Shootout Case: ಕಣ್ಣಿಗೆ ಖಾರದ ಪುಡಿ ಎರಚಿ ಗುಂಡಿನ ದಾಳಿ; ಸಿಪಿಐ ನಾಯಕ ಸ್ಥಳದಲ್ಲಿಯೇ ಸಾವು
ಮಂಗಳವಾರ ಮುಂಜಾನೆ ಹೈದರಾಬಾದ್ ಸಮೀಪದಲ್ಲಿ ತೆಲಂಗಾಣ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಚಂದು ರಾಥೋಡ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದ ಮೂರರಿಂದ ನಾಲ್ಕು ಜನರ ಅಪರಿಚಿತ ವ್ಯಕ್ತಿಗಳ ಗುಂಪು ಈ ಕೃತ್ಯ ಎಸಗಿದೆ.


ಹೈದರಾಬಾದ್: ಮಂಗಳವಾರ ಮುಂಜಾನೆ ಹೈದರಾಬಾದ್ ಸಮೀಪದಲ್ಲಿ ತೆಲಂಗಾಣ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಚಂದು ರಾಥೋಡ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದ ಮೂರರಿಂದ ನಾಲ್ಕು ಜನರ ಅಪರಿಚಿತ ವ್ಯಕ್ತಿಗಳ ಗುಂಪು, ಆಗ್ನೇಯ ವಲಯ ಪೊಲೀಸ್ ಮಿತಿಯ ಮಲಕ್‌ಪೇಟೆಯ ಶಾಲಿವಾಹನ ನಗರ ಉದ್ಯಾನವನದಲ್ಲಿ ಬೆಳಿಗ್ಗೆ 7:30 ರ ಸುಮಾರಿಗೆ ರಾಥೋಡ್ ಮೇಲೆ ದಾಳಿ ನಡೆಸಿತು.
ದಾಳಿಕೋರರು ಗುಂಡು ಹಾರಿಸುವ ಮೊದಲು ಚಂದು ರಾಥೋಡ್ ಅವರ ಕಣ್ಣಿಗೆ ಖಾರದ ಪುಡಿಯನ್ನು ಎರಚಿದ್ದರು ಎಂದು ವರದಿಯಾಗಿದೆ. ಆದರೂ ರಾಥೋಡ್ ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದಾರೆ. ಆದರೆ ಅದು ವಿಫಲವಾಗಿದೆ. ಗುಂಡೇಟಿಗೆ ಅವರು ಬಲಿಯಾಗಿದ್ದಾರೆ. ಘಟನೆಯ ನಂತರ, ಪೊಲೀಸರು ಆ ಪ್ರದೇಶವನ್ನು ತನಿಖೆ ಮಾಡಿದ್ದಾರೆ. ರಾಥೋಡ್ ಸ್ಥಳೀಯ ಸಿಪಿಐ ನಾಯಕರಾಗಿದ್ದರು.
ಸಿಟಿವಿ ದೃಶ್ಯಾವಳಿಗಳು ಮತ್ತು ಲಭ್ಯವಿರುವ ಇತರ ಪುರಾವೆಗಳನ್ನು ಬಳಸಿಕೊಂಡು ದಾಳಿಕೋರರನ್ನು ಗುರುತಿಸಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಾಜೇಶ್ ಪತ್ನಿ ಅನುಮಾನವಿರುವ ಹಲವರ ಹೆಸರನ್ನು ಹೇಳಿದ್ದು, ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.
ಸೋಮವಾರ, ತೆಲಂಗಾಣದ ಮೇಡಕ್ ಜಿಲ್ಲೆಯ ಕಾಂಗ್ರೆಸ್ ಎಸ್‌ಸಿ ಸೆಲ್ ನಾಯಕ ಅನಿಲ್ ಮರೆಲ್ಲಿ ಹೈದರಾಬಾದ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಆರಂಭದಲ್ಲಿ ಇದು ರಸ್ತೆ ಅಪಘಾತ ಎಂದು ಪೊಲೀಸರು ಭಾವಿಸಿದ್ದರೂ, ಈಗ ಅವರು ಇದನ್ನು ಸಂಭಾವ್ಯ ಉದ್ದೇಶಿತ ಹತ್ಯೆ ಎಂದು ತನಿಖೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Shootout Case: ಬಿಹಾರದಲ್ಲಿ ಮತ್ತೊಂದು ಗುಂಡಿನ ದಾಳಿ; ವಕೀಲ ಬಲಿ, ಕಳೆದ 24 ಗಂಟೆಯಲ್ಲಿ ನಾಲ್ವರ ಹತ್ಯೆ
ಬಿಹಾರದಲ್ಲಿ ಕೇವಲ 24 ಗಂಟೆಯೊಳಗಾಗಿ ನಾಲ್ಕು ಗುಂಡಿನ ದಾಳಿ ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಸುಲ್ತಾನ್‌ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಿತೇಂದ್ರ ಕುಮಾರ್ ಮಹ್ತೊ ಎಂಬ 58 ವರ್ಷದ ವಕೀಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಬಿಹಾರದಲ್ಲಿ ನಡೆದ ನಾಲ್ಕನೇ ಗುಂಡಿನ ದಾಳಿ ಘಟನೆ ಇದಾಗಿದೆ. ಮಹ್ತೊ ಚಹಾ ಕುಡಿದು ಹಿಂತಿರುಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದರು ಎಂದು ತಿಳಿದು ಬಂದಿದೆ.