Israeli-American hostage: 584 ದಿನಗಳ ನಂತರ ಹಮಾಸ್ ಉಗ್ರರ ಸೆರೆಯಿಂದ ಯುವಕ ರಿಲೀಸ್; ಈ ವಿಡಿಯೊ ನೋಡಿದ್ರೆ ಕಣ್ಣೀರು ತರಿಸುತ್ತೆ!
ಗಾಜಾದಲ್ಲಿ 19 ತಿಂಗಳ ಕಾಲ ಒತ್ತೆಯಾಳಾಗಿ (Hostage) ಬಂಧನದಲ್ಲಿದ್ದ 21 ವರ್ಷದ ಇಸ್ರೇಲ್-ಅಮೆರಿಕನ್ ಯುವಕ ಎಡನ್ ಅಲೆಕ್ಸಾಂಡರ್ (Edan Alexander), ಸೋಮವಾರ ಬಿಡುಗಡೆಯಾಗಿದ್ದಾರೆ. ಯುದ್ಧದಲ್ಲಿನ ತಾತ್ಕಾಲಿಕ ವಿರಾಮದ ನಡುವೆ ಅಲೆಕ್ಸಾಂಡರ್ ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ. 2023ರ ಕೊನೆಯಲ್ಲಿ ಉಗ್ರಗಾಮಿಗಳಿಂದ ಒತ್ತೆಯಾಳಾಗಿ ಸೆರೆಸಿಕ್ಕಿದ್ದ ಅಲೆಕ್ಸಾಂಡರ್, ಬಿಡುಗಡೆಯ ನಂತರ ಇಸ್ರೇಲ್‌ನ ಸೇನಾ ಕೇಂದ್ರಕ್ಕೆ ವರ್ಗಾವಣೆಯಾಗಿದ್ದಾರೆ.


ಗಾಜಾ: ಗಾಜಾದಲ್ಲಿ (Gaza) 19 ತಿಂಗಳ ಕಾಲ ಒತ್ತೆಯಾಳಾಗಿ ಬಂಧನದಲ್ಲಿದ್ದ 21 ವರ್ಷದ ಇಸ್ರೇಲ್-ಅಮೆರಿಕನ್ (Israeli-American Hostage) ಯುವಕ ಎಡನ್ ಅಲೆಕ್ಸಾಂಡರ್ (Edan Alexander), ಸೋಮವಾರ ಬಿಡುಗಡೆಯಾಗಿದ್ದಾರೆ. ಯುದ್ಧದಲ್ಲಿನ ತಾತ್ಕಾಲಿಕ ವಿರಾಮದ ನಡುವೆ ಅಲೆಕ್ಸಾಂಡರ್ ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ. 2023ರ ಕೊನೆಯಲ್ಲಿ ಉಗ್ರಗಾಮಿಗಳಿಂದ ಒತ್ತೆಯಾಳಾಗಿ ಸೆರೆಸಿಕ್ಕಿದ್ದ ಅಲೆಕ್ಸಾಂಡರ್, ಬಿಡುಗಡೆಯ ನಂತರ ಇಸ್ರೇಲ್‌ನ ಸೇನಾ ಕೇಂದ್ರಕ್ಕೆ ವರ್ಗಾವಣೆಯಾಗಿದ್ದಾರೆ. ಅವರನ್ನು ಬರಮಾಡಿಕೊಳ್ಳಲು ಕುಟುಂಬ ಕಾಯುತ್ತಿತ್ತು, ಅಲೆಕ್ಸಾಂಡರ್ ಹಲವು ತಿಂಗಳ ನಂತರ ತನ್ನವರನ್ನು ಕಂಡ ಸಂತೋಷದಲ್ಲಿ ಭಾವುಕರಾಗಿದ್ದಾರೆ. ಈ ಸಂತೋಷದ ಕ್ಷಣವನ್ನು ಸೆರೆಹಿಡಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಅಲೆಕ್ಸಾಂಡರ್‌ರ ತಾಯಿ ಅವರತ್ತ ಓಡಿಬಂದು, ಕಣ್ಣೀರಿ ಸುರಿಸುತ್ತಾ ಅವರನ್ನು ತಬ್ಬಿಕೊಳ್ಳುವ ದೃಶ್ಯ ಕಾಣಿಸುತ್ತದೆ. "ನೀನು ಎಷ್ಟು ಶಕ್ತಿಶಾಲಿಯಾಗಿದ್ದೀಯಾ! ಎಡನ್, ನಮಗೆ ತುಂಬಾ ಚಿಂತೆಯಾಗಿತ್ತು" ಎಂದು ಅವರು ಹೇಳುತ್ತಾರೆ.
