ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deadbody Found: ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ಶವ ಪತ್ತೆ; ಕೊಲೆ ಶಂಕೆ

Womanʼs dead body found : 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಏರೋಸ್ಪೇಸ್ ನ ಉದ್ಯೋಗಿ ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. ಆಕಾಂಕ್ಷಾ ನಿನ್ನೆ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್ ಗೆ ತೆರಳಿದ್ದರು. ಅಲ್ಲಿ ಆಕೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಧರ್ಮಸ್ಥಳ ಮೂಲದ ಯುವತಿಯ ಶವ ಪಂಜಾಬ್‌ನಲ್ಲಿ ಪತ್ತೆ

Profile Rakshita Karkera May 18, 2025 11:21 AM

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಯುವತಿಯೊಬ್ಬಳ(Dharmastala Young woman) ಶವ ಪಂಜಾಬ್‌ನಲ್ಲಿ ನಿಗೂಢವಾಗಿ ಪತ್ತೆಯಾಗಿದೆ(Dead body Found). 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಏರೋಸ್ಪೇಸ್ ನ ಉದ್ಯೋಗಿ ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. ಆಕಾಂಕ್ಷಾ ನಿನ್ನೆ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್ ಗೆ ತೆರಳಿದ್ದರು. ಅಲ್ಲಿ ಆಕೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಏನಿದು ಘಟನೆ?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಕಾಂಕ್ಷಾ ನಾಯರ್ ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದರು. ಈ ಹಿನ್ನೆಲೆಯಲ್ಲಿ ಸರ್ಟಿಫಿಕೇಟ್ ತರಲೆಂದು ಹೋಗಿದ್ದರು. ಜಪಾನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದ ಆಕಾಂಕ್ಷಾ ಅಲ್ಲಿಗೆ ತೆರಳು ಸಕಲ ತಯಾರಿ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಅವರಿಗೆ ಸರ್ಟಿಫಿಕೇಟ್‌ ಬೇಕಾಗಿತ್ತು. ಇದಕ್ಕಾಗಿ ಪಂಜಾಬ್ ಪಗ್ವಾಡಾ ಕಾಲೇಜಿಗೆ ಹೋಗಿ ಸರ್ಟಿಫಿಕೇಟ್ ಪಡೆದಿದ್ದರು. ಸರ್ಟಿಫಿಕೇಟ್ ಪಡೆದ ಬಳಿಕ ಮನೆಗೆ ಕರೆ ಮಾಡಿದ್ದ ಆಕಾಂಕ್ಷಾ ಆ ಬಳಿಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಗಳ ಸಾವಿನ ಬಗ್ಗೆ ಜಲಂಧರ್ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಆಕಾಂಕ್ಷಾ ಅವರ ಪೋಷಕರು ತಮ್ಮ ಮಗಳನ್ನು ಯಾರೋ ಕೊಲೆಗೈದಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆಗೆ ಟ್ವಿಸ್ಟ್‌, ಅತ್ತೆಯೇ ಕೊಲೆಗಾತಿ!