ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಬೆಂಗಳೂರು ಜಲಮಂಡಳಿ ಈಗಾಗಲೇ ಕಾವೇರಿ ಐದನೇ ಹಂತವನ್ನು ಅನುಷ್ಠಾನಗೊಳಿಸಿದ್ದರೂ, ನಿರೀ ಕ್ಷಿತ ಪ್ರಮಾಣದಲ್ಲಿ ಸಂಪರ್ಕ ಪಡೆಯಲು ಗೃಹಬಳಕೆದಾರರು ಮುಂದೆ ಬಂದಿಲ್ಲ. ಆದ್ದರಿಂದ ಇದೀಗ ಬೆಂಗಳೂರು ಜಲಮಂಡಳಿ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು ನೂತನ ಕಾವೇರಿ ನೀರಿನ ಸಂಪರ್ಕ ಪಡೆಯಲು ನೀಡಬೇಕಿರುವ ಡೆಪಾಸಿಟ್ ಹಣವನ್ನು ಆರಂಭಿಕ ಹಂತದಲ್ಲಿ ಶೇ.20ರಷ್ಟು ಪಾವತಿಸಿ, ಇನ್ನುಳಿದ ವರ್ಷದ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

Profile Ashok Nayak Apr 25, 2025 10:46 AM

ಅಪರ್ಣಾ ಎ.ಎಸ್ ಬೆಂಗಳೂರು

ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ಅವಕಾಶ

ಸರಳ ಕಾವೇರಿ ಯೋಜನೆ ಸೋಮವಾರದಿಂದ ಚಾಲನೆ

ಕಂತುರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶ

ಲಕ್ಷ ಲಕ್ಷ ಡೆಪಾಸಿಟ್ ಕಟ್ಟಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಹೆಣಗಾಡುವ ಅಪಾರ್ಟ್‌ಮೆಂಟ್‌ ಗಳಿಗೆ ಜಲಮಂಡಳಿ ನೂತನ ‘ಯೋಜನೆ’ಯೊಂದನ್ನು ನೀಡಿದ್ದು, ಸರಳ ಕಾವೇರಿಯ ಮೂಲಕ ಇಎಂಐ ಮೂಲಕ ನೀರಿನ ಸಂಪರ್ಕದ ಡೆಪಾಸಿಟ್ ಪಾವತಿಸಲು ಅವಕಾಶ ಕಲ್ಪಿಸಿದೆ. ಬೆಂಗಳೂರು ಜಲಮಂಡಳಿ ಈಗಾಗಲೇ ಕಾವೇರಿ ಐದನೇ ಹಂತವನ್ನು ಅನುಷ್ಠಾನಗೊಳಿಸಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಸಂಪರ್ಕ ಪಡೆಯಲು ಗೃಹಬಳಕೆದಾರರು ಮುಂದೆ ಬಂದಿಲ್ಲ. ಆದ್ದರಿಂದ ಇದೀಗ ಬೆಂಗಳೂರು ಜಲಮಂಡಳಿ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು ನೂತನ ಕಾವೇರಿ ನೀರಿನ ಸಂಪರ್ಕ ಪಡೆಯಲು ನೀಡಬೇಕಿರುವ ಡೆಪಾಸಿಟ್ ಹಣವನ್ನು ಆರಂಭಿಕ ಹಂತದಲ್ಲಿ ಶೇ.20ರಷ್ಟು ಪಾವತಿಸಿ, ಇನ್ನುಳಿದ ವರ್ಷದ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.

ಇದನ್ನೂ ಓದಿ: Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

‘ಸರಳ ಕಾವೇರಿ’ ಎನ್ನುವ ಹೆಸರಲ್ಲಿ ಯೋಜನೆ ಆರಂಭಿಸಿರುವ ಜಲಮಂಡಳಿ ಮೇ.31ರೊಳಗೆ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಇಎಂಐ ಮೂಲಕ ಡೆಪಾಸಿಟ್ ಹಣವನ್ನು ಪಾವತಿ ಸಲು ಅವಕಾಶ ನೀಡಿದ್ದು, ಈ ಯೋಜನೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಹಾಗೂ ಮನೆ ಮಾಲೀಕರಿಗೆ ಮಾತ್ರ ನೀಡಲಾಗಿದೆ. ಆದರೆ ಅಪಾರ್ಟ್ ಮೆಂಟ್ ಕಾಮಗಾರಿ ನಡೆಯುತ್ತಿದ್ದರೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಈ ಥರ ದೊಡ್ಡ ಮೊತ್ತವನ್ನು ಒಂದೇ ಬಾರಿಗೆ ತುಂಬಲು ಕಷ್ಟವಾಗುತ್ತದೆ. ಹೀಗಾಗಿ ಜನರ ಅನುಕೂಲಕ್ಕಾಗಿ ಹಾಗೂ ಜಲಮಂಡಳಿಗೂ ಸಮಸ್ಯೆ ಯಾಗದಂತೆ ಸರಳ ಕಾವೇರಿ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದ್ದು, ಈ ಯೋಜನೆ ಯಲ್ಲಿ ಸಂಪರ್ಕಕ್ಕೆ ಆಗುವ ಚಾರ್ಜಸ್ ಗಳಲ್ಲಿ ಶೇ.20ರಷ್ಟು ಮಾತ್ರ ಮೊದಲು ಜನರು ತುಂಬಿದರೆ ನೀರಿನ ಸಂಪರ್ಕ ದೊರೆಯುತ್ತದೆ.