ವಿಡಿಯೊ ಇಲ್ಲಿದೆ
We waited all day for this.
— Aviva Klompas (@AvivaKlompas) May 12, 2025
Edan Alexander hugs his parents for the first time 💛🥹 pic.twitter.com/CQWL1rzT3b
ಅಲೆಕ್ಸಾಂಡರ್ ತಮ್ಮ ತಂದೆ, ಸಹೋದರ ಮತ್ತು ಸಹೋದರಿಯನ್ನು ಸಹ ಅಪ್ಪಿಕೊಂಡಿದ್ದಾರೆ. ಹಮಾಸ್ ಬಂಧನದಲ್ಲಿದ್ದ ಕೊನೆಯ ಜೀವಂತ ಅಮೆರಿಕನ್ ಒತ್ತೆಯಾಳು ಇವರೇ ಆಗಿದ್ದರು. ಮಧ್ಯಾಹ್ನದ ವೇಳೆಗೆ ಗಾಜಾದಲ್ಲಿ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಒತ್ತೆಯಾಳಿನ ಬಿಡುಗಡೆಗಾಗಿ ಇಸ್ರೇಲ್ ತನ್ನ ಕಾರ್ಯಾಚರಣೆಗಳನ್ನು ವಿರಾಮಗೊಳಿಸುವುದಾಗಿ ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: Viral Video: ಈ ವೇಫರ್ ರೆಸಿಪಿಯ ರುಚಿ ನೋಡಿದ್ರಾ....? ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ!
ಈ ವಾರ ಆ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಒಳ್ಳೆಯ ಇಚ್ಛೆಯ ಸಂಕೇತವಾಗಿ ಎಡನ್ ಅಲೆಕ್ಸಾಂಡರ್‌ರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿದೆ. "ಅಮೆರಿಕನ್ ಒತ್ತೆಯಾಳು ಎಡನ್ ಅಲೆಕ್ಸಾಂಡರ್, ಸತ್ತಿದ್ದಾನೆಂದು ಭಾವಿಸಲಾಗಿದ್ದವನನ್ನು ಹಮಾಸ್ ಬಿಡುಗಡೆ ಮಾಡಲಿದೆ. ಒಳ್ಳೆಯ ಸುದ್ದಿ" ಎಂದು ಟ್ರಂಪ್ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇಸ್ರೇಲ್‌ನ ಸೇನಾ ಒತ್ತಡ ಮತ್ತು ಟ್ರಂಪ್ ಅವರ ರಾಜಕೀಯ ಒತ್ತಡದಿಂದಾಗಿ ಎಡನ್ ಅಲೆಕ್ಸಾಂಡರ್ ಬಿಡುಗಡೆಯಾಗಿದ್ದಾರೆ ಎಂದು ನೆತನ್ಯಾಹು ಹೇಳಿದ್ದಾರೆ. ಒತ್ತೆಯಾಳುವಿ ವರ್ಗಾವಣೆಯ ನಂತರ ಇಸ್ರೇಲ್‌ನ ಟ್ಯಾಂಕ್ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯನ್ನು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.