ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mexican Navy Ship Collide: ಮೆಕ್ಸಿಕನ್ ಹಡಗು ದುರಂತ- ರಣ ಭೀಕರ ದೃಶ್ಯ ಇಲ್ಲಿದೆ

ಮೆಕ್ಸಿಕನ್ ನೌಕಾಪಡೆಯ ಅತ್ಯಂತ ಎತ್ತರದ ನೌಕಾಯಾನ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಮೇ 17ರಂದು ಶನಿವಾರ ರಾತ್ರಿ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಜನರನ್ನು ನೀರಿನಿಂದ ಹೊರತರಲು ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಹಡಗು 200 ಜನರನ್ನು ಹೊತ್ತೊಯ್ಯುತ್ತಿತ್ತು. ಎಆರ್ ಎಂ ಕುವಾಹ್ಟೆಮೊಕ್ 147 ಅಡಿ ಎತ್ತರದ ಹಡಗು ಇದಾಗಿದ್ದು, ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಇದು ಸೇತುವೆಗೆ ಡಿಕ್ಕಿ ಹೊಡೆದಿದೆ.

ಮೆಕ್ಸಿಕನ್ ಹಡಗು ದುರಂತ- ರಣ ಭೀಕರ ದೃಶ್ಯ ಇಲ್ಲಿದೆ

ಮೆಕ್ಸಿಕೋ: ಮೆಕ್ಸಿಕನ್ ನೌಕಾಪಡೆಯ (Mexican Navy) ಬೃಹತ್ ತರಬೇತಿ ಹಡಗೊಂದು ಬ್ರೂಕ್ಲಿನ್ ಸೇತುವೆಗೆ (Brooklyn Bridge) ಡಿಕ್ಕಿ ಯಾಗಿರುವ ಘಟನೆ ನಡೆದಿದೆ. ಈ ಅಪಘಾತದ ವಿಡಿಯೋಗಳು (Viral Video) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿವೆ. ಸುಮಾರು 277 ಜನರನ್ನು ಹೊತ್ತುಕೊಂಡು ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು ಮೇ 17 ರ ಶನಿವಾರ ರಾತ್ರಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ತಂಡ ನದಿಯಲ್ಲಿ ಬಿದ್ದಿರುವವರಿಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು 19 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮೆಕ್ಸಿಕನ್ ನೌಕಾಪಡೆಯ ಅತ್ಯಂತ ಎತ್ತರದ ನೌಕಾಯಾನ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಮೇ 17ರಂದು ಶನಿವಾರ ರಾತ್ರಿ ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಜನರನ್ನು ನೀರಿನಿಂದ ಹೊರತರಲು ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಹಡಗು 277 ಜನರನ್ನು ಹೊತ್ತೊಯ್ಯುತ್ತಿತ್ತು. ಗಾಯಗೊಂಡಿರುವ 19 ಮಂದಿಯಲ್ಲಿ ನಾಲ್ವರು ಗಂಭೀರವಾಗಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ.

ಕುವಾಹ್ಟೆಮೊಕ್‌ನಲ್ಲಿರುವ 147 ಅಡಿ ಎತ್ತರದ ಹಡಗು ಇದಾಗಿದ್ದು, ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಇದು ಸೇತುವೆಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಬ್ರೂಕ್ಲಿನ್ ನೌಕಾಪಡೆಯ ಯಾರ್ಡ್‌ಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಲವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ದುರಂತದಲ್ಲಿ ಹಲವರು ಮಂದಿ ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ದುರಂತದ ಆಘಾತಕಾರಿ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೊಗಳಲ್ಲಿ ಅನೇಕರು ನೋಡುತ್ತಿರುವಾಗಲೇ ಹೈ ಮಾಸ್ಟ್ ಸೇತುವೆಯ ಡೆಕ್‌ಗೆ ಹಡಗು ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಅಪಘಾತಕ್ಕೆ ಒಳಗಾದ ಮೆಕ್ಸಿಕನ್ ನೌಕಾಪಡೆಯ ಬೃಹತ್ ತರಬೇತಿ ಹಡಗನ್ನು 1982ರಲ್ಲಿ ಸ್ಪೇನ್‌ನಲ್ಲಿ ನಿರ್ಮಿಸಲಾಗಿತ್ತು.



ನ್ಯೂಯಾರ್ಕ್‌ನಲ್ಲಿ ಕುವಾಹ್ಟೆಮೊಕ್ ಹಡಗು ನಿರ್ಗಮನ ಸಮಯದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ಮೆಕ್ಸಿಕನ್ ನೌಕಾಪಡೆಯು ಸ್ಪ್ಯಾನಿಷ್‌ನಲ್ಲಿ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ. ಈ ಕುರಿತು ವಿಡಿಯೊವೊಂದನ್ನು ಹಂಚಿಕೊಂಡಿರುವ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ವ್ಯಕ್ತಿಯೊಬ್ಬ, ಮೆಕ್ಸಿಕನ್ ಧ್ವಜವಿರುವ ಬೃಹತ್ ಹಡಗೊಂದು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿಯಾಗಿ ಹೊಗೆಯಾಡುವುದನ್ನು ನಾನು ನೋಡಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Fire Accident: ಚಾರ್​ಮಿನಾರ್​ ಬಳಿ ಭೀಕರ ಅಗ್ನಿ ಅವಘಡ ; ಮೃತರ ಸಂಖ್ಯೆ 17ಕ್ಕೆ ಏರಿಕೆ

ಇನ್ನೊಂದು ವಿಡಿಯೊಗೆ "ಒಂದು ಬೃಹತ್ ಕಡಲುಗಳ್ಳರ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದಿದೆ" ಎಂದು ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ. ಇನ್ನೊಬ್ಬರು ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಇದೊಂದು ಅಚ್ಚರಿಯ ಘಟನೆ. ಮೆಕ್ಸಿಕನ್ ಸಂಗೀತ ಮೊಳಗಿಸುತ್ತ ಬರುತ್ತಿದ್ದ ಬೃಹತ್ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿಯಾಗಿ ನಾಶವಾಯಿತು. ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.



ಮೆಕ್ಸಿಕನ್ ನೌಕಾಪಡೆಯ ಒಡೆತನದಲ್ಲಿರುವ ಈ ಹಡಗಿನ ದುರಂತದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಹಡಗನ್ನು ಎಆರ್ ಎಂ ಕುವಾಹ್ಟೆಮೊಕ್ ಎಂದು ಕರೆಯಲಾಗುತ್ತದೆ. ಇದು ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು ಎನ್ನಲಾಗಿದೆ. ಆದರೆ ಈ ಹಡಗು ಪೂರ್ವ ನದಿಯಲ್ಲಿ ಏಕೆ ಪ್ರಯಾಣಿಸುತ್ತಿತ್ತು ಸ್ಪಷ್ಟವಾಗಿಲ್ಲ.

ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಖ್ಯಸ್ಥ ವಿಲ್ಸನ್ ಅರಾಂಬೋಲ್ಸ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಹಡಗು ಮ್ಯಾನ್‌ಹ್ಯಾಟನ್ ಪಿಯರ್‌ನಿಂದ ಹೊರಬಂದಿದೆ. ಇದು ಸೇತುವೆಯ ಕಡೆಗೆ ಅಲ್ಲ, ಸಮುದ್ರಕ್ಕೆ ಹೋಗಬೇಕಿತ್ತು ಎಂದು ಹೇಳಿದರು. ಹಡಗಿನ ಪೈಲಟ್ ಯಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.