Star Summer Lifestyle: ಫ್ಯಾಷನ್-ಫಿಟ್‌ನೆಸ್ ಒಂದೇ ನ್ಯಾಣದ ಎರಡು ಮುಖಗಳಿದ್ದಂತೆ: ನಟಿ ತಾಪ್ಸಿ ಪನ್ನು
ಸೀಸನ್ ಯಾವುದೇ ಇರಲಿ, ಫ್ಯಾಷನ್ & ಫಿಟ್‌ನೆಸ್ ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಸೀಸನ್ ಯಾವುದಾದರೂ ಕೂಡ ತಮ್ಮ ಲೈಫ್‌ಸ್ಟೈಲ್ ರುಟೀನ್‌ನಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲವಂತೆ. ಅಷ್ಟು ಮಾತ್ರವಲ್ಲ, ಈ ಸೀಸನ್‌ನಲ್ಲೂ ಎಲ್ಲವನ್ನೂ ಸ್ಟ್ರಿಕ್ಟ್ ಆಗಿ ಫಾಲೋ ಮಾಡುತ್ತಾರಂತೆ.

ಚಿತ್ರಗಳು: ತಾಪ್ಸಿ ಪನ್ನು- ನಟಿ

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ತಾಪ್ಸಿ ಪನ್ನು, ಫ್ಯಾಷನ್ ಫ್ರೀಕ್ ಮಾತ್ರವಲ್ಲ, ಫಿಟ್‌ನೆಸ್ ಹಾಗೂ ಡಯಟ್ ಫ್ರೀಕ್ ಕೂಡ ಅಂತೆ. ಹಾಗೆಂದು ಅವರೇ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸೀಸನ್ (Star Summer Lifestyle) ಯಾವುದಾದರೇನು? ನಮ್ಮ ಲೈಫ್‌ಸ್ಟೈಲ್ ರುಟೀನ್‌ಗಳು ನಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ಹೊಂದಬೇಕು ಎಂದಿದ್ದಾರೆ. ಹಾಗಾಗಿ ನಾನು ಡೆಡಿಕೇಟೆಡ್ ಫಿಟ್ನೆಸ್ & ಡಯಟ್ ಫಾಲೋವರ್ ಎಂದು ಹೇಳಿಕೊಂಡಿದ್ದಾರೆ. ನಾನಂತೂ ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತೇನೆ. ಈ ಹಿಂದೆ ದೇಸಿ ಲುಕ್ ನೀಡುವ ಇಂಡೋ-ವೆಸ್ಟರ್ನ್ ಸೀರೆಗಳನ್ನು ವಿದೇಶದಲ್ಲಿ ಉಟ್ಟು ಸುದ್ದಿಯಾಗಿದ್ದೆ. ಇದೇ ರೀತಿ ಆಗಾಗ್ಗೆ ನಾನಾ ಬಗೆಯ ಔಟ್‌ಫಿಟ್‌ಗಳನ್ನು ಧರಿಸುತ್ತೇನೆ. ಸೀಸನ್‌ಗೆ ತಕ್ಕಂತೆ ಮ್ಯಾಚ್ ಮಾಡುತ್ತೇನೆ ಎಂದಿದ್ದಾರೆ.

