ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಅದು ದುಡಿಯುವವರ ದೇಶ

ಐವತ್ತು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಉದ್ಯೋಗದಲ್ಲಿರುವುದು ಅಲ್ಲಿ ಸಾಮಾನ್ಯ. ಜಪಾನಿನಲ್ಲಿ ಉದ್ಯೋಗಿಗಳ ವೇತನವು ಅವರ ಹಿರಿತನ, ಅನುಭವಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ. ಈ ಪದ್ಧತಿಯು ಉದ್ಯೋಗಿಗಳನ್ನು ತಮ್ಮ ಕಂಪನಿಯಲ್ಲಿ ದೀರ್ಘಕಾಲ ಉಳಿಸಿ ಕೊಳ್ಳಲು ಸಹಾಯಕ

ಅದು ದುಡಿಯುವವರ ದೇಶ

ಸಂಪಾದಕರ ಸದ್ಯಶೋಧನೆ

ನಾವು ಭಾರತೀಯರು ಗಡಿಯಾರ ನೋಡಿ ಆಫೀಸಿಗೆ ಹೋಗುತ್ತೇವೆ ಮತ್ತು ಸಮಯ ಆಗುತ್ತಿದ್ದಂತೆ ಆಫೀಸಿನಿಂದ ಜಾಗ ಖಾಲಿ ಮಾಡುತ್ತೇವೆ. ಯಾವಾಗ ಮನೆಗೆ ಹೊರಡುವ ಸಮಯ ಬರುತ್ತದೆ ಎಂಬುದನ್ನು ಒಂದು ಗಂಟೆಯಿಂದಲೇ ಎದುರು ನೋಡುತ್ತೇವೆ. ಆದರೆ ಜಪಾನಿಯರು ಹಾಗಲ್ಲ. ಅವರು ಮನೆಗೇ ಹೋಗುವುದಿಲ್ಲ. ಕೆಲವೊಮ್ಮೆ ಅವರಿಗೆ ಮನೆಗೆ ಹೋಗಿ ಎಂದು ಹೇಳಬೇಕಾಗುತ್ತದೆ. ಜಪಾನಿಯರಿಗೆ ಕೆಲಸ ಅಂದ್ರೆ ನಿಷ್ಠೆಯ ಸಂಕೇತ. ಅಲ್ಲಿ ಉದ್ಯೋಗಿಗಳು ತಮ್ಮ ಕಂಪನಿಗೆ ಶ್ರದ್ಧೆ ಯಿಂದ ಕೆಲಸ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸುತ್ತಾರೆ. ಈ ನಿಷ್ಠೆ ಮತ್ತು ಬದ್ಧತೆ ಕೆಲಸದ ಸಮಯವನ್ನು ವಿಸ್ತರಿಸಲು ಕಾರಣ. ಕೆಲವರಿಗೆ, ‘ನಿಮ್ಮ ಉದ್ಯೋಗ ಮುಖ್ಯವೋ, ಕುಟುಂಬ ಮುಖ್ಯವೋ’ ಅಂತ ಕೇಳಿದರೆ, ‘ನನ್ನ ಕಂಪನಿಯೇ ಸರ್ವಸ್ವ’ ಎಂದು ಹೇಳುವುದುಂಟು.

ಹಾಗಂತ ಅವರೇನು ಅವಿವಾಹಿತರಲ್ಲ. ತನ್ನ ಕಂಪನಿ ಉಳಿದರೆ, ತಾನು ಉಳಿದೇನು ಎಂಬುದು ಅವರ ಭಾವನೆ. ಜಪಾನಿನ ಉದ್ಯೋಗ ವ್ಯವಸ್ಥೆಯಲ್ಲಿ, ಉದ್ಯೋಗಿಗಳು ತಮ್ಮ ಕಂಪನಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಾರೆ. ಈ ಜೀವನಪೂರ್ತಿ ಉದ್ಯೋಗ ಪದ್ಧತಿಯು ಉದ್ಯೋಗಿಗಳನ್ನು ಹೆಚ್ಚು ಸಮಯ ಕೆಲಸ ಮಾಡಲು ಪ್ರೇರೇಪಿಸುತ್ತದೆ, ಏಕೆಂದರೆ ಅವರು ತಮ್ಮ ಕಂಪನಿಯಲ್ಲಿ ಪ್ರಗತಿ ಸಾಧಿಸಲು ಹೆಚ್ಚು ಶ್ರಮಿಸುತ್ತಾರೆ.

ಇದನ್ನೂ ಓದಿ: Vishweshwar Bhat Column: ಚಾಪ್‌ ಸ್ಟಿಕ್‌ ಚಮತ್ಕಾರ

ಐವತ್ತು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಂಪನಿಯಲ್ಲಿ ಉದ್ಯೋಗದಲ್ಲಿರುವುದು ಅಲ್ಲಿ ಸಾಮಾನ್ಯ. ಜಪಾನಿನಲ್ಲಿ ಉದ್ಯೋಗಿಗಳ ವೇತನವು ಅವರ ಹಿರಿತನ, ಅನುಭವಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ. ಈ ಪದ್ಧತಿಯು ಉದ್ಯೋಗಿಗಳನ್ನು ತಮ್ಮ ಕಂಪನಿಯಲ್ಲಿ ದೀರ್ಘಕಾಲ ಉಳಿಸಿ ಕೊಳ್ಳಲು ಸಹಾಯಕ.