EMI R

ಉಳಿದ ಶೇ.80ರಷ್ಟು ಬಹಳ ಅಲ್ಪ ಪ್ರಮಾಣದ ಬಡ್ಡಿ ಸೇರಿ 12 ಕಂತುಗಳಲ್ಲಿ ಒಂದು ವರ್ಷಕ್ಕೆ ನೀರಿನ ಬಿಲ್ ಜತೆಗೆ ಕಟ್ಟಿಕೊಂಡು ಹೋಗಬೇಕು. ಈ ರೀತಿ ಮಾಡುವುದರಿಂದ ತುಂಬಾ ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇವಲ 45 ದಿನಗಳ ಈ ಯೋಜನೆಯ ಸಂಪರ್ಕ ಪಡೆದುಕೊಳ್ಳಲು ಸಮಯ ನೀಡಲಾಗಿದ್ದು ಆ ಬಳಿಕ ಇರುವುದಿಲ್ಲ. ಮೇ15ರವರೆಗೆ ಜನರಿಗೆ ಸಂಪರ್ಕ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶೇ.20ರಷ್ಟು ತುಂಬಿ ಸಂಪರ್ಕ ಪಡೆದುಕೊಳ್ಳಬಹುದಾಗಿದ್ದು, 15-30 ದಿನಗಳಲ್ಲಿ ಸಂಪರ್ಕ ನೀಡಲಾಗುವುದು. ಆ ಬಳಿಕ ನೀರಿನ ಬಿಲ್ ಜತೆಗೆ ಉಳಿದ ಮೊತ್ತ ಕಟ್ಟಿಕೊಂಡು ಹೋದರೆ ಸಾಕು. ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

*

ನೀರಿನ ಪೂರೈಕೆಯನ್ನು ಸರಳೀಕರಣಗೊಳಿಸಲು ಈ ಸರಳ ಕಾವೇರಿ ಯೋಜನೆಯನ್ನು ಆರಂಭಿಸ ಲಾಗಿದೆ. ಮಧ್ಯಮವರ್ಗದವರು,ಬಡವರಿಗೆ ನೀರಿನ ಸಂಪರ್ಕ ಪಡೆಯುವುದು ದೊಡ್ಡ ಸಮಸ್ಯೆ ಯಾಗಿ ಪರಿಣಮಿಸುತ್ತದೆ. ಹೀಗಾಗಿ ಎಲ್ಲರಿಗೂ ಕಾವೇರಿ ನೀರಿನ ಸಂಪರ್ಕವನ್ನು ನೀಡಲು ಸಹಾಯಕವಾಗಲಿದೆ. ಆದರೆ ಕಟ್ಟಡ ಕಟ್ಟುವವರಿಗೆ, ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಉಳ್ಳವರಿಗೆ ಅನ್ವಯವಾಗುವುದಿಲ್ಲ. ಆಸೋಸಿಯೇಷನ್ ಇರುವವರು ಮನವಿ ಮಾಡಿದರೆ, ಸಿಂಗಲ್, ಇಂಡಿಪೆಂಡೆಂಟ್ ಹೌಸ್‌ಗಳಿಗೆ ನೀರಿನ ಸಂಪರ್ಕವನ್ನು ನೀಡಲಾಗುತ್ತದೆ. ಇಎಂಐ ಮಾದರಿಯಲ್ಲಿ ಹಣ ಕಟ್ಟುವುದರಿಂದ ಭಾರೀ ಮೊತ್ತವನ್ನು ಒಂದೇ ಬಾರಿಗೆ ಕಟ್ಟುವ ಹೊರೆ ಗ್ರಾಹಕರಿಗೆ ಇರುವು ದಿಲ್ಲ.

-ಡಾ.ವಿ.ರಾಮ್ ಪ್ರಸಾತ್ ಮನೋಹರ್,

ಅಧ್ಯಕ್ಷ, ಜಲಮಂಡಳಿ