದೇ ಅಡೆತಡೆಯಿಲ್ಲದೆ ಹೆಚ್ಚು ಹೊತ್ತು ಸಂಪರ್ಕದಲ್ಲಿರಲು, ಮನರಂಜನೆ ಹೊಂದಲು ಅನುವು ಮಾಡಿಕೊಡುತ್ತದೆ. ಜೊತೆಗೆ 45ವಾರ್ಪ್ ಸೂಪರ್-ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇರುವುದರಿಂದ ತ್ವರಿತವಾಗಿ ಚಾರ್ಜಿಂಗ್ ಮಾಡಬಹುದಾಗಿದೆ.
ಗ್ಯಾಲಕ್ಸಿಯ ಅದ್ಭುತ ಅನುಭವ
ಗ್ಯಾಲಕ್ಸಿ ಎಫ್56 5ಜಿ 6 ಜನರೇಷನ್ ನ ಆಂಡ್ರಾಯ್ಡ್ ಅಪ್ ಗ್ರೇಡ್ ಗಳು ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳನ್ನು ಒದಗಿಸುತ್ತದೆ. ಈ ಫೋನ್ ಒನ್ ಯುಐ7 ಸೌಲಭ್ಯವನ್ನೂ ಹೊಂದಿದ್ದು, ಇದು ಸರಳ, ಆಕರ್ಷಕ ವಿನ್ಯಾಸವನ್ನು ಒದಗಿಸುತ್ತದೆ. ಒನ್ ಯುಐ ವಿಜೆಟ್ಸ್ ವಿನ್ಯಾಸವನ್ನು ಬದಲಿಸಲಾಗಿದ್ದು, ಲಾಕ್ ಸ್ಕ್ರೀನ್ ನಿಮ್ಮ ಡಿವೈಸ್ ಅನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. ಲಾಕ್ ಸ್ಕ್ರೀನ್ ನ ಬಲ ಭಾಗದಲ್ಲಿ ಈಗ ಅತ್ಯಂತ ಪ್ರಮುಖ ಮಾಹಿತಿ ಗಳನ್ನು ಕಾಣಿಸುವಂತೆ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಹೀಗಾಗಿ ಗ್ರಾಹಕರು ಬೆಳಗ್ಗಿನ ಜಾಗಿಂಗ್ ಸಮಯದಲ್ಲಿ ತನ್ನ ಗ್ಯಾಲಕ್ಸಿ ಬಡ್ ನಲ್ಲಿ ಯಾವ ಹಾಡು ಪ್ಲೇ ಆಗುತ್ತದೆ ಎಂಬುದನ್ನು ಫೋನ್ ಅನ್ನು ಅನ್ ಲಾಕ್ ಮಾಡದೆಯೇ ಬರೀ ಸ್ವೈಪ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಗೂಗಲ್ ಜೆಮಿನಿ ಇಂಟಿಗ್ರೇಷನ್ ಮಾಡಲಾಗಿದ್ದು, ಈ ಮೂಲಕ ಫೋನ್ ಅನ್ನು ನಿಯಂತ್ರಣ ಮಾಡುವುದು ಫ್ರೆಂಡ್ ಜೊತೆ ಮಾತನಾಡಿದಷ್ಟು ಸುಲಭವಾಗಿದೆ.
ಗ್ಯಾಲಕ್ಸಿ ಎಫ್56 5ಜಿ ಸ್ಯಾಮ್‌ಸಂಗ್ ನಾಕ್ಸ್ ವಾಲ್ಟ್ ಭದ್ರತಾ ಫೀಚರ್ ಅನ್ನು ಹೊಂದಿದ್ದು, ಈ ಹಾರ್ಡ್ ವೇರ್ ಆಧರಿತ ಭದ್ರತಾ ವ್ಯವಸ್ಥೆಯು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಆಕ್ರಮಣದ ವಿರುದ್ಧ ಸೂಕ್ತ ರಕ್ಷಣೆಯನ್ನು ಒದಗಿಸುತ್ತದೆ. ಸ್ಯಾಮ್‌ಸಂಗ್ ಈ ಫೋನ್ ನಲ್ಲಿ ವಿಶೇಷವಾಗಿ ಸ್ಯಾಮ್ ಸಂಗ್ ವಾಲೆಟ್ ಜೊತೆ ಟ್ಯಾಪ್ & ಪೇ ಸೌಲಭ್ಯ ಒದಗಿಸಿದ್ದು, ಬಳಕೆದಾರರು ಸುಲಭವಾಗಿ ಸುರಕ್ಷಿತವಾಗಿ ಪೇಮೆಂಟ್ ಮಾಡಬಹುದಾಗಿದೆ.
ಉತ್ಪನ್ನ ವಿವರಗಳು: ಉತ್ಪನ್ನ ವೇರಿಯೆಂಟ್ ಪರಿಚಯಾತ್ಮಕ ಬೆಲೆ ಆಫರ್ ಗಳು
ಗ್ಯಾಲಕ್ಸಿ ಎಫ್56 5ಜಿ 8ಜಿಬಿ+128ಜಿಬಿ ರೂ. 25999 2,000 ರೂ. ಬ್ಯಾಂಕ್ ರಿಯಾಯಿತಿ ಒಳಗೊಂಡು
- 8ಜಿಬಿ+256ಜಿಬಿ ರೂ. 28,999 2,000 ರೂ. ಬ್ಯಾಂಕ್ ರಿಯಾಯಿತಿ ಒಳಗೊಂಡು
ಇಂದಿನಿಂದ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್56 5ಜಿ ಎರಡು ರೀತಿಯ ಸ್ಟೋರೇಜ್ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಗ್ರಾಹಕರು ಸ್ಯಾಮ್ ಸಂಗ್ ಫೈನಾನ್ಸ್+ ಮತ್ತು ಇತರ ಪ್ರಮುಖ ಎನ್ ಬಿ ಎಫ್ ಸಿ ಪಾಲುದಾರ ಸಂಸ್ಥೆಗಳಲ್ಲಿ ತಿಂಗಳಿಗೆ ಕೇವಲ 1556 ರೂ. ಇಎಂಐ ಕಟ್ಟುವ ಸೌಲಭ್ಯದ ಮೂಲಕ ಈ ಫೋನ್ ಅನ್ನು ಸುಲಭವಾಗಿ ಖರೀದಿಸಬಹುದು.