ಡಯಟ್ ಕಾನ್ಶಿಯಸ್
ತಾಪ್ಸಿ, ಯಾವ ಮಟ್ಟಿಗೆ ಡಯಟ್ ಕಾನ್ಶಿಯಸ್ ಎಂದರೆ, ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದನ್ನು ತಪ್ಪಿಸುವುದಿಲ್ಲವಂತೆ. ಪ್ರತಿದಿನ ಊಟ-ತಿಂಡಿಯನ್ನು ಐದಾರು ಚಿಕ್ಕ ಮೀಲ್‌ಗಳನ್ನಾಗಿಸಿಕೊಂಡು ಸೇವಿಸುವುದು ಅವರ ಡೈಲಿ ರುಟೀನ್‌ನಲ್ಲಿ ಸೇರಿದೆಯಂತೆ. ಸಾಕಷ್ಟು ವೆಜಿಟೆಬಲ್ ಸಲಾಡ್ ಹಾಗೂ ಡ್ರೈಫ್ರೂಟ್ಸ್ ಎಲ್ಲವೂ ಅವರ ಲಿಸ್ಟ್‌ನಲ್ಲಿವೆಯಂತೆ. ಸ್ಲ್ಪಿಟ್ ಮೀಲ್ಸ್ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗಿ ದೇಹದಲ್ಲಿನ ಕೊಬ್ಬು ಕರಗಲು ಸಹಾಯವಾಗುತ್ತದೆ. ಇನ್ನು, ಡಯಟ್ ಕೂಡ ಅತಿಯಾದರೆ ಆರೋಗ್ಯ ಹದಗೆಡುವುದು ಗ್ಯಾರಂಟಿ ಹಾಗೂ ಚರ್ಮವು ಕೂಡ ಕಾಂತಿ ಕಳೆದುಕೊಳ್ಳುತ್ತದೆ. ಹಾಗಾಗಿ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವುದು ಅಗತ್ಯ ಎಂದು ಸಲಹೆ ನೀಡುತ್ತಾರೆ.

ಸೌಂದರ್ಯವರ್ಧಕ ಡಯಟ್
ತರಕಾರಿಯ ಸಲಾಡ್ ಹೆಚ್ಚು ತಿನ್ನುವುದರಿಂದ ಕಣ್ಣು ಹಾಗೂ ಹಲ್ಲುಗಳು ಸಧೃಡವಾಗುತ್ತವೆ. ಪ್ರೋಟಿನ್‌ಗಳು ಕೂದಲ ಹಾಗೂ ಉಗುರಿನ ಸೌಂದರ್ಯ ಕಾಪಾಡುತ್ತವೆ. ಅದರಲ್ಲೂ ಬಾದಾಮಿ, ವಾಲ್‌ನಟ್, ಒಣ ದ್ರಾಕ್ಷಿಯಂತವು ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸುತ್ತವೆ ಎನ್ನುವ ತಾಪ್ಸಿ, ಮೊಟ್ಟೆಯ ವೈಟ್ ಭಾಗವನ್ನು ತಿನ್ನುತ್ತಾರಂತೆ. ಇನ್ನು ಊಟದ ವಿಷಯಕ್ಕೆ ಬಂದರೆ ಚಪಾತಿ, ಜ್ಯೂಸ್ ಪ್ರತಿದಿನದ ಲಿಸ್ಟ್‌ನಲ್ಲಿ ಇದ್ದೇ ಇರುತ್ತವಂತೆ.
ಈ ಸುದ್ದಿಯನ್ನೂ ಓದಿ | Summer Saree Blouses: ಬೇಸಿಗೆಯಲ್ಲಿ ಟ್ರೆಂಡಿಯಾಗಿರುವ ಸೀರೆ ಬ್ಲೌಸ್‌ಗಳಿವು

ತಾಪ್ಸಿ ನೀಡುವ ಟಿಪ್ಸ್
* ಇನ್‌ಸ್ಟಂಟ್ ಆಹಾರ ಸೇವಿಸುವುದು ಬೇಡ. ಇದರಿಂದ ಯಾವುದೇ ಉಪಯೋಗವಿಲ್ಲ.
* ಹೆಚ್ಚೆಚ್ಚು ಕಾಫಿ ಕುಡಿಯುವ ಅಭ್ಯಾಸ ತೊರೆಯಬೇಕು. ಸಾಫ್ಟ್ ಡ್ರಿಂಕ್ಸ್ ಕೂಡಬೇಡ.
* ಜಂಕ್ ಹಾಗೂ ಫ್ರೈಡ್ ಫುಡ್‌ನಿಂದ ದೂರವಿರಬೇಕು. ಇಲ್ಲವಾದಲ್ಲಿ ತೂಕ ಹೆಚ್ಚಾಗಬಹುದು.
* ಆಯಾ ಸೀಸನ್‌ಗೆ ತಕ್ಕಂತೆ ಡಯಟ್ ಬದಲಾಯಿಸಿಕೊಳ್ಳುವುದರಿಂದ ಆರೋಗ್ಯಕರ ಲೈಫ್‌ಸ್ಟೈಲ್ ಕಾಪಾಡಿಕೊಳ್ಳಲು ಸಾಧ್ಯ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)