ಅವರು ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ತಮ್ಮ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸು ತ್ತಾರೆ. ದ್ವಿತೀಯ ಮಹಾಯುದ್ಧದ ನಂತರ, ಜಪಾನ್ ತನ್ನ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಹೆಚ್ಚಿನ ಶ್ರಮ ಹಾಕಿತು. ಈ ಸಮಯದಲ್ಲಿ, ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ದೇಶದ ಆರ್ಥಿಕ ಪುನರ್ನಿರ್ಮಾಣದಲ್ಲಿ ಪಾಲ್ಗೊಂಡರು. ಈ ಶ್ರಮ ಸಂಸ್ಕೃತಿಯು ಆ ಕಾಲದಿಂದಲೇ ಆಚರಣೆಗೆ ಬಂದಿತು.

ಹೆಚ್ಚು ಕೆಲಸ ಮಾಡಿ, ಆಫೀಸಿನಲ್ಲಿ ಮರಣ ಹೊಂದಿದ ಪ್ರಕರಣಗಳು ಅಲ್ಲಿನ ಕೆಲಸದ ಸಂಸ್ಕೃತಿಯ ತೀವ್ರತೆಯನ್ನು ತೋರಿಸುತ್ತವೆ. ಜಪಾನ್ ಸರಕಾರ ಹೆಚ್ಚು ಕೆಲಸ ಮಾಡುವ ಸಂಸ್ಕೃತಿಯನ್ನು ತಗ್ಗಿ ಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. 2018ರಲ್ಲಿ, ‘ಹಟಾರಕಿಕತಾ ಕೈಕಾಕು’ ಎಂಬ
ಕೆಲಸದ ಶೈಲಿಯ ಸುಧಾರಣಾ ಕಾನೂನು ಜಾರಿಗೆ ಬಂತು, ಇದು ಉದ್ಯೋಗಿಗಳ ಕೆಲಸದ ಸಮಯ ವನ್ನು ನಿಯಂತ್ರಿಸಲು ಮತ್ತು ಅವರ ಜೀವನ ಗುಣಮಟ್ಟವನ್ನು ಸುಧಾರಿಸುವ ಆಶಯವನ್ನು ಹೊಂದಿದೆ.

ಈ ಕಾನೂನಿನ ಅಡಿಯಲ್ಲಿ, ತಿಂಗಳಿಗೆ 100 ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಮಿತಿ ವಿಧಿಸಲಾಗಿದೆ. ಜತೆಗೆ, ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ತತ್ವವನ್ನು ಜಾರಿಗೆ ತರಲಾಗಿದೆ, ಇದು ನಿಯ ಮಿತ ಮತ್ತು ಅನಿಯಮಿತ ಉದ್ಯೋಗಿಗಳ ನಡುವಿನ ವೇತನ ವ್ಯತ್ಯಾಸವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಜಪಾನಿನಲ್ಲಿ ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡಲು ಹಲವು ಕಾರಣಗಳಿವೆ, ಇದರಲ್ಲಿ ಸಾಂಸ್ಕೃತಿಕ ನಿರೀಕ್ಷೆಗಳು, ಆರ್ಥಿಕ ಪದ್ಧತಿಗಳು, ಸಾಂಸಾರಿಕ ತಾಪತ್ರಯ, ಆಧುನಿಕ ಜೀವನ ನಡೆಸುವ ಹಂಬಲ ಮತ್ತು ಇತಿಹಾಸಿಕ ಹಿನ್ನೆಲೆಗಳು ಪ್ರಮುಖವಾಗಿವೆ.

ಇಷ್ಟಾಗಿಯೂ ಒಂದು ಸಂಗತಿ ಜನಜನಿತ. ಜಪಾನಿಯರು ಸೋಮಾರಿಗಳಲ್ಲ, ಮೈಗಳ್ಳರಲ್ಲ. ಅವರು ಮೂಲತಃ ಶ್ರಮಜೀವಿಗಳು. ದಿನದಲ್ಲಿ ಹದಿನೆಂಟು ಗಂಟೆ ದುಡಿಯಬೇಕು ಎಂದರೂ ತುಟಿ ಪಿಟಿಕ್ಕೆ ನ್ನದೇ ದುಡಿಯುತ್ತಾರೆ. ತಾನು ಸಂಬಳಕ್ಕೆ ಅಥವಾ ತನಗಾಗಿ ಮಾತ್ರ ದುಡಿಯುತ್ತೇನೆ ಎಂದು ಅವರು ಭಾವಿಸುವುದಿಲ್ಲ. ನಾನು ನನ್ನ ದೇಶದ ಅಭಿವೃದ್ಧಿಗೆ ದುಡಿಯಬೇಕು, ನನ್ನ ಸಂಸ್ಥೆಯ ಉನ್ನತಿಗಾಗಿ ದುಡಿಯಬೇಕು ಎಂಬ ಆದರ್ಶ ಭಾವವೂ ಅವರಲ್ಲಿ ಮನೆ ಮಾಡಿರುವುದು ಗಮನಾರ್ಹ.

ಸಮಯದ ಪರಿವಿಲ್ಲದೇ ಪರಿಶ್ರಮದಿಂದ ದುಡಿಯಬೇಕು, ಅದರಲ್ಲಿಯೇ ತೃಪ್ತಿ ಕಾಣಬೇಕು ಎಂಬು ದು ಅವರ ರಕ್ತದಲ್ಲಿಯೇ ಹರಿದು ಬಂದಿದೆ. ಅದಕ್ಕೆ ಅತಿಯಾಗಿ ಸಾಯುವವರು ಅಲ್ಲಿ ಸಿಗುತ್ತಾರೆ, ಆದರೆ ದುಡಿಯದ ಕೆಲಸಗಳ್ಳರು ಸಿಗಲಾರರು.